ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತದೆ. ಟೆಸ್ಲಾ ಕಂಪನಿಯು ತಯಾರಿಸುವಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬೇರೆ ಯಾವುದೇ ಕಂಪನಿಗಳು ತಯಾರಿಸುವುದಿಲ್ಲ.

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಈ ಕಾರಣಕ್ಕೆ ಟೆಸ್ಲಾ ಕಂಪನಿಯ ಕಾರುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿವೆ. ಆದರೆ ಟೆಸ್ಲಾ ಕಂಪನಿಯ ಕಾರುಗಳು ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಭಾರತದಲ್ಲಿರುವ ಟೆಸ್ಲಾ ಕಾರು ಪ್ರಿಯರು ಈ ಕಾರಿನ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿದ್ದಾರೆ. ಹಲವು ವಿಶಿಷ್ಟ ಫೀಚರ್ ಗಳನ್ನು ಹೊಂದಿರುವ ಟೆಸ್ಲಾ ಕಾರು ಈಗ ಮುಜುಗರವನ್ನು ಅನುಭವಿಸುತ್ತಿದೆ.

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಹೊಸ ಟೆಸ್ಲಾ ಮಾಡೆಲ್ ವೈ ಕಾರಿನ ರೂಫ್ ಹೆದ್ದಾರಿಯಲ್ಲಿ ಸಾಗುವಾಗ ಹಾರಿಹೋಗಿದೆ. ಅದೂ ಸಹ ಕಾರನ್ನು ಖರೀದಿಸಿದ ಕೇವಲ 2 ಗಂಟೆಗಳಲ್ಲಿ ಈ ಘಟನೆ ಸಂಭವಿಸಿದೆ. ಈ ಕೆಟ್ಟ ಅನುಭವವನ್ನು ಎದುರಿಸುತ್ತಿರುವ ವ್ಯಕ್ತಿಯ ಹೆಸರು ನಥಾನಿಯಲ್.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಕ್ಯಾಲಿಫೋರ್ನಿಯಾದ ಡಬ್ಲಿನ್‌ನಲ್ಲಿನ ಡೀಲರ್ ಬಳಿ ತನ್ನ ಹೊಸ ಟೆಸ್ಲಾ ಮಾಡೆಲ್ ವೈ ಕಾರನ್ನು ಖರೀದಿಸಲು ನಥಾನಿಯಲ್ ತನ್ನ ಹೆತ್ತವರೊಂದಿಗೆ ತೆರಳಿದ್ದ. ಕಾರಿನ ವಿತರಣೆ ಪಡೆದು ಹಿಂತಿರುಗುವಾಗ ಕಾರಿನ ಪನೋರಾಮಿಕ್ ಸನ್ ರೂಫ್ ಗಾಳಿಯಲ್ಲಿ ಹಾರಿಹೋಗಿದೆ.

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ನಥಾನಿಯಲ್ ಈ ಘಟನೆಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ರೂಫ್ ಇಲ್ಲದ ಕಾರಿನ ವೀಡಿಯೊವನ್ನು ಪ್ರದರ್ಶಿಸಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ರವರ ಕಾಲೆಳೆದಿದ್ದಾರೆ. ಕನ್ವರ್ಟಿಬಲ್ ಕಾರುಗಳನ್ನು ಮಾರಾಟ ಮಾಡುತ್ತೇವೆ ಎಂದು ಟೆಸ್ಲಾ ನಮಗೆ ಏಕೆ ತಿಳಿಸಲಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ನಾನು ಖರೀದಿಸಿದ ಹೊಸ ಟೆಸ್ಲಾ ಮಾಡೆಲ್ ವೈ ಕಾರಿನ ರೂಫ್ ಹೆದ್ದಾರಿಯಲ್ಲಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಯಿಂದಾಗಿ ನಥಾನಿಯಲ್ ಅವರ ಕುಟುಂಬವು ಆತಂಕಕ್ಕೊಳಗಾಯಿತು. ನಂತರ ಅವರು ಕಾರನ್ನು ಹಿಂತಿರುಗಿಸಲು ಡೀಲರ್ ಬಳಿ ಹೋದರು.

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಡೀಲರ್ ಪ್ರಕಾರ, ಟೆಸ್ಲಾ ಮಾಡೆಲ್ ವೈ ಕಾರಿನ ರೂಫ್ ಹಾನಿಗೊಳಗಾಗಿರಬಹುದು ಅಥವಾ ಟೆಸ್ಲಾ ಕಂಪನಿಯು ಕಾರಿನ ರೂಫ್ ಅನ್ನು ಸರಿಯಾಗಿ ಫಿಟ್ ಮಾಡಲು ಮರೆತಿರಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಕಾರನ್ನು ಮಾರಾಟ ಮಾಡಿದ ಡೀಲರ್ ಆ ಕಾರನ್ನು ಉಚಿತವಾಗಿ ರಿಪೇರಿ ಮಾಡುವುದಾಗಿ ತಿಳಿಸಿದ್ದಾರೆ. ಕಾರು ರಿಪೇರಿಯಾಗುವವರೆಗೆ ನಥಾನಿಯಲ್ ಅವರ ಕುಟುಂಬಕ್ಕೆ ಬಳಸಲು ಬಾಡಿಗೆ ವಾಹನವನ್ನು ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ನಥಾನಿಯಲ್ ಅವರ ಕುಟುಂಬವು ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲವೆಂದು ಹೇಳಿದೆ. ಅಮೇರಿಕಾದಲ್ಲಿ ಟೆಸ್ಲಾ ಮಾಡೆಲ್ ವೈ ಕಾರಿನ ಆರಂಭಿಕ ಬೆಲೆ 49,990 ಅಮೆರಿಕನ್ ಡಾಲರ್ ಗಳಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಖರೀದಿಸಿದ ಎರಡು ಗಂಟೆಗಳಲ್ಲೇ ಹಾರಿ ಹೋಯ್ತು ದುಬಾರಿ ಕಾರಿನ ರೂಫ್

ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.36 ಲಕ್ಷಗಳಾಗುತ್ತದೆ. ದುಬಾರಿ ಬೆಲೆಯ ಕಾರು ಖರೀದಿಸಿದ 2 ಗಂಟೆಗಳಲ್ಲಿಯೇ ಈ ಘಟನೆ ನಡೆದಿರುವುದು ಕೋಲಾಹಲಕ್ಕೆ ಕಾರಣವಾಗಿದೆ.

Most Read Articles

Kannada
English summary
Tesla model Y car roof flies off within 2 hours of purchase. Read in Kannada.
Story first published: Wednesday, October 7, 2020, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X