ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಕಳೆದ ಮೇ 29 ರಂದು ತಮ್ಮ ಕಾರಿನಲ್ಲಿ ಪ್ರಯಾಣಿಸುವ ವೇಳೆ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೇ ಸಮಯದಲ್ಲಿ ಜೊತೆಗಿದ್ದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಸಿಧು ಮೂಸೆ ವಾಲಾ ಅವರ ಭಾವೋದ್ರಿಕ್ತ ಪಂಜಾಬಿ ಹಾಡುಗಳಿಗೆ ಅಪಾರ ಅಭಿಮಾನಿ ಬಳಗವಿದ್ದಂತೆ, ಮೂಸೆ ವಾಲಾ ಅವರಿಗೂ ಕಾರುಗಳೆಂದರೆ ಬಹಳ ಇಷ್ಟ. ಇದೇ ಕಾರಣಕ್ಕೆ ಅವರು ಅನೇಕ ಐಷಾರಾಮಿ ಕಾರುಗಳನ್ನು ಖರೀದಿಸಿದ್ದರು. ಸಿಧು ಅವರ ಗ್ಯಾರೇಜ್‌ನಲ್ಲಿ ಶೇಕರಣೆಗೊಂಡಿರುವ ವಿವಿಧ ಐಷಾರಾಮಿ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

1. ಫೋರ್ಡ್ ಮಸ್ಟಾಂಗ್ ಜಿಟಿ

ಫೋರ್ಡ್ ಮಸ್ಟಾಂಗ್ ಜಿಟಿ ಅವರ ಸಂಗ್ರಹದ ಅತ್ಯುತ್ತಮ ಕಾರು. ಈ ಕಾರನ್ನು ಅಮೆರಿಕಾದ ಕಾರು ತಯಾರಕ ಕಂಪನಿಯಾದ ಫೋರ್ಡ್ ತಯಾರಿಸಿದ್ದು, ಇದು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದೆ. ಈ ಕಾರು 5.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ವಿ 8 ಎಂಜಿನ್ ಅನ್ನು ಹೊಂದಿದೆ, ಇದು 400 ಬಿಹೆಚ್ ಪವರ್ ಮತ್ತು 515 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದರ ಬೆಲೆ 75 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

2. ರೇಂಜ್ ರೋವರ್ ಸ್ಪೋರ್ಟ್ ಎಚ್ಎಸ್ಇ

ಅವರ ಸಂಗ್ರಹದಲ್ಲಿರುವ ಮತ್ತೊಂದು ಕಾರೆಂದರೆ ರೇಂಜ್ ರೋವರ್ ಸ್ಪೋರ್ಟ್ ಎಚ್ಎಸ್ಇ, ಇದು ರೇಂಜ್ ರೋವರ್ ಸರಣಿಯ ಮತ್ತೊಂದು ಕಾರು. ಇದರ ಬೆಲೆ 1.22 ಕೋಟಿ ರೂ(ಎಕ್ಸ್ ಶೋ ರೂಂ)ಇದೆ. ಸ್ಪೋರ್ಟ್ ಎಚ್ಎಸ್ಇ 5.0-ಲೀಟರ್ ಸೂಪರ್ಚಾರ್ಜ್ಡ್ ವಿ 8 ಎಂಜಿನ್ ಅನ್ನು ಹೊಂದಿದೆ, ಇದು 518 ಬಿಹೆಚ್‌ ಪವರ್ ಮತ್ತು ಸುಮಾರು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

3. ರೇಂಜ್ ರೋವರ್ ಸ್ಪೋರ್ಟ್

ಈ ಪಟ್ಟಿಯಲ್ಲಿ ಮುಂದಿನ ಹೆಸರು ರೇಂಜ್ ರೋವರ್ ಸ್ಪೋರ್ಟ್. ಹೆಸರೇ ಹೇಳುವಂತೆ ಈ ಶಕ್ತಿಶಾಲಿ ಎಸ್‌ಯುವಿ 3.0-ಲೀಟರ್ 6-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಒಳಗೊಂಡಿದೆ, ಇದು 355 ಬಿಹೆಚ್‌ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಪ್ರೀಮಿಯಂ ಮತ್ತು ಐಕಾನಿಕ್ ಎಸ್‌ಯುವಿಗಳಲ್ಲಿ ಒಂದಾಗಿದ್ದು, ಅಪಾರ ಶಕ್ತಿ ಮತ್ತು ಆರಾಮದಾಯಕ ಡ್ರೈವ್ ಅನುಭವ ನೀಡುತ್ತದೆ. ಇದರ ಬೆಲೆ ರೂ 91.23 ಲಕ್ಷ (ಎಕ್ಸ್ ಶೋರೂಂ).

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

4. ಮಹೀಂದ್ರಾ ಸ್ಕಾರ್ಪಿಯೋ

ಈ ಪಟ್ಟಿಯಲ್ಲಿರುವ ಮುಂದಿನ ಎಸ್‌ಯುವಿಯನ್ನು ಭಾರತದಲ್ಲಿ ಮಾಫಿಯಾ ಕಾರು ಎಂದೇ ಕರೆಯಲಾಗುತ್ತದೆ, ಅದೇ ಮಹೀಂದ್ರಾ ಸ್ಕಾರ್ಪಿಯೋ. ಇತರ ಎಲ್ಲಾ ರ್ಯಾಪರ್ ಅಥವಾ ಕಲಾವಿದರಂತೆ, ಸಿಧು ಮ್ಯೂಸೆ ವಾಲಾ ಕೂಡ ಕೆಲವು ವಿಶಿಷ್ಟ ಮಾರ್ಪಾಡುಗಳೊಂದಿಗೆ ಕಪ್ಪು ಮಹೀಂದ್ರಾ ಸ್ಕಾರ್ಪಿಯೋವನ್ನು ಹೊಂದಿದ್ದರು.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

5. ಟೊಯೊಟಾ ಫಾರ್ಚೂನರ್

ಭಾರತದಲ್ಲಿ ಈ ಎಸ್‌ಯುವಿಗೆ ತುಂಬಾ ಕ್ರೇಜ್ ಇದೆ. ಟೊಯೊಟಾ ಫಾರ್ಚೂನರ್ ಭಾರತದ ದೈತ್ಯ ಕಾರುಗಳಲ್ಲಿ ಒಂದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳನ್ನು ಹೊಂದಿದೆ. 2.7-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, ಇದು 202 ಬಿಹೆಚ್‌ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಸ್ವಯಂಚಾಲಿತ ಆವೃತ್ತಿಯೊಂದಿಗೆ ಉತ್ಪಾದಿಸುತ್ತದೆ.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

6. ಮಾರುತಿ ಸುಜುಕಿ ಜಿಪ್ಸಿ

ಈ ಪಟ್ಟಿಯಲ್ಲಿ ಕೊನೆಯ ಕಾರು ಮಾರುತಿ ಸುಜುಕಿ ಜಿಪ್ಸಿ. ಒಂದು ಕಾಲದಲ್ಲಿ ಮಾರುತಿ ಕಂಪನಿಗೆ ಅತ್ಯುತ್ತಮವಾಗಿ ಮಾರಾಟವಾದ ಕಾರುಗಳಲ್ಲಿ ಇದು ಒಂದು. ಸಿಧು ಮೂಸೆ ವಾಲಾ ಅವರು ಈ ಕಾರನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ್ದರು. ಮಾರ್ಪಾಡುಗಳ ನಂತರ ಅತ್ಯಂತ ಆಕರ್ಷಣೀಯ ಲುಕ್‌ನಲ್ಲಿ ಹಲವರ ಮನಗೆದ್ದಿತ್ತು.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಕಾಂಗ್ರೆಸ್ ಸೇರಿದ್ದ ಸಿಧು

ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಇತ್ತೀಚೆಗೆ ಸಿಧು ಮೂಸೆವಾಲಾ ಸೇರಿದಂತೆ 424 ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಇದೇ ಸಮಯಕ್ಕೆ ಕಾಯುತ್ತಿದ್ದ ಹಂತಕರು ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಪಂಜಾಬ್ ಚುನಾವಣೆಗೂ ಮುನ್ನ ಸಿಧು ಮೂಸೆ ವಾಲಾ ಕಾಂಗ್ರೆಸ್ ಸೇರಿದ್ದರು.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ನಡೆದ ಆಘಾತಕಾರಿ ಹತ್ಯೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭಗವಂತ್ ಮಾನ್, ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಎಲ್ಲರಿಗೂ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದ್ದಾರೆ.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಸಿಧು ಮೂಸೆವಾಲಾ ಅವರ ಭೀಕರ ಹತ್ಯೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ತೀವ್ರ ದುಃಖಿತನಾಗಿದ್ದೇನೆ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಅವರ ಅಭಿಮಾನಿಗಳೊಂದಿಗೆ ಇವೆ. ಎಲ್ಲರೂ ಶಾಂತವಾಗಿರಲು ನಾನು ಮನವಿ ಮಾಡುತ್ತೇನೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವಿಟರ್‌ನಲ್ಲಿ ವಿನಂತಿ ಮಾಡಿದ್ದಾರೆ.

ಹತ್ಯೆಗೊಳಗಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪಂಜಾಬಿ ಗಾಯನದಲ್ಲಿ ತಮ್ಮದೇ ಪ್ರತಿಭೆಯನ್ನು ಅನಾವರಣಗೊಳಿಸಿದ್ದ ಸಿಧು ಮೂಸೆ ವಾಲಾ ಅತಿ ಸಣ್ಣ ವಯಸ್ಸಿನಲ್ಲೇ ಜೀವನ ಮುಗಿಸಿದ್ದಾರೆ. ಅವರಿಗೆ ಪೂರ್ಣಾಯುಷ್ಯವಿದ್ದಿದ್ದರೆ ಇನ್ನೂ ಹಲವು ಕಾರುಗಳು ತಮ್ಮ ಗ್ಯಾರೇಜ್ ಸೇರಿತ್ತಿದ್ದವು. ಸದ್ಯ ಇರುವ ಕಾರುಗಳಿಂದ ಅವರಿಗೆ ಕಾರುಗಳೆಂದರೆ ಯಾವ ಮಟ್ಟಿಗೆ ಇಷ್ಟವೆಂಬುದನ್ನು ಬಿಂಬಿಸುತ್ತವೆ.

Article Published On: Monday, June 6, 2022, 15:03 [IST]
English summary
These are the luxury cars used by slain Punjabi singer Sidhu Moose Wala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+