Tata Altroz: ಸ್ಪೋರ್ಟಿ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಟಾಟಾ ಆಲ್ಟ್ರೋಜ್
ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳಿಗೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಟಾಟಾ ಆಲ್ಟ್ರೊಜ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಆಲ್ಟ್ರೊಜ್, ದೇಶದ ಅತ್ಯಂತ ಸ್ಪೋರ್ಟಿ-ಕಾಣುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಮಾರಾಟದಲ್ಲಿ ಆಲ್ಟ್ರೊಜ್ ಕಾರು ಟಾಟಾ ಕಂಪನಿಗೆ ಉತ್ತಮ ಕೊಡೆಗೆಯನ್ನು ನೀಡಿದೆ.
ಟಾಟಾ ಆಲ್ಟ್ರೊಜ್ ವಿಶಿಷ್ಟವಾದ ಅಗ್ರೇಸಿವ್ ಬಾಹ್ಯ ವಿನ್ಯಾಸ ಮತ್ತು ಅದರ ವೈಶಿಷ್ಟ್ಯ-ಸಮೃದ್ಧ ಒಳಾಂಗಣವು ಇದನ್ನು ಸಾಕಷ್ಟು ಜನಪ್ರಿಯಗೊಳಿಸಿದೆ. ಇತ್ತೀಚೆಗೆ, ಅಂದವಾಗಿ ಮಾರ್ಪಡಿಸಿದ ಟಾಟಾ ಆಲ್ಟ್ರೋಜ್‌ನ ಕೆಲವು ಚಿತ್ರಗಳು ಕೆಲವು ಸೋಷಿಯಲ್ ಮೀಡಿಯಾಗಳಲ್ಲಿ ಲಭ್ಯವಿದೆ, ಈ ನಿರ್ದಿಷ್ಟ ಕಾರನ್ನು ಬಾಹ್ಯ ಮತ್ತು ಒಳಭಾಗದಿಂದ ಮಾಡಿಫೈ ಮಾಡಲಾಗಿದೆ. ಸ್ಪೋರ್ಟಿ ಲುಕ್‍ನಲ್ಲಿ ಮಾಡಿಫೈಗೊಂಡು ಈ ಟಾಟಾ ಆಲ್ಟ್ರೋಜ್ ಕಾರು ಮಿಂಚುತ್ತಿದೆ.

ಹೆಚ್ಚು ಮಾಡಿಫೈ ಮಾಡಲಾದ ಈ ಟಾಟಾ ಆಲ್ಟ್ರೋಜ್‌ನ ಚಿತ್ರಗಳನ್ನು ಮಾನ್‌ಸ್ಟರ್ ರೋಹಿಣಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ Instagram ನಲ್ಲಿ ಹಂಚಿಕೊಂಡಿದ್ದಾರೆ .ಈ ವಾಹನದ ಕುರಿತು ಅವರ ಪೋಸ್ಟ್‌ನಲ್ಲಿ, ಈ ನಿರ್ದಿಷ್ಟ ಕಾರಿನಲ್ಲಿ ಮಾಡಲಾದ ನವೀಕರಣಗಳು ಮತ್ತು ಮೋಡ್‌ಗಳ ದೀರ್ಘ ಪಟ್ಟಿಯನ್ನು ಉಲ್ಲೇಖಿಸಿದೆ. ಪೋಸ್ಟ್‌ನ ಪ್ರಕಾರ, ಈ ಟಾಟಾ ಆಲ್ಟ್ರೋಜ್ ಅನ್ನು ಮ್ಯಾಟ್ ಗಾರ್ನೆಟ್ ರೆಡ್ ಬಣ್ಣದಲ್ಲಿದೆ ಮತ್ತು ಎಲ್ಲಾ ಕ್ರೋಮ್ ಟ್ರಿಮ್‌ಗಳನ್ನು ಡಿಕ್ರೋಮ್ ಮಾಡಲಾಗಿದೆ.
ಮಾಡಿಫೈಗೊಂಡ ಟಾಟಾ ಆಲ್ಟ್ರೊಜ್ ಕಾರಿನ ಮುಂಭಾಗದಲ್ಲಿ, ಕಾರಿಗೆ ಯುನಿವರ್ಸಲ್ ಫ್ರಂಟ್ ಸ್ಪ್ಲಿಟರ್ ನೀಡಲಾಗಿದೆ, ಇದಲ್ಲದೆ, ಫಾಗ್ ಲ್ಯಾಂಪ್‌ಗಳ ಜೊತೆಗೆ ಹೆಡ್‌ಲೈಟ್‌ಗಳ ಎತ್ತರದ ಮತ್ತು ಕಡಿಮೆ ಕಿರಣಗಳಿಗೆ ಅಜೂಮ್ 130-ವ್ಯಾಟ್ ಎಲ್‌ಇಡಿ ಲ್ಯಾಂಪ್ ಗಳನ್ನು ನೀಡಲಾಗಿದೆ ಎಂದು ಪೋಸ್ಟ್ ವಿವರಿಸಿದೆ. ಈ ಕಾರಿನ ರೂಫ್ ಮೇಲೆ ಹೆಚ್ಚಿನ ಹೊಳಪಿನ ಬ್ಲ್ಯಾಕ್ PPF (ಪೇಂಟ್ ಪ್ರೊಟೆಕ್ಷನ್ ಫಿಲ್ಮ್) ಫಿನಿಶಿಂಗ್ ಅನ್ನು ನೀಡಲಾಗಿದೆ.

ಹೆಚ್ಚುವರಿಯಾಗಿ, ಕಾರಿನ ಸ್ಪೋರ್ಟಿ ಗುಣಲಕ್ಷಣಗಳನ್ನು ಸೇರಿಸಲು ಕಾರಿನ ಹಿಂಭಾಗದಲ್ಲಿ V2 ಯುನಿವರ್ಸಲ್ ಮಾನ್ಸ್ಟರ್ ರಿಯರ್ ಸ್ಪಾಯ್ಲರ್ ಅನ್ನು ಅಳವಡಿಸಲಾಗಿದೆ. ಕಾರಿನ ಒಳಭಾಗಕ್ಕೆ ತೆರಳಿದಾಗ, ಸಂಪೂರ್ಣ ಕಾರನ್ನು ಚೆರ್ರಿ ಕೆಂಪು ಮತ್ತು ಪಿಯಾನೋ ಬಿಳಿ ಬಣ್ಣದ ಲೆದರ್‌ನೊಂದಿಗೆ ಮರುಹೊಂದಿಸಲಾಗಿದೆ. ಕಾರಿನ ಸೀಟುಗಳನ್ನು ಬಿಳಿ ಲೆದರ್ ಜೊತೆಗೆ ಡೈಮಂಡ್ ಕ್ವಿಲ್ಟಿಂಗ್ ಮತ್ತು ರೆಡ್ ಬಾರ್ಡರ್‌ಗಳೊಂದಿಗೆ ಫಿನಿಶ್ ಮಾಡಲಾಗಿದೆ.
ಮೇಲಿನ ಮತ್ತು ಕೆಳಗಿನ ಡ್ಯಾಶ್‌ಬೋರ್ಡ್ ಅನ್ನು ಚೆರ್ರಿ ಕೆಂಪು ಲೆದರ್‌ನಲ್ಲಿ ಸುತ್ತಿಡಲಾಗಿದೆ ಮತ್ತು ಡ್ಯಾಶ್‌ಬೋರ್ಡ್‌ನ ಮಧ್ಯ ಭಾಗವನ್ನು ಬಿಳಿ ಲೆದರ್‌ನಲ್ಲಿ ಸುತ್ತಿಡಲಾಗಿದೆ. ಹೆಚ್ಚುವರಿಯಾಗಿ, ಕಾರಿಗೆ ಶೂಟಿಂಗ್ ಸ್ಟಾರ್ ಮೋಡ್‌ನೊಂದಿಗೆ ರೋಲ್ಸ್ ರಾಯ್ಸ್-ಪ್ರೇರಿತ ಸ್ಟಾರಿ ನೈಟ್ ಹೆಡ್‌ಲೈನರ್ ಅನ್ನು ಸಹ ನೀಡಲಾಗಿದೆ ಎಂದು ಗಮನಿಸಬಹುದು. ಆ್ಯಂಬಿಯೆಂಟ್ ಲೈಟಿಂಗ್‌ನ 18 ತುಣುಕುಗಳನ್ನು ಕಾರಿಗೆ ಸೇರಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಸಿಎನ್‌ಜಿ ಸರಣಿಯಲ್ಲಿ ಆಲ್‌ಟ್ರೊಜ್ ಕಾರು ಕೂಡ ಸೇರಿಕೊಳ್ಳಲು ಸಜ್ಜಾಗಿದೆ. ಈ ಹೊಸ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್‌ಜಿ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಟಾಟಾ ಕಂಪನಿಯ ಇತರ ಸಿಎನ್‌ಜಿ ಮಾದರಿಗಳಂತೆ, ಸಿಎನ್‌ಜಿ ಆಲ್‌ಟ್ರೊಜ್ ಅದರ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಕೆಲವು ನವೀಕರಣಗಳನ್ನು ಪಡೆಯುತ್ತದೆ.
ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರು XE, XM+, XZ ಮತ್ತು XZ+ S ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರಿನ ಟಾಪ್ ಸ್ಪೆಕ್ ಸನ್‌ರೂಫ್ ಅನ್ನು ಹೊಂದಿರಲಿದೆ, ಕಂಪನಿಯು ಸನ್‌ರೂಫ್‌ನೊಂದಿಗೆ ಹ್ಯಾಚ್‌ಬ್ಯಾಕ್‌ನ ಸಾಮಾನ್ಯ ಪೆಟ್ರೋಲ್ ರೂಪಾಂತರಗಳನ್ನು ಸಹ ಪರಿಚಯಿಸಬಹುದು. ಈ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರಿನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಲೆಥೆರೆಟ್ ಅಪ್ಹೋಲ್ಸ್ಟರಿ ಅನ್ನು ಹೊಂದಿದೆ.
ಇದರೊಂದಿಗೆ ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರೈನ್ ಸೆನ್ಸಿಂಗ್ ವೈಪರ್‌ಗಳು, ಆಂಬಿಯೆಂಟ್ ಮೂಡ್ ಲೈಟಿಂಗ್, Isofix ಚೈಲ್ಡ್ ಮೌಂಟ್ ಆಂಕಾರೇಜ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ನೀಡುತ್ತದೆ. ಇನ್ನು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಆಲ್‌ಟ್ರೊಜ್ ಸಿಎನ್‌ಜಿ ಕಾರನ್ನು ಅನಾವರಣಗೊಳಿಸಿತು. ಟಾಟಾ ಕಂಪನಿಯು ಈ ಆಲ್‌ಟ್ರೊಜ್ ಸಿಎನ್‌ಜಿ ಕಾರನ್ನು ಭಾರತದಲ್ಲಿ ಮುಂದಿನ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.
Image Courtesy: Monster Detailers & Customs


Click it and Unblock the Notifications








