ಮರ್ಸಿಡಿಸ್ ಬೆಂಝ್ ಗರಡಿಯಲ್ಲಿರುವ 10 ಕ್ಲಾಸಿಕ್ ಕಾರುಗಳು

ಆಟೋಮೊಬೈಲ್ ಕ್ಷೇತ್ರದಲ್ಲಿ 125ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಜರ್ಮನಿಯ ಮರ್ಸಿಡಿಸ್ ಬೆಂಝ್ ಕೇಂದ್ರ ಕಚೇರಿಯು ಜರ್ಮನಿಯ ಸ್ಟುಟ್‌ಗಾರ್ಟ್ ನಲ್ಲಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

Also Read: ಬೆಂಝ್ ಟಾಪ್‌ಲೆಸ್ ಚೆಲುವೆಯ ಫುಲ್ ಬಾಡಿ ಸ್ಕ್ಯಾನಿಂಗ್ ಮುಂದಕ್ಕೆ ಓದಿ

ಡೈಮ್ಲರ್ ಎಜಿ ಭಾಗವಾಗಿರುವ ಬೆಂಝ್ 1926ನೇ ಇಸವಿಯಲ್ಲಿ ಕಾರ್ಲ್ ಬೆಂಝ್ ಮತ್ತು ಗಾಟ್ಲೀಬ್ ಡೈಮ್ಲರ್ ಜೊತೆ ಸೇರಿ ಸ್ಥಾಪಿಸಿದ್ದರು. ಇಂದು ಐಷಾರಾಮಿ ಕಾರು ವಿಭಾಗದಲ್ಲಿ ವಿಶ್ವವ್ಯಾಪಿಯಾಗಿ ಹರಡಿರುವ ಬೆಂಝ್ ತನ್ನದೇ ಛಾಪು ಮೂಡಿಸಿದೆ. ಹಾಗೆಯೇ ವಾಹನ ಜಗತ್ತಿನಲ್ಲಿ ಐತಿಹಾಸಿಕ ಇತಿಹಾಸವನ್ನು ಹೊಂದಿರುವ ಬೆಂಝ್ ಮ್ಯೂಸಿಯಂನಲ್ಲಿರುವ ನೀವು ನೋಡಲೇಬೇಕಾದ 10 ಕ್ಲಾಸಿಕ್ ಕಾರುಗಳ ಬಗ್ಗೆ ನಾವಿಲ್ಲಿ ಹೇಳಿಕೊಡಲಿದ್ದೇವೆ.

ಮರ್ಸಿಡಿಸ್ ಬೆಂಝ್ ಗರಡಿಯಲ್ಲಿರುವ 10 ಕ್ಲಾಸಿಕ್ ಕಾರುಗಳು

16,500 ಚದರ ಅಡಿಗಳಷ್ಟು ಹರಡಿರುವ ಇಲ್ಲಿನ ಸ್ಟುಟ್‌ಗಾರ್ಟ್ ಕ್ಲಾಸಿಕ್ ಕಾರು ಮ್ಯೂಸಿಯಂನಲ್ಲಿ ಒಂಬತ್ತು ಮಹಡಿಗಳಿದ್ದು, 160 ವಾಹನಗಳ ಸಂಗ್ರಹಗಳಿವೆ. ಕ್ಲಾಸಿಕ್ ಕಾರುಗಳಿಂದ ಹಿಡಿದು, ಮೊದಲ ಮಾದರಿ, ಬಸ್, ಟ್ರಕ್, ಆಫ್ ರೋಡ್, ಆಂಬ್ಯುಲನ್ಸ್, ಲಿಮೊಸಿನ್ ಹಾಗೂ ಗ್ರ್ಯಾನ್ ಪ್ರಿ ವಾಹನಗಳನ್ನು ನೋಡಬಹುದಾಗಿದೆ. ಇಲ್ಲಿಗೆ ಭೇಟಿ ಕೊಡುವ ವಾಹನ ಪ್ರೇಮಿಗಳಿಗೆ ಇದಕ್ಕಿಂತಲೂ ಮಿಗಿಲಾಗಿ ಇನ್ನೇನು ಬೇಕಿ ಹೇಳಿ ನೋಡೋಣ?

1902 ಮರ್ಸಿಡಿಸ್ ಸಿಂಪ್ಲೆಕ್ಸ್ 40 ಅಶ್ವಶಕ್ತಿ

1902 ಮರ್ಸಿಡಿಸ್ ಸಿಂಪ್ಲೆಕ್ಸ್ 40 ಅಶ್ವಶಕ್ತಿ

ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಅತಿ ಪುರಾತನ ವಾಹನಗಳಲ್ಲಿ ಇದೂ ಒಂದಾಗಿದೆ. ಇದಕ್ಕಾಗಿ ಬೆಂಝ್ ಪಾಲಿಗಿದು ಅತಿ ಮಹತ್ವದೆನಿಸಿಕೊಂಡಿದೆ. ಇದರ 6.8 ಲೀಟರ್ ಫೋರ್ ಸಿಲಿಂಡರ್ ಎಂಜಿನ್ 40 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಗರಿಷ್ಠ 50 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

1928 ಮರ್ಸಿಡಿಸ್ ಬೆಂಝ್ ಮಾಡೆಲ್ ಎಸ್‌ಎಸ್‌ಕೆ ಸ್ಪೋರ್ಟ್ಸ್ ಟು ಸೀಟರ್

1928 ಮರ್ಸಿಡಿಸ್ ಬೆಂಝ್ ಮಾಡೆಲ್ ಎಸ್‌ಎಸ್‌ಕೆ ಸ್ಪೋರ್ಟ್ಸ್ ಟು ಸೀಟರ್

ಒಂದನೇ ಹಾಗೂ ಎರಡನೇ ಮಹಾಯುದ್ಧ ನಡುವಣ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎರಡು ಸೀಟುಗಳ ಈ ಬೆಂಝ್ ಮಾಡೆಲ್ ಸ್ಪೋರ್ಟ್ಸ್ ಕಾರು ಅತ್ಯಂತ ಗಮನ ಸೆಳೆಯುತ್ತದೆ. ಇದನ್ನು ಪ್ರಮುಖವಾಗಿಯೂ ಯುರೋಪ್ ನಲ್ಲಿ ಹಿಲ್ ಕ್ಲೈಂಬ್ ರೇಸ್ ಗಾಗಿ ಬಳಕೆ ಮಾಡಲಾಗುತ್ತಿದ್ದು. ಇದರಲ್ಲಿರುವ 7.1 ಲೀಟರ್ ಸಿಕ್ಸ್ ಸಿಲಿಂಡರ್ ಎಂಜಿನ್ 221 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

1938 ಬೆಂಝ್ 260 ಡಿ ಪುಲ್ ಮ್ಯಾನ್ ಸೆಡಾನ್

1938 ಬೆಂಝ್ 260 ಡಿ ಪುಲ್ ಮ್ಯಾನ್ ಸೆಡಾನ್

ಮೊದಲ ರೆಗ್ಯೂಲರ್ ನಿರ್ಮಾಣದ ಕಾರೆಂಬ ಖ್ಯಾತಿಗೆ ಇದು ಪಾತ್ರವಾಗಿದ್ದು, 44 ಅಶ್ವಶಕ್ತಿ ಉತ್ಪಾದಿಸುವ 2.5 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಬಳಕೆಯಾಗಿದೆ. ಇದು ಅಂದಿನ ಕಾಲದಲ್ಲೇ ಟ್ಯಾಕ್ಸಿ ಚಾಲಕರ ಮಧ್ಯೆ ಹೆಚ್ಚಿನ ಜನಪ್ರಿಯತೆ ಸಾಧಿಸಿದ್ದು, ಗಂಟೆಗೆ 60 ಮೈಲು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

1954 ಬೆಂಝ್ ರೆನ್ ಟ್ರಾನ್ಸ್ ಪೋರ್ಟರ್

1954 ಬೆಂಝ್ ರೆನ್ ಟ್ರಾನ್ಸ್ ಪೋರ್ಟರ್

ಅರ್ಧದಷ್ಟು ಟ್ರಕ್ ಪ್ರತಿಬಿಂಬಿಸುವ ಮುಖವಾಡ ಇನ್ನರ್ಧದಷ್ಟು ಸ್ಪೋರ್ಟ್ಸ್ ಕಾರನ್ನು ಬಿಂಬಿಸುವ ರೂಪ ಇವೆಲ್ಲವೂ ಬೆಂಝ್ ರೆನ್ ಟ್ರಾನ್ ಪೋರ್ಟರ್ ಕಾರಿನ ವಿಶಿಷ್ಟತೆಯಾಗಿದೆ. ಇದರಲ್ಲಿ 3.0 ಲೀಟರ್ ಸಿಕ್ಸ್ ಫ್ಲೂಯಲ್ ಇಂಜೆಕ್ಟ್ ಎಂಜಿನ್ ಬಳಕೆಯಾಗಿದ್ದು, ಪರಿಣಾಮಕಾರಿ ಗಂಟೆಗೆ 105 ಮೈಲು ವೇಗವನ್ನು ಪಡೆಯುತ್ತದೆ.

1954 ಬೆಂಝ್ 300 ಎಸ್‌ಎಲ್ ಕೂಪೆ

1954 ಬೆಂಝ್ 300 ಎಸ್‌ಎಲ್ ಕೂಪೆ

1954ರ ನ್ಯೂಯಾರ್ಕ್ ಮೋಟಾರು ಶೋದ ಮೂಲಕ ಭರ್ಜರಿ ಎಂಟ್ರಿ ಕೊಂಡಿರುವ ಬೆಂಝ್ 300 ಎಸ್ ಎಲ್ ಕೂಪೆ ಪ್ರಮುಖವಾಗಿಯೂ ನ್ಯೂಯಾರ್ಕ್ ಮಾರುಕಟ್ಟೆಯನ್ನು ಗುರಿಯಾಗಿರಿಸಿತ್ತು. ಅಂದಿನ ಅತಿ ವೇಗದ ಕಾರುಗಳಲ್ಲಿ ಇದೂ ಒಂದಾಗಿದ್ದು, 3.0 ಲೀಟರ್ ಎಂಜಿನ್ 212 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದವು. ಇದು 1954ರಿಂದ 1957ರ ಅವಧಿಯಲ್ಲಿ 1,400ರಷ್ಟು ಯುನಿಟ್ ಗಳು ನಿರ್ಮಾಣವಾಗಿದ್ದವು.

1969-1979 ಸಿ11 ಕಾನ್ಸೆಪ್ಟ್

1969-1979 ಸಿ11 ಕಾನ್ಸೆಪ್ಟ್

1969ರಿಂದ 1979ನೇ ಅವಧಿಯಲ್ಲಿ ನಿರ್ಮಾಣವಾದ ನಾಲ್ಕು ಕಾನ್ಸೆಪ್ಟ್ ಶ್ರೇಣಿಯ ಕಾರುಗಳಿಗೆ ಸಿ111 ಹೆಸರನ್ನಿಡಲಾಗಿತ್ತು. ಇದು ಮೂರು ರೊಟರ್ ವಾಂಕೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 330 ಅಶ್ವಶಕ್ತಿಯನ್ನು ಉತ್ಪಾದಿಸುವುದಷ್ಟೇ ಅಲ್ಲದೆ ಗಂಟೆಗೆ 62 ಮೈಲು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

1973 ಬೆಂಝ್ ಸೇಫ್ಟಿ ವೆಹಿಕಲ್ ಇಎಸ್‌ಎಫ್ 22

1973 ಬೆಂಝ್ ಸೇಫ್ಟಿ ವೆಹಿಕಲ್ ಇಎಸ್‌ಎಫ್ 22

ಪ್ರಯೋಗಾತ್ಮಕವಾಗಿ 1973ನೇ ಇಸವಿಯಲ್ಲಿ ಬೆಂಝ್ ಸೇಫ್ಟಿ ವೆಹಿಕಲ್ ಇಎಸ್‌ಎಫ್ 22 ನಿರ್ಮಿಸಲಾಗಿತ್ತು. ಬೆಂಝ್ ಎಸ್ ಕ್ಲಾಸ್ ಡಬ್ಲ್ಯು 116 ತಳಹದಿಯಲ್ಲಿ ನಿರ್ಮಾಣವಾಗಿರುವ ಈ ಕಾರಿನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಹಾಗೂ ಎಬಿಎಸ್ ಸೌಲಭ್ಯವನ್ನು ಒದಗಿಸಲಾಗಿತ್ತು.

 1977 ಬೆಂಝ್ 280 ಇ ರಾಲಿ ಕಾರು (ಡಬ್ಲ್ಯು 123)

1977 ಬೆಂಝ್ 280 ಇ ರಾಲಿ ಕಾರು (ಡಬ್ಲ್ಯು 123)

ಲಂಡನ್ ನಿಂದ ಸಿಡ್ನಿ ವರೆಗಿನ ಮ್ಯಾರಥನ್ ನಲ್ಲಿ ಭಾಗವಹಿಸಿದ ಹೆಮ್ಮೆಗೂ ಪಾತ್ರವಾಗಿರುವ ಬೆಂಝ್ ನ 280 ಇ ರಾಲಿ ಕಾರು 2.8 ಲೀಟರ್ ಫ್ಲೂಯಲ್ ಇಂಜೆಕ್ಟಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

1981 ಬೆಂಝ್ ಆಟೋ 2000 ಕಾನ್ಸೆಪ್ಟ್

1981 ಬೆಂಝ್ ಆಟೋ 2000 ಕಾನ್ಸೆಪ್ಟ್

1980ರಲ್ಲಿ ಪಶ್ಚಿಮ ಜರ್ಮನಿ ಸರಕಾರದ ಬೇಡಿಕೆಯ ಮೆರೆಗೆ ಸಂಪೂರ್ಣ ಕ್ರಿಯಾತ್ಮಕ ನಾಲ್ಕು ಜನರಿಗೆ ಚಲಿಸುವ ಹಾಗೂ 900 ಪೌಂಡು ತೂಕವನ್ನು ಹೊರಬಹುದಾದ ಆಟೋ 2000 ಮೊದಲ ಮಾದರಿಯನ್ನು ಬೆಂಝ್ ಸಂಸ್ಥೆಯು ತಯಾರಿಸಿತ್ತು. ಅಲ್ಲದೆ 1981ರ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡಿತ್ತು. ಲಗ್ಷುರಿ ಸೆಡಾನ್ ಮಾದರಿಯಲ್ಲಿ ನಿರ್ಮಾಣವಾಗಿರುವ ಈ ಕಾರು 3.8 ಲೀಟರ್ ವಿ8 ಎಂಜಿನ್ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 3.3 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೊಡಲಾಗಿತ್ತು.

1997 ಬೆಂಝ್ ಎಂಎಲ್ 320 (ಜ್ಯೂರಸಿಕ್ ವರ್ಲ್ಡ್)

1997 ಬೆಂಝ್ ಎಂಎಲ್ 320 (ಜ್ಯೂರಸಿಕ್ ವರ್ಲ್ಡ್)

ನೀವೆಲ್ಲರೂ ಜ್ಯೂರಸಿಕ್ ವರ್ಲ್ಡ್ ಸಿನೆಮಾವನ್ನು ನೋಡಿರಬಹುದು. 1990ರ ದಶಕದ ಹಿಟ್ ಚಿತ್ರವಾದ ಇದರಲ್ಲಿ ಎಂಎಲ್ 320 ಕಾರನ್ನು ಬಳಕೆ ಮಾಡಲಾಗಿತ್ತು. ಈ ಮೂಲಕ ಮೊದಲ ತಲೆಮಾರಿನ ಎಂ ಕ್ಲಾಸ್ ಮಾದರಿಯನ್ನು ಬೆಂಝ್ ವಾಹನ ಲೋಕಕ್ಕೆ ಪರಿಚಯಿಸಿತ್ತು.

ಇವನ್ನೂ ಓದಿ

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಬಹುಮಹಡಿ ಕಟ್ಟಡ

Article Published On: Friday, November 13, 2015, 9:39 [IST]
English summary
Ten classic cars at Mercedes Benz Museum
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+