ಗಿನ್ನೆಸ್ ಪುಟ ಸೇರಿದ ರೇಡಿಯೋ ನಿಯಂತ್ರಿತ 'ಬುಲೆಟ್' ಕಾರು
ನೀವು ನಿಮ್ಮ ಮಗ ಅಥವಾ ಮಗಳಿಗೆ ಆಟಿಕೆ ಕಾರೊಂದನ್ನು ಉಡುಗೊರೆಯಾಗಿ ನೀಡಲು ಬಯಸುವೀರಾ? ಹಾಗಿದ್ದರೆ ಗಿನ್ನೆಸ್ ದಾಖಲೆ ಬರೆದ ಕಾರನ್ನೇ ನೀವು ಏಕೆ ನೀಡಬಾರದು? ಹೌದು ನಾವಿಲ್ಲಿ ಹೇಳ ಬಯಸುವ ಕಾರು ನಿಮ್ಮ ಮಕ್ಕಳಿಗೆ ಹೆಚ್ಚು ಸೂಕ್ತವೆನಿಸಲಿದೆ.
ಇಂದು ಅಂತಿಥ ಕಾರು ಅಲ್ಲ. ಬದಲಾಗಿ ರೇಡಿಯೋ ನಿಯಂತ್ರಿತ ಕಾರು. ಇದನ್ನು ಅಕ್ಕರೆಯಿಂದ 'ಆರ್/ಸಿ ಬುಲೆಟ್' ಎಂದು ಕರೆಯಲಾಗುತ್ತದೆ. 60 ಸೆಂಟಿಮೀಟರುಗಳಷ್ಟು ಉದ್ದ ಮಾತ್ರ ಇರುವ ಈ ಚೊಕ್ಕದಾದ ಆಟಿಕೆ ಕಾರು ಈಗಾಗಲೇ ಗಿನ್ನೆಸ್ ಪುಟದಲ್ಲಿ ತನ್ನ ಛಾಪನ್ನು ಒತ್ತಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ.

ಜಗತ್ತಿನ ಅತ್ಯಂತ ವೇಗದ ಬ್ಯಾಟರಿ ಚಾಲಿತ ರಿಮೋಟ್ ನಿಯಂತ್ರಿತ ಕಾರು ಗಂಟೆಗೆ 325.12 (202.02 mph) ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ನಿಕ್ ಕೇಸ್ ಎಂಬವರು ಇದರ ರೂವಾರಿಯಾಗಿದೆ.

2014 ಅಕ್ಟೋಬರ್ 25ರಂದು ಅಮೆರಿಕದ ಉಟಾದ ಸೈಂಟ್ ಜಾರ್ಜ್‌ನಲ್ಲಿ ನಿಕ್ ಇಂತಹದೊಂದು ಸಾಧನೆಯನ್ನು ಬರೆದಿದ್ದರು. ಫಾರ್ಮುಲಾ ಒನ್ ಕಾರಿನಿಂದ ಸ್ಪೂರ್ತಿ ಪಡೆದು ಇದನ್ನು ರಚಿಸಲಾಗಿದೆ.

ಹಾಗೊಂದು ವೇಳೆ ನೀವು ಕೂಡಾ ನಿಮ್ಮ ಆಪ್ತರಿಗೆ ಇದನ್ನು ಉಡುಗೊರೆಯಾಗಿ ನೀಡಲು ಹೊರಟರೆ ನಿಮ್ಮ ಕೈ ಸುಟ್ಟುಕೊಳ್ಳಬಹುದು. ಏಕೆಂದರೆ ಇದು ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ವಿಶ್ವದ ಅತ್ಯಂತ ವೇಗದ ಕಾರುಗಳನ್ನು ಇದನ್ನು ಮೀರಿಸುತ್ತದೆ. ಅಷ್ಟೇ ಯಾಕೆ ಆಸ್ಟಾನ್ ಮಾರ್ಟಿನ್ ವಿ12 ವಾಗ್ವಿಂಷ್, ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಹಾಗೂ ಆಡಿ ಆರ್8 ಮಾದರಿಗಳನ್ನು ಇದು ಮೀರಿ ನಿಂತಿದೆ.

ದಾಖಲೆ ಬರೆಯುವುದನ್ನೇ ಹವ್ಯಾಸ ಮಾಡಿಕೊಂಡಿರುವ ನಿಕ್ ಇದೇ ಕಾರಿನಲ್ಲಿ 2008ರಲ್ಲಿ ಗಂಟೆಗೆ 259 ಕೀ.ಮೀ. ಹಾಗೂ 2013ರಲ್ಲಿ ಗಂಟೆಗೆ 276 ಕಿ.ಮೀ. ವೇಗ ಸಾಧಿಸಿತ್ತು. ಈಗ ಗಂಟೆಗೆ 325.12 ಕೀ.ಮೀ. ವೇಗ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಕ್ ಈ ಸಾಧನೆಯನ್ನು ರೇಡಿಯೋ ಆಪರೇಟಡ್ ಸ್ಕೇಲ್ ಸ್ಪೀಡ್ ಅಸೋಸಿಯೇಷನ್ (ಆರ್‌ಒಎಸ್‌ಎಸ್‌ಒ) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬರೆದಿದ್ದಾರೆ.

ಒಟ್ಟಿನಲ್ಲಿ ವಾಹನ ಜಗತ್ತಿನ ದಾಖಲೆ ಮುರಿಯುವುದೇ ಒಂದು ಹವ್ಯಾಸವಾಗಿ ಬಿಟ್ಟಿದೆ. ಈಗ ನಿಕ್ ಸಾಧನೆಯನ್ನು ಯಾರು ಮೆಟ್ಟಿ ನಿಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈಗ ಆರ್‌ಸಿ ಬುಲೆಟ್ ಆಕರ್ಷಕ ವೀಡಿಯೋಗಾಗಿ ಮುಂದಿನ ಪುಟದತ್ತ ಸಾಗಿರಿ.
ವೀಡಿಯೋ
ಆರ್ ಸಿ ಬುಲೆಟ್ ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








