130 ಕಿಲೋಮೀಟರ್ ವೇಗದಲ್ಲಿ ಮರಕ್ಕೆ ಡಿಕ್ಕಿ.. ಈ ಕಂಪನಿಯ ಕಾರು ಇಷ್ಟೊಂದು ಸುರಕ್ಷಿತವೇ? ಎಲ್ಲರೂ ಸೇಫ್

ಭಾರತದ ರಸ್ತೆಗಳಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಅಜಾಗರೂಕ ಚಾಲನೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ, ನಾವಿರುವುದು ಕೃಷಿ ಪ್ರಧಾನ ದೇಶವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳಿದ್ದು, ಕೆಲವೊಮ್ಮೆ ಹೆದ್ದಾರಿಗೆ ಬರುತ್ತವೆ. ಅವುಗಳ ಪ್ರಾಣ ಉಳಿಸಲು ವಾಹನ ಸವಾರರು ಪ್ರಯತ್ನಿಸಿದಾಗ ಅಪಘಾತಗಳು ಸಂಭವಿಸುತ್ತವೆ.

ಇಲ್ಲಿಯು ಅಂತಹದ್ದೇ ಘಟನೆ ನಡೆದಿದ್ದು, ಆದರೆ, ವಿಶ್ವಾಸಾರ್ಹತೆಗೆ ಹೆಸರಾಗಿರುವ ಟಾಟಾ ಹ್ಯಾರಿಯರ್ (Tata Harrier) ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರಿಂದ ಭೀಕರ ಅಪಘಾತವಾದರೂ ಪ್ರಯಾಣಿಕರ ಜೀವ ಉಳಿದಿದೆ. ಸದ್ಯ, ಕಾರಿನ ಆಕ್ಸಿಡೆಂಟ್ ಕುರಿತ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ಗುಜರಾತ್ ರಾಜ್ಯದ ಹೆದ್ದಾರಿಯಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ನಿಖರವಾದ ಸ್ಥಳ ಯಾವುದೆಂದು ತಿಳಿದುಬಂದಿಲ್ಲ.

130 ಕಿಲೋಮೀಟರ್ ವೇಗದಲ್ಲಿ ಮರಕ್ಕೆ ಡಿಕ್ಕಿ.. ಈ ಕಂಪನಿಯ ಕಾರು ಇಷ್ಟೊಂದು ಸುರಕ್ಷಿತವೇ? ಎಲ್ಲರೂ ಸೇಫ್

ಹ್ಯಾರಿಯರ್ ಎಸ್‌ಯುವಿಯಲ್ಲಿ ಹೋಗಬೇಕಾದರೆ, ಮುಂಭಾಗ ಹಸುವೊಂದು ಬರುತ್ತಾರೆ. ಅದರ ಜೀವ ಉಳಿಸಲು ಚಾಲಕ, ಕಾರನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಾನೆ. ಮೊದಲೇ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿದ್ದ ಕಾರಣ, ಹ್ಯಾರಿಯರ್ ಸೀದಾ ಮರಕ್ಕೆ ಹೋಗಿ ಡಿಕ್ಕಿಯಾಗುತ್ತದೆ. ಆ ಅಪಘಾತ ಎಷ್ಟು ಭೀಕರವಾಗಿತ್ತು ಅಂದ್ರೆ, ಫ್ರಂಟ್ ಬಂಪರ್, ಬಾನೆಟ್, ಗ್ರಿಲ್, ಹೆಡ್‌ಲ್ಯಾಂಪ್ಸ್, ರೇಡಿಯೇಟರ್ ಗೆ ಹಾನಿಯಾಗಿದೆ.

ಗಾಜು ಪುಡಿ, ಪುಡಿ ಆಗಿದ್ದು, ರೂಫ್ ಕೂಡ ಡ್ಯಾಮೇಜ್ ಆಗಿದೆ. ಈ ಕಾರು, ಸುರಕ್ಷತೆಯಿಂದಲ್ಲೂ ಅತ್ಯುತ್ತಮವಾಗಿರುವದರಿಂದ ಏರ್ ಬ್ಯಾಗ್ ತೆರೆದುಕೊಂಡಿದ್ದು, ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದಾರೆ. ಘಟನೆ ನಡೆದಾಗ ಹ್ಯಾರಿಯರ್ ನಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರೂ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೂ ಟಾಟಾ ಕಾರುಗಳೇ ಗಟ್ಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅಷ್ಟಕ್ಕೂ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ಹ್ಯಾರಿಯರ್ ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ ಎಂದು ನೋಡುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ ಹಿಲ್ ಡಿಸೆಂಟ್ ಕಂಟ್ರೋಲ್ ನಂತಹ ಅತ್ಯುಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ರೂ.15 ಲಕ್ಷದಿಂದ 24.07 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 2.0 ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಪವರ್, 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್/ 6 ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಂದಿದೆ. ಜೊತೆಗೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ.

ಈಗಾಗಲೇ ಟಾಟಾದ ಹಲವು ಕಾರುಗಳು ಸುರಕ್ಷತಾ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ. ಹ್ಯಾರಿಯರ್ ಈ ಪರೀಕ್ಷೆಗೆ ಒಳಪಟ್ಟಿಲ್ಲ. ಆದರೂ ಅತುತ್ತಮ ಸೇಫ್ಟಿ ಕಾರಾಗಿದೆ. ಇಲ್ಲಿ, ಹಸುವನ್ನು ಕಾಪಾಡಲು ಹೋಗಿ, ಮರಕ್ಕೆ ಡಿಕ್ಕಿಯಾಗಿದೆ. ಆದರೂ ಚಾಲಕನ ಸಮಯ ಪ್ರಜ್ಞೆಯನ್ನು ಮೆಚ್ಚಬೇಕು. ಮೊದಲೇ ಹೆದ್ದಾರಿಯಲ್ಲಿ ವಾಹನಗಳು ವೇಗದಲ್ಲಿ ಇರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಜಾನುವಾರುಗಳು ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Saturday, May 20, 2023, 17:00 [IST]
English summary
Tata harrier crashes into tree all passengers safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+