ರಷ್ಯಾ ಅಧ್ಯಕ್ಷರ ಐಷಾರಾಮಿ ಗಾಡಿ ಹೇಗಿದೆ ನೋಡಿ
ಕೆಲವು ತಿಂಗಳುಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ವ್ಲಾದಿಮಿರ್ ಪುತಿನ್ ಅವರಿಗಾಗಿ ನೂತನ ಅಧಿಕೃತ ಕಾರಿನ ಹುಡುಕಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಮಾರುಸ್ಸಿಯಾ ಮೋಟಾರ್ಸ್ ಹಾಗೂ ರಷ್ಯಾ ಜಾಲತಾಣ ಕಾರ್‌ಡಿಸೈನ್ ಜಂಟಿಯಾಗಿ ಆಯೋಜಿಸಿರುವ ಲಿಮೊಸಿನ್ ಕಾರಿನ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಕಾನ್ಸೆಪ್ಟ್‌ಗಳು ರೂಪುಗೊಂಡಿದ್ದವು.
ಅಂದ ಹಾಗೆ ಪ್ರಸ್ತುತ ಸ್ಪರ್ಧೆಯು ಅಂತಿಮ ಘಟ್ಟ ತಲುಪಿದ್ದು, ಯರೊಸ್ಲಾವ್ ಯಕೊವ್ಲೆವ್ ಹಾಗೂ ಬರ್ನಾಡ್ ವೀಲ್ ಅವರ ಜಿಲ್ ಅಧ್ಯಕ್ಷೀಯ ಲಿಮೊ ಕಾನ್ಸೆಪ್ಟ್ ವಿಜೇತ ಕಾರೆಂದು ಘೋಷಿಸಲಾಗಿದೆ. ಅಷ್ಟಕ್ಕೂ ರಷ್ಯಾ ಅಧ್ಯಕ್ಷರು ನೂತನ ಕಾರಿಗೆ ಒಪ್ಪಿಗೆ ನೀಡಿದರಷ್ಟೇ ಅಧಿಕೃತ ವಾಹನವಾಗಿ ಘೋಷಣೆಯಾಗಲಿದೆ. ಹಾಗಿದ್ದರೆ ವಿಜೇತ ಲಿಮೊಸಿನ್ ಕಾರಿನ ವಿನ್ಯಾಸ ಹೇಗಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿಲ್ಲವೇ?

ವ್ಲಾದಿಮಿರ್ ಪುತಿನ್
ಮೂರು ವಾರಗಳ ಅವಧಿಯಲ್ಲಿ ನೂತನ ಲಿಮೊಸಿನ್ ಕಾರಿನ ವಿನ್ಯಾಸವನ್ನು ವಿನ್ಯಾಸಗಾರರು ರೂಪಿಸಿದ್ದಾರೆ.

ವಿನ್ಯಾಸ
ಅಂತಿಮವಾಗಿ ಆಕರ್ಷಕ ವಿನ್ಯಾಸ ನೀಡುವಲ್ಲಿ ಸ್ಪರ್ಧಾಳುಗಳು ಯಶಸ್ವಿಯಾಗಿದ್ದಾರೆ.

ರೋಲ್ಸ್ ರಾಯ್ಸ್ ಪ್ರೇರಣೆ
ರೋಲ್ಸ್ ರಾಯ್ಸ್‌ನಿಂದ ಸ್ಫೂರ್ತಿ ಪಡೆದು ನೂತನ ಲಿಮೊ ಕಾರಿನ ಫ್ರಂಟ್ ಡಿಸೈನ್ ಕಲ್ಪಿಸಲಾಗಿದೆ. ಇದರ ಯೂನಿಕ್ ಟೈಲ್ ಲ್ಯಾಂಪ್ ಪಡೆದುಕೊಂಡಿದೆ.

ಜಿಲ್ ಅಧ್ಯಕ್ಷೀಯ ಲಿಮೊ ಕಾನ್ಸೆಪ್ಟ್ ಕಾರು
ZiL ಅಧ್ಯಕ್ಷೀಯ ಲಿಮೊ ಕಾನ್ಸೆಪ್ಟ್ ಕಾರೆಂಬ ಹೆಸರು ಪಡೆದುಕೊಂಡಿರುವ ನೂತನ ವಾಹನ, ಉತ್ಪಾದನಾ ವರ್ಷನ್ ಪಡೆಯಲಿದೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ.

ಅನುಮೋದನೆ
ಯಾಕೆಂದರೆ ರಷ್ಯಾ ಅಧ್ಯಕ್ಷರ ಒಪ್ಪಿಗೆ ದೊರೆತ ಬಳಿಕವಷ್ಟೇ ಯರೊಸ್ಲಾವ್ ಯಕೊವ್ಲೆವ್ ಹಾಗೂ ಬರ್ನಾಡ್ ವೀಲ್ ವಿನ್ಯಾಸಕ್ಕೆ ಮನ್ನಣೆ ದೊರಕಲಿದೆ.

ಪುತಿನ್ ದೇಶಪ್ರೇಮ
ಈ ಹಿಂದೆ ತಮ್ಮ ಬಳಿಯಿರುವ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಐಷಾರಾಮಿ ಕಾರುಗಳನ್ನು ಬದಲಾಯಿಸಲು ಪುತಿನ್ ಬಯಸಿದ್ದರು. ಈ ಮೂಲಕ ಸಂಪೂರ್ಣ ದೇಶಿಯ ಉತ್ಪನ್ನ ಕಾರನ್ನು ಬಳಕೆ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದರು.

ಪುತಿನ್ ಅಸಂತೋಷ?
ಈ ನಡುವೆ ಹೊಸ ಕಾರಿನ ವಿನ್ಯಾಸದ ಬಗ್ಗೆ ಪುತಿನ್ ಅಸಂತುಷ್ಟಿ ಹೊಂದಿದ್ದು, ಇದೇ ಕಾರಣಕ್ಕಾಗಿ ಅಧಿಕೃತ ಕಾರಿನ ಘೋಷಣೆ ವಿಳಂಬವಾಗುತ್ತಿದೆಯೆಂಬ ವರದಿಯಿದೆ. ಆದರೆ ಪ್ರಸ್ತುತ ವರದಿಗಳನ್ನು ಜಿಲ್ ನಿರಾಕರಿಸಿದೆ.

ಬದಲಾವಣೆಗೆ ಆಗ್ರಹ
ಮೊಸ್ಕೋ ಟೈಮ್ಸ್ ಪ್ರಕಾರ ನೂತನ ಲಿಮೊ ಟೆಸ್ಟ್ ಡ್ರೈವ್ ನಡೆಸಿರುವ ರಷ್ಯಾ ಅಧ್ಯಕ್ಷರು, ಕೆಲವೊಂದು ಬದಲಾವಣೆಗಳನ್ನು ಬಯಸಿದ್ದಾರೆಂಬ ಮಾಹಿತಿಯಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷರ ಅಧಿಕೃತ ಕಾರಿನ ಘೋಷಣೆಯಾಗಲಿದೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.
ವ್ಲಾದಿಮಿರ್ ಪುತಿನ್
ವೀಡಿಯೋ ವೀಕ್ಷಿಸಿ


Click it and Unblock the Notifications








