ವಾಹನ ಮಾಡಿಫೈ ಮಾಡುವುದು ತಪ್ಪೇ: ಆದರೆ ಇಲ್ಲಿ ಪೊಲೀಸರು ಮಾಡಿಫೈ ವಾಹನದಲ್ಲೇ ಮಜಾ ಮಾಡುತ್ತಿದ್ದಾರೆ
ನಮ್ಮಲ್ಲಿ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಬೇಕಾದರೆ ಅದಕ್ಕೆಂದೇ ಹಲವಾರು ನೀತಿ ನಿಯಮಗಳು ಇದೆ. ಅದನ್ನು ಮನಗಂಡು ನಾವು ಅದಕ್ಕೆ ಅನುಸಾರವಾಗಿ ವಾಹನಗಳನ್ನು ಚಲಾಯಿಸಬೇಕು. ಒಂದೊಮ್ಮೆ ಅದನ್ನು ಮೀರಿದರೆ, ತಪ್ಪುಗಳನ್ನು ಮಾಡಿದರೆ ಅಂತಹವರು ಶಿಕ್ಷೆ ಅನುಭವಿಸಲೇ ಬೇಕು. ಆದರೆ ಒಮ್ಮೊಮ್ಮೆ ಇದಕ್ಕೆ ವಿರುದ್ದವಾಗಿಯೂ ನಡೆಯುತ್ತದೆ ಎಂಬುದಕ್ಕೆ ಈ ಕೆಳಗಿನ ಘಟನೆ ಸಾಕ್ಷಿ.
ಅಂತಹ ನಿಯಮಗಳಲ್ಲಿ ವಾಹನಗಳನ್ನು ಮಾಡಿಫೈ ಮಾಡಿಕೊಂಡು ರಸ್ತೆಗಳಲ್ಲಿ ಓಡಿಸಬಾರದು ಎಂಬುದೂ ಇದೆ. ಭಾರತೀಯ ರಸ್ತೆಗಳಲ್ಲಿ ವಾಹನಗಳನ್ನು ಮೋಡಿಫೈ ಮಾಡಿಕೊಂಡು ಓಡಾಡಿದರೆ ಅಂತಹ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆ ವಾಹನಗಳ ಮಾಲೀಕರ ಮೇಲೆ ಕೇಸ್ ದಾಖಲಿಸಿ ಅಂತಹ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸುವ ಅಧಿಕಾರ ಇದೆ.

ಆದರೆ ಇಲ್ಲೊಂದು ಕಡೆ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ನಡೆದಿದೆ. ಹೌದು, ಪೊಲೀಸರೇ ತಮ್ಮ ಮೋಡೀಫೈ ಮಾಡಿಕೊಂಡ ವಾಹನಗಳನ್ನು ಯಾವುದೇ ಭಯವಿಲ್ಲದೇ ರಸ್ತೆಗಳಲ್ಲಿ ರಾಜಾರೊಷವಾಗಿ ಓಡಿಸುತ್ತಿರುವುದು ಕಂಡು ಬಂದಿದೆ. ತಮಿಳು ನಾಡಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಕೆಲವು ಪೊಲೀಸರು ತಮ್ಮ ವಾಹನಗಳನ್ನು ವಿಪರೀತವಾಗಿ ಮೊಡಿಫೈಗೊಳಿಸಿ ಮೋಜು ಮಾಡುತ್ತಿದ್ದಾರೆ.
ಫೋರ್ಸ್ ಕಂಪನಿಯ ಟ್ರಾವೆಲರ್ ಅನ್ನು ಹೊಂದಿರುವ ಪೊಲೀಸರು ತಮ್ಮ ಆ ವಾಹನವನ್ನು ವಿಪರೀತವಾಗಿ ಮೋಡಿಫೈ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ ಇದು ಹೆಚ್ಚಿನ ಸೆಕ್ಯೂರಿಟಿಗಾಗಿ ಈ ರೀತಿ ಮಾಡಿಫೈ ಮಾಡಿದ್ದು ಈ ವಾಹನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಕ್ಯಾಮೆರಾಗಳನ್ನು ಸಹ ಸೇರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸದ್ಯ ಈ ಮೋಡೀಫೈ ಮಾಡಿಕೊಂಡ ಟ್ರಾವೆಲರ್ ವಾಹನವು ತಮಿಳುನಾಡಿನ ವೆಲ್ಲೂರ್ ಜಿಲ್ಲಾ ಪೊಲೀಸರ (Tamil Nadu Cops) ಬಳಿ ಇದ್ದು, ಅವರು ಇದನ್ನು ಉಪಯೋಗಿಸುತ್ತಿದ್ದಾರೆ. ಈ ವಾಹನದ ಪ್ರಮುಖ ಫೀಚರ್‌ಗಳು ಏನೆಂದರೆ ಹೈ ರೆಸೆಲ್ಯೂಷನ್ ಸಿಸಿ ಟಿವಿಗಳು, ರೂಫ್‌ಟಾಪ್ ಪ್ಲ್ಯಾಶ್‌ಲೈಟ್‌ಗಳು ಮತ್ತು ಡ್ರೋಣ್ ಕ್ಯಾಮೆರಾಗಳು ಸಹ ಇದೆ ಎಂದು ತಿಳಿದು ಬಂದಿದೆ.
ಈ ವಾಹನವನ್ನು ಆನ್ ಫೀಲ್ಡ್‌ನ ಮಾಹಿತಿಯನ್ನು ತತ್ ಕ್ಷಣ ರವಾನೆ ಮಾಡಲು ಉಪಯೋಗಿಸಲಾಗುತ್ತಿದ್ದು, ಅಗತ್ಯ ಇರುವವರು ಇದನ್ನು ಉಪಯೋಗಿಸಬಹುದು ಎಂದು ತಿಳಿದು ಬಂದಿದೆ. ಇನ್ನು ಉನ್ನತ ಅಧಿಕಾರಿಗಳ ಪ್ರಕಾರ ಈ ಮಾಡಿಫೈ ಮಾಡಿಕೊಂಡಿರುವ ವಾಹನದಿಂದ ಹಲವಾರು ರೀತಿಯಲ್ಲಿ ಉಪಯೋಗಗಳು ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ಈ ರೀತಿಯ ವಾಹನವನ್ನು ನೈಸರ್ಗಿಕ ವಿಕೋಪಗಳು ಎದುರಾದ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಈಗ ಅದನ್ನು ಬಹುತೇಕ ಎಲ್ಲಾ ಸಮಯಗಳಲ್ಲೂ ಬಳಸುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಇದನ್ನು ವೆಲ್ಲೂರು ಮಾತ್ರವಲ್ಲದೇ ಇದರ ಅಕ್ಕಪಕ್ಕದ ಜಿಲ್ಲೆಗಳಿಗೂ ಅಗತ್ಯ ಬಂದಾಗ ಕಳುಹಿಸಿ ಅವರೂ ಸಹ ಇದರ ಉಪಯೋಗ ಪಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications