ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

By Manoj Bk

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅಂದರೆ ಟಿಪಿಎಂಎಸ್ ಗಳನ್ನು ಬಳಸುತ್ತವೆ. ಟಿಪಿಎಂಎಸ್'ಗಳು ಒಂದು ಅಥವಾ ಹೆಚ್ಚಿನ ಟಯರ್‌ಗಳು ಕಡಿಮೆ ಗಾಳಿಯನ್ನು ಹೊಂದಿದ್ದು, ಚಾಲನೆ ಅಸುರಕ್ಷಿತವೆಂದು ಚಾಲಕನಿಗೆ ಎಚ್ಚರಿಕೆ ನೀಡುತ್ತವೆ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಟಯರ್'ಗಳಲ್ಲಿ ಕಡಿಮೆ ಗಾಳಿಯನ್ನು ಹೊಂದಿರುವುದನ್ನು ಸೂಚಿಸುವ ಟಿಪಿಎಂಎಸ್'ಗಳು ಡ್ಯಾಶ್‌ಬೋರ್ಡ್ ಇನ್ಸ್'ಟ್ರೂಮೆಂಟ್ ಪ್ಯಾನೆಲ್'ನಲ್ಲಿ ಹಳದಿ ಚಿಹ್ನೆಯಲ್ಲಿರುತ್ತವೆ. ಇವುಗಳು ಆಕ್ಸಲರೇಷನ್ ಪಾಯಿಂಟ್ ಹೊಂದಿರುವ ಟಯರ್ ಕ್ರಾಸ್ ಸೆಕ್ಷನ್ ಶೇಪಿನಲ್ಲಿರುತ್ತವೆ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಎಲ್ಲಾ ಟಿಪಿಎಂಎಸ್'ಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ ಕಡಿಮೆ ಟಯರ್ ಪ್ರೆಷರ್ ಇಂಡಿಕೇಟರ್, ಟಿಪಿಎಂಎಸ್ ಅಥವಾ ಡೈರೆಕ್ಟ್ ಟಿಪಿಎಂಎಸ್ ಪ್ರಕ್ರಿಯೆಯ ಅಂತಿಮ ಹಂತವನ್ನು ಪ್ರತಿನಿಧಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಇನ್ ಡೈರೆಕ್ಟ್ ಟಿಪಿಎಂಎಸ್ ಬಗ್ಗೆ:

ಇನ್ ಡೈರೆಕ್ಟ್ ಟಿಪಿಎಂಎಸ್ ಸಾಮಾನ್ಯವಾಗಿ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಬಳಸುವ ವ್ಹೀಲ್ ಸ್ಪೀಡ್ ಸೆನ್ಸಾರ್ ಮೇಲೆ ಅವಲಂಬಿತವಾಗಿರುತ್ತದೆ. ಈ ಸೆನ್ಸಾರ್'ಗಳು ವ್ಹೀಲ್'ನಿಂದ ರೆವಲ್ಯುಷನ್ ದರವನ್ನು ಅಳೆದು, ಪರಸ್ಪರ ಹೋಲಿಕೆ ಮಾಡಲು ಆನ್-ಬೋರ್ಡ್ ಕಂಪ್ಯೂಟರ್ ಸಿಸ್ಟಂ ಬಳಸುತ್ತವೆ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಪ್ರತಿ ವ್ಹೀಲ್'ನ ರೆವಲ್ಯುಷನ್ ದರವನ್ನು ಅವಲಂಬಿಸಿ, ಕಂಪ್ಯೂಟರ್ ವಾಹನದ ಟಯರ್‌ನ ಸಾಪೇಕ್ಷ ಗಾತ್ರವನ್ನು ವ್ಯಾಖ್ಯಾನಿಸುತ್ತದೆ. ವ್ಹೀಲ್ ನಿರೀಕ್ಷೆಗಿಂತ ವೇಗವಾಗಿ ತಿರುಗಿದಾಗ, ಕಂಪ್ಯೂಟರ್ ಟಯರ್ ದುರ್ಬಲವಾಗಿದೆ ಎಂದು ತಿಳಿದು, ಚಾಲಕನನ್ನು ಎಚ್ಚರಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಇನ್ ಡೈರೆಕ್ಟ್ ಟಿಪಿಎಂಎಸ್‌ನ ಅನುಕೂಲಗಳು ಹಾಗೂ ಅನಾನುಕೂಲಗಳು:

ಇನ್ ಡೈರೆಕ್ಟ್ ಟಿಪಿಎಂಎಸ್‌ ಅನುಕೂಲದ ಬಗ್ಗೆ ಹೇಳುವುದಾದರೆ ಇದು ಡೈರೆಕ್ಟ್ ಟಿಪಿಎಂಎಸ್'ಗಿಂತ ಅಗ್ಗವಾಗಿದೆ. ಡೈರೆಕ್ಟ್ ಟಿಪಿಎಂಎಸ್'ಗೆ ಹೋಲಿಸಿದರೆ ಕಡಿಮೆ ಪ್ರೋಗ್ರಾಮಿಂಗ್ ಹಾಗೂ ನಿರ್ವಹಣೆಯ ಅಗತ್ಯವಿರುತ್ತದೆ. ಡೈರೆಕ್ಟ್ ಟಿಪಿಎಂಎಸ್'ಗೆ ಹೋಲಿಸಿದರೆ ಕಡಿಮೆ ಇನ್ ಸ್ಟಾಲೇಷನ್ ಮೆಂಟೆನೆನ್ಸ್ ಅಗತ್ಯವಿರುತ್ತದೆ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಇನ್ನು ಅನಾನುಕೂಲದ ಬಗ್ಗೆ ಹೇಳುವುದಾದರೆ ದೊಡ್ಡ ಅಥವಾ ಸಣ್ಣ ಟಯರ್ ಖರೀದಿಸಿದರೆ ಅಂತಹ ಸ್ಥಿತಿಯಲ್ಲಿ ಇನ್ ಡೈರೆಕ್ಟ್ ಟಿಪಿಎಂಎಸ್‌ ತಪ್ಪಾಗಬಹುದು. ಟಯರ್‌ಗಳನ್ನು ಅಸಮಾನವಾಗಿ ಜೋಡಿಸಿದಾಗ ತೊಂದರೆಯಾಗ ಬಹುದು ಹಾಗೂ ಪ್ರತಿ ಟಯರ್ ಉಬ್ಬಿಕೊಂಡ ನಂತರ ಮರುಹೊಂದಿಸಬೇಕಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಡೈರೆಕ್ಟ್ ಟಿಪಿಎಂಎಸ್ ಬಗ್ಗೆ:

ಡೈರೆಕ್ಟ್ ಟಿಪಿಎಂಎಸ್ ನಿರ್ದಿಷ್ಟ ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಪ್ರತಿ ಟಯರ್‌ನೊಳಗೆ ಪ್ರೆಷರ್ ಮಾನಿಟರಿಂಗ್ ಸೆನ್ಸಾರ್'ಗಳನ್ನು ಬಳಸುತ್ತದೆ. ಡೈರೆಕ್ಟ್ ಟಿಪಿಎಂಎಸ್‌ನಲ್ಲಿನ ಸೆನ್ಸಾರ್'ಗಳು ಟಯರ್ ತಾಪಮಾನದ ಬಗೆಗಿನ ವಿವರಗಳನ್ನು ನೀಡುತ್ತವೆ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಡೈರೆಕ್ಟ್ ಟಯರ್ ಪ್ರೆಷರ್ ಮಾನಿಟರಿಂಗ್ ಈ ಮಾಹಿತಿಯನ್ನು ಕೇಂದ್ರೀಕೃತ ನಿಯಂತ್ರಣ ಘಟಕಕ್ಕೆ ಕಳುಹಿಸುತ್ತದೆ. ಇಲ್ಲಿ ಆ ಮಾಹಿತಿಯನ್ನು ವಿಶ್ಲೇಷಿಸಿ, ಟಯರ್ ಪ್ರೆಷರ್ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಿದ್ದರೆ, ಆ ಮಾಹಿತಿಯನ್ನು ನೇರವಾಗಿ ಡ್ಯಾಶ್‌ಬೋರ್ಡ್‌ಗೆ ಕಳುಹಿಸಲಾಗುತ್ತದೆ. ಡೈರೆಕ್ಟ್ ಟಯರ್ ಪ್ರೆಶರ್ ಮಾನಿಟರ್ ಸಾಮಾನ್ಯವಾಗಿ ಈ ಮಾಹಿತಿಯನ್ನು ವೈರ್ ಲೆಸ್ ಆಗಿ ಕಳುಹಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಡೈರೆಕ್ಟ್ ಟಿಪಿಎಂಎಸ್‌ ಅನುಕೂಲ ಹಾಗೂ ಅನಾನುಕೂಲಗಳು:

ಡೈರೆಕ್ಟ್ ಟಿಪಿಎಂಎಸ್‌ ಅನುಕೂಲಗಳ ಬಗ್ಗೆ ಹೇಳುವುದಾದರೆ, ನಿಜವಾದ ಟಯರ್ ಪ್ರೆಷರ್ ರೀಡಿಂಗ್ ಟಯರ್ ಒಳಗಿನಿಂದ ಲಭ್ಯವಿರುತ್ತದೆ. ಟಯರ್ ರೊಟೇಶನ್ ಅಥವಾ ಟಯರ್ ಬದಲಾವಣೆಯಿಂದಾಗಿ ಯಾವುದೇ ಅಪಾಯವಿರುವುದಿಲ್ಲ.

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಟಯರ್ ರೊಟೆಟ್ ಆದ ನಂತರ ಅಥವಾ ಟಯರ್ ಬದಲಾದ ನಂತರ ಮರುಸಂಯೋಜನೆ ಸುಲಭವಾಗಿರುತ್ತದೆ. ಸೆನ್ಸಾರ್'ನೊಳಗಿರುವ ಬ್ಯಾಟರಿಗಳು ಸಾಮಾನ್ಯವಾಗಿ ಸುಮಾರು 10 ವರ್ಷಗಳವರೆಗೆ ಇರುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರುಗಳಲ್ಲಿ ಬಳಕೆಯಾಗುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಪೂರ್ಣ ವಿವರಗಳಿವು

ಇನ್ನು ಅನಾನುಕೂಲದ ಬಗ್ಗೆ ಹೇಳುವುದಾದರೆ ಡೈರೆಕ್ಟ್ ಟಿಪಿಎಂಎಸ್, ಇನ್ ಡೈರೆಕ್ಟ್ ಟಿಪಿಎಂಎಸ್ ಗಿಂತ ಹೆಚ್ಚು ದುಬಾರಿಯಾಗಿದೆ. ಬಳಸುವುದು ಸುಲಭವಾಗಿದ್ದರೂ, ರಿ ಸಿಂಕ್ರೊನೈಸೇಶನ್'ಗಾಗಿ ದುಬಾರಿ ಉಪಕರಣಗಳು ಬೇಕಾಗುತ್ತವೆ. ಬ್ಯಾಟರಿ ಖಾಲಿಯಾದಾಗ ಸೆನ್ಸಾರ್'ಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗುತ್ತದೆ.

Most Read Articles

Kannada
English summary
Things about Tyre pressure monitoring system used in cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X