ಅತಿ ಹೆಚ್ಚು ನಿರ್ಮಿಸಿದ 10 ಯುದ್ಧ ವಿಮಾನಗಳು

By Nagaraja

ಯುದ್ದ ಸಮಯದಲ್ಲಿ ಶತ್ರು ನೆಲೆಯ ಮೇಲೆ ಆಕ್ರಮಣ ಮಾಡಲು, ಯುದ್ಧ ಸಾಮಾಗ್ರಿಗಳನ್ನು ಹೊತ್ತೊಯ್ಯಲು, ಕ್ಷಿಪ್ರ ಕಾರ್ಯಾಚರಣೆ ಮುಂತಾದ ಅಗತ್ಯಗಳಿಗಾಗಿ ಯುದ್ಧ ವಿಮಾನಗಳನ್ನು ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ರಾಷ್ಟ್ರಗಳ ಆಂತರಿಕ ಭದ್ರತೆಯನ್ನು ಖಾತ್ರಿಪಡಿಸುವುದರಲ್ಲಿ ಯುದ್ಧ ವಿಮಾನಗಳ ಪಾತ್ರ ಮಹತ್ತರವಾಗಿದೆ.

ಈಗಲೂ ಅಸ್ತಿತ್ವದಲ್ಲಿರುವ 28 ಐತಿಹಾಸಿಕ ವಿಮಾನಗಳು

ಒಂದನೇ ಹಾಗೂ ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ನಾವಿದರ ಮಹತ್ವವನ್ನು ಅರಿತುಕೊಂಡಿರುತ್ತೇವೆ. ಹಾಗೆ ನೋಡುವಾಗ ಜಗತ್ತಿನಲ್ಲಿ ಅತಿ ಹೆಚ್ಚು ನಿರ್ಮಿಸಿರುವ ಅಗ್ರ 10 ಯುದ್ಧ ವಿಮಾನಗಳು ಯಾವುದೆಂಬುದು ಗೊತ್ತೇ? ಬನ್ನಿ ಈ ಬಗ್ಗೆ ಮೆಲುಕು ಹಾಕೋಣವೇ...

10. ಹಾಕರ್ ಹ್ಯುರಕನ್ - 14.533 ಯುನಿಟ್

10. ಹಾಕರ್ ಹ್ಯುರಕನ್ - 14.533 ಯುನಿಟ್

ಬ್ರಿಟನ್ ನ ಸಿಂಗಲ್ ಸೀಟು ಹಾಕರ್ ಹ್ಯುರಕನ್ (Hawker Hurricane)ಯುದ್ಧ ವಿಮಾನವನ್ನು ರಾಯಲ್ ಏರ್ ಫೋರ್ಸ್ ಗಾಗಿ (ಆರ್ ಎಎಫ್) ಹಾಕರ್ ಏರ್ ಕ್ರಾಫ್ಟ್ ಲಿಮಿಟೆಡ್ ನಿರ್ಮಿಸಿದೆ. ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ಶತ್ರು ರಾಷ್ಟ್ರಗಳಿಗೆ ಅತ್ಯಂತ ಅಪಾಯಕಾರಿ ಎನಿಸಿಕೊಂಡಿರುವ ಹಾಕರ್ ಹ್ಯುರಕನ್ ಸರಿ ಸುಮಾರು 14,533 ಯುನಿಟ್ ಗಳಷ್ಟು ನಿರ್ಮಾಣವಾಗಿದ್ದು, ಶೇಕಡಾ 60ರಷ್ಟು ವಿಜಯ ಶತಮಾನವನ್ನು ಹೊಂದಿದೆ.

09. ಜಂಕರ್ಸ್ ಜು-88 - 15,000 ಯುನಿಟ್

09. ಜಂಕರ್ಸ್ ಜು-88 - 15,000 ಯುನಿಟ್

ಜರ್ಮನಿಯ ಬಹು ಪಾತ್ರಧಾರಿ ಯುದ್ಧ ವಿಮಾನವಾಗಿರುವ ಜಂಕರ್ಸ್ ಜು 88 (Junkers Ju 88), ಎರಡನೇ ಮಹಾಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಈ ಟ್ವಿನ್ ಎಂಜಿನ್ ಯುದ್ಧ ವಿಮಾನವನ್ನು ಜಂಕರ್ಸ್ ಫ್ಲಗ್ ಜುಯೆಗ್ ಮೋಟಾರ್ ವೆರ್ಕ್ (Junkers Flugzeug- und Motorenwerke ) ವಿನ್ಯಾಸಗೊಳಿಸಿದೆ. ಶಕ್ತಿಶಾಲಿ ಲುಫ್ಟ್ ವಾಫ್ ಬಾಂಬ್ ದಾಳಿ ನಡೆಸುವಲ್ಲಿ ಇದು ನಿಸ್ಸೀಮವೆನಿಸಿದೆ.

08. ನಾರ್ತ್ ಅಮೆರಿಕನ್ ಪಿ-51 ಮಸ್ಟಾಂಗ್ - 15,875 ಯುನಿಟ್

08. ನಾರ್ತ್ ಅಮೆರಿಕನ್ ಪಿ-51 ಮಸ್ಟಾಂಗ್ - 15,875 ಯುನಿಟ್

ಉತ್ತರ ಅಮೆರಿಕದ ಅತ್ಯಂತ ದೂರಗಾಮಿ, ಸಿಂಗಲ ಸೀಟ್ ನಾರ್ತ್ ಅಮೆರಿಕನ್ ಪಿ-51 ಮಸ್ಟಾಂಗ್ (North American P-51 Mustang) ಯುದ್ಧ ವಿಮಾನವನ್ನು ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಬಾಂಬ್ ದಾಳಿಗಾಗಿ ಬಳಕೆ ಮಾಡಲಾಗಿತ್ತು. ನಾರ್ತ್ ಅಮೆರಿಕನ್ ಎವಿಗೇಷನ್ (ಎನ್ ಎಎ) ಇದನ್ನು ನಿರ್ಮಿಸಿದೆ.

07. ರಿಪಬ್ಲಿಕ್ ಪಿ-47 ಥಂಡರ್ ಬೋಲ್ಟ್ - 16,231 ಯುನಿಟ್

07. ರಿಪಬ್ಲಿಕ್ ಪಿ-47 ಥಂಡರ್ ಬೋಲ್ಟ್ - 16,231 ಯುನಿಟ್

ಜಗತ್ತಿನ ಅತಿ ದೊಡ್ಡ ಹಾಗೂ ಅತಿ ಉದ್ದದ ಯುದ್ಧ ವಿಮಾನಗಳಲ್ಲಿ ರಿಪಬ್ಲಿಕ್ ಪಿ-47 ಥಂಡರ್ ಬೋಲ್ಟ್ (Republic P-47 Thunderbolt ) ಒಂದಾಗಿದೆ. ಇದು ಸಿಂಗಲ್ ಪಿಸ್ತಾನ್ ಎಂಜಿನ್ ನಿಂದ ನಿಯಂತ್ರಿಸಲ್ಪಟ್ಟಿದ್ದು, ಸಂಪೂರ್ಣ ಯುದ್ಧ ಸಾಮಾಗ್ರಿ ಭರ್ತಿ ಮಾಡಿದಾಗ ಎಂಟು ಟನ್ ಗಳಷ್ಟು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ.

06. ಕನ್ಸೋಲಿಡೇಟಡ್ ಬಿ-24 ಲಿಬರೇಟರ್ - 18,482 ಯುನಿಟ್

06. ಕನ್ಸೋಲಿಡೇಟಡ್ ಬಿ-24 ಲಿಬರೇಟರ್ - 18,482 ಯುನಿಟ್

ಅಮೆರಿಕದ ಶಕ್ತಿಶಾಲಿ ಬಾಂಬ್ ದಾಳಿ ಯುದ್ಧ ವಿಮಾನ ಕನ್ಸೋಲಿಡೇಟಡ್ ಬಿ-24 ಲಿಬರೇಟರ್ (Consolidated B-24 Liberator) ಅನ್ನು ಕನ್ಸೋಲಿಡೇಟಡ್ ಏರ್ ಕ್ರಾಫ್ಟ್ ಅಭಿವೃದ್ಧಿಗೊಳಿಸಿದೆ. ಎರಡನೇ ಮಹಾಯುದ್ಧ ಕಾಲಘಟ್ಟದ ಅಮೆರಿಕದ ಹಲವು ಮಿತ್ರ ರಾಷ್ಟ್ರಗಳು ಸಹ ಇದರ ಬಳಕೆ ಮಾಡಿದ್ದವು.

05. ಸೂಪರ್ ಮರೈನ್ ಸ್ಪಿಟ್ ಫೈರ್ - 20,351 ಯುನಿಟ್

05. ಸೂಪರ್ ಮರೈನ್ ಸ್ಪಿಟ್ ಫೈರ್ - 20,351 ಯುನಿಟ್

ಬ್ರಿಟನ್ ನ ಸಿಂಗಲ್ ಸೀಟರ್ ಸೂಪರ್ ಮರೈನ್ ಸ್ಪಿಟ್ ಫೈರ್ (Supermarine Spitfire) ಯುದ್ಧ ವಿಮಾನವನ್ನು ರಾಯಲ್ ಏರ್ ಫೋರ್ಸ್ ಗಾಗಿ ತಯಾರಿಸಲಾಗಿತ್ತು. ಅಲ್ಲದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ನ ಮಿತ್ರ ರಾಷ್ಟ್ರಗಳು ಇದರ ನೆರವನ್ನು ಪಡೆದಿದ್ದವು. ಬ್ರಿಟನ್ ನ ಹಲವು ಮ್ಯೂಸಿಯಂಗಳಲ್ಲಿ ಇದನ್ನೀಗ ಪ್ರದರ್ಶನಕ್ಕಿಡಲಾಗಿದೆ.

04. ಫೋಕ್ ವುಲ್ಫ್ ಎಫ್ ಡಬ್ಲ್ಯು 190 - 29,001 ಯುನಿಟ್

04. ಫೋಕ್ ವುಲ್ಫ್ ಎಫ್ ಡಬ್ಲ್ಯು 190 - 29,001 ಯುನಿಟ್

ಜರ್ಮನಿಯ ಸಿಂಗಲ್ ಸೀಟರ್ ಸಿಂಗಲ್ ಎಂಜಿನ್ ಯುದ್ಧ ವಿಮಾನವಾಗಿರುವ ಫೋಕ್ ವುಲ್ಫ್ ಎಫ್ ಡಬ್ಲ್ಯು 190 (Focke-Wulf Fw 190) ಅನ್ನು 1930ರ ದಶಕದಲ್ಲಿ ಕರ್ಟ್ ಟ್ಯಾಂಕ್ ವಿನ್ಯಾಗೊಳಿಸಿತ್ತಲ್ಲದೆ ಎರಡನೇ ಮಹಾಯುದ್ಧದಲ್ಲಿ ಬಳಕೆಯಾಗಿತ್ತು. ಫೈಟರ್ ಬಾಂಬರ್, ನೆಲ ದಾಳಿ, ರಾತ್ರಿ ದಾಳಿ ಮುಂತಾದ ಮಿಷನ್ ಗಳಿಗಾಗಿ ಇದನ್ನು ನೇಮಕಗೊಳಿಸಲಾಗಿತ್ತು.

 03. ಮೆಸ್ಸರ್ ಶಿಮಿಟ್ ಬಿಎಫ್ 109 - 30,480 ಯುನಿಟ್

03. ಮೆಸ್ಸರ್ ಶಿಮಿಟ್ ಬಿಎಫ್ 109 - 30,480 ಯುನಿಟ್

1930ರ ದಶಕದಲ್ಲಿ ನಿರ್ಮಾಣವಾದ ಮಗದೊಂದು ಜರ್ಮನ್ ಯುದ್ಧ ವಿಮಾನ ಇದಾಗಿದ್ದು (Messerschmitt Bf 109), ಮೆಸ್ಸರ್ ಶಿಮಿಟ್ ಮತ್ತು ರಾಬರ್ಟ್ ಲುಸ್ಸಾರ್ ಎಂಬವರು ಸೇರಿ ವಿನ್ಯಾಸಗೊಳಿಸಿದ್ದಾರೆ. ಇದು ಸಹ ಎರಡನೇ ಮಹಾಯದ್ದದ ಸಂದರ್ಭದಲ್ಲಿ ಅಮೆರಿಕ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಇದು ಮೊದಲ ನೈಜ ಆಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಮೆಟಲ್ ಮೊನೊಕಾಕ್ ನಿರ್ಮಾಣ, ಲಿಕ್ವಿಡ್ ಕೂಲ್ಡ್ ವಿ12 ಏರೋ ಎಂಜಿನ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದವು.

02. ಯಾಕೊವ್ಲೆವ್ ಯಾಕ್-3 - 31,000 ಯುನಿಟ್

02. ಯಾಕೊವ್ಲೆವ್ ಯಾಕ್-3 - 31,000 ಯುನಿಟ್

ಸೋವಿಯತ್ ಒಕ್ಕೂಟದ ಯಾಕೊವ್ಲೆವ್ ಯಾಕ್-3 (Yakovlev Yak-3) ಯುದ್ಧ ವಿಮಾನವು 31,000ಗಿಂತಲೂ ಹೆಚ್ಚು ಯುನಿಟ್ ನಿರ್ಮಾಣವಾಗಿದ್ದವು. ಇದರ ನಿರ್ವಹಣೆ ತುಂಬಾನೇ ಸುಲಭವಾಗಿದ್ದರಿಂದ ಪೈಲಟ್‌ಗಳು ಹಾಗೂ ಸಿಬ್ಬಂದಿಗಳು ಅತಿ ಹೆಚ್ಚು ನೆಚ್ಚಿಕೊಂಡಿದ್ದರು. ಇದು ಅಂದಿನ ಅತಿ ಚಿಕ್ಕ ಹಾಗೂ ಹಗುರವಾದ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

01. ಇಲ್ಯೂಶಿನ್ II-2 - 36,183

01. ಇಲ್ಯೂಶಿನ್ II-2 - 36,183

ಈಗ ಪ್ರಪಂಚದಲ್ಲಿ ಅತಿ ಹೆಚ್ಚು ನಿರ್ಮಾಣವಾದ ಯುದ್ದ ವಿಮಾನ ಯಾವುದು ಎಂಬುದಕ್ಕೆ ಉತ್ತರ ದೊರಕಿದೆ. ಅದುವೇ ಹಳೆಯ ಯುದ್ಧ ವಿಮಾನ ಇಲ್ಯೂಶಿನ್ II-2 (Ilyushin Il-2). ಸೋವಿಯತ್ ಒಕ್ಕೂಟಕ್ಕೆ ಸೇರಿರುವ ಈ ಯುದ್ಧ ವಿಮಾನವನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಸರಿ ಸುಮಾರು 36,183 ಯುನಿಟ್ ಗಳಷ್ಟು ಇದು ನಿರ್ಮಾಣವಾಗಿದ್ದು ಈಗ ಇತಿಹಾಸ ಪುಟದಲ್ಲಿ ತನ್ನ ಹೆಸರನ್ನು ಅಮರವಾಗಿಸಿದೆ.

ಇವನ್ನೂ ಓದಿ

ಇವನ್ನೂ ಓದಿ

ಪ್ರಪಂಚದ 23 ಭಯಾನಕ ವಿಮಾನ ರನ್‌ವೇಗಳು!

ವಿಶ್ವದ ಅತಿ ವೇಗದ ಯುದ್ಧ ವಿಮಾನ

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು


More from DriveSpark

Article Published On: Wednesday, May 13, 2015, 10:28 [IST]
English summary
Top 10 Most Produced Combat Aircrafts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+