ಟಾಟಾದಿಂದ ಮಹತ್ವದ ನಿರ್ಧಾರ: ಎಲೆಕ್ಟ್ರಿಕ್ ಕಾರುಗಳ ಬೆಲೆ ದಿಢೀರ್ ಇಳಿಕೆಯಾಗುತ್ತಾ?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಜನರು ಮುಖ ಮಾಡುತ್ತಿದ್ದಾರೆ. ಆದರೆ, ಅವುಗಳ ಬೆಲೆ ತೀರಾ ಹೆಚ್ಚಿರುವುದರಿಂದ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದಕೆಲ್ಲ ಪರಿಹಾರವೆಂಬಂತೆ ಟಾಟಾ ಕಂಪನಿ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಎಲೆಕ್ಟ್ರಿಕ್ ಕಾರುಗಳು ಅತ್ಯಂತ ಕೈಗೆಟುಕುವ ದರದಲ್ಲಿ ಖರೀದಿಗೆ ಸಿಗಲಿವೆ.

ಭಾರತದ ಪ್ರಮುಖ ಉದ್ಯಮ ದೈತ್ಯ 'ಟಾಟಾ ಗ್ರೂಪ್' ಗುಜರಾತ್ ಸರ್ಕಾರದೊಂದಿಗೆ ಲಿಥಿಯಂ ಐಯಾನ್ ಸೆಲ್‌ ತಯಾರಿಕೆಗಾಗಿ ಗಿಗಾ-ಫ್ಯಾಕ್ಟರಿ ಸ್ಥಾಪಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ. ಇದಕ್ಕಾಗಿ ಬರೋಬ್ಬರಿ ರೂ.13,000 ಕೋಟಿ ಬಂಡವಾಳ ಹೂಡಲು ತೀರ್ಮಾನ ಮಾಡಿದ್ದು, ಸುಮಾರು 13,000ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿಯಾಗಿದೆ.

ಟಾಟಾದಿಂದ ಮಹತ್ವದ ನಿರ್ಧಾರ: ಎಲೆಕ್ಟ್ರಿಕ್ ಕಾರುಗಳ ಬೆಲೆ ದಿಢೀರ್ ಇಳಿಕೆಯಾಗುತ್ತಾ?

ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ಗುಜರಾತ್ ರಾಜ್ಯ ಸರ್ಕಾರದ ಅಧಿಕಾರಿ ವಿಜಯ್ ನೆಹ್ರಾ ಅವರು, ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರಟಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್, ಸ್ಟಾಪಿಸಲು ನಿರ್ಧರಿಸಿರುವ ಈ ಉತ್ಪಾದನಾ ಘಟಕದಿಂದ ಗುಜರಾತ್ ಹಾಗೂ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ವೇಗವನ್ನು ಪಡೆಯಲಿದೆ ಎಂದು ಹೇಳಿದ್ದಾರೆ.

ಭಾರತದ ರಸ್ತೆಗಳಲ್ಲಿ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ವಾಹನಗಳು ಇರಬೇಕೆಂದು ಬಯಸಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ತನ್ನ ಬಜೆಟ್ ನಲ್ಲಿಯೂ ಒಂದಷ್ಟು ಹಣವನ್ನು ಮೀಸಲಿಟ್ಟುದ್ದು, ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಉತ್ತೇಜಿಸಲು ಸಬ್ಸಿಡಿ ಸೇರಿದಂತೆ ಹಲವು ಯೋಜನೆ ಘೋಷಿಸಿದ್ದು, ಭಾರತದಲ್ಲಿಯೇ ಬ್ಯಾಟರಿ ತಯಾರಿಸಲು ಪ್ರೋತ್ಸಾಹಿಸುತ್ತಿದೆ. ಜೊತೆಗೆ ಎಥನಾಲ್ ಚಾಲಿತ ವಾಹನಗಳನ್ನು ಬಳಕೆಗೂ ಜನರನ್ನು ಪ್ರೇರೇಪಿಸುತ್ತಿದೆ.

ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಶೂನ್ಯ ಹೊರಸೂಸುವಿಕೆಯ ವಾಹನಗಳು ಅಗತ್ಯವೆಂದು ಮನಗಂಡಿದೆ. ಈಗಾಗಲೇ ವಿವಿಧ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಅವುಗಳ ಮಾರಾಟದಲ್ಲೂ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಮೇ ತಿಂಗಳಲ್ಲಿ ಬರೋಬ್ಬರಿ 5,805 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ.

ಸದ್ಯ, ಟಾಟಾದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರೆಂದು ಜನಮನ್ನಣೆ ಗಳಿಸಿರುವ ಟಿಯಾಗೊ ಇವಿ ಬಗ್ಗೆ ಮಾತನಾಡುವುದಾದರೆ, ಇದು ರೂ.8.69 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್. ಸಂಪೂರ್ಣ ಚಾರ್ಜಿನಲ್ಲಿ 250 km ರಿಂದ 315 km ರೇಂಜ್ ನೀಡುತ್ತವೆ.

ಟಾಟಾದ ಟಿಗೂರ್ ಇವಿ ರೂ.12.49 ಲಕ್ಷದಿಂದ ರೂ.13.75 ಲಕ್ಷ ದರದಲ್ಲಿ ವಾಣಿಜ್ಯ ಉದ್ದೇಶಗಳ ಬಳಕೆಗೆ ಸಿಗಲಿದೆ. ಫುಲ್ ಚಾರ್ಜಿನಲ್ಲಿ 315 ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಕಂಪನಿ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ನೆಕ್ಸಾನ್ ಇವಿ ಒಂದಾಗಿದ್ದು, ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಖರೀದಿಸುತ್ತಿದ್ದಾರೆ. ಇದು ಮ್ಯಾಕ್ಸ್ ಹಾಗೂ ಪ್ರೈಮ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ರೂ.14.49 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

ಇನ್ನು, ಟಾಟಾ ಅಗರಟಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ ಪ್ರಾರಂಭಿಸುತ್ತಿರುವ ಈ ಬ್ಯಾಟರಿ ಸೆಲ್ ಉತ್ಪಾದನಾ ಘಟಕದಿಂದ 13,000ಕ್ಕೂ ಹೆಚ್ಚು ಜನರಿಗೆ ಉದೋಗ್ಯ ದೊರೆಯಲಿದೆ. ಜೊತೆಗೆ ದೇಶದಲ್ಲಿಯೇ ಲಿಥಿಯಂ ಐಯಾನ್ ಸೆಲ್‌ ತಯಾರಿಕೆಯಿಂದ ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ಇದರಿಂದ ಕೆಲ ತಿಂಗಳ ಬಳಿಕ, ಎಲೆಕ್ಟ್ರಿಕ್ ವಾಹನಗಳ ವಾಹನಗಳ ಬೆಲೆ ದಿಢೀರನೇ ಇಳಿಕೆಯಾದರೂ ಅಚ್ಚರಿ ಇಲ್ಲ.

Article Published On: Tuesday, June 6, 2023, 10:26 [IST]
English summary
Tata build ev battery plant in gujarat details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+