ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ಕೆಲ ದಿನಗಳ ಹಿಂದಷ್ಟೇ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ತಮ್ಮ ಜಿಮ್ ಕೋಚ್ ಗೆ ಎಸ್‌ಯುವಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಪ್ರಭಾಸ್ ಲಕ್ಷಾಂತರ ರೂಪಾಯಿ ಬೆಲೆಯ ರೇಂಜ್ ರೋವರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು.

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ಈಗ ದಕ್ಷಿಣ ಭಾರತದ ಮತ್ತೊಬ್ಬ ನಟ ತಮ್ಮ ಚಿತ್ರದ ನಿರ್ದೇಶಕರಿಗೆ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ನಿತಿನ್ ಅಭಿನಯದ ಭೀಷ್ಮಾ ಚಿತ್ರವು ಕರೋನಾ ಹರಡುವ ಮುನ್ನ ಬಿಡುಗಡೆಯಾಗಿ ಯಶಸ್ಸನ್ನು ಕಂಡಿತ್ತು. ಇದರಿಂದ ಖುಷಿಯಾದ ನಟ ನಿತಿನ್, ಈ ಚಿತ್ರದ ನಿರ್ದೇಶಕ ವೆಂಕಿ ಕುಡುಮುಲಾರವರಿಗೆ ಅವರ ಜನ್ಮದಿನದಂದು ರೇಂಜ್ ರೋವರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ನಿರ್ದೇಶಕ ವೆಂಕಿ ಕುಡುಮುಲಾ, ಅತ್ಯುತ್ತಮ ಉಡುಗೊರೆಯನ್ನು ನೀಡಿದ ನಿತಿನ್ ರವರಿಗೆ ಧನ್ಯವಾದಗಳನ್ನು ಸಲ್ಲಿಸಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇದಕ್ಕೂ ಮುನ್ನ ವೆಂಕಿ ಕುಡುಮುಲಾರವರಿಗೆ ಮತ್ತೊಬ್ಬ ನಟ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ನಿತಿನ್ ಗಿಫ್ಟ್ ನೀಡಿದ ಕಾರು ರೇಂಜ್ ರೋವರ್‌ ಇವೊಕ್ ಎಂದು ಹೇಳಲಾಗಿದೆ. ಹೊಸ ರೇಂಜ್ ರೋವರ್ ಇವೊಕ್ ಎಸ್‌ಯುವಿಯ ಆರಂಭಿಕ ಬೆಲೆಯಲ್ಲಿ ಎಕ್ಸ್ ಶೋರೂಂ ದರದಂತೆ ರೂ.54.94 ಲಕ್ಷಗಳಾಗಿದೆ. ರೇಂಜ್ ರೋವರ್ ಕಂಪನಿಯು ಕೆಲ ತಿಂಗಳ ಹಿಂದಷ್ಟೇ ಈ ಕಾರಿನ ವಿತರಣೆಯನ್ನು ಆರಂಭಿಸಿತ್ತು. ಈ ಎಸ್‌ಯುವಿಯನ್ನು ಈ ವರ್ಷದ ಜನವರಿಯಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಳಿಸಲಾಯಿತು.

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

2020ರ ರೇಂಜ್ ರೋವರ್ ಇವೊಕ್‌ ಎರಡು ರೀತಿಯ ಬಿಎಸ್ 6 ಎಂಜಿನ್ ಗಳನ್ನು ಹೊಂದಿದೆ. 2.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ 48-ವೋಲ್ಟ್ ನ ಹೈಬ್ರಿಡ್ ಸಿಸ್ಟಂ ನೀಡಲಾಗಿದೆ. ಈ ಎಂಜಿನ್ 247 ಬಿಹೆಚ್‌ಪಿ ಪವರ್ ಹಾಗೂ 365 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 2.0 ಲೀಟರಿನ ಡೀಸೆಲ್ ಎಂಜಿನ್ 177 ಬಿಹೆಚ್‌ಪಿ ಪವರ್ ಹಾಗೂ 430 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ನಿತಿನ್ ತಮ್ಮ ನಿರ್ದೇಶಕರಿಗೆ ಯಾವ ಮಾದರಿಯನ್ನು ನೀಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಈ ಎಸ್‌ಯುವಿ ಹಲವಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಹೊಸ ಎಸ್‌ಯುವಿ ಟಚ್ ಪ್ರೊ ಡ್ಯುವೋ ಸಿಸ್ಟಂ, 12.3 ಇಂಚಿನ ಇಂಟರಾಕ್ಟಿವ್ ಡ್ರೈವರ್ ಡಿಸ್ ಪ್ಲೇ, ಸ್ಮಾರ್ಟ್‌ಫೋನ್ ಇಂಟಿಗ್ರೇಷನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಕ್ಲಿಯರ್ ಸೈಟ್ ಇಂಟಿರಿಯರ್ ರೇರ್ ವೀವ್ ಮಿರರ್ ಗಳನ್ನು ಹೊಂದಿದೆ.

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ಇದರ ಜೊತೆಗೆ ಹೊಸ ರೇಂಜ್ ರೋವರ್ ಇವೊಕ್ ಎಸ್‌ಯುವಿಯು ಲೇನ್ ಅಸಿಸ್ಟ್, ಡ್ರೈವರ್ ಕಂಡಿಷನ್ ಮಾನಿಟರ್, 360 ಡಿಗ್ರಿ ಪಾರ್ಕಿಂಗ್‌ಗೆ ರೇರ್ ಕ್ಯಾಮೆರಾ, ಕ್ಲಿಯರ್ ಎಕ್ಸಿಟ್ ಮಾನಿಟರ್ ಹಾಗೂ ಡ್ರೈವರ್ ಅನುಕೂಲಕ್ಕಾಗಿ ಹಿಂಭಾಗದಲ್ಲಿ ಟ್ರಾಫಿಕ್ ಮಾನಿಟರ್ ಗಳನ್ನು ಹೊಂದಿದೆ. ಹೊಸ ರೇಂಜ್ ರೋವರ್ ಇವೊಕ್ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಸಹ ಹೊಂದಿದೆ. ಈ ಸಿಸ್ಟಂ ಹೊರವಲಯವನ್ನು ಆಟೋಮ್ಯಾಟಿಕ್ ಆಗಿ ಗುರುತಿಸಿ, ಅದಕ್ಕೆ ಅನುಗುಣವಾಗಿ ವಾಹನವನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಾಹುಬಲಿ ಆಯ್ತು, ಈಗ ಭೀಷ್ಮನ ಸರದಿ...ದುಬಾರಿ ಬೆಲೆಯ ಎಸ್‌ಯುವಿ ಗಿಫ್ಟ್ ನೀಡಿದ ನಟ ನಿತಿನ್

ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ವ್ರಾಂಗ್ಲರ್, ಬಿಎಂಡಬ್ಲ್ಯು ಎಕ್ಸ್ 4, ಹೋಂಡಾ ಸಿಆರ್-ವಿ ಹಾಗೂ ವೋಲ್ವೋ ಎಕ್ಸ್‌ಸಿ 60 ಕಾರುಗಳಿಗೆ ಪೈಪೋಟಿ ನೀಡುತ್ತದೆ. ಹಲವು ಸೆಲೆಬ್ರಿಟಿಗಳು ಎಸ್‌ಯುವಿಗಳನ್ನು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿದ್ದಾರೆ.

Most Read Articles

Kannada
English summary
Telugu actor Nithin gifts Range Rover to director. Read in Kannada.
Story first published: Friday, September 11, 2020, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X