ಅದಲು-ಬದಲು; ಭಾರತೀಯ ಕಾರುಗಳಿಗೆ ಲಿಮೊ ಸ್ಪರ್ಶ

By Nagaraja

ಭಾರತೀಯ ಕಾರುಗಳು ಲಿಮೊಸಿನ್ (limousine) ಆಗಿ ಪರಿವರ್ತನೆಯಾದರೆ ಹೇಗಿರಬಹುದು? ಎಂಬುದಕ್ಕಿಂತಲೂ ಮೊದಲು ಓದುಗರಿಗೆ ಲಿಮೊ ಕಾರುಗಳೆಂದರೇನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕೊಡಬೇಕಾಗುತ್ತದೆ.

Also Read: ವಿಶ್ವದ 10 ಅತಿ ದುಬಾರಿ ಲಿಮೊಸಿನ್ ಕಾರುಗಳು

'ಲಿಮೊ' ಎಂದೇ ಪ್ರಖ್ಯಾತಿ ಪಡೆದಿರುವ ಲಿಮೊಸಿನ್ ಗಾಡಿಗಳು ಐಷಾರಾಮಿ ಸೆಡಾನ್ ಕಾರುಗಳ ವಿಭಾಗಕ್ಕೆ ಸೇರಿದ್ದು, ಸುಖವಾಹಕಗಳೆಂದೇ ಪ್ರಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳ ವೈಯಕ್ತಿಕ ಬಳಕೆಗಾಗಿ ಉಪಯೋಗಿಸುವ ಲಿಮೊ ಕಾರುಗಳು ಪ್ರೀಮಿಯಂ ವಿಭಾಗದಲ್ಲಿ ವಿಶಿಷ್ಟ ವಿನ್ಯಾಸದೊಂದಿಗೆ ಗುರುತಿಸಲ್ಪಡುತ್ತದೆ. ಇದರಲ್ಲಿ ವಿಭಜಿತ ಚಾಲಕ ಹಾಗೂ ಪ್ರಯಾಣಿಕ ವಿಭಾಗ ಹೊಂದಿರುತ್ತದೆ. ಅಲ್ಲದೆ ವಿಶೇಷ ಪರಿಣಿತಿ ಪಡೆದ ಐಷಾರಾಮಿ ಕಾರು ಚಾಲಕರನ್ನು ( chauffeur ) ನಿಯೋಜಿಸಲಾಗುತ್ತದೆ. ಅತಿ ಉದ್ದವಾದ ಚಕ್ರಾಂತರ ಹೊಂದಿರುವ ಲಿಮೊಸಿನ್ ಕಾರುಗಳನ್ನು ಮಾಲಿಕರು ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ಮಾರ್ಪಾಡುಗೊಳಿಸುತ್ತಾರೆ. ಅಲ್ಲದೆ ಬುಲೆಟ್ ಪ್ರೂಫ್ ಗಾಜುಗಳಂತಹ ಗರಿಷ್ಟ ಸುರಕ್ಷತೆಯನ್ನು ನೀಡಲಾಗುತ್ತದೆ.

ಅದಲು-ಬದಲು; ಭಾರತೀಯ ಕಾರುಗಳಿಗೆ ಲಿಮೊ ಸ್ಪರ್ಶ

ಭಾರತೀಯರು ಹೆಚ್ಚು ಸ್ಥಳಾವಕಾಶದ ದೊಡ್ಡ ಗಾಡಿಗಳನ್ನು ಇಷ್ಟಪಡುತ್ತಾರೆ. ಆದರೆ ಲಿಮೊಸಿನ್ ಗಳಂತಹ ಕಾರುಗಳು ಇದುವರೆಗೆ ದೇಶದ ಪ್ರವೇಶ ಪಡೆದಿಲ್ಲ ಎಂಬುದು ತೀವ್ರ ಬೇಸರವನ್ನುಂಟು ಮಾಡಿದೆ. ವಿದೇಶಗಳಲ್ಲಿ ಹೆಚ್ಚಿನ ಕ್ರೇಜ್ ಉಂಟು ಮಾಡಿರುವ ಲಿಮೊ ಕಾರುಗಳು ದೇಶದ ಕೆಲವು ಐಕಾನಿಕ್ ಕಾರುಗಳ ರೂಪವನ್ನು ಪಡೆದುಕೊಂಡಿದ್ದಲ್ಲಿ ಹೇಗಿರಬಹುದು ಎಂಬುದಕ್ಕೆ ಇಲ್ಲಿ ಉತ್ತರವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಹಿಂದೂಸ್ತಾನ್ ಅಂಬಾಸಿಡರ್ ಲಿಮೊ

ಹಿಂದೂಸ್ತಾನ್ ಅಂಬಾಸಿಡರ್ ಲಿಮೊ

ಭಾರತೀಯ ರಸ್ತೆಗಳ ರಾಜ ಅಂಬಾಸಿಡರ್ ನಿರ್ಮಾಣ ನಿಂತು ಹೋಗಿರಬಹುದು. ಹಾಗಿದ್ದರೂ ಟ್ಯಾಕ್ಸಿ ವಿಭಾಗದಲ್ಲೂ ಈಗಲೂ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಗುಣಮಟ್ಟತೆ, ನಿರ್ವಹಣೆ, ಅನುಕೂಲತೆ, ಆರಾಮದಾಯಕ ಹಾಗೂ ರಸ್ತೆ ಸಾನಿಧ್ಯಗಳ ವಿಚಾರದಲ್ಲಿ ನಿಜಕ್ಕೂ ಐಕಾನಿಕ್ ಎನಿಸಿಕೊಂಡಿರುವ ಅಂಬಾಸಿಡರ್ ಲಿಮೊ ಸ್ವರೂಪ ಪಡೆದುಕೊಂಡಲ್ಲಿ ಬಹುಶ: ಈ ರೀತಿಯಾಗಿ ಕಾಣಿಸಬಹುದಿತ್ತೆನೋ?

 ಹಿಂದೂಸ್ತಾನ್ ಅಂಬಾಸಿಡರ್ ಲಿಮೊ

ಹಿಂದೂಸ್ತಾನ್ ಅಂಬಾಸಿಡರ್ ಲಿಮೊ

ಮೊದಲೇ ಆರಮದಾಯಕವಾಗಿರುವ ಅಂಬಾಸಿಡರ್ ಸೋಫಾ ಶೈಲಿಯ ಆಸನಗಳು ಪ್ರಯಾಣಿಕರಿಗೆ ಹೆಚ್ಚಿನ ಆರಾಮದಾಯಕತೆ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಆಧುನಿಕ ಕಾರುಗಳ ಆಗಮನದೊಂದಿಗೆ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿದ್ದ ಅಂಬಾಸಿಡರ್ ಕಾರುಗಳ ನಿರ್ಮಾಣ ಸ್ಥಗಿತಗೊಂಡಿತ್ತು.

ಮಹೀಂದ್ರ ಸ್ಕಾರ್ಪಿಯೊ ಎಸ್‌ಯುವಿ

ಮಹೀಂದ್ರ ಸ್ಕಾರ್ಪಿಯೊ ಎಸ್‌ಯುವಿ

ಆಧುನಿಕ ಕ್ರೀಡಾ ಬಳಕೆಯ ವಾಹನಗಳಲ್ಲಿ ಸ್ಕಾರ್ಪಿಯೊ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಜೀಪ್ ಶೈಲಿಯ ಸ್ಕಾರ್ಪಿಯೊ ಭಾರತೀಯ ರಸ್ತೆಗೆ ಹೆಚ್ಚು ಹೊಂದಿಕೆಯಾಗಿರುವುದೇ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಿತ್ತು.

ಮಹೀಂದ್ರ ಸ್ಕಾರ್ಪಿಯೊ ಲಿಮೊ

ಮಹೀಂದ್ರ ಸ್ಕಾರ್ಪಿಯೊ ಲಿಮೊ

ಹಾಗೊಂದು ವೇಳೆ ಸ್ಕಾರ್ಪಿಯೊ ಲಿಮೊ ಶೈಲಿಯನ್ನು ಪಡೆದ್ದಲ್ಲಿ ಭಾರತದ ಹಮ್ಮರ್ ಎಂದೇ ಗುರುತಿಸಿಕೊಳ್ಳುವಲ್ಲಿ ನೆರವಾಗುತ್ತಿತ್ತು. ಆದರೆ ಲಿಮೊ ಕಾರುಗಳಿಗೆ ದೇಶದಲ್ಲಿ ಬೇಡಿಕೆಯಿದೆಯೇ ಎಂಬುದು ಗಮನಾರ್ಹವೆನಿಸುತ್ತದೆ.

ಹಿಂದೂಸ್ತಾನ್ ಕಾಂಟೆಸ್ಸಾ ಲಿಮೊ

ಹಿಂದೂಸ್ತಾನ್ ಕಾಂಟೆಸ್ಸಾ ಲಿಮೊ

1983ರಲ್ಲಿ ಎಂಟ್ರಿ ಕೊಟ್ಟಾಗ ದೇಶದ ಮೊದಲ ಐಷಾರಾಮಿ ಕಾರೆಂಬ ಬಿರುದಿಗೆ ಪಾತ್ರವಾಗಿರುವ ಕಾಂಟೆಸ್ಸಾ ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಉದ್ದವಾದ ಬಂಪರ್ ವಿನ್ಯಾಸ ಈ ಕಾರನ್ನು ವಿಶಿಷ್ಟವಾಗಿ ಗುರುತಿಸುವಂತೆ ಮಾಡುತ್ತಿದೆ.

ಹಿಂದೂಸ್ತಾನ್ ಕಾಂಟೆಸ್ಸಾ ಲಿಮೊ

ಹಿಂದೂಸ್ತಾನ್ ಕಾಂಟೆಸ್ಸಾ ಲಿಮೊ

ಒಂದೆಡೆ ಅಂಬಾಸಿಡರ್ ರಾಜಕಾರಣಿಗಳ ಫೇವರಿಟ್ ಎನಿಸಿಕೊಂಡಿದ್ದಲ್ಲಿ ಕಾಂಟೆಸ್ಸಾ ಉದ್ಯಮಿ ವಿಭಾಗದವರ ನೆಚ್ಚಿನ ಕಾರೆನಿಸಿಕೊಂಡಿತ್ತು. ಆದರೆ ಸ್ಪರ್ಧಾತ್ಮಕ ಮಾರುಕಟ್ಟೆಯ ಬೆಳವಣಿಗೆಯೊಂದಿಗೆ 2002ರಲ್ಲಿ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು.

ಟೊಯೊಟಾ ಇನ್ನೋವಾ ಲಿಮೊ

ಟೊಯೊಟಾ ಇನ್ನೋವಾ ಲಿಮೊ

ಪ್ರೀಮಿಯಂ ಬಹು ಬಳಕೆಯ ವಾಹನಗಳ ವಿಭಾಗದಲ್ಲಿ ಇನ್ನೋವಾ ಅತಿ ಹೆಚ್ಚಿನ ಮಾರಾಟವನ್ನು ಕಾಯ್ದುಕೊಂಡಿದೆ. ಜಪಾನ್ ಮೂಲದ ಟೊಯೊಟಾ ಸಂಸ್ಥೆಯಿಂದ ದೇಶದಲ್ಲಿ ಬಿಡುಗಡೆಗೊಂಡಿರುವ ಅತ್ಯುತ್ತಮ ಕಾರುಗಳಲ್ಲಿ ಇದೂ ಒಂದಾಗಿದೆ.

 ಟೊಯೊಟಾ ಇನ್ನೋವಾ ಲಿಮೊ

ಟೊಯೊಟಾ ಇನ್ನೋವಾ ಲಿಮೊ

ಗ್ರಾಹಕರಿಗೆ ಟೊಯೊಟಾ ಇನ್ನೋವಾ ಲಿಮೊಸಿನ್ ಕಾರಿನಲ್ಲಿ ತಮಗಿಷ್ಟವಾದ ಮಾರ್ಪಾಡುಗಳನ್ನು ತರಲಾಗಿದೆ. ಈ ಮೂಲಕ ನಿಮ್ಮ ಹೈ ಕ್ಲಾಸ್ ಬ್ಯುಸಿನೆಸ್ ಪಯಣವನ್ನು ಮತ್ತಷ್ಟು ಶ್ರೀಮಂತವಾಗಿಸಬಹುದಾಗಿದೆ.

ಮತ್ತಷ್ಟು

ಎಂದಿಗೂ ಮರೆಯಲಾಗದ ದೇಶದ 9 ಜನಪ್ರಿಯ ಕಾರುಗಳು

Most Read Articles

Kannada
English summary
Indian cars modified into limousines
Story first published: Tuesday, August 25, 2015, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X