ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ವಿಶ್ವಾದ್ಯಂತ ವಾಹನಗಳ್ಳತನ ಹೆಚ್ಚಾಗುತ್ತಿದೆ. ವಾಹನಗಳನ್ನು ಕದಿಯುವ ಕಳ್ಳರು ಅವುಗಳ ನಕಲಿ ದಾಖಲೆ ಸೃಷ್ಟಿಸಿ ಅತಿ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಆದರೆ ಕಾರುಗಳ್ಳನೊಬ್ಬ ಕಾರು ಕದ್ದ ನಂತರ ವಿಚಿತ್ರವಾಗಿ ವರ್ತಿಸಿದ್ದಾನೆ. ಆತ ನಡೆದುಕೊಂಡಿರುವ ರೀತಿ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಬಹುಶಃ ಈ ಹಿಂದೆ ಯಾವ ಕಳ್ಳನು ಸಹ ಈ ರೀತಿ ನಡೆದುಕೊಂಡಿಲ್ಲವೆನಿಸುತ್ತದೆ. ಕಾರುಗಳ್ಳ ಹಾಗೂ ಕಾರು ಮಾಲೀಕನ ನಡುವೆ ರವಾನೆಯಾಗಿರುವ ಎಸ್‌ಎಂಎಸ್'ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಈ ವಿಲಕ್ಷಣ ಘಟನೆ ನಡೆದಿರುವುದು ಇಂಗ್ಲೆಂಡಿನಲ್ಲಿ. 27 ವರ್ಷದ ವೆಸ್ಟ್ ಮಿಡ್'ಲ್ಯಾಂಡ್'ನ ನಿವಾಸಿ ಜ್ಯಾಕ್ ಬ್ಯಾಟ್ಸನ್ ತಮ್ಮ ಕಿಯಾ ರಿಯೊ ಕಾರನ್ನು ಮಾರಾಟ ಮಾಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಜಾಹೀರಾತು ನೋಡಿದ್ದ ವ್ಯಕ್ತಿಯೊಬ್ಬ ಏಪ್ರಿಲ್ 12ರಂದು ಕಾರು ಖರೀದಿಸುವುದಾಗಿ ಜ್ಯಾಕ್ ಪ್ಯಾಟ್ಸನ್‌ರನ್ನು ಸಂಪರ್ಕಿಸಿದ್ದಾನೆ. ನಂತರ ಕಾರಿನ ಟೆಸ್ಟ್ ಡ್ರೈವ್ ಮಾಡುವುದಾಗಿ ಕಾರಿನ ಕೀ ಪಡೆದು ಹೋದವನು ವಾಪಸ್ ಬಂದಿಲ್ಲ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಜ್ಯಾಕ್'ರವರಿಗೆ ತಮ್ಮ ಕಾರು ಕಳುವಾಗಿರುವುದರ ಅರಿವಾಗಿದೆ. ಕಾರನ್ನು ಕದ್ದ ವ್ಯಕ್ತಿ ತಕ್ಷಣವೇ ಎಸ್‌ಎಂಎಸ್ ಮೂಲಕ ಜ್ಯಾಕ್'ರನ್ನು ಸಂಪರ್ಕಿಸಿ, ನಿಮ್ಮ ಕಾರು ನಿಮಗೆ ಬೇಕೇ? ಹಾಗಾದರೆ 500 ಪೌಂಡ್ ಪಾವತಿಸಿದರೆ ನಿಮ್ಮ ಕಾರು ಎಲ್ಲಿದೆ ಎಂದು ತಿಳಿಸುತ್ತೇನೆ ಎಂದು ಹೇಳಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕಳ್ಳನ ಮಾತಿಗೆ ಮನ್ನಣೆ ನೀಡದ ಜ್ಯಾಕ್ ತಾನು ಹಣ ನಿಡುವುದಿಲ್ಲ ಬದಲಿಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಳ್ಳ ಲೊಲ್ ಎಕ್ಸ್ ಎಂಬ ಸಂದೇಶ ಕಳುಹಿಸಿದ್ದಾನೆ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕಳ್ಳನ ಈ ವಿಲಕ್ಷಣ ವರ್ತನೆ ಇಂಟರ್ ನೆಟ್'ನಲ್ಲಿ ವೈರಲ್ ಆಗಿದೆ. ಈ ಎಸ್‌ಎಂಎಸ್ ನೋಡಿರುವ ಅನೇಕರು ಯಾವುದೇ ಕಳ್ಳನು ಇದುವರೆಗೂ ಈ ರೀತಿ ವ್ಯವಹರಿಸಿಲ್ಲ. ಇನ್ನು ಕೆಲವರು ಕಳ್ಳನ ಕಾರ್ಯಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕದ್ದ ವಾಹನವನ್ನು ಆದಷ್ಟು ಬೇಗ ಮಾರಾಟ ಮಾಡುವುದು ಹೇಗೆ ಎಂದು ಕಳ್ಳರು ಯೋಚಿಸುತ್ತಿರುವ ಈ ದಿನಗಳಲ್ಲಿ ಕಳ್ಳನ ಈ ನಡೆ ನಿಜಕ್ಕೂ ಅಚ್ಚರಿ ಮೂಡಿಸಿದೆ. ಒಂದು ವೇಳೆ ಕಳ್ಳ ಹೇಳಿದಷ್ಟು ಹಣ ನೀಡಿದರೆ ಆತ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆಗಳಿವೆ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಇನ್ನು ಕೆಲವು ಕಳ್ಳರು ಕಾರು ಮಾಲೀಕರನ್ನು ತಾವು ಇರುವ ಜಾಗಕ್ಕೆ ಕರೆಸಿಕೊಂಡು ಸುಲಿಗೆ ಮಾಡುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಯಾರೇ ಆಗಲಿ ಕಳ್ಳರ ಮಾತನ್ನು ನಂಬದೇ ಇರುವುದು ಒಳ್ಳೆಯದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕಾರು ಮಾಲೀಕರು ಜ್ಯಾಕ್ ಪ್ಯಾಟ್ಸನ್ ಅವರಂತಯೇ ಪೊಲೀಸರಿಗೆ ದೂರು ನೀಡಿ ಕಳ್ಳರನ್ನು ಸೆರೆ ಹಿಡಿಯಲು ಮುಂದಾಗುವುದು ಉತ್ತಮ. ಈ ಮಾರ್ಗವು ಕಳ್ಳರಿಂದ ಮತ್ತಷ್ಟು ಮೋಸ ಹೋಗುವುದನ್ನು ತಪ್ಪಿಸುತ್ತದೆ.

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕೆಲವೊಮ್ಮೆ ಕಾರು ಕಳುವಾದ ತಕ್ಷಣವೇ ದೂರು ದಾಖಲಿಸಿದರೆ ಪೊಲೀಸರು ಕಳೆದುಹೋದ ವಾಹನವನ್ನು ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಅಂದ ಹಾಗೆ ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಇನ್ನೂ ಸಹ ರಿಯೊ ಮಾದರಿ ಕಾರ್ ಅನ್ನು ಬಿಡುಗಡೆಗೊಳಿಸಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಕದ್ದು ಕಾರು ಮಾಲೀಕನಿಗೆ ಎಸ್‌ಎಂಎಸ್ ಕಳುಹಿಸಿದ ಖದೀಮ

ಕಂಪನಿಯು ಈ ಕಾರ್ ಅನ್ನು ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತದೆ. ಕಿಯಾ ರಿಯೊವನ್ನು ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕಂಪನಿಯು ಕಳೆದ ವರ್ಷದ ಕೊನೆಯಲ್ಲಿ ಅಮೆರಿಕಾದಲ್ಲಿ ಈ ಕಾರಿನ ನವೀಕರಿಸಿದ ಮಾದರಿಯನ್ನು ಬಿಡುಗಡೆಗೊಳಿಸಿತು.

Most Read Articles

Kannada
English summary
Thief steals car and sends SMS to car owner to reveal location. Read in Kannada.
Story first published: Thursday, April 22, 2021, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X