ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

Written By:

ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ತಮ್ಮ 57ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಐಷಾರಾಮಿ ಕಾರುಗಳ ಮೇಲೆ ಒಲವು ತೋರಿರುವ ಈ ಟಾಲಿವುಡ್ ಸ್ಟಾರ್, ಹೊಚ್ಚ ಹೊಸ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನು ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ.

'ಬಿಮ್ಮರ್' ಎಂಬ ಅಕ್ಕರೆಯ ಹೆಸರಿನಿಂದಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬಿಎಂಡಬ್ಲ್ಯು ಸಂಸ್ಥೆಯ '750 ಎಲ್ ಐ ಎಕ್ಸ್ ಡ್ರೈವ್ ಎಂ ಸ್ಪೋರ್ಟ್' ಕಾರನ್ನು ನಾಗಾರ್ಜುನ ತಮ್ಮ ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ತಮ್ಮ ಬಯಕೆಯೆಂತೆಯೇ ವಿಶಿಷ್ಟ ನೀಲಿ (Frozen blue) ಬಣ್ಣದ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನು ನಾಗಾರ್ಜುನ ಖರೀದಿಸಿದ್ದಾರೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಇದು ನಾಗಾರ್ಜುನ ಖರೀದಿ ಮಾಡುತ್ತಿರುವ ಎರಡನೇ ಬಿಎಂಡಬ್ಲ್ಯು ಕಾರಾಗಿದೆ. ಇದಕ್ಕೂ ಮೊದಲು ಕಪ್ಪು ವರ್ಣದ ಎಫ್02 740ಎಲ್ ಐ ಕಸ್ಟಮೈಸ್ಡ್ ಕಾರನ್ನು ತಮ್ಮದಾಗಿಸಿಕೊಂಡಿದ್ದರು.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಅಂದ ಹಾಗೆ ಶಕ್ತಿಶಾಲಿ 4.4 ಲೀಟರ್ ಟರ್ಬೊಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ 2016 ಬಿಎಂಡಬ್ಲ್ಯು 750ಎಲ್ ಐ ಎಕ್ಸ್ ಡ್ರೈವ್ ಕಾರು 445 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಬಿಎಂಡಬ್ಲ್ಯುನ ಈ ಆಕರ್ಷಕ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.5 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಹಿಂದಿನ ಮಾದರಿಗಿಂತಲೂ 130 ಕೆ.ಜಿ.ಗಳಷ್ಟು ಹಗುರ ಭಾರ ಎನಿಸಿಕೊಂಡಿರುವ ಬಿಎಂಡಬ್ಲ್ಯು 7 ಸಿರೀಸ್, ಅಲ್ಯೂಮಿನಿಯಂ ಜೊತೆಗೆ ಕಾರ್ಬನ್ ಫೈಬರ್ ಬಲಪಡಿಸಿದ ಪ್ಲಾಸಿಕ್ ನಿಂದ (ಸಿಎಫ್ ಆರ್ ಪಿ) ನಿರ್ಮಾಣವಾಗಿದೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಬಿಎಂಡಬ್ಲ್ಯು 7 ಸಿರೀಸ್ ಕಾರಿನ ಒಳಮೈಯಲ್ಲೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಇದು ಗೆಸ್ಟರ್ ಕಂಟ್ರೋಲ್, ರಿಮೋಟ್ ಕಂಟ್ರೋಲ್ ಪಾರ್ಕಿಂಗ್, ಬಿಎಂಡಬ್ಲ್ಯು ಡಿಸ್ ಪ್ಲೇ ಕೀ, ಬಿಎಂಡಬ್ಲ್ಯು ಟಚ್ ಕಮಾಂಡ್ ಸಿಸ್ಟಂ ಹಾಗೂ ವೈರ್ ಲೆಸ್ ಚಾರ್ಜಿಂಗ್ ಮತ್ತು ಸ್ಕೈ ಲಾಂಜ್ ಗಳಂತಹ ಭವಿಷ್ಯತ್ತಿನ ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ.

ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!

ಒಟ್ಟಿನಲ್ಲಿ ಐಷಾರಾಮಿ ಕಾರುಗಳ ಮೇಲಿನ ಸಿನಿ ತಾರೆಯರ ಪ್ರೀತಿ ಮುಂದುವರಿದಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ಸ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆದಯದಿರಿ.

English summary
Telugu superstar Nagarjuna buys all new BMW 7 series
Story first published: Thursday, September 1, 2016, 13:02 [IST]
Please Wait while comments are loading...

Latest Photos