ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಮಾಡೆಲ್ ಕಾರುಗಳನ್ನು ಖರೀದಿಸುವುದು ಸಿನಿಮಾ ನಟರಿಗೆ ಒಂದು ಕ್ರೇಜ್ ಆಗಿದೆ. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದ್ವಿಗುಣವಾಗಿ ಏರಿಕೆಯಾಗಿದೆ. ಸೆಲಬ್ರಿಟಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ 'ಪ್ರಿನ್ಸ್‌' ಮಹೇಶ್ ಬಾಬು ಅವರು ಹೊಸ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಮಹೇಶ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ. ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಮಹೇಶ್ ಬಾಬು ಪ್ರಸಿದ್ಧರಾಗಿದ್ದಾರೆ. ಮುರಾರಿ, ಪೋಕರಿ, ಸ್ಪೈಡರ್, ದೂಕುಡು, ಶ್ರೀಮಂತುಡು, ಭರತ ಅನೇ ನೇನು, ಮಹರ್ಷಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತೆಲುಗು ಚಿತ್ರರಂಗದಲ್ಲೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಈ ನಟ ಮಹೇಶ್ ಬಾಬು ಅವರಿಗೆ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಅವರು ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿತರಿಸುತ್ತಿರುವ ನಟನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಮಹೇಶ್ ಬಾಬು ಅವರ ಆಡಿ ಇ-ಟ್ರಾನ್ ಎಸ್‌ಯುವಿ ಹಲವಾರು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಕಾರಿನ ವಿಶೇಷತೆ ಏನೆಂದರೆ, ಆಡಿನ ದೇಶದ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಹೊಸ ಇ-ಟ್ರಾನ್ ಎಸ್‍ಯುವಿಯು ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಆರಂಭಿಕ ಮಾದರಿಯಲ್ಲಿ ಆಡಿ ಕಂಪನಿಯು 71 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಇದು 308 ಬಿಹೆಚ್‌ಪಿ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 380 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಈ ಎಲೆಕ್ಟ್ರಿಕ್ ಎಸ್‍ಯುವಿಯ ಮಧ್ಯಮ ಆವೃತ್ತಿ ಮತ್ತು ಹೈ ಎಂಡ್ ಮಾದರಿಯಾದ 55 ಮತ್ತು 55 ಸ್ಪೋರ್ಟ್‌ಬ್ಯಾಕ್‌ನಲ್ಲಿ ಆಡಿ ಕಂಪನಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಇದು 402 ಬಿಹೆಚ್‌ಪಿ ಹಾಗೂ 664 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಎಲೆಕ್ಟ್ರಿಕ್ ಎಸ್‍ಯುವಿಯ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 11kW ಎಸಿ ಹೋಂ ಚಾರ್ಜರ್ ಮೂಲಕ ಕನಿಷ್ಠ ಎಂಟೂವರೆ ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, 150kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಆಡಿ ಕಂಪನಿಯು ಸದ್ಯ ತನ್ನ ಡೀಲರ್ಸ್ ಯಾರ್ಡ್‌ಗಳಲ್ಲಿಯೇ 50kW ಸಾಮರ್ಥ್ಯದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದು.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯ ಡಿಸೈನ್, ಫೀಚರ್ಸ್‌ಗಳು ಮತ್ತು ಟೆಕ್ನಾಲಜಿ ಬಗೆಗೆ ಹೇಳುವುದಾದರೇ ಹೊಸ ಕಾರು ಆಕರ್ಷಕ ಹೊರ ಮತ್ತು ಒಳನೋಟದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಹೊಸ ಕಾರಿನ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಆನಿಮೆಟೆಡ್ ಪ್ರೊಜೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್, 20-ಇಂಚಿನ ಅಲಾಯ್ ವ್ಹೀಲ್‌ಗಳು ಮತ್ತು ಕಾರಿನ ಎರಡು ಬದಿಗಳಲ್ಲೂ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗವು ಕೂಡಾ ಸಾಕಷ್ಟು ಆಕರ್ಷಣೆಯಾಗಿರುವುದಲ್ಲದೆ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯ ಹೊಂದಿದ್ದು, ಟ್ವಿನ್ ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆ ಮೌಂಟೆಡ್ ಕಂಟ್ರೋಲ್, ಆಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇ, ಮೈ ಆಡಿ ಕನೆಕ್ಟ್, ವಾಯ್ಸ್ ಅಸಿಸ್ಟಂಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಹೆಡ್ಸ್ಅಪ್ ಡಿಸ್‌ಪ್ಲೇ, ಪನೊರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‍ಯುವಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಮುಖ ಸೇಫ್ಟಿ ಫೀಚರ್ಸ್‌ಗಳಾದ ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್, ಲೆನ್ ಡಿಪಾರ್ಚರ್ ವಾರ್ನಿಂಗ್, ಪಾರ್ಕ್ ಅಸಿಸ್ಟ್ ಫಂಕ್ಷನ್, 8 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್‌ಗಳಿವೆ. ಇ-ಟ್ರಾನ್ ಕಾರಿನ ಮೇಲೆ ಆಡಿ ಕಂಪನಿಯು ಎರಡು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರಂಟಿಯನ್ನು ಘೋಷಿಸಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ವಾರಂಟಿ ನೀಡುತ್ತಿದೆ.

ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ ನಟ ಮಹೇಶ್ ಬಾಬು

ಇದರೊಂದಿಗೆ ಬ್ಯಾಟರಿ ಪ್ಯಾಕ್ ಮೇಲೆ ಗ್ರಾಹಕರ ಹೆಚ್ಚುವರಿ ಮೊತ್ತ ಪಾವತಿಸಿದ್ದಲ್ಲಿ ವಾರಂಟಿ ಅವಧಿಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡುವ ಅವಕಾಶಗಳಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿಗಾಗಿ 5 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಸೌಲಭ್ಯ ನೀಡುತ್ತಿದೆ.

Article Published On: Saturday, April 16, 2022, 19:02 [IST]
English summary
Tollywood actor mahesh babu takes delivery of new audi e tron details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+