Thalapathy Vijay: ರೋಲ್ಸ್ ರಾಯ್ಸ್ ಇದ್ದರೂ ನಟ ವಿಜಯ್ಗೆ ಈ ಬಿಎಂಡಬ್ಲ್ಯೂ ಕಾರು ಇಷ್ಟವಂತೆ, ವಿಶೇಷತೆಗಳೇನು?
ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ತಮಿಳುನಾಡು ಮಾತ್ರವಲ್ಲದೆ, ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ, ವಿಜಯ್ ನಟನೆಯ ನಿರ್ದೇಶಕ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದ ಲಿಯೋ (Leo) ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಲ್ ಮಾಡಿದ್ದು, ರೂ.550 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಲಿಯೋ ಸಿನಿಮಾ ನೆಟ್ಫ್ಲಿಕ್ಸ್ (Netflix)ನಲ್ಲಿ ನಿನ್ನೆಯಿಂದ ಪ್ರಸಾರಗೊಂಡಿದ್ದು, ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ರೇಕ್ಷಕರು ನೋಡಬಹುದು. ನೆಟ್ಫ್ಲಿಕ್ಸ್ ಚಿತ್ರವನ್ನು ರೂ.120 ಕೋಟಿ ಖರೀದಿಸಿದೆ ಎನ್ನಲಾಗಿದೆ. ಇವೆಲ್ಲ ಸಿನಿಮಾ ವಿಚಾರವಾಗಿವೆ.

ದಳಪತಿ ವಿಜಯ್ ಕಾರುಗಳ ಬಗ್ಗೆಯೂ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವರ ಬಳಿ, ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಭಾರೀ ಸಂಗ್ರಹವೇ ಇದೆ. ಅದರಲ್ಲೂ ವಿಜಯ್ ಅವರು, ರೋಲ್ಸ್ ರಾಯ್ಸ್ (Rolls-Royce) ಕಾರು ಇದ್ದರೂ ಬಹುತೇಕ ಕಾರ್ಯಕ್ರಮಗಳಿಗೆ ಭಾಗವಹಿಸಲು ತಮ್ಮ ನೆಚ್ಚಿನ ಬಿಎಂಡಬ್ಲ್ಯೂ 5 ಸೀರಿಯಸ್ (BMW 5 Series) ಸೆಡಾನ್ ಉಪಯೋಗಿಸುತ್ತಾರೆ.
ಸದ್ಯ, ಭಾರತದಲ್ಲಿ ಈ ಬಿಎಂಡಬ್ಲ್ಯೂ 5 ಸೀರಿಯಸ್ ಕಾರು, ರೂ.68.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು, 530ಐ ಎಂ ಸ್ಪೋರ್ಟ್ಸ್ (530i M Sport), 520ಡಿ ಲಕ್ಸುರಿ ಲೈನ್ (520d Luxury Line) ಹಾಗೂ 530ಡಿ ಎಂ ಸ್ಪೋರ್ಟ್ಸ್ (530d M Sport) ರೂಪಾಂತರ ಹಾಗೂ ಐದು ಆಸನ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಬಿಎಂಡಬ್ಲ್ಯೂ 5 ಸೀರಿಯಸ್ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. 2.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 252 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್, 2.0 - ಲೀಟರ್ ಡೀಸೆಲ್ ಎಂಜಿನ್ 190 PS ಪವರ್, 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.
3.0 - ಲೀಟರ್ ಡಿಸೇಲ್ ಎಂಜಿನ್, 265 PS ಗರಿಷ್ಠ ಪವರ್ ಹಾಗೂ 620 Nm ಉತ್ಪಾದಿಸುತ್ತದೆ. 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, 17.42 kmpl ಇಂಧನ ದಕ್ಷತೆ ಹೊಂದಿದೆ. ವಿಶೇಷವಾಗಿ, 530 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ.
ಈ ಕಾರು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 12.3 - ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4 - ಜೋನ್ ಕ್ಲೇಮೇಟ್ ಕಂಟ್ರೋಲ್, ಹೆಡ್ - ಅಪ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, ಬಿಎಂಡಬ್ಲ್ಯೂ 5 ಸೀರಿಯಸ್ ಸೆಡಾನ್ 6 ಏರ್‌ಬ್ಯಾಗ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ. ಆಡಿ ಎ6, ಜಗ್ವಾರ್ ಎಕ್ಸ್ಎಫ್ ಹಾಗೂ ವೋಲೊ ಎಸ್90 ಇದಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಇನ್ನು, ದಳಪತಿ ವಿಜಯ್ ದುಬಾರಿ ಬೆಲೆಯ ಐಷರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಪ್ರಮುಖವಾಗಿ, ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಎ8 ಎಲ್, ಬಿಎಂಡಬ್ಲ್ಯೂ 7 ಸೀರಿಯಸ್, ಬಿಎಂಡಬ್ಲ್ಯೂ ಎಕ್ಸ್6, ಬಿಎಂಡಬ್ಲ್ಯೂ 3 ಸೀರಿಯಸ್, ಬೆಂಜ್ ಇ350ಡಿ, ಮಿನಿ ಕೂಪರ್ ಎಸ್, ಟೊಯೋಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಅನೇಕ ಕಾರುಗಳಿವೆ.


Click it and Unblock the Notifications








