ಹಬ್ಬಕ್ಕೆ 'ಕಿಯಾ' ಕಾರು ಖರೀದಿಸಿದ ತೆಲುಗು ನಟಿ: ಬೆಲೆ ಎಷ್ಟಿರಬಹುದು?

ಬಹುತೇಕ ಜನರು ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಅಥವಾ ಬೈಕ್‌ಗಳನ್ನು ಖರೀದಿಸುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳೇನೂ ಹೊರತಾಗಿಲ್ಲ. ಇತ್ತೀಚೆಗಷ್ಟೇ ಸಂಕ್ರಾಂತಿಯಂದು ತೆಲುಗು ನಟಿ ಹಿಮಾಜಾ, ದುಬಾರಿ ಕಾರನ್ನು ಖರೀದಿಸಿದ್ದಾರೆ. ಅಷ್ಟಕ್ಕೂ ನಟಿ ಯಾವ ಕಾರನ್ನು ಖರೀದಿ ಮಾಡಿದ್ದಾರೆ. ಅದರ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿಯೋಣ.

ಆರಂಭದದಲ್ಲಿ ಕಿರುತೆರೆ ನಟಿಯಾಗಿ ಖ್ಯಾತಿ ಗಳಿಸಿದ್ದ ಹಿಮಾಜಾ, ನಂತರ ಸಿನಿರಂಗಕ್ಕೆ ಕಾಲಿಟ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಹಿಮಾಜಾ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದು, ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ಅವರು, ಸಂಕ್ರಾಂತಿ ಹಬ್ಬದ ದಿನ ಹೊಸ ಫ್ಯಾಮಿಲಿ ಕಾರನ್ನು ಖರೀದಿಸಿದ್ದಾರೆ. ಅದು ದುಬಾರಿ ಬೆಲೆಯ ಕಾರಾಗಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

ಹಬ್ಬಕ್ಕೆ ಕಿಯಾ ಕಾರು ಖರೀದಿಸಿದ ತೆಲುಗು ನಟಿ: ಬೆಲೆ ಎಷ್ಟಿರಬಹುದು?

ತೆಲುಗು ನಟಿ ಹಿಮಾಜಾ ಖರೀದಿಸಿರುವ ಕಾರು, 'ಕಿಯಾ ಮೋಟಾರ್ಸ್' ಕಂಪನಿಯ ಕಾರ್ನಿವಲ್ ಆಗಿದೆ. ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಹೊಸ ಕಿಯಾ ಕಾರ್ನಿವಲ್‌ನ ಆರಂಭಿಕ ಬೆಲೆ ರೂ.30 ಲಕ್ಷ ಇರಲಿದೆ. ಆದರೆ, ಹಿಮಾಜಾ ಕೊಂಡುಕೊಂಡಿರುವ ಕಾರಿನ ನಿಖರವಾದ ಬೆಲೆ ತಿಳಿದಿಲ್ಲ. ಸುಮಾರು ರೂ.40 ಲಕ್ಷಕ್ಕೂ ಹೆಚ್ಚು ಇರಬಹುದು ಎಂದು ಹೇಳಲಾಗಿದೆ. ನಟಿ ಹಿಮಾಜಾ, ಈಗಾಗಲೇ ಮರ್ಸಿಡಿಸ್-ಬೆನ್ಜ್ ಮತ್ತು ಮಹೀಂದ್ರಾ ಥಾರ್ ಸೇರಿದಂತೆ ಅನೇಕ ಕಾರುಗಳ ಮಾಲೀಕರಾಗಿದ್ದಾರೆ.

ಕಿಯಾ ಕಾರ್ನಿವಲ್ ಭಾರತ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇದು 7 ಆಸನಗಳ ಕಾರು ಆಗಿದ್ದು, ಕುಟುಂಬದೊಂದಿಗೆ ಪ್ರಯಾಣಿಸಲು ಅತುತ್ತಮ ವಾಹನವಾಗಿದೆ ಎಂದು ಹೇಳಬಹುದು. ಹಾಗಾಗಿ, ಹೆಚ್ಚಿನವರು ಕುಟುಂಬ ಸಮೇತ ಪ್ರಯಾಣಿಸಲು ಈ ಕಾರನ್ನು ಆಯ್ಕೆ ಮಾಡುತ್ತಾರೆ. ಹಿಮಾಜಾ ಕೂಡ ತಮ್ಮ ಕುಟುಂಬಕ್ಕಾಗಿ ಈ ಕಾರನ್ನು ಖರೀದಿಸಿ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ಮೂಲಕ ನೂತನ ಕಾರಿನ ವೀಡಿಯೊವನ್ನು ನಟಿ ಹಿಮಾಜಾ ಶೇರ್ ಮಾಡಿದ್ದಾರೆ.

ಹಬ್ಬಕ್ಕೆ ಕಿಯಾ ಕಾರು ಖರೀದಿಸಿದ ತೆಲುಗು ನಟಿ: ಬೆಲೆ ಎಷ್ಟಿರಬಹುದು?

ಈ ವಿಡಿಯೋಗೆ, 'ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು, ನನ್ನ ಕುಟುಂಬಕ್ಕೆ ಈ ಕಿಯಾ ಕಾರ್ನಿವಲ್ ಕಾರು ಸಂಕ್ರಾಂತಿಯ ಸರ್ಪ್ರೈಸ್ ಆಗಿ, ನಿಮ್ಮ ಆಶೀರ್ವಾದದಿಂದ ದೊರೆತಿದೆ. ಲವ್ ಯು ಆಲ್' ಎಂದು ಶೀರ್ಷೆಕೆ ಬರೆದಿದ್ದಾರೆ. ಹಿಮಾಜಾ, ಶೇರ್ ಮಾಡಿರುವ ಈ ವಿಡಿಯೋವನ್ನು ನೋಡಿದ ಅವರ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಬ್ಲ್ಯಾಕ್ ಬಣ್ಣದ ಕಿಯಾ ಕಾರ್ನಿವಲ್ ಈ ವಿಡಿಯೋದಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದು, ಹಿಮಾಜಾ ಕಾರಿನ ಮುಂದೆ ಕೇಕ್ ಕಟ್ ಮಾಡಿದ್ದಾರೆ.

ಕಿಯಾ ಕಂಪನಿಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಕಾರ್ನಿವಲ್‌ ಒಂದಾಗಿದೆ. ಇದು ಅತ್ಯುತ್ತಮ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಎಂಪಿವಿ (ಬಹುಪಯೋಗಿ ವಾಹನ) ಆಗಿದೆ. ಇದು 2.2 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 197 bhp ಗರಿಷ್ಠ ಪವರ್ ಮತ್ತು 440 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಅತಿಹೆಚ್ಚು ಗ್ರಾಹಕರು ಇಷ್ಟಪಡುತ್ತಾರೆ.

ಕಿಯಾ ಕಾರ್ನಿವಲ್ ಎಂಪಿವಿ ವೈಡ್ ಟೈಗರ್ನೋಸ್ ಗ್ರಿಲ್, ಎಲ್ಇಡಿ ಹೈಡ್ ಲ್ಯಾಂಪ್ಸ್, ಐಸ್ ಕ್ಯೂಬ್ ಎಲ್ಇಡಿ ಫಾಗ್ ಲ್ಯಾಂಪ್. ಸೈಡ್ ಪ್ರೊಫೈಲ್‌ನಲ್ಲಿ 18-ಇಂಚಿನ ಕ್ರೋಮ್ ವೀಲ್ಸ್, ಫ್ಲೋಟಿಂಗ್ ರೂಫ್, ರೇರ್ LED ಟೈಲ್‌ಲೈಟ್‌ ಅನ್ನು ಹೊಂದಿದೆ. ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 3-ಜೋನ್ ಕ್ಲೆಮೆಟ್ ಕಂಟ್ರೋಲ್, ಡ್ಯುಯಲ್ ಸನ್‌ರೂಫ್, 8-ಸ್ಪೀಕರ್ ಹಾರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ಆಟೋ ಹೆಡ್‌ಲ್ಯಾಂಪ್‌ಗಳು, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿದೆ.

ಅಲ್ಲದೆ, ರಿಯರ್-ವ್ಯೂ ಕ್ಯಾಮೆರಾ, ಕ್ರೂಸ್ ಕಂಟ್ರೋಲ್‌ಗಳು ಮತ್ತು 10.1-ಇಂಚಿನ ರೇರ್ ಸೀಟ್ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್, ಸ್ಮಾರ್ಟ್ ಏರ್-ಪ್ಯೂರಿಫೈಯರ್, ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿದೆ. ಇನ್ನು, ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರೋಲ್-ಓವರ್ ಮಿಟಿಗೇಶನ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ಬಹುತೇಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ.

Article Published On: Wednesday, January 18, 2023, 6:30 [IST]
English summary
Telugu actor himaja purchase kia carnival car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+