Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಸ್ಕೋಡಾದಿಂದ ಡುಕಾಟಿವರೆಗೆ ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಬ್ರಾಂಡ್‌ಗಳು
ಫೋಕ್ಸ್‌ವ್ಯಾಗನ್ ಗ್ರೂಪ್ ವಿಶ್ವದ ಅತಿದೊಡ್ಡ ವಾಹನ ತಯಾರಕರಲ್ಲಿ ಒಂದಾಗಿದೆ. ಉತ್ತಮ ಉತ್ಪಾದನಾ ಮಾನದಂಡಗಳು ಮತ್ತು ಗುಣಮಟ್ಟದ ಮಾದರಿಗಳ ವಿಷಯದಲ್ಲಿ, ಈ ಜರ್ಮನ್ ಕಂಪನಿ ವಿಶ್ವ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್ ಗ್ರೂಪ್ ಆದಾಯದ ವಿಷಯದಲ್ಲಿ ವಿಶ್ವದ ಅಗ್ರ 10 ಕಂಪನಿಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಕಂಪನಿಯ ಅಡಿಯಲ್ಲಿ 12 ಬ್ರಾಂಡ್‌ಗಳು ಕೆಲಸ ಮಾಡುತ್ತಿರುವುದ ಗಮನಾರ್ಹ.

ಪೋರ್ಷೆ ಒಳಗೊಂಡಿರುವ 50ಕ್ಕೂ ಹೆಚ್ಚು ಅಂಗಸಂಸ್ಥೆಗಳು ಸಹ ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿವೆ. ಪೋರ್ಷೆದಂತಹ ವಿಶ್ವದ ಇನ್ನೂ ಹಲವು ಜನಪ್ರಿಯ ಆಟೋ ಬ್ರಾಂಡ್‌ಗಳು ಈ ದೊಡ್ಡ ಕಂಪನಿಯ ಅಡಿಯಲ್ಲಿವೆ. ಆ ಕೆಲವು ವಾಹನ ಬ್ರಾಂಡ್‌ಗಳ ಬಗ್ಗೆ ತಿಳಿಯೋಣ

ಆಡಿ (Audi)
ಆಡಿಯನ್ನು 1909ರಲ್ಲಿ ಸ್ವತಂತ್ರ ಕಂಪನಿಯಾಗಿ ಸ್ಥಾಪಿಸಲಾಯಿತು. ನಂತರ 1965ರಿಂದ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಭಾಗವಾಗಿದೆ. ಆಡಿ ಉನ್ನತ ಪ್ರೀಮಿಯಂ ಐಷಾರಾಮಿ ಬ್ರಾಂಡ್‌ಗಳಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.

ಸವಾಲುಗಳು ಮತ್ತು ಕಠಿಣ ಮಾರುಕಟ್ಟೆಗಳ ಹೊರತಾಗಿಯೂ, ಆಡಿ 2019ರ ಆರಂಭದಲ್ಲಿ ಗ್ರಾಹಕರಿಗೆ ಒಟ್ಟು 1.9 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ಅಲ್ಲದೇ ಶೇ8 ರಷ್ಟು ಕಾರ್ಯಾಚರಣೆಯ ಆದಾಯವನ್ನು ಗಳಿಸಿತ್ತು.

ಲಂಬೋರ್ಗಿನಿ
ವಿಶ್ವ ಪ್ರಸಿದ್ಧ ಇಟಾಲಿಯನ್ ಸ್ಪೋರ್ಟ್ಸ್ ಕಾರು ತಯಾರಕ ಲಂಬೋರ್ಗಿನಿ ಕೂಡ ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿದೆ ಎಂದರೆ ಅದನ್ನು ನಂಬಲು ನಿಮಗೆ ಆಶ್ಚರ್ಯವಾಗಬಹುದು. ಹೌದು.. ಫೋಕ್ಸ್‌ವ್ಯಾಗನ್ ಅಂಗಸಂಸ್ಥೆಯಾದ ಆಡಿ ಮೂಲಕ ಲಂಬೋರ್ಗಿನಿಯ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಕಂಪನಿಯು ಲಂಬೋರ್ಗಿನಿಯನ್ನು ಹೊಂದಿದೆ.

ಪ್ರಸ್ತುತ ವಿ12 ಚಾಲಿತ ಅವೆಂಟಾಡರ್ ಮತ್ತು ವಿ10-ಪವರ್ ಹುರಾಕನ್ ಜೊತೆಗೆ ಅವಳಿ-ಟರ್ಬೊ ವಿ8 ಎಂಜಿನ್ ಚಾಲಿತ ಉರುಸ್ ಎಸ್‌ಯುವಿಯನ್ನು ತಯಾರಿಸುತ್ತಿದೆ. ಇದಲ್ಲದೆ, ಕಂಪನಿಯು ಕಡಲಾಚೆಯ ಪವರ್ ಬೋಟ್ ರೇಸಿಂಗ್‌ಗಾಗಿ ವಿ12 ಎಂಜಿನ್‌ಗಳನ್ನು ನಿರ್ಮಿಸುತ್ತಿದೆ. 1948ರಲ್ಲಿ ಫೆರುಚಿಯೊ ಲಂಬೋರ್ಗಿನಿ ಸ್ಥಾಪಿಸಿದ ಲಂಬೋರ್ಗಿನಿ ಟ್ರಾಟೋರಿ ಹಾಗೂ ಇಟಲಿಯ ಪೀವ್ ಡಿ ಸೆಂಟ್ರೋ ಮೂಲದ ಟ್ರ್ಯಾಕ್ಟರ್‌ಗಳನ್ನು ಸಹ ಉತ್ಪಾದಿಸುತ್ತಿದೆ.

ಬೆಂಟ್ಲಿ
1998 ರಿಂದ ಈ ಬ್ರಿಟಿಷ್ ಐಷಾರಾಮಿ ವಾಹನ ತಯಾರಕ ಬೆಂಟ್ಲಿ, ಫೋಕ್ಸ್‌ವ್ಯಾಗನ್ ಗ್ರೂಪ್‌ನ ಭಾಗವಾಗಿದೆ. ಬೆಂಟ್ಲಿ ಮೋಟಾರ್ಸ್ ಲಿಮಿಟೆಡ್‌ನ ಮುಖ್ಯ ಕಚೇರಿಯನ್ನು ಇಂಗ್ಲೆಂಡ್‌ನ ಕ್ರೂನಲ್ಲಿ ಸ್ಥಾಪಿಸಲಾಯಿತು. ನಂತರ ರೋಲ್ಸ್‌ರಾಯ್ಸ್ 1931ರಲ್ಲಿ ಬೆಂಟ್ಲಿಯನ್ನು ಸ್ವಾಧೀನಪಡಿಸಿಕೊಂಡಿತು.

ಇದಾದ ಬಳಿಕ ಎಂಜಿನಿಯರಿಂಗ್ ಕಾರ್ಪೊರೇಷನ್ ವಿಕ್ಟರ್ಸ್, ನಂತರದ ವರ್ಷಗಳಲ್ಲಿ ರೋಲ್ಸ್ ರಾಯ್ಸ್ ಮೋಟಾರ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಯಿತು. 1998ರ ಹೊತ್ತಿಗೆ, ವಿಕ್ಟರ್ಸ್ ರೋಲ್ಸ್‌ರಾಯ್ಸ್ ಅನ್ನು ಫೋಕ್ಸ್‌ವ್ಯಾಗನ್ ಎಜಿಗೆ ಮಾರಾಟ ಮಾಡಲು ನಿರ್ಧರಿಸಿತು.

ಸಿಯೆಟ್
Sociedad Española de Automóviles de Turismo ಅಥವಾ ಸೀಟ್ ಸ್ಪೇನ್‌ನ ಕ್ಯಾಟಲೋನಿಯಾ ವಾಹನ ತಯಾರಕ ಸಿಯೆಟ್ ಕಂಪನಿಯನ್ನು ಮೇ 1950ರಲ್ಲಿ ಕೈಗಾರಿಕಾ ಕಂಪನಿಯಾದ ಇನ್‌ಸ್ಟಿಟ್ಯೂಟೊ ನ್ಯಾಷನಲ್ ಜೆ ಇಂಡಸ್ಟ್ರಿಲಾ ಅಥವಾ ಐಎನ್ಐ ಸಂಸ್ಥೆ ಸ್ಥಾಪಿಸಿತು. ಸಿಯಾಟ್ 1986ರಲ್ಲಿ ಸ್ವಾಧೀನಪಡಿಸಿಕೊಂಡ ಫೋಕ್ಸ್‌ವ್ಯಾಗನ್ ಎಜಿಯ ಆರಂಭಿಕ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.

ಪೋರ್ಷೆ
1931ರಲ್ಲಿ ಫರ್ಡಿನಾಂಡ್ ಪೋರ್ಷೆ ಸ್ಥಾಪಿಸಿದ ಜರ್ಮನ್ ವಾಹನ ಉತ್ಪಾದನಾ ಕಂಪನಿಯಾಗಿದೆ. ಆರಂಭದಲ್ಲಿ ಕಾರು ತಯಾರಿಕೆಗೆ ಪ್ರವೇಶಿಸಲು ಇಷ್ಟಪಡದ ಕಂಪನಿಯು 1939ರಲ್ಲಿ ಮೊದಲ ಪೋರ್ಷೆ ಕಾರನ್ನು ವಿನ್ಯಾಸಗೊಳಿಸಿತು. ಅಶ್ಚರ್ಯವೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ, ಪೋರ್ಷೆ ಮಿಲಿಟರಿ ಟ್ಯಾಂಕ್‌ಗಳ ಉತ್ಪಾದನೆಯಲ್ಲಿ ಭಾಗಿಯಾಗಿತ್ತು.

ಮಿಲಿಟರಿ ಟ್ಯಾಂಕರ್‌ಗಳ ವಿನ್ಯಾಸಗಳು ಜನಪ್ರಿಯ ಫೋಕ್ಸ್‌ವ್ಯಾಗನ್ ಬೀಟಲ್ ಅನ್ನು ಹೋಲುತ್ತವೆ ಎಂಬುದು ನಿಜ. ಏಕೆಂದರೆ ಹೆಚ್ಚಿನ ಷೇರುಗಳು 2015ರಲ್ಲಿ ಫೋಕ್ಸ್‌ವ್ಯಾಗನ್‌ನೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಮೊದಲೇ ಎರಡೂ ಕಂಪನಿಗಳು ದೀರ್ಘಕಾಲೀನ ಸಂಬಂಧವನ್ನು ಹೊಂದಿದ್ದವು.

ಮ್ಯಾನ್
1758ರಲ್ಲಿ ಪ್ರಾರಂಭವಾದ ಮ್ಯಾನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಸಾರಿಗೆ ಮತ್ತು ಇಂಧನ ವಲಯಗಳಲ್ಲಿನ ಕಾರ್ಯಾಚರಣೆಗಳ ಮೇಲೆ ಗಮನ ಹರಿಸುತ್ತದೆ. ಇದು ಟ್ರಕ್, ಬಸ್, ವ್ಯಾನ್‌ಗಳು, ಡೀಸೆಲ್ ಎಂಜಿನ್‌ಗಳು, ಟರ್ಬೊ-ಯಂತ್ರೋಪಕರಣಗಳು ಮತ್ತು ವಿಶೇಷ ಗೇರ್ ಘಟಕಗಳನ್ನು ಸಹ ಪೂರೈಸುತ್ತದೆ. 2011 ರಲ್ಲಿ ಫೋಕ್ಸ್‌ವ್ಯಾಗನ್ ತನ್ನ 55.9ರಷ್ಟು ಷೇರುಗಳನ್ನು ಖರೀದಿಸಿತ್ತು. ನಂತರ ಅದನ್ನು 2012ರಲ್ಲಿ ಶೇಕಡಾ 73ಕ್ಕೆ ಹೆಚ್ಚಿಸಲಾಯಿತು.

ಡುಕಾಟಿ
ಮೋಟಾರ್ ಸೈಕಲ್ ಉತ್ಸಾಹಿಗಳಿಗೆ ಡುಕಾಟಿ ಸಾರ್ವಕಾಲಿಕ ಕನಸಿನ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಆಂಟೋನಿಯೊ ಕವಾಲಿಯೆರಿ ತನ್ನ ಮೂವರು ಗಂಡು ಮಕ್ಕಳೊಂದಿಗೆ 1926ರಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವರು ಕಂಡೆನ್ಸರ್‌ಗಳು, ವ್ಯಾಕ್ಯೂಮ್ ಟ್ಯೂಬ್, ರೇಡಿಯೋ ಘಟಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಕಂಪನಿಯು ಎರಡನೇ ಮಹಾಯುದ್ಧದ ಪರಿಣಾಮಗಳಿಂದ ಬದುಕುಳಿದಿದೆ. ಫೋಕ್ಸ್‌ವ್ಯಾಗನ್ ಏಪ್ರಿಲ್ 2012ರಲ್ಲಿ ಆಡಿಯ ಅಂಗಸಂಸ್ಥೆ ಕಂಪನಿಯನ್ನು 1.2 ಬಿಲಿಯನ್ ಡಾಲರ್‌ಗೆ ಖರೀದಿಸುವುದಾಗಿ ಘೋಷಿಸಿದಾಗ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿತ್ತು.

ಸ್ಕ್ಯಾನಿಯಾ
ಇದು ಬಸ್ ಉತ್ಸಾಹಿಗಳ ಮನಸ್ಸಿನಲ್ಲಿರುವ ಬ್ರಾಂಡ್ ಆಗಿದೆ. ಹೆವಿ-ಡ್ಯೂಟಿ ಟ್ರಕ್‌ಗಳು, ನಗರ ಮತ್ತು ಇಂಟರ್ ಸಿಟಿ ಬಸ್‌ಗಳು, ಬೋಗಿಗಳು, ಕೈಗಾರಿಕಾ ಮತ್ತು ಷಿಪ್ ಎಂಜಿನ್‌ಗಳ ವಿಶ್ವದ ಪ್ರಮುಖ ತಯಾರಕರಲ್ಲಿ ಸ್ಕ್ಯಾನಿಯಾ ಒಂದಾಗಿದೆ. ಕಂಪನಿಯು 2008 ರಿಂದ ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರುಗಳು
ಇಷ್ಟು ದೊಡ್ಡ ಸಾಮ್ರಾಜ್ಯವಿದ್ದು ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರುಗಳನ್ನು ಹೊಂದಿರುವುದು ಆಘಾತಕಾರಿ ವಿಷಯವಲ್ಲ. ಫೋಕ್ಸ್‌ವ್ಯಾಗನ್ ಗ್ರೂಪ್ ಅನ್ನು 1937 ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಸ್ಥಾಪಿಸಲಾಯಿತು. ಫೋಕ್ಸ್‌ವ್ಯಾಗನ್ನ ಮುಖ್ಯ ಕಚೇರಿ ಮತ್ತು ಕಾರ್ಖಾನೆ ವುಲ್ಫ್ ಸ್ಬರ್ಗ್‌ನಲ್ಲಿವೆ. ಫೋಕ್ಸ್‌ವ್ಯಾಗನ್ ಈಗ ಯುರೋಪಿನ ಅತ್ಯಂತ ಜನಪ್ರಿಯ ಕಾರು ಬ್ರಾಂಡ್‌ಗಳಲ್ಲಿ ಒಂದು.

ಫೋಕ್ಸ್‌ವ್ಯಾಗನ್ ವಾಣಿಜ್ಯ ವಾಹನಗಳು
ನಮ್ಮ ಭಾರತದಲ್ಲಿ ಲಭ್ಯವಿಲ್ಲದಿದ್ದರೂ, ಫೋಕ್ಸ್‌ವ್ಯಾಗನ್ ವಾಣಿಜ್ಯ ವಾಹನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಜನಪ್ರಿಯವಾಗಿವೆ. ಈ ಕಂಪನಿಯನ್ನು 1995ರಲ್ಲಿ ಜರ್ಮನಿಯ ಹ್ಯಾನೋವರ್‌ನಲ್ಲಿ ಸ್ಥಾಪಿಸಲಾಯಿತು.

ಬುಗಾಟಿ
1909ರಲ್ಲಿ ಸ್ಥಾಪಿತವಾದ ಬುಗಾಟಿ ದಶಕಗಳಿಂದ ಅನೇಕ ರೇಸ್ ಕಾರುಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಆದರೆ 1950ರ ದಶಕದಲ್ಲಿ ಉತ್ಪಾದನೆ ನಿಂತಿತು. 1991ರಲ್ಲಿ ಇಬಿ110 ಅನ್ನು ಪರಿಚಯಿಸುವುದರೊಂದಿಗೆ, ಬುಗಾಟಿ ಮಾರ್ಕ್ ಸೂಪರ್-ಫಾಸ್ಟ್ ಸೀಮಿತ ಉತ್ಪಾದನಾ ಕ್ರೀಡಾ ಕಾರುಗಳ ಉತ್ಪಾದನೆಯನ್ನು ಪುನರುಜ್ಜೀವನಗೊಳಿಸಿತು. ನಂತರ ಫೋಕ್ಸ್‌ವ್ಯಾಗನ್ ಗ್ರೂಪ್ 1998ರಲ್ಲಿ ಬ್ರಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಸ್ಕೋಡಾ
ಜೆಕ್ ಗಣರಾಜ್ಯದ ಬೊಲೆಸ್ಲೇಯಿಂದ ಬಂದ ಈ ಆಟೋಮೊಬೈಲ್ ಕಂಪನಿಯನ್ನು 1895ರಲ್ಲಿ ಸ್ಕೋಡಾ ಎಂದು ನಾಮಕರಣ ಮಾಡಲಾಯಿತು. ಅದಕ್ಕೂ ಮೊದಲು ಸ್ಕೋಡಾದ ನಿಜವಾದ ಹೆಸರು ಲೌರಿನ್ & ಕ್ಲೆಮೆಂಟ್. ಸ್ಕೋಡಾ ವರ್ಕ್ಸ್ 1925ರಲ್ಲಿ ಲೋರಿನ್ & ಕ್ಲೆಮೆಂಟ್ ಅನ್ನು ವಹಿಸಿಕೊಂಡಿತು.

ಅಂತಿಮವಾಗಿ ಕಮ್ಯುನಿಸಂನಿಂದಾಗಿ ರಾಜ್ಯವು ಮಾಲೀಕತ್ವವನ್ನು ಹೊಂದಿತ್ತು. ನಂತರ ಅದರ ಬ್ರಾಂಡ್ ಹೆಸರನ್ನು ಸ್ಕೋಡಾ ವರ್ಕ್ಸ್ ನಲ್ಲಿ ಸಂಪೂರ್ಣವಾಗಿ ವಿಲೀನಗೊಳಿಸಲಾಯಿತು. 1992ರಲ್ಲಿ ಸ್ಕೋಡಾ ಖಾಸಗಿ ಕಂಪನಿಯಾಯಿತು. ನಂತರ ಫೋಕ್ಸ್‌ವ್ಯಾಗನ್ 2000ರಲ್ಲಿ ಸ್ಕೋಡಾವನ್ನು ಸ್ವಾಧೀನಪಡಿಸಿಕೊಂಡಿತು.