ಅಂದು ಹೋಟೆಲ್‌ನಲ್ಲಿ ಕ್ಯಾಷಿಯರ್ ಇಂದು ಜನಪ್ರಿಯ ನಟ: ಇವರ ಬಳಿಯಿರುವ ಐಷಾರಾಮಿ ಕಾರುಗಳಿವು

ದಕ್ಷಿಣ ಭಾರತದಲ್ಲಿ ವಿಜಯ್​ ಸೇತುಪತಿ (Vijay Sethupathi) ಜನಪ್ರಿಯ ನಟರಲ್ಲಿ ಒಬ್ಬರು. ಕಾಲಿವುಡ್​ನಲ್ಲಿ ಹೀರೋ ಮತ್ತು ವಿಲನ್ ಪಾತ್ರಗಳ ಮೂಲ ಮಿಂಚುತ್ತಿದ್ದಾರೆ. ಸೂಪರ್ ಹಿಟ್ ಚಿತ್ರ "ವಿಕ್ರಮ್"ನಲ್ಲಿ ವಿಲನ್ ಪಾತ್ರದ ಮೂಲಕ ಅಬ್ಬರಿಸಿದ್ದರು. ಇವರ ಆರಂಭಿಕ ಜೀವನ ಕಷ್ಟಗಳಿಂದ ಕೂಡಿತ್ತು. ಹಣ ಸಂಪಾದಿಸಲು ಸಣ್ಣ ಕೆಲಸವನ್ನೂ ಮಾಡುತ್ತಿದ್ದರು.

ಇವರ ಪೂರ್ಣ ಹೆಸರು ವಿಜಯ್ ಗುರುನಾಥ್ ಸೇತುಪತಿ ಕಾಳಿ. ಇವರ ಆರಂಭಿಕ ಜೀವನ ಕಷ್ಟಗಳಿಂದ ಕೂಡಿತ್ತು, ವಿಜಯ್ ಸೇತುಪತಿ ಅವರು ಹೋಟೆಲ್‌ನಲ್ಲಿ ಕ್ಯಾಷಿಯರ್ ಮತ್ತು ಫೋನ್ ಬೂತ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಇಂದು ಅವರು ದೊಡ್ಡ ಸ್ಟಾರ್ ನಟರಾಗಿದ್ದಾರೆ. ಈ ಜನಪ್ರಿಯ ನಟನಿಗೆ ಕಾರುಗಳ ಬಗ್ಗೆ ಹೆಚ್ಚಿನ ಕ್ರೇಜ್ ಅನ್ನು ಹೊಂದಿದೆ. ನಟ ವಿಜಯ್​ ಸೇತುಪತಿ ಹೊಂದಿರುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಂದು ಹೋಟೆಲ್‌ನಲ್ಲಿ ಕ್ಯಾಷಿಯರ್ ಇಂದು ಜನಪ್ರಿಯ ನಟ

ಟೊಯೊಟಾ ಫಾರ್ಚೂನರ್: ನಟ ವಿಜಯ್ ಸೇತುಪತಿ ಅವರು ಅಗಾಗ ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಫುಲ್ ಸೈಜ್ ಎಸ್‍ಯುವಿಯಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಫಾರ್ಚೂನರ್ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ

ಹ್ಯುಂಡೈ ಗ್ರ್ಯಾಂಡ್i10: ವಿಜಯ್ ಸೇತುಪತಿ ಅವರ ಕಾರು ಗ್ಯಾರೇಜ್‌ನಲ್ಲಿರುವ ಹ್ಯುಂಡೈ ಗ್ರ್ಯಾಂಡ್i10 ಕಾರನ್ನು ಕೂಡ ಹೊಂದಿದ್ದಾರೆ. ಈ ಹ್ಯುಂಡೈ ಗ್ರ್ಯಾಂಡ್i10 ಕಾರಿಗೆ ರೂ.5 ಲಕ್ಷದಿಂದ 8 ಲಕ್ಷದವರೆಗೆ ಬೆಲೆಯನ್ನು ಹೊಂದಿದೆ. ಈ ಹುಂಡೈ ಕಾರು ನಟನ ಮೊದಲ ಕಾರ್ ಆಗಿದೆ. ಅವರ ಮೊದಲ ಕಾರ್ ಹ್ಯುಂಡೈ ಗ್ರ್ಯಾಂಡ್i10 ಕೆಂಪು ಬಣ್ಣವನ್ನು ಹೊಂದಿದೆ. ಈ ಹ್ಯುಂಡೈ ಗ್ರ್ಯಾಂಡ್i10 ಎಂಟ್ರಿ ಲೆವೆಲ್ ಆಗಿದ್ದರೂ, ಇದು ಆಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಅಂದು ಹೋಟೆಲ್‌ನಲ್ಲಿ ಕ್ಯಾಷಿಯರ್ ಇಂದು ಜನಪ್ರಿಯ ನಟ

ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಮತ್ತು ಹಳೆಯ ಮರ್ಸಿಡಿಸ್ ಬೆಂಜ್ 230 : ನಟ ವಿಜಯ್ ಸೇತುಪತಿಯ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಎಸ್‌ಯುವಿಯು ಎಮರಾಲ್ಡ್ ಗ್ರೀನ್ ಬಣ್ಣವನ್ನು ಹೊಂದಿದೆ. ಆದರೆ ಈ ಎಸ್‍ಯುವಿಗೆ ನೀಡಲಾದ ವಿಶಿಷ್ಟವಾದ ಮುಂಭಾಗದ ಗ್ರಿಲ್ ನಡುವಿನ ಲೋಗೋವನ್ನು ನಟನ ಹೆಸರನ್ನು ಸೂಚಿಸುವ 'V' ಅಕ್ಷರದೊಂದಿಗೆ ಬದಲಾಯಿಸಲಾಗಿದೆ. ಇನ್ನು ನಟ ವಿಜಯ್ ಸೇತುಪತಿ ಈ ಹಳೆಯ ಮರ್ಸಿಡಿಸ್ ಬೆಂಝ್ 230 ಸೆಡಾನ್ ಅನ್ನು ಕೂಡ ಹೊಂದಿದ್ದಾರೆ.

ಮಿನಿ ಕೂಪರ್: ನಟ ವಿಜಯ್ ಸೇತುಪತಿ ಅವರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಸಣ್ಣ ಕಾರ್ ಆದರೂ, ಇದು ಪ್ರೀಮಿಯಂ ಕಾರ್ ಆಗಿದೆ. ಈ ಆಕರ್ಷಕ ಮಿನಿ ಕೂಪರ್ ಕಾರಿನಲ್ಲಿ ಅವರು ತಮ್ಮ ಫ್ಯಾಮಿಲಿಯ ಜೊತೆ ಪ್ರಯಾಣಿಸುವಾಗ ಕಾಣಿಸಿಕೊಂಡಿದ್ದಾರೆ. ಈ ಮಿನಿ ಕೂಪರ್ ಕಾರಿನಲ್ಲಿ 121 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೊಟಾ ಇನೋವಾ ಕ್ರಿಸ್ಟಾ: ನಟ ವಿಜಯ್ ಸೇತುಪತಿ ಅವರು ತಮ್ಮ ಈ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಈ ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಬೆಲೆಯು 20 ಲಕ್ಷದಿಂದ 24 ಲಕ್ಷದವರೆಗೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ವಿಶ್ವಾಸಾರ್ಹ ಕಾರುಗಳಲ್ಲಿ ಒಂದಾಗಿದೆ. ಟೊಯೊಟಾ ಕಂಪನಿಯು 2023ರ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

BMW 7 ಸೀರಿಸ್: ನಟ ವಿಜಯ್ ಸೇತುಪತಿ ಅವರ ಬಳಿ BMW 7 ಸೀರಿಸ್ ಸೆಡಾನ್ ಅನ್ನು ಹೊಂದಿದ್ದಾರೆ. ಇದು ಉದ್ದನೆಯ ಐಷಾರಾಮಿ ಸೆಡಾನ್ ಆಗಿದೆ. ಈ BMW 7 ಸೀರಿಸ್ ಕಾರು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್-ಸ್ಪೆಕ್ 740 Li ರೂಪಾಂತರವು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಟಾಪ್-ಸ್ಪೆಕ್ 750 Li ರೂಪಾಂತರ 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

More from DriveSpark

Article Published On: Friday, February 24, 2023, 17:04 [IST]
English summary
Tamil actor vijay sethupathis car collection details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+