Tata Nexon: ಟಾಟಾ ನೆಕ್ಸಾನ್-ಟ್ರಾಕ್ಟರ್ ಭೀಕರ ಅಪಘಾತ: ಪ್ರಯಾಣಿಕರು ಸೇಫ್, ಎರಡು ತುಂಡಾದ ಟ್ರಾಕ್ಟರ್

ಟಾಟಾ ಮೋಟಾರ್ಸ್ ತಮ್ಮ ವಾಹನಗಳ ಉತ್ತಮ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಭೀಕರ ಅಪಘಾತಗಳಲ್ಲಿ ಟಾಟಾ ಕಾರುಗಳು ಪ್ರಯಾಣಿಕರ ಜೀವವನ್ನು ಉಳಿಸಿದ ಹಲವಾರು ಉದಾಹರಣೆಗಳನ್ನು ನಾವೆಲ್ಲರು ನೋಡಿದ್ದೇವೆ. ಇದೀಗ ಮತ್ತೊಮ್ಮೆ ತನ್ನ ನಿರ್ಮಾಣ ಗುಣಮಟ್ಟವನ್ನು ಸಾಭೀತುಪಡಿಸುವ ಅಪಘಾತವೊಂದು ನಡೆದಿದ್ದು, ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆ ಇದಾಗಿದ್ದು, ಟಾಟಾ ನೆಕ್ಸಾನ್ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಎರಡು ತುಂಡುಗಳಾಗಿದೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಈ ಕುರಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಅಪಘಾತವನ್ನು ಸ್ಪಷ್ಟವಾಗಿ ಚಿತ್ರಿಸಿಲ್ಲ. ಹಾಗೆಯೇ ಅಪಘಾತಕ್ಕೆ ನಿಖರ ಕಾರಣವನ್ನು ತಿಳಿಸಿಲ್ಲ, ಉಳಿದಂತೆ ವೀಡಿಯೊದಲ್ಲಿ ಟ್ರಾಕ್ಟರ್ ಮತ್ತು ಟ್ರೈಲರ್ ಎರಡಾಗಿ ವಿಭಜನೆಗೊಂಡು ರಸ್ತೆ ಬದಿಗಳಲ್ಲಿ ಬಿದ್ದಿರುವುದನ್ನು ನೋಡಬಹುದು.

tata-nexon-tractor-tragic-accident-tractor-two-pieces

ಅಪಘಾತದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಗಾಯವಾಗಿದೆಯೇ ಎಂಬುದು ಖಚಿತವಾಗಿಲ್ಲ. ಹಾಗೆಯೇ ಯಾವುದೇ ಸಾವಿನ ಕುರಿತು ವರದಿಯಾಗಿಲ್ಲ, ಉಳಿದಂತೆ ನೆಕ್ಸಾನ್ ತೀವ್ರ ಹಾನಿಗೊಳಗಾಗಿದೆ ಎಂದು ಊಹಿಸಬಹುದು. ಆಶ್ಚರ್ಯಕರವಾಗಿ ಟಾಟಾ ನೆಕ್ಸಾನ್ ಮುಂಭಾಗದ ಫೆಂಡರ್, ಬಂಪರ್‌ನ ಒಂದು ಭಾಗ ಮತ್ತು ಹೆಡ್‌ಲ್ಯಾಂಪ್‌ಗೆ ಮಾತ್ರ ಹಾನಿಯನ್ನುಂಟಾಗಿದೆ. ಇವೆರಡರ ಹಾನಿ ನೋಡಿದ್ರೆ ಟ್ರ್ಯಾಕ್ಟರ್ ಮತ್ತು ನೆಕ್ಸಾನ್ ಎರಡೂ ವಾಹನಗಳ ಬಲಭಾಗಗಳು ಡಿಕ್ಕಿಯಾಗಿರುವಂತೆ ಕಾಣುತ್ತಿದೆ.

ಡಿಕ್ಕಿಯ ನಂತರ ಟ್ರ್ಯಾಕ್ಟರ್ ಟ್ರೇಲರ್ ಅನ್ನು ಎಳೆಯುವ ಮೂಲಕ ನಿಯಂತ್ರಣ ಕಳೆದುಕೊಂಡಿದೆ ಎಂದು ಊಹಿಸಲಾದಾಗಿದೆ. ಅದೃಷ್ಟವಶಾತ್, ಟ್ರೇಲರ್ ನೆಕ್ಸಾನ್‌ಗೆ ಡಿಕ್ಕಿ ಹೊಡೆದಿಲ್ಲ ಇಲ್ಲದಿದ್ದರೆ ತೀವ್ರ ಹಾನಿಯಾಗುತ್ತಿತ್ತು. ನೆಕ್ಸಾನ್ ಬಹುಪಾಲು ಪಾರಾಗಿದೆ, ಅಪಘಾತದ ಸಮಯದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆಯೇ, ಆ ಸಮಯದಲ್ಲಿ ನೆಕ್ಸಾನ್‌ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

tata-nexon-tractor-tragic-accident-tractor-two-pieces

ಈ ರೀತಿಯ ಘಟನೆ ನಾವು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಭಾರತೀಯ ರಸ್ತೆಗಳಲ್ಲಿ ಹಲವು ಟಾಟಾ ನೆಕ್ಸಾನ್ ಅಪಘಾತಗಲು ನಡೆದಿದ್ದು, ಈ ವರೆಗೆ ಸಾವುಗಳು ಆಗದಿರುವುದು ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕೇವಲ ನೆಕ್ಸಾನ್ ಮಾತ್ರವಲ್ಲ ಬ್ರಾಂಡ್‌ನ ಎಲ್ಲಾ ಕಾರುಗಳು ಕೂಡ ಉತ್ತಮ ನಿರ್ಮಾಣ ಗುಣಮಟ್ಟದಾಗಿದ್ದು, ಪ್ರಾಯಾಣಿಕರಿಗೆ ಗರಿಷ್ಟ ಸುರಕ್ಷತೆ ಒದಗಿಸುತ್ತವೆ.

ಗುಣಮಟ್ಟ ನೋಡಿ ಖರೀದಿಸಿ: ಕಾರನ್ನು ಖರೀದಿಸುವಾಗ ವಾಹನ ನಿರ್ಮಾಣ ಗುಣಮಟ್ಟವು ಈಗ ಅನೇಕ ಖರೀದಿದಾರರಿಗೆ ನಿರ್ಣಾಯಕ ಪರಿಗಣನೆಯಾಗಿದೆ. ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿ ತನ್ನ ವಿಭಾಗದಲ್ಲಿ ಸುರಕ್ಷಿತ ವಾಹನಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಟಾಟಾ ಪ್ರಸ್ತುತ ನೆಕ್ಸಾನ್ ಫೇಸ್‌ಲಿಫ್ಟ್‌ ತರಲು ಸಜ್ಜಾಗಿದೆ. ಮುಂಬರುವ ಎಸ್‌ಯುವಿಯನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಿದೆ ಎಂದು ತಿಳಿದುಬಂದಿದೆ.

tata-nexon-tractor-tragic-accident-tractor-two-pieces

ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ ಹೆಡ್‌ಲ್ಯಾಂಪ್‌ಗಳು, ಸ್ಟೀರಿಂಗ್ ವೀಲ್‌ನಲ್ಲಿ ಶೈನಿಂಗ್ ಲೋಗೋ, ಮುಂಭಾಗದ ಗ್ರಿಲ್ ಒಳಗೊಂಡಂತೆ ಹಲವಾರು ಮಾರ್ಪಾಡುಗಳನ್ನು ಕಂಪನಿಯು ವಾಹನಕ್ಕೆ ಪರಿಚಯಿಸಲು ಉದ್ದೇಶಿಸಿದೆ. ಮುಂಬರುವ ನೆಕ್ಸಾನ್‌ಗಾಗಿ DCT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಒದಗಿಸಲು ಟಾಟಾ ಯೋಜಿಸಿದೆ. ಟಾಟಾ ಹೊಸ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ.

ಡ್ರೈವಿಂಗ್ ವೇಳೆ ಎಚ್ಚರವಿರಲಿ: ಭಾರತದಲ್ಲಿ ಅಜಾಗರೂಕ ಚಾಲನೆಯು ಆಗಾಗ್ಗೆ ಇಂತಹ ಅಪಘಾತಗಳಿಗೆ ಕಾರಣವಾಗುತ್ತದೆ. ರಸ್ತೆಯ ತಪ್ಪು ಭಾಗದಲ್ಲಿ ಸವಾರಿ ಮಾಡುವ ಬೈಕರ್‌ಗಳು, ಸರಿಯಾಗಿ ನಿಲುಗಡೆ ಮಾಡದ ವಾಹನಗಳು, ಜಾಯ್‌ವಾಕರ್‌ಗಳು ಮತ್ತು ದಾರಿತಪ್ಪಿ ಬರುವ ಪ್ರಾಣಿಗಳು ಸಹ ಅಪಘಾತಗಳಿಗೆ ಕಾರಣವಾಗುತ್ತವೆ. ಹಾಗಾಗಿ ನಾವೇ ಡ್ರೈವಿಂಗ್ ವೇಳೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Saturday, August 19, 2023, 13:39 [IST]
English summary
Tata nexon tractor tragic accident tractor two pieces
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+