ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಕರೋನಾ ವೈರಸ್ ಎರಡನೇ ಅಲೆ ತಮಿಳುನಾಡಿನಲ್ಲಿ ಚೆನ್ನೈನಲ್ಲಿ ಮಾತ್ರವಲ್ಲದೆ ಕೊಯಮತ್ತೂರು ಹಾಗೂ ಮಧುರೈನಂತಹ ಇತರ ನಗರಗಳಲ್ಲಿಯೂ ವೇಗವಾಗಿ ಹರಡುತ್ತಿದೆ. ತಮಿಳುನಾಡಿನಲ್ಲಿ ಪ್ರತಿದಿನ 30,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ತಮಿಳುನಾಡು ಸರ್ಕಾರವು ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್'ರವರು ತಿರುಪುರ, ಸೇಲಂ, ಕೊಯಮತ್ತೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಮೊನ್ನೆ ತಿರುಪುರ ಹಾಗೂ ಸೇಲಂ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ ಸ್ಟಾಲಿನ್'ರವರು ಸಂಜೆ ಕೊಯಮತ್ತೂರು ಜಿಲ್ಲೆಗೆ ತೆರಳಿದ್ದರು. ಕೊಯಮತ್ತೂರಿನ ಕೊಡಿಚಿಯಾ ಕ್ಯಾಂಪಸ್‌ನಲ್ಲಿರುವ ಕರೋನಾ ವಿಶೇಷ ಚಿಕಿತ್ಸಾ ಕೇಂದ್ರವು ಹೆಚ್ಚುವರಿ 820 ಹಾಸಿಗೆ ಸೌಲಭ್ಯಗಳನ್ನು ಹೊಂದಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಇದರ ಜೊತೆಗೆ ಕುಮಾರಗುರು ಎಂಜಿನಿಯರಿಂಗ್ ಕಾಲೇಜಿನಲ್ಲಿ 360 ಹಾಸಿಗೆಗಳ ಹೊಸ ಕರೋನಾ ಕೇರ್ ಕೇಂದ್ರವನ್ನು ತೆರೆಯಲಾಗಿದೆ. ಈ ಎರಡು ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಸ್ಟಾಲಿನ್'ರವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಈ ಸಭೆಯ ಬಳಿಕ ಸ್ಟಾಲಿನ್'ರವರು ಚೆನ್ನೈನತ್ತ ಪ್ರಯಾಣ ಬೆಳೆಸಲು ಮುಂದಾದರು. ಅವರಿದ್ದ ಕಾರಿನ ಜೊತೆಗೆ ಅವರ ಬೆಂಗಾವಲು ಪಡೆ ವಾಹನವು ಸಹ ಹೊರಟಿತ್ತು. ಕುಮಾರಗುರು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಎಂ.ಕೆ. ಸ್ಟಾಲಿನ್'ರವರು ತಮ್ಮ ವಾಹನವನ್ನು ನಿಲ್ಲಿಸುವಂತೆ ಹೇಳಿದ್ದಾರೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಸ್ಟಾಲಿನ್'ರವರು ಹಠಾತ್ತನೇ ಕಾರು ನಿಲ್ಲಿಸುವಂತೆ ಹೇಳಿದ ತಕ್ಷಣ ಅವರ ಬೆಂಗಾವಲು ಪಡೆಯ ಸಿಬ್ಬಂದಿ ಗಾಬರಿಯಾಗಿದ್ದರು. ಕಾರು ನಿಲ್ಲಿಸಿದ ಅವರು ರಸ್ತೆಯಲ್ಲಿ ತಮಗಾಗಿ ಕಾಯುತ್ತಿದ್ದ ಮಹಿಳೆಯನ್ನು ಹತ್ತಿರ ಕರೆದಿದ್ದಾರೆ.

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಸ್ಟಾಲಿನ್'ರವರು ಹೊರ ಬರುವ ವೇಳೆಯಲ್ಲಿ ಒಬ್ಬ ಮಹಿಳೆ ಹಾಗೂ ಕುಟುಂಬಸ್ಥರು ಮುಖ್ಯಮಂತ್ರಿಗಳಿಗಾಗಿ ಕಾಯುತ್ತಿದ್ದರು. ಸ್ಟಾಲಿನ್'ರವರ ಬಳಿ ತೆರಳಿದ ಮಹಿಳೆ ತನ್ನ ಅಹವಾಲನ್ನು ತಿಳಿಸಿ ಮನವಿ ಪತ್ರವೊಂದನ್ನು ಅವರಿಗೆ ನೀಡಿದ್ದಾಳೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಜನಪ್ರತಿನಿಧಿಗಳು ಜನರನ್ನು ಸಂಪರ್ಕಿಸಲು ಹಾಗೂ ಅವರ ಅಹವಾಲು ತಿಳಿಯಲು ಹಿಂದೇಟು ಹಾಕುತ್ತಿದ್ದಾರೆ.ಇದರ ಮಧ್ಯೆ ಎಂ.ಕೆ ಸ್ಟಾಲಿನ್'ರವರ ನಡೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದೆ.

ಇತರ ರಾಜಕಾರಣಿಗಳಿಗೆ ಮಾದರಿಯಾದ ತಮಿಳುನಾಡು ಸಿಎಂ ನಡೆ

ಮುಖ್ಯಮಂತ್ರಿಗಳೇ ಬಳಿ ಕರೆದು ತಮ್ಮ ಮನವಿ ಪತ್ರವನ್ನು ಸ್ವೀಕರಿಸಿರುವುದಕ್ಕೆ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Most Read Articles

Kannada
English summary
Tamilnadu CM Stalin stops his car to help Woman's family. Read in Kannada.
Story first published: Monday, May 24, 2021, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X