ಭಾರತದ ಬಾವುಟ ಇಂಗ್ಲೆಂಡ್‌ನಲ್ಲಿ ಹಾರಲಿದೆ: ಟಾಟಾದ ಮಹತ್ವ ಹೆಜ್ಜೆ.. ಇದು ಹೆಮ್ಮೆಪಡುವ ವಿಚಾರ!

ದೇಶದಲ್ಲಿ ಟಾಟಾ ಮೋಟಾರ್ಸ್ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಕಂಪನಿ ಕಾರುಗಳು ಮೊದಲ ಸ್ಥಾನದಲ್ಲಿದ್ದು, ಬಹುತೇಕ ಅಂದರೆ ಶೇಕಡ 85% ಪಾಲನ್ನು ಹೊಂದಿವೆ. ಇದರಿಂದ ಟಾಟಾ ಇವಿಗಳು ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿವೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಟಾಟಾದ ಟಿಯಾಗೊ ಇವಿ, ಟಿಗೊರ್ ಇವಿ ಹಾಗೂ ನೆಕ್ಸಾನ್ ಇವಿಗಳೇ ರಾರಾಜಿಸುತ್ತಿವೆ. ಎಲ್ಲವೂ 15 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿರುವುದು ವಿಶೇಷವಾಗಿದ್ದು, ಮತ್ತಷ್ಟು ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ಟಾಟಾ ನಿರತವಾಗಿದೆ. ಸದ್ಯ, ಕಂಪನಿಯ ನೆಕ್ಸಾನ್ ಮ್ಯಾಕ್ಸ್ ಇವಿ ಅತಿ ಹೆಚ್ಚಿನ ರೇಂಜ್ ನೀಡುವ ಕಾರಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 453 km ಓಡುತ್ತದೆ.

ಭಾರತದ ಬಾವುಟ ಇಂಗ್ಲೆಂಡ್‌ನಲ್ಲಿ ಹಾರಲಿದೆ: ಟಾಟಾದ ಮಹತ್ವ ಹೆಜ್ಜೆ.. ಇದು ಹೆಮ್ಮೆಪಡುವ ವಿಚಾರ!

ಅಂತೂ ದೇಶದಲ್ಲಿ ಯಶಸ್ವಿಯಾಗಿರುವ ಟಾಟಾ, ವಿದೇಶದಲ್ಲೂ ತನ್ನ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನಿಸುತ್ತಿದ್ದು, ಇಂಗ್ಲೆಂಡ್‌ನಲ್ಲಿ ಬೃಹತ್ ಬ್ಯಾಟರಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಅದಕ್ಕಾಗಿ ಕಂಪನಿಯ ಹಿರಿಯ ಅಧಿಕಾರಿಗಳ ತಂಡ ಮುಂದಿನ ವಾರ ಅಲ್ಲಿಗೆ ತೆರಳಲಿದ್ದು, ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಿ ಯೋಜನೆಯ ಅಂತಿಮ ರೂಪುರೇಷೆಗಳ ಬಗ್ಗೆ ತೀರ್ಮಾನ ಮಾಡಲಿದ್ದಾರೆ.

ಇದಕ್ಕೂ ಮೊದಲು, ಬ್ಯಾಟರಿ ತಯಾರಿಕ ಘಟಕವನ್ನು ಸ್ಪೇನ್ ದೇಶದಲ್ಲಿ ಟಾಟಾ ಆರಂಭಿಸಲು ಒಲವನ್ನು ಹೊಂದಿತ್ತು. ಆದರೀಗ ಇಂಗ್ಲೆಂಡ್‌ನಲ್ಲಿ ಶುರು ಮಾಡುವ ನೀರಿಕ್ಷೆ ಇದ್ದು, ಅಲ್ಲಿನ ಪ್ರಧಾನಿ ರಿಷಿ ಸುನಕ್ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬ್ರಿಟಿಷ್ ಸರ್ಕಾರದ ಕಡೆಯಿಂದ ಯಾವುದೇ ಪ್ರಕಟಣೆ ಹೊರ ಬಿದ್ದಿಲ್ಲ.

ಭಾರತದ ಬಾವುಟ ಇಂಗ್ಲೆಂಡ್‌ನಲ್ಲಿ ಹಾರಲಿದೆ: ಟಾಟಾದ ಮಹತ್ವ ಹೆಜ್ಜೆ.. ಇದು ಹೆಮ್ಮೆಪಡುವ ವಿಚಾರ!

ಜಗತ್ತು ಎಲೆಕ್ಟ್ರಿಕ್ ವಾಹನಗಳ (ಇವಿ) ತಯಾರಿಕೆಯತ್ತ ಮುಖ ಮಾಡುತ್ತಿದೆ. ಆದರೆ, ಇವಿ ಬ್ಯಾಟರಿಯನ್ನು ಸ್ಥಳೀಯವಾಗಿ ತಯಾರಿಸುವಲ್ಲಿ ಬ್ರಿಟನ್ ದೊಡ್ಡಮಟ್ಟದಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಇದು ಅಲ್ಲಿನ ಕಾರು ಉದ್ಯಮಕ್ಕೆ ಮುಂಬರುವ ದಿನಗಳಲ್ಲಿ ಅಪಾಯವಾಗಲಿದ್ದು, ಅದಕ್ಕಾಗಿಯೇ ಟಾಟಾದ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆಗೆ ಎಲ್ಲ ರೀತಿಯ ಸಹಾಯ ಮಾಡಲು ಆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಇದು ಒಂದು ಕಾರಣವಾದ್ರೆ, ಮತ್ತೊಂದು ಈಗಾಗಲೇ ಬ್ರಿಟನ್ ದೇಶದಲ್ಲಿ ಭಾರೀ ಆರ್ಥಿಕ ಹಿಂಜರಿತವಾಗಿದ್ದು, ಅಲ್ಲಿನ ಜನರು ಪರದಾಡುತ್ತಿದ್ದಾರೆ. ಬಹು ಶತಕೋಟಿ ಪೌಂಡ್ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ತಯಾರಿಕ ಘಟಕದ ಆರಂಭದಿಂದ 9,000, 10,000 ಮಂದಿಗೆ ಉದ್ಯೋಗ ಸಿಗಲಿದೆ. ಬಹುತೇಕ ಇಂಗ್ಲೆಂಡ್‌ನ ಸೋಮರ್‌ಸೆಟ್‌ನಲ್ಲಿ ಹೊಸ ಬ್ಯಾಟರಿ ಪ್ಲಾಂಟ್ ಸ್ಥಾಪನೆಯಾಗುವ ನಿರೀಕ್ಷೆಯಿದೆ.

ಇದನ್ನು ದೊಡ್ಡ ಮೊತ್ತದ ಯೋಜನೆ ಎಂದು ಹೇಳಲಾಗಿದೆ. ಅದರ ಅಂದಾಜು ವೆಚ್ಚದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ ಇಂಗ್ಲೆಂಡ್‌ನಲ್ಲಿ ಬ್ಯಾಟರಿ ಉತ್ಪಾದನಾ ಘಟಕ ಆರಂಭವಾದರೇ ಅಲ್ಲಿನ ಆಟೋಮೊಬೈಲ್ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗುತ್ತದೆ. ಜೊತೆಗೆ ಭಾರೀ ಹೂಡಿಕೆಯಾಗಿರುವುದರಿಂದ ಎಷ್ಟೋ ಮಂದಿಯ ಉದ್ಯೋಗಕ್ಕೆ ದಾರಿಯಾಗುತ್ತದೆ. ಈ ಮೂಲಕ ಆ ದೇಶದ ಆರ್ಥಿಕತೆ ಒಂದಷ್ಟು ಸುಧಾರಣೆಯಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Saturday, May 27, 2023, 10:47 [IST]
English summary
Tata electric car battery plant england details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+