ಇತಿಹಾಸ ಸೃಷ್ಟಿಸಲಿವೆ ಈ 10 ಹಾರುವ ಕಾರುಗಳು: ಪರೀಕ್ಷಾ ಹಂತ ಮುಗಿಸಿ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜು
ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳಂತೆ ಹಾರುವ ಕಾರುಗಳು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ. ಈ ಕನಸು ನನಸಾಗುವುದು ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಜನರನ್ನು ಕಾಡುತ್ತಿದೆ. ಆದರೆ ಸದ್ಯಕ್ಕೆ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಯಶಸ್ವಿಯಾಗಿ ನಿರ್ಮಿಸಿ ಮೊದಲ ಪರೀಕ್ಷೆಯನ್ನು ಕೂಡ ಮುಗಿಸಿವೆ.

ಇತ್ತೀಚೆಗೆ, ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ತನ್ನ ಎಲೆಕ್ಟ್ರಿಕ್ ಹಾರುವ ಕಾರಿನ ಮೊದಲ ಸಾರ್ವಜನಿಕ ಪರೀಕ್ಷಾ ಹಾರಾಟವನ್ನು ಮುಗಿಸಿದೆ. 2030 ರ ವೇಳೆಗೆ ಲಂಡನ್ ಮತ್ತು 2035 ರ ವೇಳೆಗೆ ಅಮೆರಿಕಾದಲ್ಲಿ ಎಲ್ಲಾ ಡೀಸೆಲ್ ಕಾರುಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ, ಇದಕ್ಕೆ ಪರ್ಯಾಯವಾಗಿ ಶೇ 30 ರಷ್ಟು ಹಾರುವ ಕಾರುಗಳು ಬರಲಿವೆ ಎಂದು ಹೇಳಲಾಗುತ್ತಿದೆ.

ಇದನ್ನು ಕಾರ್ಯರೂಪಕ್ಕೆ ತರಲು ವಿಶ್ವದ ಜನಪ್ರಿಯ ಕಂಪನಿಗಳಿಂದ ಹಿಡಿದು ಸ್ಟಾರ್ಟ್ ಅಪ್‌ಗಳವರೆಗೆ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಒಟ್ಟು ಹತ್ತು ಕಾರುಗಳು ಬಳಕೆಗೆ ಸಿದ್ದವಾಗುತ್ತಿವೆ. ಯಾವೆಲ್ಲಾ ಕಂಪನಿಗಳು ಹಾರುವ ಕಾರುಗಳನ್ನು ಬಿಡುಗಡೆ ಮಾಡಲಿವೆ. ಅವುಗಳ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಏರೋಮೊಬೈಲ್ 4.0
ಸ್ಲೋವಾಕಿಯಾದ ಕಂಪನಿಯು ಅಭಿವೃದ್ಧಿಪಡಿಸಿದ ಏರೋಮೊಬೈಲ್ 4.0 ಹೈಬ್ರಿಡ್ ಕಾರಾಗಿದ್ದು, ಇದು ಗಾಳಿಯಲ್ಲಿ 100 mph ಮತ್ತು ರಸ್ತೆಯಲ್ಲಿ 45 mph ವೇಗವನ್ನು ತಲುಪುತ್ತದೆ. ಇದು ಕಸ್ಟಮ್ 2.0-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಬಾಕ್ಸರ್ ಇಂಟರ್ನಲ್ ಕಂಬಷನ್ ಎಂಜಿನ್ ಮತ್ತು 62 ಮೈಲುಗಳ ಮೈಲೇಜ್‌ನೊಂದಿಗೆ ಬರುತ್ತದೆ.

ಅಲೌಡಾ Mk3
Alouda Mk3 ಒಂದು ರೇಸ್ ಕಾರ್ ಆಕಾರದ ಹಾರುವ ಕಾರು. ಇದರ ದೊಡ್ಡ ವೈಶಿಷ್ಟ್ಯವೆಂದರೆ ಇದು 8 ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು 8 ಎಲೆಕ್ಟ್ರಿಕ್ ಪ್ರೊಪೆಲ್ಲರ್‌ಗಳನ್ನು ಹೊಂದಿದೆ. ಕಾರು ಒಂದು ಸಂಯೋಜಿತ ಫ್ಯೂಸ್ಲೇಜ್ ಮತ್ತು ಸ್ಕಿಡ್-ಟೈಪ್ ಲ್ಯಾಂಡಿಂಗ್ ಗೇರ್ ಅನ್ನು ಹೊಂದಿದೆ.

ಇದರಲ್ಲಿ ಗಂಟೆಗೆ 250 ಕಿಲೋಮೀಟರ್ ಗಳಷ್ಟು ವೇಗವನ್ನು ತಲುಪಬಹುದು. ಅತಿ ಹೆಚ್ಚು ಅಥವಾ ತುಂಬಾ ಕಡಿಮೆ ಹಾರುವುದನ್ನು ತಪ್ಪಿಸಲು ಅಂತರ್ನಿರ್ಮಿತ ಸೆನ್ಸಾರ್‌ಗಳು ಇದರ ಪ್ರಮುಖ ಅಂಶವಾಗಿದೆ.

ಆಟೋಗೈರೋ ಡ್ರೈವ್
ಆಟೋಗೈರೊ ಡ್ರೈವ್ ಪ್ರಪಂಚದ ಮೊದಲ ರಸ್ತೆ-ಕಾನೂನಾತ್ಮಕ ಹಾರುವ ಕಾರು. ಹೆಲಿಕಾಪ್ಟರ್-ಶೈಲಿಯ ರೋಟರ್ ಬ್ಲೇಡ್‌ಗಳನ್ನು ಹೊಂದಿರುವ ಈ ಕಾರು, ಗಾಳಿಯಲ್ಲಿ 110 mph ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ. ಈ ಹಾರುವ ಕಾರನ್ನು ಕಾರುಗಿಂತ ಹೆಚ್ಚು ಪ್ರಾಯೋಗಿಕವೆಂದು ಪರಿಗಣಿಸಬಹುದು. ಇದರ ಬೆಲೆಯು ಅಂದಾಜು $63,500 (52 ಲಕ್ಷ ರೂ.) ರಿಂದ $180 000 (1 ಕೋಟಿ 48 ಲಕ್ಷ ರೂ.) ವರೆಗೆ ಇರುತ್ತದೆ.

ಡೆಲೋರಿಯನ್ DR-7
ವೈಯಕ್ತಿಕ ಬಳಕೆಗಾಗಿ ವಿನ್ಯಾಸಗೊಳಿಸಲಾದ ಈ ಹಾರುವ ಕಾರು ಟ್ವಿನ್ ಫಾರ್ವರ್ಡ್ ಮತ್ತು ಟಿಲ್ಟ್ ಪ್ರೊಪೆಲ್ಲರ್‌ಗಳನ್ನು ಹೊಂದಿದೆ. ಕಂಪನಿಯು 241 kmph ನಿಂದ 389 kmph ಕ್ರೂಸಿಂಗ್ ವೇಗವನ್ನು ಕ್ಲೈಮ್ ಮಾಡಿದೆ. ಮುಂಭಾಗ ಮತ್ತು ಹಿಂಭಾಗದ ಪ್ರೊಪೆಲ್ಲರ್‌ಗಳು 360 ಡಿಗ್ರಿಗಳಷ್ಟು ಮುಂದಕ್ಕೆ ಮತ್ತು ಹಿಂದಕ್ಕೆ ಓರೆಯಾಗಿಸಬಹುದು.

ಕಾರ್ಟಿವೇಟರ್ ಸ್ಕೈಡ್ರೈವ್
ಇದು ಉಪ-ಪ್ರಮಾಣದ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಪ್ರೊಟೊಟೈಪ್ ವಾಹನವಾಗಿದೆ. ಎರಡು VTOL ಪ್ರೊಪೆಲ್ಲರ್‌ಗಳನ್ನು ಅದರ ದೇಹಕ್ಕೆ ಮುಂಭಾಗ ಮತ್ತು ಹಿಂಭಾಗದಲ್ಲಿ ಜೋಡಿಸಲಾಗಿದೆ. ಇದು ಗರಿಷ್ಠ 100 kmph ವೇಗವನ್ನು ಸಾಧಿಸಬಹುದಾದರೂ, ಸರಾಸರಿ ಕ್ರೂಸಿಂಗ್ ವೇಗವು 50 ಮೀ. ಎತ್ತರದಲ್ಲಿ 60 kmph ಆಗಿದೆ. ಇಬ್ಬರಿಗೆ ಸ್ಥಳಾವಕಾಶವಿರುವ ಕಾರ್ಟಿವೇಟರ್ ಸ್ಕೈಡ್ರೈವ್ ಡ್ರೋನ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

ಲಿಲಿಯಮ್
ಲಿಲಿಯಮ್ ಹೆಲಿಕಾಪ್ಟರ್ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಗಾಳಿಯಲ್ಲಿ ಗರಿಷ್ಠ 186 mph ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಹಿತ್ತಲಿನಿಂದಲೇ ಕಾರ್ಯಾಚರಣೆ ಮಾಡಬಹುದು. ಇದು ಕೇವಲ 600 ಕೆ.ಜಿ ತೂಗುತ್ತದೆ ಮತ್ತು ಕಂಪನಿಯು ಸುಮಾರು 500 ಕಿ.ಮೀ ವ್ಯಾಪ್ತಿಯನ್ನು ಹೇಳುತ್ತಿದೆ.

ಟೆರಾಫುಜಿಯಾ TF-X 2013
TF-X ಪರಿಕಲ್ಪನೆಯು ಫ್ಲೈಯಿಂಗ್ ಕಾರ್ ಆಗಿದ್ದು ಇದನ್ನು ಮೇ ತಿಂಗಳಲ್ಲಿ ಟೆರಾಫುಜಿಯಾ ಬಿಡುಗಡೆ ಮಾಡಿದೆ. ಇದು ನಾಲ್ಕು-ಆಸನಗಳ ಲಂಬವಾದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (VTOL) ಪ್ಲಗ್-ಇನ್ ಹೈಬ್ರಿಡ್-ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಆಗಿದೆ.

ವಿಮಾನವು 300 bhp ಗ್ಯಾಸ್ ಟರ್ಬೈನ್ ಎಂಜಿನ್ ಅನ್ನು ಹೊಂದಿದ್ದು, ಹಿಂಬದಿಯ ಮೌಂಟೆಡ್ ಪ್ರೊಪೆಲ್ಲರ್ ಸಹಾಯದೊಂದಿಗೆ ಓಡಿಸುತ್ತದೆ. ಇದು 800 ಕಿಲೋಮೀಟರ್‌ಗಿಂತಲೂ ಹೆಚ್ಚಿನ ತಡೆರಹಿತ ಹಾರಾಟದ ಶ್ರೇಣಿಯನ್ನು ಹೊಂದಿದೆ. 322 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ.

ಇಹಾಂಗ್ 184
ತಲೆಕೆಳಗಾದ ಯು-ಆಕಾರದ ಇಹ್ಯಾಂಗ್ 184 ಹಾರುವ ಕಾರಿಗಿಂತಲೂ ಹೆಚ್ಚಾಗಿ ಡ್ರೋನ್ ವಿನ್ಯಾಸ ಹೊಂದಿದೆ. ಡ್ರೋನ್ ತಯಾರಕ ಇಹ್ಯಾಂಗ್ 100 ಕಿಲೋಗ್ರಾಂ ಅಥವಾ 220 ಪೌಂಡ್‌ಗಳಿಗಿಂತ ಕಡಿಮೆ ತೂಕದ ಒಬ್ಬ ಪ್ರಯಾಣಿಕನಿಗಾಗಿ ಇದನ್ನು ವೈಯಕ್ತಿಕ ಸಾರಿಗೆಯಾಗಿ ವಿನ್ಯಾಸಗೊಳಿಸಿದೆ.

'ಒಬ್ಬ ಪ್ರಯಾಣಿಕ, ಎಂಟು ಪ್ರೊಪೆಲ್ಲರ್‌ಗಳು, ನಾಲ್ಕು ಕೈಗಳು' ಎಂಬ ಅಡಿಬರಹವನ್ನು ಹೊತ್ತಿರುವ ಈ ಹೈಬ್ರಿಡ್ ಕಾರು ಗಾಳಿಯಲ್ಲಿ ಗಂಟೆಗೆ ಗರಿಷ್ಠ 62 ಕಿ.ಮೀ ವೇಗವನ್ನು ತಲುಪುತ್ತದೆ. ಗರಿಷ್ಠ 3,500 ಕಿ.ಮೀ ಎತ್ತರದಲ್ಲಿ ಹಾರುತ್ತದೆ. ಆಟೋಮ್ಯಾಟಿಕ್ ಹಾರುವ ಕಾರು ಕಡಿಮೆ ದೂರ ಮಾತ್ರ ಪ್ರಯಾಣಿಸಬಲ್ಲದು.

ಫ್ಲಿಕ್
ಫ್ಲಿಕ್ ಒಬ್ಬ ವ್ಯಕ್ತಿಯನ್ನು ಮಾತ್ರ ಸಾಗಿಸಬಲ್ಲ ಮತ್ತೊಂದು ಹಾರುವ ಕಾರು. ಇದು ಗಾಳಿಯಲ್ಲಿ ಗರಿಷ್ಠ 62 mph ವೇಗದಲ್ಲಿ ಹಾರಬಲ್ಲದು, ಕೇವಲ 30 ಮೀಟರ್ ತಲುಪಬಹುದು. ಇದು ಆಟೋಮ್ಯಾಟಿಕ್ ವಿಮಾನ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು ಪೆಟೈಟ್ ಸ್ಪೋರ್ಟ್ಸ್ ಕಾರಿಗೆ ಹೋಲಿಸಬಹುದು.

ಪಾಲ್-ವಿ ಲಿಬರ್ಟಿ
ಇಟಾಲಿಯನ್ ಕಂಪನಿ ಪಾಲ್-ವಿ ವಿನ್ಯಾಸಗೊಳಿಸಿದ ಕಾರಾಗಿದ್ದು, ಆಕರ್ಷಕ ವಿನ್ಯಾಸವನ್ನು ಹೊರತುಪಡಿಸಿ ಬೇರೇನೂ ಹೊಂದಿಲ್ಲ. ವಾಸ್ತವವಾಗಿ, ಇದು ಸಾಮಾನ್ಯ ಕಾರಿನಂತೆ ಕಾಣುತ್ತದೆ. ಗಾಳಿಯಲ್ಲಿ ಗರಿಷ್ಠ 112 mph ಮತ್ತು ರಸ್ತೆಯಲ್ಲಿ 99 mph ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ, ಇದು ಅತ್ಯಂತ ಸಾಮಾನ್ಯ ಸ್ಥಳಗಳಿಗೆ ಓಡಿಸಲು ಸೂಕ್ತವಾದ ಹಾರುವ ಕಾರಾಗಿದೆ.


Click it and Unblock the Notifications