3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಮಹಾಮಾರಿ ಕರೋನಾ ವೈರಸ್ ಹರಡುವಿಕೆ ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿ ತರಲಾಗಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮೇ 3ರಿಂದ ಮತ್ತೆ 3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ ನಡೆಸಲಾಗುತ್ತಿದೆ.

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಸೋಂಕು ಪಿಡಿತ ಪ್ರದೇಶಗಳ ಆಧಾರದ ಮೇಲೆ ಈಗಾಗಲೇ 2ನೇ ಹಂತದ ಲಾಕ್‌ಡೌನ್‌‌ನಲ್ಲಿ ಗ್ರಿನ್ ಝೋನ್‍ಗಳಿಗೆ ಕೆಲವು ವಿನಾಯ್ತಿ ನೀಡಿರುವ ಕೇಂದ್ರ ಸರ್ಕಾರವು ವೈರಸ್ ಅನ್ನು ಪರಿಣಾಮಕಾರಿಯಾಗಿ ತಗ್ಗಿಸಲು ರೆಡ್ ಝೋನ್‌ನಲ್ಲಿರುವ ಕೆಲ ರಾಜ್ಯಗಳಲ್ಲಿ ಮೂರನೇ ಹಂತದ ಲಾಕ್‌ಡೌನ್ ವಿಧಿಸಲು ಸಿದ್ದತೆ ನಡೆಸಿದೆ. ಆಯಾ ರಾಜ್ಯಗಳ ಬೇಡಿಕೆ ಮತ್ತು ಮನವಿ ಆಧಾರದ ಮೇಲೆ 3ನೇ ಹಂತದ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಲಾಗುತ್ತಿದ್ದು, ತಮಿಳುನಾಡು ಸರ್ಕಾರವು 3ನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಕರೋನಾ ವೈರಸ್ ಹೆಚ್ಚಿರುವ ರಾಜ್ಯಗಳ ಪೈಕಿ ಟಾಪ್ 5 ಸ್ಥಾನದಲ್ಲಿರುವ ತಮಿಳುನಾಡು ಸರ್ಕಾರವು ಸಂಕಷ್ಟದ ಸಮಯದಲ್ಲೂ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಅಂತರಾಜ್ಯ ಸಂಪರ್ಕ ಕಡಿತಗೊಳಿಸಲು ತಡೆಗೊಡೆ ನಿರ್ಮಾಣ ಮಾಡುತ್ತಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಕಠಿಣ ಕಾನೂನು ಕ್ರಮಗಳ ನಡುವೆಯೂ ಲಾಕ್‌ಡೌನ್ ಉಲ್ಲಂಘನೆ ಪ್ರಕರಣ ಹೆಚ್ಚುತ್ತಿರುವುದರಿಂದ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ತಡೆಗೊಡೆಯಿಂದ ಬಂದ್ ಮಾಡಲಾಗಿದೆ.

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ತಮಿಳುನಾಡಿನಲ್ಲಿ 1800 ಕ್ಕೂ ಹೆಚ್ಚು ಕರೋನಾ ವೈರಸ್ ಕೇಸ್‌ಗಳಿದ್ದು, ಆಂಧ್ರಪ್ರದೇಶದಲ್ಲೂ 1 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳಿವೆ. ಹೀಗಾಗಿ ಎರಡು ರಾಜ್ಯಗಳ ನಡುವಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದ್ದು, ವೈರಸ್ ಹರಡುವಿಕೆಯನ್ನು ತಗ್ಗಿಸಲು ಈ ಕ್ರಮಕೈಗೊಳ್ಳಲಾಗಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಲಾಕ್‌ಡೌನ್ ನಡುವೆಯೂ ಸಾವಿರಾರು ವಾಹನಗಳು ದಿನಂಪ್ರತಿ ಆಂಧ್ರ ಮತ್ತು ತಮಿಳುನಾಡು ನಡುವೆ ಸಂಚರಿಸುತ್ತಿದ್ದು, ವಾಹನಗಳನ್ನು ಸೀಜ್ ಮಾಡಲಾಗುತ್ತಿದ್ದರೂ ಸಹ ವಾಹನಗಳ ಓಡಾಟ ಮಾತ್ರ ನಿಲ್ಲುತ್ತಿಲ್ಲ. ಇದರಿಂದ ವೈರಸ್ ಪ್ರಮಾಣವು ಎರಡು ರಾಜ್ಯಗಳಿಗೂ ತಲೆ ನೋವಾಗಿ ಪರಿಣಮಿಸಿದ್ದು, ತಮಿಳುನಾಡು ಸರ್ಕಾರವು ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ 2 ರಾಜ್ಯ ಹೆದ್ದಾರಿಗಳನ್ನು ತಡೆಗೊಡೆಯಿಂದ ಬಂದ್ ಮಾಡಿದೆ.

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಚೆನ್ನೈ-ಪೊನ್ನಿ-ಚಿತ್ತೂರು ಮತ್ತು ಚಿತ್ತೂರು-ಗುಡಿಯತ್ತಂ ಸಂಪರ್ಕಗಳನ್ನು ಕಡಿತ ಮಾಡಿರುವ ಸ್ಥಳೀಯ ಆಡಳಿತ ಸಂಸ್ಥೆಗಳು 7 ಅಡಿ ಎತ್ತರದ ತಡೆಗೊಡೆ ನಿರ್ಮಿಸಿದ್ದು, ಸೋಂಕು ಹೆಚ್ಚಾಗದಂತೆ ತಡೆಯಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳು ಸಹ ಇದೇ ಕ್ರಮಕೈಗೊಳ್ಳುವ ಸಾಧ್ಯತೆಗಳಿದ್ದು, ತಾತ್ಕಾಲಿಕವಾಗಿ ಅಂತರ್‌ರಾಜ್ಯಗಳಿಂದ ಬರುವ ವಾಹನಗಳನ್ನು ತಡೆಹಿಡಿದು ವೈರಸ್ ತಗ್ಗಿಸಲು ಇಂತಹ ಕಠಿಣ ಕ್ರಮಗಳು ಅನಿವಾರ್ಯವಾಗಿವೆ.

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಇನ್ನು ತಮಿಳುನಾಡಿನಲ್ಲಿ ಕರೋನಾ ವೈರಸ್ ಹರಡದಂತೆ ಹಾಕಲಾಗಿರುವ 2ನೇ ಹಂತದ ಲಾಕ್‌ಡೌನ್ ಅನ್ನು ಅಚ್ಚುಕಟ್ಟಾಗಿ ಜಾರಿಗೆ ತರಲಾಗಿದ್ದು, ಲಾಕ್‌ಡೌನ್ ಉಲ್ಲಂಘನೆ ಮಾಡಿದ ಸುಮಾರು 2.50 ಲಕ್ಷ ವಾಹನಗಳಿಗೆ ದಂಡ ಜಡಿದಿರುವುದಲ್ಲದೆ ತಪ್ಪು ಮಾಡಿದ್ದಕ್ಕಾಗಿ ವಾಹನಗಳ ಮುಂಭಾಗಕ್ಕೆ ಬಿಳಿ ಬಣ್ಣವನ್ನು ಬಳಿಯಲಾಗುತ್ತಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

3ನೇ ಹಂತದ ಲಾಕ್‌ಡೌನ್‌ಗೆ ಸಿದ್ದತೆ- ಅಂತರ್‌ರಾಜ್ಯ ಸಂಪರ್ಕ ಕಡಿತಕ್ಕೆ ಹೊಸ ಪ್ಲ್ಯಾನ್

ಜೊತೆಗೆ ಲಾಕ್‌‌ಡೌನ್ ಉಲ್ಲಂಘನೆ ಮಾಡಿ ಮಾಸ್ಕ್ ಇಲ್ಲದೆ ಹೊರಗೆ ತಿರುಗುವವರಿಗೂ ದಂಡವಿಧಿಸಲಾಗುತ್ತಿದ್ದು, ಇದೀಗ ಅಂತರಾಜ್ಯ ಸಂಪರ್ಕ ಕಡಿತಕ್ಕೆ ನಿರ್ಮಾಣ ಮಾಡಿರುವ ತಡೆಗೊಡೆಯಿಂದ ವೈರಸ್ ಹರಡುವಿಕೆಯನ್ನು ತಗ್ಗಿಸುವ ಎಷ್ಟು ಸಹಕಾರಿಯಾಗಲಿದೆ ಎನ್ನುವುದನ್ನು ಕಾಯ್ದನೋಡಬೇಕಿದೆ.

Article Published On: Monday, April 27, 2020, 20:17 [IST]
English summary
Tamil Nadu builds walls at Andhra border to block vehicular movement amid lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+