ತಾರೆಯರ ಜೀವನಶೈಲಿಯನ್ನು ಬಿಂಬಿಸುವ ಕಸ್ಟಮೈಸ್ಡ್ ಕಾರುಗಳು
ಸೆಲೆಬ್ರಿಟಿಗಳಿಗೆ ಐಷಾರಾಮಿ ಕಾರುಗಳು ಮಕ್ಕಳ ಬಳಿ ಆಟಿಕೆ ಕಾರು ಇದ್ದಂತೆ. ತಮ್ಮ ಕಾರುಗಳನ್ನು ಮನಬಂದಾಗೆಲ್ಲ ಬದಲಾಯಿಸಲು ಇಷ್ಟಪಡುತ್ತಾರೆ. ಅಲ್ಲದೆ ತಮ್ಮ ಇಚ್ಛೆಗಾನುಸಾರವಾಗಿ ಕಾರಿನೊಳಗೂ ಹೊರಗೂ ಹೆಚ್ಚಿನ ಬದಲಾವಣೆಗಳನ್ನು ತರಲು ಇಷ್ಟಪಡುತ್ತಾರೆ.
ಭಾರತದಲ್ಲಿ ಎಲ್ಲ ಕ್ಷೇತ್ರದಲ್ಲೂ ತಲ್ಲೀನವಾಗಿರುವ ಬಹುತೇಕ ಸೆಲೆಬ್ರಿಟಿಗಳ ಬಳಿ ಐಷಾರಾಮಿ ಕಾರುಗಳಿವೆ. ಅಲ್ಲದೆ ತಮ್ಮ ಜೀವನಶೈಲಿಗೆ ಅನುಸಾರವಾಗಿ ತಮ್ಮ ಕಾರಿನಲ್ಲಿ ಅನೇಕ ಬದಲಾವಣೆಗಳನ್ನು ತರಲು ಬಯಸುತ್ತಾರೆ.

ಗುಲ್ ಪನಾಗ್
ದೇಶದಲ್ಲಿ ಕಸ್ಟಮೈಸ್ಡ್ ವಾಹನಗಳನ್ನು ಹೊಂದಿರುವ ತಾರೆಯರ ಬಗ್ಗೆ ಚರ್ಚಿಸುವಾಗ ಮೊದಲು ಗುಲ್ ಪನಾಗ್ ಹೆಸರು ನೆನಪಿಗೆ ಬರುತ್ತಾರೆ. ಆಫ್ ರೋಡ್ ಸಂಚಾರವನ್ನು ಇಷ್ಟಪಡುವ ಈ ಮಾಜಿ ವಿಶ್ವಸುಂದರಿ ಬಳಿ ರಾಯಲ್ ಎನ್ ಪೀಲ್ಡ್ ನಿಂದ ಹಿಡಿದು ಮಹೀಂದ್ರ ರೇವಾ ಇ2ಒ ವಿದ್ಯುತ್ ಚಾಲಿತ ಗಾಡಿಯೂ ಇದೆ.

ಗುಲ್ ಪನಾಗ್
ಹಾಗಿದ್ದರೂ ತಮ್ಮ ವಾರಂತ್ಯದ ಪಯಣಕ್ಕೆ ಮಹೀಂದ್ರ ಸ್ಕಾರ್ಪಿಯೊವನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದರಲ್ಲಿ ಜೈವಿಕ ಶೌಚಾಲಯಗಳಂತಹ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.

ಗುಲ್ ಪನಾಗ್
ದೃಢಕಾಯದ ವಿನ್ಯಾಸ, ಪ್ರಕಾಶಮಾನವಾದ ಹೆಡ್ ಲೈಟ್, ಆಫ್ ರೋಡ್ ತಕ್ಕಂತೆ ರೂಫ್ ಲೈನ್, ಬೃಹತ್ತಾದ ಚಕ್ರಗಳು, ವಿಶೇಷ ಗಾರ್ಡ್ ಗಳನ್ನು ಇದಕ್ಕೆ ಲಗತ್ತಿಸಲಾಗಿದೆ.

ಜಾನ್ ಅಬ್ರಹಾಂ
ವಾಹನಗಳ ಮೇಲೆ ಅತಿ ಹೆಚ್ಚು ಕ್ರೇಜ್ ಹೊಂದಿರುವ ಬಾಲಿವುಡ್ ಸ್ಟಾರ್ ಗಳ ಪೈಕಿ ಜಾನ್ ಅಬ್ರಹಾಂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಮಹಾ ಆರ್1 ತೊಡಗಿ ದುಬಾರಿ ಆಡಿ ಕ್ಯೂ7 ವರೆಗಿನ ವಾಹನಗಳನ್ನು ಹೊಂದಿದ್ದಾರೆ.

ಜಾನ್ ಅಬ್ರಹಾಂ
ಇಷ್ಟೆಲ್ಲ ಆದರೂ ಚಿಕ್ಕವನಿಂದಲೂ ಮಾರುತಿ ಸುಜುಕಿ ಜಿಪ್ಸಿ ಮೇಲೆ ವಿಶೇಷ ಪ್ರೀತಿಯನ್ನಿಟ್ಟಿರುವ ಜಾನ್ ಪದೇ ಪದೇ ಜಾಲಿ ರೈಡ್ ಹೊಡೆಯಲು ಇಷ್ಟಪಡುತ್ತಾರೆ.

ಮಹೇಂದ್ರ ಸಿಂಗ್ ಧೋನಿ
ಭಾರತದ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಬಿಡುವಿನ ಸಮಯದಲ್ಲಿ ಕಾರು ಹಾಗೂ ಬೈಕ್ ರೈಡಿಂಗ್ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ.

ಮಹೇಂದ್ರ ಸಿಂಗ್ ಧೋನಿ
ಧೋನಿ ಅವರು ತಮ್ಮ ವಾಹನ ಸಂಗ್ರಹಾಲಯದಲ್ಲಿ ಅಮೆರಿಕದ ದುಬಾರಿ ಹೆಲ್ ಕ್ಯಾಟ್ ನಿಂದ ತೊಡಗಿ ಆಫ್ ರೋಡ್ ದೈತ್ಯ ಹಮ್ಮರ್ ಗಳಂತಹ ಕೋಟಿಗಟ್ಟಲೆ ಬೆಲೆ ಬಾಳುವ ವಾಹನಗಳನ್ನು ಹೊಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ
ಅತ್ತ ಜಿಎಂಸಿ ಸಿಯೆರಾ ಜೀವನ ಶೈಲಿಯ ವಾಹನವು ಧೋನಿ ಅವರ ನೆಚ್ಚಿನ ಕಸ್ಟಮೈಸ್ಡ್ ವಾಹನಗಳಲ್ಲಿ ಒಂದಾಗಿದೆ.

ಗೌತಮ್ ಸಿಂಘಾನಿಯಾ
ಸೂಪರ್ ಕಾರು ಮಾಲಿಕರಿಗಾಗಿ ಪ್ರ್ಯಾಕ್ಸ್ ಸೂಪರ್ ಕಾರ್ ಕ್ಲಬ್ ರೂಪಿಸಿರುವ ರೇಮಾಂಡ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರ ಬಳಿ ಲೋಕಾಸ್ ಎಲಿಸ್ ನಿಸ್ಸಾನ್ ಜಿಟಿಆರ್ ಮತ್ತು ಬಿಎಂಡಬ್ಲ್ಯು ಇ92 ಗಳಂತಹ ರೇಸ್ ಕಾರುಗಳಿವೆ.

ವಿಜಯ್ ಮಲ್ಯ
ಸದ್ಯ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ದೇಶ ಬಿಟ್ಟು ತೆರಳಿರುವ ವಿಜಯ್ ಮಲ್ಯ ಒಂದು ಕಾಲಘಟ್ಟದ್ಲಲಿ ರೋಲ್ಸ್ ರಾಯ್ಸ್, ಜಾಗ್ವಾರ್ ಗಳಂತಹ ಐಷಾರಾಮಿ ಕಸ್ಟಮೈಸ್ಡ್ ಕಾರುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.

ಸಚಿನ್ ತೆಂಡೂಲ್ಕರ್
ಬಿಎಂಡಬ್ಲ್ಯು ಐ8ಗಳಂತಹ ಹೈಬ್ರಿಡ್ ಕಾರುಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಸಚಿನ್ ತೆಂಡೂಲ್ಕರ್ ನಿಸ್ಸಾನ್ ಜಿಟಿಆರ್ ಗಳಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್
ಬಿಎಂಡಬ್ಲ್ಯು ಮುಖ್ಯ ಪ್ರಚಾರ ರಾಯಬಾರಿ ಕೂಡಾ ಆಗಿರುವ ಸಚಿನ್, ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ರಣಬೀರ್ ಕಪೂರ್
ತಮ್ಮ ವಿಶಿಷ್ಟ ಕಥಾ ಪಾತ್ರಗಳಿಂದ ಪ್ರೇಕ್ಷಕರ ಮನ ಸೊರೆಗೈದಿರುವ ರಣಬೀರ್ ಕಪೂರ್ ಅವರು ಜರ್ಮನಿಯ ಐಷಾರಾಮಿ ಸಂಸ್ಥೆ ಮರ್ಸಿಡಿಸ್ ಬೆಂಝ್‌ನ ಶಕ್ತಿಶಾಲಿ ಜಿ63 ಎಎಂಜಿ ಕಾರನ್ನು ಹೊಂದಿದ್ದಾರೆ.

ಅಭಿಷೇಕ್ ಬಚ್ಚನ್
ಪಿತ್ರಾರ್ಜಿತ ತಾರೆ ಪಟ್ಟವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ತಮ್ಮ ನಟನಾ ಕೌಶಲ್ಯದಿಂದಲೇ ಮೇಲೆ ಬಂದಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ರಾಲ್ಸ್ ರಾಯ್ಸ್ ಫಾಟಂ ಹಾಗೂ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಗಳಂತಹ ವಾಹನಗಳನ್ನು ಹೊಂದಿದ್ದಾರೆ.

ಅಭಿಷೇಕ್ ಬಚ್ಚನ್
ಈ ಪೈಕಿ ವಿಶೇಷವಾಗಿ ಬದಲಾವಣೆ ತರಲಾಗಿರುವ ಆಡಿ ಎ8ಎಲ್ ಅಭಿಷೇಕ್ ಅವರ ಫೇವರಿಟ್ ಗಾಡಿಯೆನಿಸಿದೆ. ಇದರಲ್ಲಿ 4.2 ಲೀಟರ್ ಎಂಜಿನ್ ಬಳಕೆ ಮಾಡಲಾಗಿದೆ.

ಇಮ್ರಾನ್ ಖಾನ್
ಬಾಲಿವುಡ್ ನ ಜನಪ್ರಿಯ ನಟ ಹಾಗೂ ಸ್ತ್ರೀ ಸಮಾನತಾವಾದಿ ಇಮ್ರಾನ್ ಖಾನ್ 2014ರಲ್ಲಿ ಫೆರಾರರಿ ಕ್ಯಾಲಿಫೋರ್ನಿಯಾ ಕಾರನ್ನು ತಮ್ಮದಾಗಿಸಿಕೊಂಡಿದ್ದರು.

ಇಮ್ರಾನ್ ಖಾನ್
ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಇಮ್ರಾನ್, ತಮ್ಮ 11ರ ಹರೆಯದಲ್ಲಿ ಮೊದಲ ಬಾರಿಗೆ ಆಟಿಕೆ ಕಾರಿನ ರೂಪದಲ್ಲಿ ಫೆರಾರಿ ಎಫ್-430 ತಮ್ಮದಾಗಿಸಿಕೊಂಡಿರುವುದಾಗಿ ತಿಳಿಸಿದ್ದರು.

ಇಮ್ರಾನ್ ಖಾನ್
ಅಲ್ಲಿಂದ ಬಳಿಕ ಫೆರಾರಿ ಕಾರಿನ ಮೇಲೆ ಅತೀವ ಪ್ರೀತಿ ವ್ಯಕ್ತಪಡಿಸಿರುವ ಇಮ್ರಾನ್ ಖಾನ್ ಕೊನೆಗೂ ತಮ್ಮ ಕನಸಿನ ಕಾರು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಇಚ್ಚೆಯಂತೆ ವಿಶೇಷವಾದ ಕೆಂಪು ಮತ್ತು ಕಪ್ಪು ವರ್ಣವನ್ನು ಇದಕ್ಕೆ ಬಳಿಯಲಾಗಿದೆ. ಅಲ್ಲದೆ ವಿಶೇಷ ಕ್ರೀಡಾ ಪ್ಯಾಕೇಜ್ ಮತ್ತು ಸೀಟು ಕವರ್ ಗಳನ್ನು ಬದಲಾಯಿಸಲಾಗಿದೆ ಎಂದು ಇಮ್ರಾನ್ ತಿಳಿಸುತ್ತಾರೆ.

ಶಾಹೀದ್ ಕಪೂರ್
ಕೇವಲ ಜಾಗ್ವಾರ್ ಎಕ್ಸ್ ಕೆಆರ್-ಎಸ್ ಮಾತ್ರವಲ್ಲದೆ ಪೋರ್ಷೆ ಕೆಯೆನ್ ಗಳಂತಹ ಐಷಾರಾಮಿ ಕಾರುಗಳನ್ನು ಶಾಹೀದ್ ಕಪೂರ್ ಹೊಂದಿದ್ದಾರೆ. ಅಂದ ಹಾಗೆ ಜಾಗ್ವಾರ್ ಎಕ್ಸ್ ಕೆಆರ್-ಎಸ್ ಕಾರಿನಲ್ಲಿ 5.0 ಲೀಟರ್ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಇದ್ದು, ಗಂಟೆಗೆ ಗರಿಷ್ಠ 300 ಕೀ.ಮೀ. ಹಾಗೂ ನಾಲ್ಕು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.


Click it and Unblock the Notifications