ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರವು ಅಧಿಕಾರಿಗಳು ಹೊಸ ಕಾರುಗಳನ್ನು ಖರೀದಿಸಲು ವೆಚ್ಚದ ನಿಯಮಗಳನ್ನು ಸಡಿಲಗೊಳಿಸಿದ್ದು, ಈ ಹಿಂದೆ ಸರ್ಕಾರಿ ಅಧಿಕಾರಿಗಳಿಗೆ ಗರಿಷ್ಠ ಮಿತಿಯಾಗಿದ್ದ ರೂ. 14 ಲಕ್ಷದಿಂದ ರೂ. 20 ಲಕ್ಷಕ್ಕೆ ಏರಿಸಲಾಗಿದೆ.

Recommended Video

Mahindra Scorpio-N India Launch Details | ನಿರೀಕ್ಷಿತ ಬೆಲೆ, ಎಂಜಿನ್, ಗೇರ್‌ಬಾಕ್ಸ್, 4WD *AutoNews

ಆಗಸ್ಟ್ 18 ರಂದು ಹೊರಡಿಸಿದ ತನ್ನ ಆದೇಶದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ರೂ. 20 ಲಕ್ಷ (ಎಕ್ಸ್ ಶೋ ರೂಂ ದರ ಮತ್ತು ಜಿಎಸ್‌ಟಿ ಸೇರಿದಂತೆ) ಕಾರುಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಈ ಮೊದಲು ಗರಿಷ್ಠ ಮಿತಿ ರೂ.14 ಲಕ್ಷವಾಗಿತ್ತು.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಡೆಪ್ಯುಟಿ ಕಮಿಷನರ್‌ಗಳು, ZP ಸಿಇಒಗಳು, ಎಸ್‌ಪಿಗಳು ಮತ್ತು ಸೆಷನ್ ಕೋರ್ಟ್ ನ್ಯಾಯಾಧೀಶರಿಗೆ ಕಾರುಗಳ ಖರೀದಿಯ ಮೇಲಿನ ಮಿತಿಯನ್ನು ₹9 ಲಕ್ಷದಿಂದ ₹18 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ. (ಎಕ್ಸ್ ಶೋ ರೂಂ ದರ ಮತ್ತು ಜಿಎಸ್‌ಟಿ ಸೇರಿದಂತೆ). ಇತರೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಮಿತಿಯನ್ನು ₹6.50 ಲಕ್ಷದಿಂದ ₹12.50 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ತಹಶೀಲ್ದಾರ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ, ಕಾರು ಖರೀದಿಗೆ ಗರಿಷ್ಠ ಮಿತಿಯನ್ನು ₹ 9 ಲಕ್ಷಕ್ಕೆ ನಿಗದಿಪಡಿಸಲಾಗಿದೆ. (ಎಕ್ಸ್ ಶೋ ರೂಂ ದರ ಮತ್ತು ಜಿಎಸ್‌ಟಿ ಸೇರಿದಂತೆ). ಇಂಧನ ದಕ್ಷತೆ ಮತ್ತು ನಿರ್ವಹಣೆ ವೆಚ್ಚವನ್ನು ಪರಿಗಣಿಸಿ ಕಾರುಗಳನ್ನು ಖರೀದಿಸಲು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೊಸ ಕಾರು ಖರೀದಿಸುವಾಗ ಪರಿಷ್ಕೃತ ದರ ಅನ್ವಯವಾಗಲಿದೆ. ಈಗ ಬಳಸುತ್ತಿರುವ ವಾಹನ, ಬಳಕೆಗೆ ಯೋಗ್ಯವಲ್ಲ ಎಂದು ಆರ್‌ಟಿಓಗಳು ಪ್ರಮಾಣ ಪತ್ರ ನೀಡಿದಾಗ ಮಾತ್ರ ಹೊಸ ವಾಹನಗಳನ್ನು ಖರೀದಿಸಲು ಸಾಧ್ಯ. ಕೆಲವು ವಾಹನಗಳು ಐದು ಲಕ್ಷ ಕಿ.ಮೀ ಓಡಿದ್ದರೂ ಸುಸ್ಥಿಯಲ್ಲಿರುತ್ತವೆ. ಆಗ ಬದಲಿಸಲು ಸಾಧ್ಯವಿಲ್ಲ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಇನ್ನು ಕೆಲ ವಾಹನಗಳು ಎಂಜಿನ್ ಸೇರಿ ವಿವಿಧ ಸಮಸ್ಯೆಗಳಿಂದ ಬಳಕೆಗೆ ಯೋಗ್ಯವಿರುವುದಿಲ್ಲ. ಆಗ ಕಡ್ಡಾಯವಾಗಿ ಪ್ರಮಾಣ ಪತ್ರ ಪಡಿಯಬೇಕಾಗುತ್ತದೆ. ಆರ್ಥಿಕ ಇಲಾಖೆಯ ಅನುಮತಿಯೂ ಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಎಲೆಕ್ಟ್ರಿಕ್ ವಾಹನಗಳು ಖರೀದಿಸುವ ಸಾಧ್ಯತೆ

ಈಗಾಗಲೇ ನಮ್ಮ ನೆರೆಯ ರಾಜ್ಯಗಳಾದ ಕೇರಳ ಹಾಗೂ ಗೋವಾಗಳಲ್ಲಿ ಸರ್ಕಾರಿ ಕಚೇರಿಗಳಿಗಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲಾಗಿದೆ. ಅಲ್ಲಿನ ಸರ್ಕಾರಗಳು ತಮ್ಮ ರಾಜ್ಯವನ್ನು ಮಾಲಿನ್ಯ ಮುಕ್ತಗೊಳಿಸುವ ಸಲುವಾಗಿ ತಾವೇ ಮೊದಲು ಖರೀದಿಸಿ ಜನರಿಗೆ ಮಾದರಿಯಾಗಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಸಾಧ್ಯತೆಯಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಇತ್ತೀಚೆಗೆ ಕೇರಳ ರಾಜ್ಯ ಸರ್ಕಾರ ಟಾಟಾ ಕಂಪನಿಯ 65 ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಿದೆ. ಕೇರಳದ ಸರ್ಕಾರದ ಕೆಲವು ಇಲಾಖೆಗಳಲ್ಲಿ ಈಗಾಗಲೇ ಟಾಟಾ ಕಂಪನಿಯ ನೆಕ್ಸನ್ ಇವಿ ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಾಗುತ್ತಿದೆ. ಇದರ ಹೊರತಾಗಿಯೂ ಕೇರಳ ಸರ್ಕಾರ 65 ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಮತ್ತೊಮ್ಮೆ ಡೆಲಿವರಿ ಪಡೆದಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

60 ಟಾಟಾ ಟಿಗೋರ್ ಇವಿ ಮತ್ತು 5 ಟಾಟಾ ನೆಕ್ಸನ್ ಇವಿಗಾಗಿ ಆರ್ಡರ್ ನೀಡಲಾಗಿತ್ತು. ರಾಜ್ಯ ಸರ್ಕಾರವು ಕೇರಳವನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಹೊರಹೊಮ್ಮುತ್ತಿರುವ ಇಂಗಾಲವನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, 2030ರ ವೇಳೆಗೆ ಈ ಗುರಿಯನ್ನು ಸಾಧಿಸುವ ಯೋಜನೆ ಮಾಡಿಕೊಂಡಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಈ ಯೋಜನೆಯ ಭಾಗವಾಗಿ, ಕೇರಳ ಸರ್ಕಾರವು ತನ್ನ ಸರ್ಕಾರಿ ಇಲಾಖೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ಈ ಮೂಲಕ ಸರ್ಕಾರವು ತನ್ನ ನಾಗರಿಕರನ್ನು ಇ-ವಾಹನಗಳ ಬಳಕೆಯತ್ತ ಸಾಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಒಂದು ಭಾಗವಾಗಿಯೇ ಜನರಿಗೆ ಮಾದರಿಯಾಗಲು ಕೇರಳ ಸರ್ಕಾರ ಟಾಟಾ ಮೋಟಾರ್ಸ್ನಿಂದ ಬೃಹತ್‌ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಲೆ ಕಡಿಮೆ ಬೇಡಿಕೆ ಹೆಚ್ಚು

ಕೇರಳ ಸರ್ಕಾರ ಖರೀದಿಸಿರುವ ಎರಡು ಮಾದರಿಗಳು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳಾಗಿವೆ. ಇದೇ ಕಾರಣದಿಂದಲೇ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಈ ಮಾದರಿಗಳು ಮಾರಾಟವಾಗುತ್ತಿವೆ. ಅತಿ ಹೆಚ್ಚು ಆರ್ಡರ್‌ಗಳನ್ನು ಪಡೆದಿರುವ ಟಾಟಾ ಟಿಗೋರ್ ಇವಿ ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರಾಗಿದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಇದರ ಆರಂಭಿಕ ಬೆಲೆ 11.99 ಲಕ್ಷದಿಂದ ಲಭ್ಯವಿದೆ. ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಕಾರು ಸಂಪೂರ್ಣ ಚಾರ್ಜ್ ಮಾಡಿದರೆ 306 ಕಿ.ಮೀ. ವರೆಗೆ ಪ್ರಯಾಣಿಸಬಹುದು ಎನ್ನಲಾಗಿದೆ. ಈ ಕಾರು 26-ಎಚ್‌ಎಸ್‌ಐ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನಿಂದ ನಿರ್ಮಿತವಾಗಿದೆ. ಈ ಬ್ಯಾಟರಿಯನ್ನು 15ಎ ಹೋಮ್ ಚಾರ್ಜರ್ ಸಾಕೆಟ್‌ನಲ್ಲಿ ಚಾರ್ಜ್ ಮಾಡಿದರೆ ಶೇ 80ರಷ್ಟು ಚಾರ್ಜ್ ಆಗಲು 8.5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಟಾಟಾ ಎಲೆಕ್ಟ್ರಿಕ್ ಕಾರುಗಳೆರಡೂ ಒಂದೇ ರೀತಿಯ ಬಹುಮುಖಿ ವೈಶಿಷ್ಟ್ಯಗಳನ್ನು ಹೊಂದಿದ್ದು, ಅವುಗಳನ್ನು ಭಾರತದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಳೆಂದು ಬಹುತೇಕರು ಪ್ರಶಂಸಿಸಿದ್ದಾರೆ. ಈ ಕಾರಣದಿಂದಲೇ ಟಿಗೋರ್ ಇವಿ ಮತ್ತು ನೆಕ್ಸನ್ ಇವಿ ಎರಡೂ ಭಾರತೀಯ ಎಲೆಕ್ಟ್ರಿಕ್ ಕಾರು ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.

ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ವೆಚ್ಚದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಅಗ್ಗದ ಬೆಲೆಗೆ ತಮ್ಮ ಎಂಟ್ರಿ ಲೆವೆಲ್‌ನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನೀಡುತ್ತಿದೆ. ರಾಜ್ಯದ ಸರ್ಕಾರಿ ಅಧಿಕಾರಿಗಳು ಕೂಡ ಮಾಲಿನ್ಯ ನಿಯಂತ್ರಣದಲ್ಲಿ ತಾವು ಜನರಿಗೆ ಮಾದರಿಯಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ನಿರೀಕ್ಷೆಯಿದೆ.

Most Read Articles

Kannada
English summary
The state government has increased the limit on car purchase expenses of government officials
Story first published: Friday, August 26, 2022, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X