ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಟೆಸ್ಲಾ ಕಂಪನಿಯ ಮಾಡೆಲ್ 3 ಕಾರು ಪ್ರಪಂಚದ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಮಾಡೆಲ್ 3, ಟೆಸ್ಲಾ ಕಂಪನಿಯ ಹೆಚ್ಚು ಮಾರಾಟವಾಗುವ ಕಾರು. ಈ ಕಾರು ಭಾರತದಲ್ಲಿ ಮಾರಾಟವಾಗದಿದ್ದರೂ, ಕೆಲವು ಭಾರತೀಯರು ಈ ಕಾರನ್ನು ಬಳಸುತ್ತಿದ್ದಾರೆ.

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಭಾರತದಲ್ಲಿ ಅಂಬಾನಿ ಕುಟುಂಬವು ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿದೆ. ಮಾಡೆಲ್ 3 ವಿಶಿಷ್ಟ ರೀತಿಯ ಎಲೆಕ್ಟ್ರಿಕ್ ಕಾರ್ ಆಗಿದೆ. ಈಗ ಮಾಡೆಲ್ 3 ಕಾರಿಗೆ ಸಂಬಂಧಿಸಿದ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳ ವಿಶೇಷತೆಯೆಂದರೆ ಆ ಕಾರುಗಳಲ್ಲಿರುವ ಅಟಾನಾಮಸ್ ಟೆಕ್ನಾಲಜಿ.

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಈ ಟೆಕ್ನಾಲಜಿಯನ್ನು ಪರೀಕ್ಷಿಸುವಾಗ ಹಲವು ಸಂದರ್ಭಗಳಲ್ಲಿ ವಿಫಲವಾಗಿದೆ. ಈ ಟೆಕ್ನಾಲಜಿಯು ಆಟೋಮ್ಯಾಟಿಕ್ ಬ್ರೇಕಿಂಗ್ ಹಾಗೂ ಡ್ರೈವರ್ ಲೆಸ್ ಅಂದರೆ ಚಾಲಕರಹಿತ ಚಾಲನೆಯನ್ನು ನೀಡುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಆಟೋಮ್ಯಾಟಿಕ್ ಬ್ರೇಕಿಂಗ್ ಫೀಚರ್ ಬಳಸಲು ಅನುಕೂಲಕರವಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಫೀಚರ್ ಆಟೋಮ್ಯಾಟಿಕ್ ಆಗಿ ಚಲಿಸುತ್ತದೆ. ಈ ಫೀಚರ್ ಅಪಘಾತಕ್ಕೂ ಮುನ್ನ ಬ್ರೇಕ್‌ಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಕಾರು ಹಾಗೂ ಕಾರಿನಲ್ಲಿರುವವರನ್ನು ಮುಂಚಿತವಾಗಿ ಉಳಿಸಲು ನೆರವಾಗುತ್ತದೆ.

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಟೆಸ್ಲಾ ಮಾಡೆಲ್ 3 ಕಾರಿನ ಪರ್ಫಾಮೆನ್ಸ್ ಡೆಮೋ ನೀಡುವ ಸಂದರ್ಭದಲ್ಲಿ ಈ ಫೀಚರ್ ವಿಫಲವಾಗಿದೆ. ಈ ಘಟನೆ ಚೀನಾದಲ್ಲಿ ಸಂಭವಿಸಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ವೈಫಲ್ಯವು ಅದರ ಉತ್ಸಾಹಿಗಳಿಗೆ ಆಘಾತವನ್ನುಂಟು ಮಾಡಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಟೆಸ್ಲಾದ ಈ ಸೌಲಭ್ಯವು ಅಪಘಾತಕ್ಕೂ ಮುನ್ನ ಜನರನ್ನು ರಕ್ಷಿಸಲು ನೆರವಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವಾರು ವೀಡಿಯೊಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಡೆಮೋ ನೀಡುವ ಸಂದರ್ಭದಲ್ಲಿ ಡಮ್ಮಿ ಮಾನವನನ್ನು ಬಳಸಲಾಗಿತ್ತು. ಈ ವೇಳೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಮಾನವನ ಡಮ್ಮಿಗೆ ಅಪ್ಪಳಿಸಿದ್ದು, ಎಲ್ಲರನ್ನೂ ಆಘಾತಕ್ಕೆದೂಡಿದೆ. ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಬಹುಶಃ ಅಟಾನಾಮಸ್ ಟೆಕ್ನಾಲಜಿಯಲ್ಲಿನ ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿರಬಹುದು. ಡೆಮೋ ನೀಡುವ ಸಂದರ್ಭದಲ್ಲಿ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು, ಡಮ್ಮಿ ಮಾನವನಿಗೆ ಡಿಕ್ಕಿ ಹೊಡೆದು ನಿಲ್ಲುವುದನ್ನು ಕಾಣಬಹುದು.

ಈ ಅನಿರೀಕ್ಷಿತ ಘಟನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಡಮ್ಮಿಯನ್ನು ಮೊದಲೇ ತಿಳಿದುಕೊಳ್ಳಲು ಅಟಾನಾಮಸ್ ಟೆಕ್ನಾಲಜಿ ವಿಫಲವಾದುದ್ದೇ ಈ ವೈಫಲ್ಯಕ್ಕೆ ಕಾರಣ ಎಂದು ಹೇಳಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಡೆಮೋ ನೀಡುವ ವೇಳೆ ವಿಫಲವಾಯ್ತು ಟೆಸ್ಲಾ ಮಾಡೆಲ್ 3 ಕಾರಿನ ಟೆಕ್ನಾಲಜಿ

ಅಟಾನಾಮಸ್ ಟೆಕ್ನಾಲಜಿಯನ್ನು ಪರೀಕ್ಷಿಸುವ ವೇಳೆಯಲ್ಲಿ ಟೆಸ್ಲಾದಂತೆಯೇ ಹಲವಾರು ಕಂಪನಿಗಳು ವಿಫಲವಾಗಿವೆ. ಇವುಗಳಲ್ಲಿ ಹೋಂಡಾ ಕಂಪನಿಯ ಸಿವಿಕ್ ಕಾರು ಸೇರಿರುವುದು ವಿಶೇಷ. ಫೋಕ್ಸ್ ವ್ಯಾಗನ್ ಹಾಗೂ ವೋಲ್ವೋ ಈ ಪರೀಕ್ಷೆಗಳಲ್ಲಿ ಹಲವು ಬಾರಿ ಸಫಲವಾಗಿವೆ.

Most Read Articles

Kannada
English summary
Tesla Model 3 autonomous technology fails during demo in China. Read in Kannada.
Story first published: Thursday, September 24, 2020, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X