ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಟೊಯೊಟಾ ಕಂಪನಿಯ ಕ್ಯಾಮ್ರಿ ವಿಶ್ವದ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದು. ಕ್ಯಾಮ್ರಿ ಪ್ರೀಮಿಯಂ ಗುಣಮಟ್ಟದ ಸೆಡಾನ್ ಕಾರು. ಅದಕ್ಕಾಗಿಯೇ ಈ ಕಾರು ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ.

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಆದರೆ ಭಾರತದಲ್ಲಿ ಈ ಕಾರು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ತಂತ್ರಜ್ಞಾನ, ಏಷ್ಯನ್ ಎನ್‌ಸಿಎಪಿ ಸಿಸ್ಟಂ 5 ಸ್ಟಾರ್ ಸುರಕ್ಷತಾ ರೇಟಿಂಗ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್'ಗಳನ್ನು ಹೊಂದಿದೆ.

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಇಷ್ಟು ಫೀಚರ್'ಗಳನ್ನು ಹೊಂದಿರುವ ಕ್ಯಾಮ್ರಿ ಕಾರು ಇತ್ತೀಚಿಗೆ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರು ಎರಡು ಭಾಗಗಳಾಗಿ ಬೇರ್ಪಟ್ಟು ಗುರುತಿಸಲಾಗದಷ್ಟು ಹಾಳಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಇಷ್ಟು ಭೀಕರ ಅಪಘಾತಕ್ಕೀಡಾಗಿರುವ ಈ ಕಾರು ಏಷ್ಯನ್ ಎನ್‌ಸಿಎಪಿ ಸಿಸ್ಟಂನಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ ಎಂಬುದು ಗಮನಾರ್ಹ. ಈ ಅಪಘಾತದ ಭೀಕರತೆಯು ಈ ಕಾರಿನ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ.

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಈ ಅಪಘಾತ ಸಂಭವಿಸಿರುವುದು ಸೌದಿ ಅರೇಬಿಯಾದಲ್ಲಿ. ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಇದರಿಂದಾಗಿಯೇ ಕಾರಿಗೆ ತೀವ್ರ ಪ್ರಮಾಣದ ಹಾನಿಯಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಕಾರು ಕಾಗದದ ರೀತಿಯಲ್ಲಿ ಎರಡು ತುಂಡಾಗಿದೆ. ಕ್ಯಾಮ್ರಿ ಈ ಅಪಘಾತ ಹೇಗೆ ಸಂಭವಿಸಿತು ಎಂಬುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಈ ಅಪಘಾತವು ವಿವಿಧ ಅನುಮಾನಗಳನ್ನು ಹುಟ್ಟುಹಾಕಿದೆ. 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಕಾರು ಈ ರೀತಿಯಲ್ಲಿ ಅಪಘಾತಕ್ಕೀಡಾಗಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ಸಾಮಾನ್ಯವಾಗಿ ಯಾವುದೇ ಕ್ರ್ಯಾಶಿಂಗ್ ಸಿಸ್ಟಂ ವಾಹನವನ್ನು ನಿರ್ದಿಷ್ಟ ವೇಗದಲ್ಲಿ ಚಾಲನೆ ಮಾಡುತ್ತದೆ. ಏಷ್ಯನ್ ಎನ್‌ಸಿಎಪಿ ಟೆಸ್ಟ್'ನಲ್ಲಿ ಕ್ಯಾಮ್ರಿ ಕಾರನ್ನು ಗಂಟೆಗೆ 65 ಕಿ.ಮೀ ವೇಗದಲ್ಲಿ ಚಾಲನೆ ಮಾಡಲಾಗಿತ್ತು.

ಈ ಟೆಸ್ಟ್'ನಲ್ಲಿ ತೋರಿದ ಸಾಮರ್ಥ್ಯದ ಆಧಾರದ ಮೇಲೆ ಕ್ಯಾಮ್ರಿ ಕಾರು 5 ಸ್ಟಾರ್ ರೇಟಿಂಗ್ ಪಡೆದಿತ್ತು. ಕಾರು ಯಾವುದೇ ರೇಟಿಂಗ್ ಪಡೆಯಲಿ, ನಿಗದಿತ ವೇಗದಲ್ಲಿ ಚಲಿಸಿದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಅಪಘಾತದಲ್ಲಿ ಎರಡು ತುಂಡುಗಳಾಗಿ ಬೇರ್ಪಟ್ಟ 5 ಸ್ಟಾರ್ ರೇಟಿಂಗ್ ಪಡೆದ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.40.59 ಲಕ್ಷಗಳಾಗಿದೆ. ಈ ಕಾರಿನಲ್ಲಿ 2.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 218 ಬಿಹೆಚ್‌ಪಿ ಪವರ್ ಹಾಗೂ 221 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Toyota Camry which got 5 star rating for safety split into two pieces. Read in Kannada.
Story first published: Monday, May 24, 2021, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X