ಭಾರತದಲ್ಲಿ ದೊಡ್ಡ ನೀರಿಕ್ಷೆ ಹುಟ್ಟಿಸಿ... ಫ್ಲಾಪ್ ಆದ ಟಾಟಾ, ಮಹೀಂದ್ರಾ ಕಾರುಗಳಿವು

ದೇಶೀಯ ಕಾರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿಯ ಕಾರುಗಳು ಬಿಡುಗಡೆಯಾಗುತ್ತವೆ. ಹಲವು ಹ್ಯಾಚ್‌ಬ್ಯಾಕ್‌, ಸೆಡಾನ್, ಎಸ್‌ಯುವಿಗಳು ಅವುಗಳ ವಿನ್ಯಾಸ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆಯಿಂದ ಗ್ರಾಹಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಮತ್ತೆ ಕೆಲವು ಸಾಕಷ್ಟು ಆತ್ಯಾಧುನಿಕವಾಗಿದ್ದರೂ ವಿಫಲವಾಗುತ್ತವೆ.

ಸದ್ಯ, ಭಾರತದಲ್ಲಿ ಅತಿದೊಡ್ಡ ವಾಹನ ತಯಾರಕ ಕಂಪನಿಗಳಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾದ ಕಾರುಗಳೇ ಫ್ಲಾಪ್ ಆಗಿ ಬಿಟ್ಟಿವೆ. ಅದಕ್ಕೆ ವಿನ್ಯಾಸ ಚೆನ್ನಾಗಿಲ್ಲದಿರುವುದು, ದರ ಹೆಚ್ಚಿರುವುದು ಮತ್ತು ಬೇರೆ ಕಂಪನಿ ಕಾರುಗಳ ಪೈಪೋಟಿ ಸೇರಿದಂತೆ ನಾನಾ ಕಾರಣಗಳಿವೆ. ಕಳೆದೊಂದು ದಶಕದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಇತಿಹಾಸ ಪುಟ ಸೇರಿದ ಮಹೀಂದ್ರಾದ ಕ್ವಾಂಟೊ, ವೆರಿಟೊ ವೈಬ್, ಟಾಟಾದ ಬೋಲ್ಟ್ ಹಾಗೂ ಜೆಸ್ಟ್ ಕಾರಿನ ಬಗ್ಗೆ ತಿಳಿಯೋಣ.

ಭಾರತದಲ್ಲಿ ಇತಿಹಾಸದಲ್ಲಿ ಫ್ಲಾಪ್ ಆದ ಟಾಟಾ, ಮಹೀಂದ್ರಾ ಕಾರುಗಳಿವು

ಮೊದಲಿಗೆ ಟಾಟಾದ ಬೋಲ್ಟ್ ಹಾಗೂ ಜೆಸ್ಟ್ ಕಾರಿನ ಬಗ್ಗೆ ಮಾತನಾಡೋಣ. ಬಹುತೇಕ 2015ರಲ್ಲಿ ಭಾರತ ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಬೋಲ್ಟ್ ಹ್ಯಾಚ್‌ಬ್ಯಾಕ್, ಜೆಸ್ಟ್ ಸೆಡಾನ್ ಅನ್ನು ಬಿಡುಗಡೆ ಮಾಡಿತ್ತು. ಇವೆರೆಡು ಸಬ್-4 ಮೀಟರ್ ಕಾರಗಳಾಗಿದ್ದವು. ಬೋಲ್ಟ್, ಜೆಸ್ಟ್ ನಲ್ಲಿ ಬಳಕೆ ಮಾಡಿದ್ದ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 90 PS ಪವರ್, 140 Nm ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು. ಜೆಸ್ಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ಲಭ್ಯವಿತ್ತು.

ಇವೆರೆಡು ಕಾರುಗಳ ಬೆಲೆ ರೂ.5 ಲಕ್ಷದಿಂದ ರೂ.7 ಲಕ್ಷವರೆಗೆ ಇತ್ತು. ಅದೇಕೋ ಮಾರಾಟದಲ್ಲಿ ಮಾತ್ರ ಕಮಲ್ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಟಾಟಾ ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ ಹಾಗೂ ಟಿಗೂರ್ ಕಾರುಗಳನ್ನು ಟಾಟಾ ಲಾಂಚ್ ಮಾಡಿತ್ತು. ಇವುಗಳ ಮುಂದೆ ಬೋಲ್ಟ್ ಹಾಗೂ ಜೆಸ್ಟ್ ಕಾರುಗಳು ಜನರಿಗೆ ಹಳೆಯದಂತೆ ಕಂಡವು. 2019ರಲ್ಲಿ ಮಾರುಕಟ್ಟೆಯಿಂದಲೇ ಕಣ್ಮರೆಯಾದವು. ಆದರೆ, ಇವತ್ತಿಗೂ ಟಿಯಾಗೊ, ಟಿಗೂರ್ ಕಾರುಗಳು ಉತ್ತಮವಾಗಿ ಸೇಲ್ ಆಗುತ್ತಿವೆ.

ಸ್ಕಾರ್ಪಿಯೋ, ಥಾರ್ ಎಸ್‌ಯುವಿ ಮಾರಾಟದಿಂದ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಮಹೀಂದ್ರಾದ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ವಿಫಲವಾಗಿದ್ದವು ಎಂದು ಹೇಳಿದರೆ, ಯಾರು ನಂಬುವುದಿಲ್ಲ. 2012ರಲ್ಲಿ ಮಹೀಂದ್ರಾ ಏಳು ಆಸನಗಳ ಕ್ವಾಂಟೊ ಮಿನಿ ಎಸ್‌ಯುವಿಯನ್ನು ರೂ.5.82 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಈ ಕಾರು ಭಾರತದ ಗ್ರಾಹಕರನ್ನು ಅಷ್ಟಾಗಿ ಆಕರ್ಷಿಸಲಿಲ್ಲ.

ಇದು, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಈ ಕ್ವಾಂಟೊ ಮಿನಿ ಎಸ್‌ಯುವಿ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದ ಮಹೀಂದ್ರಾ ಕಂಪನಿ 2016ರಲ್ಲಿ ಈ ಕಾರಿಗೆ ಮಿಡ್ ಲೈಫ್ ಫೇಸ್‌ಲಿಫ್ಟ್ ಮಾದರಿಯನ್ನು 'ನುವೋಸ್ಪೋರ್ಟ್' ಹೆಸರಿನಲ್ಲಿ ಪರಿಚಯಿಸಿತ್ತು. ಇದಕ್ಕೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕಡಿಮೆ. 4 ವರ್ಷಗಳ ಬಳಿಕ ಅಂದರೆ 2020ರಲ್ಲಿ ದೇಶಾದ್ಯಂತ BS6 ಎಮಿಷನ್ ಮಾನದಂಡಗಳು ಜಾರಿಯಾದ ಬಳಿಕ ಇದರ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಮಹೀಂದ್ರಾದ ವೆರಿಟೊ ವೈಬ್ ಹ್ಯಾಚ್‌ಬ್ಯಾಕ್‌ನ್ನು ಸಹ ದೇಶೀಯ ಖರೀದಿದಾರರು ಲೈಕ್ ಮಾಡಲಿಲ್ಲ. 2013ರಲ್ಲಿ ಬಿಡುಗಡೆಯಾದ ಈ ಕಾರು, 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿತ್ತು. 65 PS ಪವರ್,160 Nm ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು. ಜೊತೆಗೆ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ರೈವರ್ ಏರ್‌ಬ್ಯಾಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿತ್ತು. ಆದಾಗ್ಯೂ ಈ ಹ್ಯಾಚ್‌ಬ್ಯಾಕ್ ಅನ್ನು ಯಶಸ್ವಿಯಾಗಿ ಮಾರಾಟ ಮಾಡಲು ಮಹೀಂದ್ರಾಗೆ ಸಾಧ್ಯವಾಗದ ಕಾರಣ, 2020ರಲ್ಲಿ ಸ್ಥಗಿತಗೊಳಿಸಲಾಯಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 30, 2023, 14:30 [IST]
English summary
Tata mahindra company biggest flop cars details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+