ಮೈಮೇಲೆ ಹರಿದ ಕಾರು; 3ರ ಬಾಲಕಿ ಪವಾಡ ಸದೃಶ ಪಾರು

By Nagaraja

ಇದೇನು ಪವಾಡವೋ ಅಥವಾ ದೈವ ಮಾಯೆವೋ ಎಂಬುದನ್ನು ಸರ್ವಶಕ್ತನೇ ಬಲ್ಲ. ಅತಿ ವಿರಳಗಳಲ್ಲಿ ವಿರಳ ಅಪಘಾತ ಪ್ರಸಂಗವೊಂದರಲ್ಲಿ ಮೈಮೇಲೆ ಕಾರು ಹರಿದರೂ ಮೂರರ ಹರೆಯದ ಬಾಲಕಿ ಪವಾಡ ಸದೃಶ ಪಾರಾಗಿರುವ ಘಟನೆ ನಾಶಿಕ್ ನಿಂದ ವರದಿಯಾಗಿದೆ.

ಗುರುವಾರ ಈ ಘಟನೆ ನಡೆದಿದ್ದು, ಬಾಲಕಿಯ ಮೈಮೇಲೆ ಕಾರು ಎರಡೆರಡು ಬಾರಿ ಹರಿದಿತ್ತು. ಆದರೆ ಯಾವುದೇ ರೀತಿಯ ಗಾಯಗಳಿಲ್ಲದೆ ಪಾರಾಗಿರುವುದು ನೆರೆದಿದ್ದ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.

ಘಟನೆ ಹಿನ್ನೆಲೆ...
ನಾಶಿಕ್ ನ ಸಮೀಪದ ಜಂಕ್ಷನ್ ವೊಂದರಲ್ಲಿ ಮೂರರ ಹರೆಯದ ಬಾಲಕಿ ಜೋಯಾ ಮುಖದ್ದರ್ ಖಾನ್ ನಡು ರಸ್ತೆಗೆ ಪ್ರವೇಶಿಸಿದ್ದನ್ನು ಅರಿಯದ ಕಾರು ಚಾಲಕ ನೇರವಾಗಿ ಮೈಮೇಲೆ ಚಲಾಯಿಸುತ್ತಾನೆ. ಮೊದಲು ಮುಂಭಾಗ ಬಳಿಕ ಹಿಂಭಾಗದ ಚಕ್ರಗಳು ಬಾಲಕಿಯ ಮೈಮೇಲೆ ಹರಿಯುತ್ತದೆ. ಆದರೆ ದೇವರ ಕೃಪೆಯಿಂದ ಯಾವುದೇ ಗಾಯಗಳಿಲ್ಲದೆ ಪಾರಾಗುತ್ತಾಳೆ.

ಇಲ್ಲಿ ನಡು ರಸ್ತೆಯಲ್ಲಿ ಬಾಲಕಿಯನ್ನು ನಡೆಯ ಬಿಟ್ಟಿರುವ ಹೆತ್ತವರೇ ದೋಷಿಗಳಾಗುತ್ತಾರೆ. ಬಳಿಕ ಮಹಿಳೆಯೊಬ್ಬಾಕೆ (ಅಮ್ಮ ಆಗಿರಲೂಬಹುದು) ಬಂದು ಬಾಲಕಿಯನ್ನು ತಬ್ಬಿಕೊಳ್ಳುತ್ತಾರೆ. ಈ ಎಲ್ಲ ರೋಚಕ ದೃಶ್ಯಗಳಿಗಾಗಿ ಕೆಳಗಡೆ ಕೊಟ್ಟಿರುವ ಯೂಟ್ಯೂಬ್ ವೀಡಿಯೋ ವೀಕ್ಷಿಸಿ. ನಮ್ಮೆಲ್ಲ ಕಾರು, ಬೈಕ್ ಸುದ್ದಿಗಳಿಗಾಗಿ ಕನ್ನಡ ಡ್ರೈವ್ ಸ್ಪಾರ್ಕ್ ಫೇಸ್ ಬುಕ್ ಪುಟಕ್ಕೊಂಡು ಲೈಕ್ ಒತ್ತಿರಿ.

ಮೈಮೇಲೆ ಹರಿದ ಕಾರು; 3ರ ಬಾಲಕಿ ಪವಾಡ ಸದೃಶ ಪಾರು - ವೀಡಿಯೋ ವೀಕ್ಷಿಸಿ


More from DriveSpark

Article Published On: Friday, July 10, 2015, 16:11 [IST]
English summary
3-year-old Zoya Muqaddar Khan from Nashik escaped miraculously unhurt after a car ran over her while she was attempting to cross the street, on Thursday.
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+