ವೇಗದೂತ ಕಾರುಗಳನ್ನೇ ಹಿಂದಿಕ್ಕಿದ ಎಲೆಕ್ಟ್ರಿಕ್ ಕಾರುಗಳು

By Nagaraja

ಇಂಧನ ಚಾಲಿತ ವಾಹನಗಳು ಅತಿ ಹೆಚ್ಚು ವೇಗವನ್ನು ಹೊಂದಿರುತ್ತದೆ. ಆದರೆ ಭವಿಷ್ಯದ ವಾಹನಗಳೆಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನಗಳು ಇಂತಹ ವೇಗದೂತ ಕಾರುಗಳನ್ನೇ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದೆ ಅಂದರೆ ನಂಬಲು ಸಾಧ್ಯವೇ?

ಇವನ್ನೂ ಓದಿ: ಅಗ್ರ 10 ಕನ್ವರ್ಟಿಬಲ್ ಕಾರುಗಳು

ಹೌದು, ವಿಶ್ವದ ಇಂಧನ ಶೇಖರಣೆ ಮುಂದಿನ 53ರಷ್ಟು ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಹಾಗಿರುವಾಗ ವಾಹನೋದ್ಯಮ ಬದಲಿ ವ್ಯವಸ್ಥೆ ಕಂಡುಹುಡುಕುವ ನಿರಂತರ ಅಧ್ಯಯನದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಪಾತ್ರ ಬಹಳ ನಿರ್ಣಾಯಕವೆನಿಸಿದೆ.

ವೇಗದೂತ ಕಾರುಗಳನ್ನೇ ಹಿಂದಿಕ್ಕಿದ ಎಲೆಕ್ಟ್ರಿಕ್ ಕಾರುಗಳು

ಇಂದಿನ ಈ ಲೇಖನದಲ್ಲಿ ವಿಶ್ವದ ಅತಿ ವೇಗದ ಟಾಪ್ 10 ಎಲೆಕ್ಟ್ರಿಕ್ ಕಾರುಗಳನ್ನು ಬಗ್ಗೆ ಚರ್ಚಿಸಲಿದ್ದೇವೆ.

10. ಟೆಸ್ಲಾ ರೋಡ್‌ಸ್ಟರ್ ಸ್ಪೋರ್ಟ್

10. ಟೆಸ್ಲಾ ರೋಡ್‌ಸ್ಟರ್ ಸ್ಪೋರ್ಟ್

ಜಗತ್ತಿನ ಮುಂಚೂಣಿಯ ವಿದ್ಯುತ್ ಚಾಲಿತ ವಾಹನಗಳ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟೆಸ್ಲಾ, ಎಲೆಕ್ಟ್ರಿಕ್ ಸೂಪರ್ ಸ್ಪೋರ್ಟ್ ಕಾರು ತಯಾರಿಸುವುದರಲ್ಲಿ ನಿಸ್ಸೀಮವಾಗಿದೆ. ಇದರಂತೆ 2008ರಲ್ಲಿ ಪರಿಚಯವಾಗಿರುವ ಟೆಸ್ಲಾ ರೋಡ್‌ಸ್ಟರ್ ಸ್ಪೋರ್ಟ್ ಮಾದರಿಯು ಲಿಥಿಯಂ ಇಯಾನ್ ಬ್ಯಾಟರಿ ನಿಯಂತ್ರಿತ ಮೊದಲ ಕಾರೆನಿಸಿಕೊಂಡಿದೆ.

ಪ್ರಸ್ತುತ ಕಾರು ಗಂಟೆಗೆ 200 ಮೈಲ್ (320 ಕೀ.ಮೀ.) ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಏಕ ಮಾತ್ರ ಚಾರ್ಜ್‌ನಲ್ಲಿ ದಾಖಲೆಯ 501 ಕೀ.ಮೀ. (311 ಮೈಲ್) ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಕೇವಲ 3.7 ಸೆಕೆಂಡುಗಳಲ್ಲೇ 0-60 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

09. ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

09. ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಅಮೆರಿಕ ಮೂಲದ ಮಗದೊಂದು ಎಲೆಕ್ಟ್ರಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಡೆಟ್ರಾಯ್ಟ್ ಎಲೆಕ್ಟ್ರಿಕ್‌ನಿಂದ ನಿರ್ಮಾಣಗೊಂಡಿರುವ ಆಕರ್ಷಕ ಎರಡು ಸೀಟುಗಳ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಇದಾಗಿದೆ.

ಪ್ರಸ್ತುತ ಕಾರು 3.7 ಸೆಕೆಂಡುಗಳಲ್ಲಿ ಗಂಟೆಗೆ 0-60 ಮೈಲ್ ಅಂತೆಯೇ ಗರಿಷ್ಠ ಗಂಟೆಗೆ 155 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನು ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 288 ಕೀ.ಮೀ. (180 ಮೈಲ್) ವರೆಗೂ ಸರಾಗವಾಗಿ ಚಲಿಸಬಲ್ಲದ್ದು.

08. ರೆನೊವೊ ಕೂಪೆ

08. ರೆನೊವೊ ಕೂಪೆ

2015ನೇ ಸಾಲಿನಲ್ಲಿ ಮಾರಾಟಕ್ಕಿಳಿಯಲಿರುವ ರೆನೊವೊ ಕೂಪೆ ಕಾರು ಬರೋಬ್ಬರಿ 500 ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯ ಹೊಂದಿದೆ.

ಕೇವಲ 30 ನಿಮಿಷಗಳಲ್ಲೇ ಸಂಪೂರ್ಣ ಚಾರ್ಜ್ ಮಾಡಿಸಬಹುದಾದ ತಂತ್ರಗಾರಿಕೆ ಹೊಂದಿರುವ ಈ ಕಾರು 3.4 ಸೆಕೆಂಡುಗಳಲ್ಲೇ ಗಂಟೆಗೆ 0-60 ಮೈಲ್ ವೇಗವರ್ಧಿಸಿಕೊಳ್ಳಲಿದೆ.

07. ಟೆಸ್ಲಾ ಮಾಡೆಲ್ ಎಸ್ ಪಿ85ಡಿ

07. ಟೆಸ್ಲಾ ಮಾಡೆಲ್ ಎಸ್ ಪಿ85ಡಿ

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರುಗಳ ಪೈಕಿ ಏಳನೇ ಸ್ಥಾನದಲ್ಲಿ ಟೆಸ್ಲಾದ ಮಾಡೆಲ್ ಎಸ್ ಪಿ85ಡಿ ಗುರುತಿಸಿಕೊಂಡಿದೆ. ಎರಡು ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿರುವ ಈ ಕಾರು ಗರಿಷ್ಠ 691 ಅಶ್ವಶಕ್ತಿ ಉತ್ಪಾದಿಸುತ್ತದೆ.

3.2 ಸೆಕೆಂಡುಗಳಲ್ಲೇ 0-60 ಮೈಲ್ ವೇಗವೃದ್ಧಿಸಿಕೊಳ್ಳುವ ಟೆಸ್ಲಾ ಮಾಡೆಲ್ ಎಸ್ ಪಿ85ಡಿ, ಗಂಟೆಗೆ ಗರಿಷ್ಠ 155 ಮೈಲ್ ವೇಗದಲ್ಲಿ ಸಂಚರಿಸಲಿದೆ.

06. ಡ್ರೆಸನ್ ರೇಸಿಂಗ್ ಬಿ12/69

06. ಡ್ರೆಸನ್ ರೇಸಿಂಗ್ ಬಿ12/69

ತನ್ನದೇ ಆದ ವಿಶಿಷ್ಟ ಎಫ್1 ಶೈಲಿ ವಿನ್ಯಾಸ ಹೊಂದಿರುವ ಡ್ರೆಸನ್ ರೇಸಿಂಗ್ ಬಿ12/69 ಕಾರು 5.5 ಲೀಟರ್ ಬಯೋ ಫ್ಯೂಯಲ್ಡ್ ಎಂಜಿನ್ ಹೊಂದಿದೆ. ಇದು ಅದ್ಭುತ 850 ಅಶ್ವಶಕ್ತಿ ಉತ್ಪಾದಿಸುತ್ತದೆ.

ಕೇವಲ 3 ಸೆಕೆಂಡುಗಳಲ್ಲೇ ಗಂಟೆಗೆ 60 ಮೈಲ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕಾರು 5.1 ಸೆಕೆಂಡುಗಳಲ್ಲಿ 100 ಮೈಲ್ ಅಂತೆಯೇ ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಾಗಲಿದೆ.

 5. ಸ್ಪಾರ್ಕ್- ರೆನೊ ಎಸ್‌ಆರ್‌ಟಿ-01ಇ

5. ಸ್ಪಾರ್ಕ್- ರೆನೊ ಎಸ್‌ಆರ್‌ಟಿ-01ಇ

ಹೊಸ ಪೀಳಿಯೆ ಎಫ್ ಇ ಕಾರು ಸ್ಪಾರ್ಕ್-ರೆನೊ ಎಸ್‌ಆರ್‌ಟಿ-01ಇ ಐದನೇ ಸ್ಥಾನದದಲ್ಲಿ ಗುರುತಿಸಿಕೊಂಡಿದೆ. ಇದು ಮೂರು ಸೆಕೆಂಡುಗಳಲ್ಲೇ 0-60 ಮೈಲ್ ವೇಗವರ್ಧಿಸಲು ಸಮರ್ಥವಾಗಿದೆ.

04. ರೈಟ್ ಸ್ಪೀಡ್ ಎಕ್ಸ್1

04. ರೈಟ್ ಸ್ಪೀಡ್ ಎಕ್ಸ್1

ಒಂದು ಗರಿಷ್ಠ ನಿರ್ಮಾಣ ಕಾರನ್ನು ಹೇಗೆ ನಿರ್ಮಿಸಬಹುದು ಎಂಬುದಕ್ಕೆ ರೈಟ್ ಸ್ಪೀಡ್ ಎಕ್ಸ್1 ಉತ್ತಮ ಉದಾಹರಣೆಯಾಗಿದೆ. ಇದುವರೆಗೆ ನಿರ್ಮಾಣ ಹಂತವನ್ನು ತಲುಪದ ರೈಡ್ ಸ್ಪೀಡ್ ಎಕ್ಸ್1 ಕಾರು 2.9 ಸೆಕೆಂಡುಗಳಲ್ಲೇ ಗಂಟೆಗೆ 60 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

03. ರಿಮ್ಯಾಕ್ ಕಾನ್ಸೆಪ್ಟ್ ಒನ್

03. ರಿಮ್ಯಾಕ್ ಕಾನ್ಸೆಪ್ಟ್ ಒನ್

ವಿದ್ಯುತ್ ಚಾಲಿತ ಎರಡು ಸೀಟುಗಳ ಕ್ರೀಡಾ ಕಾರಾಗಿರುವ ರಿಮ್ಯಾಕ್ ಕಾನ್ಸ್ಟೆಪ್ ಒನ್ ಭರ್ಜರಿ 1088 ಅಶ್ವಶಕ್ತಿ (1600 ಎನ್‍‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಲ್ಲದೆ 2.8 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗವರ್ಧಿಸಿಕೊಳ್ಳುತ್ತದೆ. ಅಂತೆಯೇ ಗಂಟೆಗೆ ಗರಿಷ್ಠ 305 ಕೀ.ಮೀ. ವೇಗದಲ್ಲಿ ಚಲಿಸಲಿದೆ.

02. ಪ್ಲಾಸ್ಮಾಬಾಯ್ ರೇಸಿಂಗ್ ವೈಟ್ ಝೋಂಬಿ

02. ಪ್ಲಾಸ್ಮಾಬಾಯ್ ರೇಸಿಂಗ್ ವೈಟ್ ಝೋಂಬಿ

ಜಗತ್ತಿನ ಅತ್ಯಂತ ವೇಗದ ವಿದ್ಯುತ್ ಚಾಲಿಕ ಕಾರುಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಪ್ಲಾಸ್ಮಾಬಾಯ್ ರೇಸಿಂಗ್ ವೈಟ್ ಝೋಂಬಿ ಗುರುತಿಸಿಕೊಂಡಿದೆ. ಒಂದು ಲಕ್ಷ ಅಮೆರಿಕನ್ ಡಾಲರ್‌ಗಿಂತಲೂ ದುಬಾರಿಯಾಗಿರುವ ಈ ಎಲೆಕ್ಟ್ರಿಕ್ ಕಾರು 1.8 ಸೆಕೆಂಡುಗಳಲ್ಲೇ ಗಂಟೆಗೆ 0-60 ಮೈಲ್ ವೇಗವರ್ಧಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

01. ದಿ ಗ್ರಿಮ್ಸೆಲ್

01. ದಿ ಗ್ರಿಮ್ಸೆಲ್

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಕಾರು ಎಂಬ ಹಿರಿಮೆಗೆ ದಿ ಗ್ರಿಮ್ಸೆಲ್ ಪಾತ್ರವಾಗಿದೆ. ಸ್ವಿಜರ್ಲೆಂಡ್ ವಿದ್ಯಾರ್ಥಿಗಳಿಂದ ನಿರ್ಮಾಣಗೊಂಡಿರುವ ಈ ಕಾರು 200 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 1.7 ಸೆಕೆಂಡುಗಳಲ್ಲಿ ಗಂಟೆಗೆ 60 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Tuesday, December 2, 2014, 11:59 [IST]
English summary
In our list, we take a look at top 10 fastest electric cars in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+