ಟಾಟಾ, ಏನಯ್ಯಾ ನಿನ್ನ ಲೀಲೆ: ಟ್ರಕ್‌ ಮಧ್ಯ ಸಿಲುಕಿ ನುಜ್ಜುಗುಜ್ಜಾದರೂ ಪ್ರಯಾಣಿಕರು ಬಚಾವ್‌‌!

ಗ್ರಾಹಕರಿಗೆ ಟಾಟಾ ಕಾರುಗಳೆಂದರೆ ಅದೊಂದು ರೀತಿಯ ರಕ್ಷಣಾ ಕವಚ ಇದ್ದಂತೆ. ಗಟ್ಟಿಮುಟ್ಟಾದ ಬಿಲ್ಡ್‌ ಕ್ವಾಲಿಟಿಯೊಂದಿಗೆ ಬರುವ ಟಾಟಾ ಕಾರುಗಳು ಹಲವಾರು ಸಂಧರ್ಭಗಳಲ್ಲಿ ಅಪಘಾತವಾದಾಗ ಗ್ರಾಹಕರ ಪ್ರಾಣವನ್ನು ಉಳಿಸಿದೆ. ಈ ರೀತಿಯ ಹಲವಾರು ಘಟನೆಗಳು ಈ ಹಿಂದೆ ನಾವು ನೋಡಿದ್ದರೂ, ಇಂದು ನಾವು ನೊಡುತ್ತಿರುವ ಈ ಘಟನೆ ಇದೆಲ್ಲಕ್ಕಿಂತ ವಿಲಕ್ಷಣವಾಗಿದೆ.

ಹೌದು, ಟಾಟಾದ ಪ್ರೀಮಿಯಂ ವಾಹನವಾದ ಟಾಟ ಹ್ಯಾರಿಯರ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆದ್ದಾರಿಯಲ್ಲಿ ಈ ಕಾರು ಎರಡು ವಾಹನಗಳ ಮಧ್ಯೆ ಸಿಕ್ಕಿ ಅಪ್ಪಚ್ಚಿಯಾದರೂ, ಅದರಲ್ಲಿದ್ದ ಪ್ರಯಾಣಿಕರು ಮಾತ್ರ ಯಾವುದೇ ಹಾನಿಗೆ ಒಳಗಾಗದೇ ಪಾರಾಗಿರುವುದು ಟಾಟಾ ಕಾರುಗಳ ಗುಣಮಟ್ಟವನ್ನು ತಿಳಿಸುತ್ತದೆ. ಎನ್‌ಹೆಚ್‌ 44 ರಲ್ಲಿ ಈ ಅಪಘಾತ ಸಂಭವಿಸಿದ್ದು, ಇದೀಗ ಎಲ್ಲರ ಗಮನವನ್ನು ಸೆಳೆದಿದೆ. ಹ್ಯಾರಿಯರ್‌ ಕಾರಿನಲ್ಲಿದ್ದ ಪ್ರಯಾಣಿಕರಂತೂ ತಮ್ಮ ಕಾರನ್ನು ದೇವರಂತೆ ಕಾಣುತ್ತಿದ್ದಾರೆ.

TATA Harrier Crashes Between Truck And Car, Passengers Are Safe

ವರದಿಗಳ ಪ್ರಕಾರ ರಾಷ್ಟರೀಯ ಹೆದ್ದಾರಿ 44 ರಲ್ಲಿ ಈ ಅಪಘಾತ ಸಂಭವಿಸಿದ್ದು, ಟ್ರಕ್‌ ಮತ್ತು ಕುಷಾಕ್‌ ಎಸ್‌ಯುವಿ ಮಧ್ಯೆ ಸಿಕ್ಕಾಕೊಂಡ ಹ್ಯಾರಿಯರ್‌ (TATA Harrier) ಸ್ಯಾಂಡ್‌ವಿಚ್‌ ರೀತಿಯಲ್ಲಿ ಅಪಘಾತಕ್ಕೆ ಒಳಗಾಗಿದೆ. ಕಾರಿನ ಹಿಂಭಾಗ ಮತ್ತು ಮುಂಭಾಗ ಎರಡೂ ಕಡೆಯಿಂದ ವಾಹನಕ್ಕೆ ಹಾನಿ ಸಂಭವಿಸಿದ್ದು, ಟಾಟಾ ಹ್ಯಾರಿಯರ್‌ನ ಎರಡೂ ಭಾಗ ನುಜ್ಜುಗುಜ್ಜಾಗಿರುವುದನ್ನು ಕಾಣಬಹುದಾಗಿದೆ. ಅಪಘಾತಕ್ಕೆ ನಿರ್ಧಿಷ್ಟ ಕಾರಣಗಳು ತಿಳಿದು ಬಂದಿಲ್ಲ.

ಆದರೆ ಮಾಹಿತಿಗಳ ಪ್ರಕಾರ ಮುಂಭಾಗದಲ್ಲಿ ಹೋಗುತ್ತಿದ್ದ ಸ್ಕೋಡಾ ಕುಷಾಕ್‌ ಡ್ರೈವರ್ ಇದ್ದಕ್ಕಿದ್ದ ಹಾಗೆ ಬ್ರೇಕ್‌ ಹಾಕಿದ ಹ್ಯಾರಿಯರ್‌ ಚಾಲಕ ಸಹ ಬ್ರೇಕ್‌ ಹಾಕಿದ್ದಾನೆ. ಈ ವೇಳೆ ಹ್ಯಾರಿಯರ್‌ ಕಾರಿನ ಹಿಂಭಾಗದಲ್ಲಿದ್ದ ಟ್ರಕ್‌ ಹ್ಯಾರಿಯರ್‌ ಕಾರಿಗೆ ಗುದ್ದಿದೆ. ಇದರಿಂದ ಹ್ಯಾರಿಯರ್‌ ಮುಂಭಾಗದಲ್ಲಿದ್ದ ಕುಷಾಕ್‌ಗೂ ಸಹ ಗುದ್ದಿದ್ದು, ಈ ರೀತಿಯಾಗಿ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

TATA Harrier Crashes Between Truck And Car, Passengers Are Safe

ಇನ್ನು ಅಪಘಾತದ ವೇಲೆ ಕಾರಿನ ಒಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಹೊರ ಬಂದಿದ್ದು, ಯಾವುದೇ ದೊಡ್ಡ ಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಕಾರಿಗೆ ಮಾತ್ರ ತುಂಬಾ ಹಾನಿಯಾಗಿದ್ದು ಹಿಂಭಾಗ ಮತ್ತು ಮುಂಭಾಗ, ಎರಡೂ ಕಡೆ ಇದ್ದಂತಹ ಲೈಟ್‌ಗಳು, ಡಿಸೈನ್‌ ಎಲಿಮೆಂಟ್‌ಗಳು ಪುಡಿಯಾಗಿದೆ. ಆದರೆ ಒಳಗಿದ್ದ ಪ್ರಯಾಣಿಕರು ಅಷ್ಟೇ ಸೇಫ್‌ ಆಗಿದ್ದಾರೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ರೂಪಾಂತರಗಳ ಅನ್ವಯ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.

TATA Harrier Crashes Between Truck And Car, Passengers Are Safe

ಈ ಕಾರು, ಇಕೋ (Eco), ಸಿಟಿ (City) ಮತ್ತು ಸ್ಪೋರ್ಟ್ (Sports) ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಪಡೆದಿದೆ. ಟಾಟಾ ಹ್ಯಾರಿಯರ್ ಸೇಫ್ಟಿ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಗುರುತಿಸಿಕೊಂಡಿದ್ದು, ಗ್ಲೋಬಲ್ ಎನ್‌ಸಿಎಪಿ (Global NCAP) ಪರೀಕ್ಷೆಯ ವಯಸ್ಕರ ಸುರಕ್ಷತೆ ವಿಭಾಗದಲ್ಲಿ 34ಕ್ಕೆ 33.05 ಅಂಕ ಗಳಿಸುವ ಮೂಲಕ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 1, 2024, 12:30 [IST]
English summary
Tata harrier crashes between truck and car passengers are safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+