ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಲಂಚವೆಂಬುದು ಭಾರತದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಮನೆ ಮಾಡಿದೆ. ಲಂಚವಿಲ್ಲದೇ ಕೆಲಸವೇ ಆಗದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಜನರೂ ಸಹ ಈ ಮನಸ್ಥಿತಿಗೆ ಒಗ್ಗಿ ಕೊಂಡಿದ್ದಾರೆ. ಲಂಚವೆನ್ನುವುದು ಸಮಾಜಕ್ಕೆ ಕ್ಯಾನ್ಸರ್‍‍ನಂತೆ ಮಾರಕವಾಗಿದೆ.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಕಳೆದ ವರ್ಷ ಟ್ರಾನ್ಸ್ ಪೆರೆನ್ಸಿ ಇಂಟರ್‍‍ನ್ಯಾಷನಲ್ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಭ್ರಷ್ಟಾಚಾರದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಬೇರೆ ಎಲ್ಲಾ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರವಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಸಾಮಾನ್ಯವಾಗಿ ವಾಹನಗಳ ತಪಾಸಣೆ ನಡೆಸುವ ಪೊಲೀಸರು, ರಸ್ತೆ ಬದಿಯಲ್ಲಿ ನಿಂತಿರುತ್ತಾರೆ. ಪೊಲೀಸರನ್ನು ಕಂಡೊಡನೆ ನಿಯಮ ಉಲ್ಲಂಘಿಸುವ ವಾಹನ ಸವಾರರು ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಎಲ್ಲಾ ದಾಖಲೆಗಳಿದ್ದರೂ ಪೊಲೀಸರು ದಂಡ ವಿಧಿಸುತ್ತಾರೆ ಎಂಬುದು ಪೊಲೀಸರ ಮೇಲಿರುವ ಆರೋಪ. ಇದರ ಜೊತೆಗೆ ದೇಶವನ್ನೇ ತಲ್ಲಣಗೊಳಿಸುವ ಘಟನೆಯೊಂದು ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಈ ಘಟನೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗೆ ಸರಿಯಾದ ಶಿಕ್ಷೆಯನ್ನು ನೀಡಲಾಗಿದೆ. ಅರ್ಜುನ್ ರಾಜ್‍‍ರವರು ತಿರುಪುರದ ಕುಲಿಪಾಳಂ ನಿವಾಸಿಯಾಗಿದ್ದಾರೆ. ಇವರು ತಮ್ಮ ಆಟೋದಲ್ಲಿ ಪ್ಲಾಸ್ಟಿಕ್ ಡ್ರಮ್ ಹಾಗೂ ಸ್ಟೀಲ್ ಬಾರ್‍‍ಗಳನ್ನು ಸಾಗಿಸುತ್ತಾರೆ.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಎಂದಿನಂತೆ ತಮ್ಮ ಆಟೋದಲ್ಲಿ ಸಾಗುತ್ತಿರುವಾಗ ಉಟ್ಟುಕ್ಕುಳಿ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದರು. ತಪಾಸಣೆ ವೇಳೆಯಲ್ಲಿ ಅರ್ಜುನ್ ರಾಜ್‍‍ರವರ ಆಟೋವನ್ನು ತಡೆದಿದ್ದಾರೆ. ಪೊಲೀಸರು ತಡೆದು ನಿಲ್ಲಿಸಿದ ಸಮಯದಲ್ಲಿ ಅರ್ಜುನ್ ರಾಜ್‍‍ರವರು ಆಟೋಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತಮ್ಮೊಂದಿಗೆ ಹೊಂದಿದ್ದರು.

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಆದರೂ ಸಹ ಅಲ್ಲಿದ್ದ ಎಸ್‍ಐ ರಾಜಮೂರ್ತಿ, ಆಟೋವನ್ನು ಅಲ್ಲಿಂದ ಬಿಡಬೇಕಾದರೆ ರೂ.200 ನೀಡಬೇಕೆಂದು ಕೇಳಿದ್ದಾರೆ. ತಾವು ಎಲ್ಲಾ ದಾಖಲೆ ಹೊಂದಿರುವ ಕಾರಣ ಯಾವುದೇ ಹಣವನ್ನು ನೀಡುವುದಿಲ್ಲವೆಂದು ಅರ್ಜುನ್ ರಾಜ್ ತಿಳಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಇದರಿಂದ ಕುಪಿತಗೊಂಡ ಎಸ್‍ಐ ಆಟೋ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮ್ಮದು ಯಾವುದೇ ತಪ್ಪಿಲ್ಲದಿದ್ದರೂ ಎಸ್‍ಐ ನಿಂದಿಸಿದ ಕಾರಣಕ್ಕೆ ಮನನೊಂದ ಅರ್ಜುನ್ ರಾಜ್ ಆಟೋದಲ್ಲಿದ್ದ ಡೀಸೆಲ್ ಅನ್ನು ಹೊರ ತೆಗೆದು ಆಟೋಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ತಕ್ಷಣವೇ ಅಲ್ಲಿದ್ದ ಸ್ಥಳೀಯರು ಆಟೋ ಚಾಲಕ ಅರ್ಜುನ್ ರಾಜ್‍‍ರವರನ್ನು ಸಮಾಧಾನಪಡಿಸಿದ್ದಾರೆ. ನಂತರ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಚಾಲಕನ ಬೆಂಬಲಕ್ಕೆ ನಿಂತು ರಸ್ತೆ ತಡೆ ನಡೆಸಿದ್ದಾರೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಲಂಚಕ್ಕೆ ಒತ್ತಾಯಿಸಿ ಸಸ್ಪೆಂಡ್ ಆದ ಪೊಲೀಸಪ್ಪ..!

ಈ ಘಟನೆಯು ಕಾಡ್ಗಿಚ್ಚಿನಂತೆ ಹರಡಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‍‍ಪಿರವರ್ಯ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಇದರ ಜೊತೆಗೆ ಈ ಘಟನೆಗೆ ಕಾರಣರಾದ ಎಸ್‍ಐರವರನ್ನು ಅಮಾನತುಗೊಳಿಸಿದ್ದಾರೆ.

Most Read Articles

Kannada
English summary
SI suspended for forcing bribe - Read in Kannada
Story first published: Wednesday, December 18, 2019, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X