ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

By Nagaraja

ಬೈಕ್‌ಗಳ ಹಬ್ಬ ಎಂದೇ ಪ್ರಖ್ಯಾತಿ ಪಡೆದಿರುವ 'ಇಂಡಿಯಾ ಬೈಕ್‌ ವೀಕ್'ಗೆ ಆದ್ಧೂರಿ ಚಾಲನೆ ದೊರಕಿದೆ. ಇದರಂತೆ ಈ ಬೈಕ್ ಹಬ್ಬದಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡ ಕೂಡಾ ಭಾಗವಹಿಸುತ್ತಿದೆ ಎಂದು ಓದುಗರಿಗೆ ತಿಳಿಸಲು ನಾವು ಹೆಮ್ಮೆಪಟ್ಟುಕೊಳ್ಳುತ್ತಿದ್ದೇವೆ.

ಕೂಲ್ ಕ್ಯಾಪ್ಟನ್ ಧೋನಿ ಸಾರಥ್ಯದಲ್ಲಿ ಬೈಕ್ ಹಬ್ಬ

ನಿಮ್ಮ ಮಾಹಿತಿಗಾಗಿ, ಇಂಡಿಯಾ ಬೈಕ್ ವೀಕ್ ದೇಶದಲ್ಲಿ ನಡೆಯುತ್ತಿರುವ ಏಕಮಾತ್ರ ಬೈಕ್ ಹಬ್ಬವಾಗಿದೆ. ಗೋವಾದಲ್ಲಿ ನಡೆಯುವ ಬೈಕ್ ಉತ್ಸವ ಕೇವಲ ಬೈಕ್‌ಗಳಿಗೆ ಸೀಮಿತವಲ್ಲ. ಇಲ್ಲಿ ಮನರಂಜನೆಗೂ ಅಷ್ಟೇ ಪ್ರಾಮುಖ್ಯ ನೀಡಲಾಗುತ್ತದೆ. ವಿವಿಧ ಕಡೆಗಳಿಂದ ಆಗಮಿಸಿದ ಬ್ಯಾಂಡ್ ಸೆಟ್‌ಗಳೂ ಸಹ ಇಂಡಿಯಾ ಬೈಕ್ ವೀಕನ್ನು ಸ್ಮರಣೀಯವಾಗಿಸುತ್ತದೆ.

ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ..!

2013ನೇ ಸಾಲಿನಲ್ಲಿ ನಡೆದ ಮೊದಲ ಆವೃತ್ತಿಯ ಇಂಡಿಯಾ ಬೈಕ್ ವೀಕ್‌ನಲ್ಲಿ 6,500ರಷ್ಟು ಬೈಕರುಗಳು ಭಾಗವಹಿಸಿದ್ದರು. ಆದರೆ ಈ ಬಾರಿ ಇನ್ನಷ್ಟು ಕುತೂಹಲ ಕೆರಳಿಸಿದ್ದು, 2014 ಜನವರಿ 17 (ಇಂದು) ಹಾಗೂ 18ರಂದು ಜರಗಲಿರುವ ಇಂಡಿಯಾ ಬೈಕ್ ವೀಕ್‌ನಲ್ಲಿ 10,000ಕ್ಕೂ ಹೆಚ್ಚು ಬೈಕ್ ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಪೈಕಿ ಡ್ರೈವ್ ಸ್ಪಾರ್ಕ್ ತಂಡವೂ ಭಾಗಿಯಾಗುತ್ತಿರುವುದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ನಿರೀಕ್ಷೆಯಂತೆಯೇ 2014 ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸಲು ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಸಕಲ ರೀತಿಯ ಪೂರ್ವ ಸಿದ್ಧತೆಗಳನ್ನು ನಡೆಸಿತ್ತು. ಅಲ್ಲದೆ ಬೈಕ್ ವೀಕ್ ಆರಂಭಕ್ಕೂ ಮೂರು ದಿನ ಮುಂಚಿತವಾಗಿ ಅಂದರೆ ಜನವರಿ 14ರಂದು ಬೆಂಗಳೂರಿನಿಂದ ಪ್ರಯಾಣ ಆರಂಭಿಸಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರು ಸೇರಿದಂತೆ ಒಟ್ಟು ಮೂವರು ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸಲು ಬಹಳ ಹುಮ್ಮಸ್ಸಿನೊಂದಿಗೆ ತಮ್ಮ ಸವಾರಿ ಆರಂಭಿಸಿದ್ದರು. ಇವರಿಗೆ ಯಮಹಾ ಎಫ್‌ಝಡ್ 150 ಹಾಗೂ ಪಲ್ಸರ್ 220 ಸಿಸಿ ಬೈಕ್‌ಗಳು ಸಾಥ್ ನೀಡಿದ್ದವು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಬೆಂಗಳೂರಿನಿಂದ ಆರಂಭಿಸಿದ ಪಯಣವು ಬೇಕಾಪುರ-ಯಲ್ಲಾಪುರ-ಅಲ್ವಾನಾರ್-ಮೊಲ್ಲೆಮ್ ಹಾದಿಯಾಗಿ ಅಂತಿಮವಾಗಿ ಗೋವಾದಲ್ಲಿ ಹಬ್ಬ ನಡೆಯುತ್ತಿರುವ ವಾಗಾಟರ್ ಪ್ರದೇಶವನ್ನು ತಲುಪಿತ್ತು. ಈ ಮೂಲಕ ಒಟ್ಟು 650 ಕೀ.ಮೀ. ಹಾದಿಯನ್ನು ಕ್ರಮಿಸಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ನಿಮಗೆ ತಿಳಿದಿರುವಂತೆಯೇ ಒರಟಾದ ಮಾರ್ಗವನ್ನು ಲೆಕ್ಕಿಸದೇ ನಮ್ಮ ತಂಡವು ಸುರಕ್ಷಿತವಾಗಿ ಇಂಡಿಯಾ ಬೈಕ್ ವೀಕ್ ತಲುಪುವಲ್ಲಿ ಯಶಸ್ಸನ್ನು ಕಂಡಿತ್ತು. ಈ ಪೈಕಿ ಅರಣ್ಯ ಪ್ರದೇಶದಲ್ಲಿನ ರೈಡಿಂಗ್ ಆನಂದಕರವಾಗಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಜನವರಿ 14ರಂದು ಬೆಳಗ್ಗಿನ ಜಾವ 5 ಗಂಟೆಗೆ ಆರಂಭವಾದ ಪಯಣ ಮೊದಲೈದು ಗಂಟೆಗಳಲ್ಲೇ 250ರಿಂದ 300 ಕೀ.ಮೀ. ಕ್ರಮಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೆಟ್ಟ ರಸ್ತೆ ಪರಿಸ್ಥಿತಿ ಹಾಗೂ ವಿರಾಮದ ಹಿನ್ನಲೆಯಲ್ಲಿ ಉಳಿದ 350 ಕೀ.ಮೀ. ಯಾತ್ರೆಗಾಗಿ 12 ತಾಸುಗಳೇ ಬೇಕಾಯಿತು. ಈ ಮೂಲಕ ಒಟ್ಟು 650 ಕೀ.ಮೀ. ಕ್ರಮಿಸಿದ ತಂಡವು ರಾತ್ರಿ 11ರ ವೇಳೆಗೆ ಗುರಿ ತಲುಪಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಈ ಪೈಕಿ ಯಮಹಾ ಗರಿಷ್ಠ 117 ಕೀ.ಮೀ. ವೇಗತೆಯನ್ನು ನೀಡಿದ್ದರೂ ಹೆದ್ದಾರಿಗಳಂತಹ ನೇರ ಮಾರ್ಗಗಳಲ್ಲಿ ತನ್ನ ಆವೇಗವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿತ್ತು. ಅಂದರೆ ನಮ್ಮ ತಂಡದ ಪ್ರಕಾರ ಯಮಹಾ 150ಸಿಸಿ ಬೈಕ್‌ನಿಂದ ಗರಿಷ್ಠ 150 ಕೀ.ಮೀ. ವೇಗತೆಯನ್ನು ನಿರೀಕ್ಷಿಸುವಂತಿಲ್ಲ.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಇನ್ನೊಂದೆಡೆ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಪಲ್ಸರ್‌ನಲ್ಲಿ ಗರಿಷ್ಠ 125 ಕೀ.ಮೀ. ವೇಗತೆ ಕಾಪಾಡಿಕೊಳ್ಳಲು ತಂಡ ಯಶಸ್ವಿಯಾಗಿತ್ತು. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸಹ ಚಾಲಕ ಹಾಗೂ ಲಗ್ಗೇಜ್ ಹೊರತಾಗಿಯೂ ಪಲ್ಸರ್ ತನ್ನ ಆವೇಗ ಕಾಪಾಡಿಕೊಂಡಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಅಷ್ಟೇ ಯಾಕೆ ನಮ್ಮ ತಂಡದ ಪ್ರಕಾರ ಪಲ್ಸರ್ ಪ್ರತಿ ಲೀಟರ್‌ಗೂ 38 ಕೀ.ಮೀ. ವರೆಗೂ ಮೈಲೇಜ್ ನೀಡುವಲ್ಲಿ ಸಕ್ಷಮವಾಗಿತ್ತು. ಇನ್ನೊಂದೆಡೆ ಯಮಹಾಗೆ 28ರಿಂದ 30ರ ವರೆಗೆ ಮಾತ್ರ ಮೈಲೇಜ್ ನೀಡಲು ಸಾಧ್ಯವಾಗಿತ್ತು.

ಇಂಡಿಯಾ ಬೈಕ್ ವೀಕ್‌‌ಗೆ ಕಿಚ್ಚು ಹಚ್ಚಿದ ಡ್ರೈವ್ ಸ್ಪಾರ್ಕ್

ಒಟ್ಟಿನಲ್ಲಿ ಇಂಡಿಯಾ ಬೈಕ್ ವೀಕ್‌ಗೆ ಕಿಚ್ಚು ಹಚ್ಚಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಎರಡು ದಿನಗಳ ವರೆಗೆ ನಡೆಯಲಿರುವ ಈ ಹಬ್ಬದಲ್ಲಿ ಭಾಗಿಯಾಗಲಿದೆ. ಅಂದ ಹಾಗೆ ಇಂಡಿಯಾ ಬೈಕ್ ವೀಕ್ ಹೆಚ್ಚಿನ ಮಾಹಿತಿ ಹಾಗೂ ಆಕರ್ಷಕ ಚಿತ್ರಗಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ. ಇದೀಗ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಏನಿದು ಇಂಡಿಯಾ ಬೈಕ್ ವೀಕ್?

ಏನಿದು ಇಂಡಿಯಾ ಬೈಕ್ ವೀಕ್?

ನೀವು ಇದುವರೆಗೆ ನೋಡಿರದ ಬೈಕ್‌ಗಳನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಕಣ್ಣಾರೆ ನೋಡುವ ಅದೃಷ್ಟ ದೊರಕಲಿದೆ. ಎರಡನೇ ಜಾಗತಿಕ ಯುದ್ಧದ ಫೈಟರ್ ಪ್ಲೇನ್ ಎಂಜಿನ್ ಹೊಂದಿರುವ ರಾಡಿಕಲ್ ಚೊಪರ್ ಜತೆಗೆ ಹಲವಾರು ವಿಂಟೇಜ್, ರೇಸ್ ಹಾಗೂ ಕಸ್ಟಮೈಸ್ಡ್ ಬೈಕ್‌ಗಳು ಇಲ್ಲಿ ಪ್ರದರ್ಶನ ಕಾಣಲಿದೆ. ಇನ್ನು ಕಾರ್ಯಕ್ರಮಕ್ಕೆ ಬಿಸಿಯೇರಿಸಲು ಬಿಕಿನಿ ಬೈಕ್ ವಾಶ್ ಕೂಡಾ ನಡೆಯಲಿದೆ. ಹಾಗೆಯೇ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗುತ್ತಿದೆ.

More from DriveSpark

Article Published On: Friday, January 17, 2014, 12:38 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+