ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಟಾಟಾ ಗ್ರೂಪ್ 2026ರ ವೇಳೆಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 3,000 ಕೋಟಿ ರೂ. ಖರ್ಚು ಮಾಡಲು ಯೋಜಿಸುತ್ತಿದ್ದು, ಇದರ ಭಾಗವಾಗಿ ಸೆಪ್ಟೆಂಬರ್ 2022 ರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ಆಸನ ವ್ಯವಸ್ಥೆಯನ್ನು ಹೊರತರಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಟಾಟಾ, ಸ್ಟೀಲ್ ಟು ಸಾಲ್ಟ್ ಸಮೂಹ ಸಂಸ್ಥೆಯು 2030 ರ ವೇಳೆಗೆ ಜಾಗತಿಕ ಉಕ್ಕು ಉದ್ಯಮದಲ್ಲಿ ಟಾಪ್ 5 ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ. ಇದಕ್ಕನುಗುಣವಾಗಿ ಇತ್ತೀಚೆಗೆ ಟಾಟಾ ಸ್ಟೀಲ್‌ನ ಕಾಂಪೋಸಿಟ್ಸ್ ವಿಭಾಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಸನ ವ್ಯವಸ್ಥೆಗಳಿಗಾಗಿ 145 ಕೋಟಿ ರೂ.ನ ಬೃಹತ್ ಆರ್ಡರ್ ಪಡೆದುಕೊಂಡಿತ್ತು.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಇನ್ನು ಹೊಸ ವಂದೇ ಭಾರತ್ ಪ್ರತಿ ರೈಲು ಸೆಟ್‌ನಲ್ಲಿ 16 ಕೋಚ್‌ಗಳಿರಲಿದ್ದು, ಇಂತಹ 22 ರೈಲು ಸೆಟ್‌ಗಳಿಗೆ ಟಾಟಾ ಸಂಪೂರ್ಣ ಆಸನ ವ್ಯವಸ್ಥೆಗಳ ಪೂರೈಕೆ ಮಾಡಲಿದೆ. "ಇವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಸನಗಳಾಗಿದ್ದು, ಇವುಗಳು 180 ಡಿಗ್ರಿ ತಿರುಗಬಲ್ಲವು ಮತ್ತು ವಿಮಾನ ಮಾದರಿಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರಲಿವೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಭಾರತೀಯ ರೈಲ್ವೆಯನ್ನು ಅತ್ಯಾಧುನಿಕಗೊಳಿಸಲು ಟಾಟಾ ಯೋಜಿಸಿದ್ದು, ಇಂತಹ ಆಸನ ವ್ಯವಸ್ಥೆಯು ಭಾರತದಲ್ಲಿಯೇ ಮೊದಲ ಬಾರಿಗೆ ಮಾಡಲಾಗುತ್ತಿದೆ. ಇದನ್ನು ಸೆಪ್ಟೆಂಬರ್ 2022 ರಿಂದ 12 ತಿಂಗಳುಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಟಾಟಾ ಸ್ಟೀಲ್‌ನ ತಂತ್ರಜ್ಞಾನ ಮತ್ತು ಹೊಸ ಮೆಟೀರಿಯಲ್ಸ್ ಬ್ಯುಸಿನೆಸ್‌ನ ಉಪಾಧ್ಯಕ್ಷ ದೇಬಾಶಿಶ್ ಭಟ್ಟಾಚಾರ್ಜಿ ತಿಳಿಸಿದ್ದಾರೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಭಟ್ಟಾಚಾರ್ಜಿ ಫೈಬರ್ ರೀನ್‌ಫೋರ್ಸ್ಡ್ ಪಾಲಿಮರ್ (ಎಫ್‌ಆರ್‌ಪಿ) ಕುರಿತು ಮಾತನಾಡಿ, "ಭಾರತದಲ್ಲಿ ಸಂಯೋಜಿತ ಉದ್ಯಮವು ಸಾಂಸ್ಥಿಕ ವ್ಯವಹಾರಗಳಿಂದ ಪ್ರಾಬಲ್ಯ ಹೊಂದಿದೆ. ಮೂಲಭೂತ ಸೌಕರ್ಯ, ಕೈಗಾರಿಕಾ ಮತ್ತು ರೈಲ್ವೆ ವಲಯಗಳ ಮೇಲೆ ಹೆಚ್ಚಾಗಿ ಅವಲಂಭಿತವಾಗಿದ್ದು, ಇದು ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಪ್ರಸ್ತುತ ಉಕ್ಕನ್ನು ಬಳಸುತ್ತಿರುವ ಫೈಬರ್ ರೀನ್‌ಫೋರ್ಸ್ಡ್ ಪಾಲಿಮರ್ (FRP) ಅಪ್ಲಿಕೇಶನ್‌ಗಳಿಗೆ ಪರಿವರ್ತಿಸುವುದು ಸಂಯೋಜಿತ ವ್ಯವಹಾರವಾಗಿದೆ. ಟಾಟಾ ಸ್ಟೀಲ್‌ನ FRP ಕಾಂಪೋಸಿಟ್ಸ್ ವ್ಯವಹಾರಕ್ಕೆ ರೈಲ್ವೇಯು ಭರವಸೆಯ ಗ್ರಾಹಕವಾಗಿದೆ ಎಂದರು.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಆಸನಗಳಲ್ಲಿ ಬಳಸಲಾಗುವ ಎಫ್‌ಆರ್‌ಪಿ ಹೆಚ್ಚಿನ ತುಕ್ಕು ನಿರೋಧಕತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತದೆ. ಇದಲ್ಲದೆ, ಇದು ಯುರೋಪಿಯನ್ ಗುಣಮಟ್ಟದ ಅಗ್ನಿಶಾಮಕ ಆಸ್ತಿಗೆ ಅನುಗುಣವಾಗಿರುತ್ತದೆ. ಪ್ರಯಾಣಿಕರಿಗೆ ಸುಧಾರಿತ ಸುರಕ್ಷತೆ ಮತ್ತು ಸೌಕರ್ಯವನ್ನು ನೀಡುತ್ತದೆ. ರೈಲು 18 ಎಂದೂ ಕರೆಯಲ್ಪಡುವ ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತದಲ್ಲಿ ಎರಡನೇ ಅತಿ ವೇಗದ ರೈಲಾಗಿದ್ದು, ಇದು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಟಾಟಾ ಸ್ಟೀಲ್ ಮಹಾರಾಷ್ಟ್ರದ ಖೋಪೋಲಿಯಲ್ಲಿ ನೆದರ್‌ಲ್ಯಾಂಡ್‌ನ ತಂತ್ರಜ್ಞಾನ ಪಾಲುದಾರರ ಸಹಯೋಗದೊಂದಿಗೆ ಗ್ರೀನ್‌ಫೀಲ್ಡ್ ಸೌಲಭ್ಯವನ್ನು ಸ್ಥಾಪಿಸುತ್ತಿದೆ ಎಂದು ಭಟ್ಟಾಚಾರ್ಜಿ ಹೇಳಿದರು. ಈ ಸೌಲಭ್ಯವು ಅಲ್ಯೂಮಿನಿಯಂ ಹನಿಕೋಂಬ್ ಕೋರ್ಡ್ ಸ್ಯಾಂಡ್‌ವಿಚ್ ಪ್ಯಾನೆಲ್‌ಗಳನ್ನು ತಯಾರಿಸುತ್ತದೆ, ಇದನ್ನು ಮುಖ್ಯವಾಗಿ ರೈಲು ಮತ್ತು ಮೆಟ್ರೋ ಕೋಚ್‌ಗಳ ಒಳಾಂಗಣಕ್ಕೆ ಬಳಸಲಾಗುತ್ತದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಜಾಗತಿಕ ಮೆಟ್ರೋ ಮತ್ತು ರೈಲ್ ಕೋಚ್ ಒಇಎಂಗಳು ಮತ್ತು ಭಾರತೀಯ ರೈಲ್ವೆ ಟಾಟಾ ನೂತನ ಘಟಕದ ಪ್ರಮುಖ ಗ್ರಾಹಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶಿ ಗ್ರಾಹಕರು ಹೆಚ್ಚಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನಲಾಗಿದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ. ಒಟ್ಟು 75 ರೈಲುಗಳನ್ನು ಉತ್ಪಾದಿಸಲಾಗುವುದು. ಈ ಹೊಸ ರೈಲುಗಳು ಹಳೆಯ ಮಾದರಿಗಳಿಗಿಂತ ಉತ್ತಮವಾದ ಸುಧಾರಿತ ಆವೃತ್ತಿಯಾಗಿರುತ್ತವೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಉಕ್ಕಿನ ವಸ್ತುಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವ ದೃಷ್ಟಿಯೊಂದಿಗೆ ಟಾಟಾದ ಹೊಸ ಮೆಟೀರಿಯಲ್ಸ್ ಬ್ಯುಸಿನೆಸ್ (NMB) ಅನ್ನು ಸ್ಥಾಪಿಸಲಾಯಿತು. ಈ ಹೊಸ ಬ್ಯುಸಿನೆಸ್ ಸಂಯೋಜನೆಗಳು, ಗ್ರ್ಯಾಫೀನ್ ಮತ್ತು ವೈದ್ಯಕೀಯ ವಸ್ತುಗಳನ್ನು ಹೊಂದಿರಲಿದೆ. ಸದ್ಯ 2021-22 NMB ಯ ನಾಲ್ಕನೇ ವರ್ಷದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಟಾಟಾ ಸ್ಟೀಲ್‌ನ ಸಂಯೋಜಿತ ವ್ಯವಹಾರವು ಕೈಗಾರಿಕಾ, ಮೂಲಸೌಕರ್ಯ ಮತ್ತು ರೈಲ್ವೆ ಮಾರುಕಟ್ಟೆ ವಿಭಾಗಗಳ ಮೇಲೆ ಕೇಂದ್ರೀಕರಿಸುತ್ತದೆ. ರೈಲ್ವೇಗಳಿಗೆ ಸಂಬಂಧಿಸಿದಂತೆ, NMB ಯ ಸಂಯೋಜಿತ ವ್ಯವಹಾರವು TM ಆಟೋಮೋಟಿವ್ ಸೀಟಿಂಗ್ ಸಿಸ್ಟಮ್ಸ್ ಮತ್ತು ಟಾಟಾ ಆಟೋಕಾಂಪ್ ಸಿಸ್ಟಮ್‌ಗಳೊಂದಿಗೆ ಜಂಟಿಯಾಗಿ ಸಂಯೋಜಿತ ಪರಿಹಾರಗಳನ್ನು ನೀಡುವ ಮೂಲಕ ಟಾಟಾ ಗ್ರೂಪ್ ಸಿನರ್ಜಿಗಳನ್ನು ಹೆಚ್ಚಿಸುತ್ತಿದೆ.

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯಗಳನ್ನು ಒದಗಿಸಲಿದೆ ಟಾಟಾ ಗ್ರೂಪ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2019ರಲ್ಲಿ ಪರಿಚಯಿಸಲಾದ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ಮೂಲತಃ ಟ್ರೈನ್ 18 ಎಂದು ಕರೆಯಲ್ಪಡುತ್ತವೆ. ಪ್ರಸ್ತುತ ದೆಹಲಿ-ವಾರಣಾಸಿ ಮತ್ತು ದೆಹಲಿ-ಕರ್ತಾ ಮಾರ್ಗಗಳಲ್ಲಿ ಈ ರೈಲುಗಳು ಓಡುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.

Most Read Articles

Kannada
English summary
Tata Group will provide the same facilities as flights in Vande Bharat trains
Story first published: Monday, August 1, 2022, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X