ಊಹಿಸಲಾಸಾಧ್ಯವಾದ ಸ್ಥಳದಲ್ಲಿ ಸಲೀಸಾಗಿ ಪಾರ್ಕ್ ಆದ ಟೊಯೊಟಾ ಇನೋವಾ
ಭಾರತದ ಕಾರು ಮಾಲೀಕರಿಗೆ ಕಾರುಗಳನ್ನು ಪಾರ್ಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಕೆಲವು ನಗರಗಳಲ್ಲಿ ಪೇ ಅಂಡ್ ಪಾರ್ಕ್ ಸೌಲಭ್ಯವಿದೆ. ಇನ್ನೂ ಕೆಲವು ನಗರಗಳಲ್ಲಿ ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗುತ್ತದೆ. ರಸ್ತೆ ಬದಿ ಕಾರುಗಳನ್ನು ಪಾರ್ಕ್ ಮಾಡುವುದು ಅಪಾಯಕಾರಿ.

ಇತ್ತೀಚೆಗೆ ಟೊಯೊಟಾ ಇನೋವಾ ಕಾರನ್ನು ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕ್ ಮಾಡಿ, ಹೊರತೆಗೆಯಲಾಗಿದೆ. ಇನೋವಾ ಕಾರನ್ನು ಪಾರ್ಕ್ ಮಾಡುವ ಹಾಗೂ ಹೊರ ತೆಗೆಯುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೊದಲ ವೀಡಿಯೊದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಪಾರ್ಕ್ ಮಾಡಲಾದ ಇನೋವಾ ಕಾರನ್ನು ಹೊರತೆಗೆಯಲಾಗುತ್ತದೆ. ಮತ್ತೊಂದು ವೀಡಿಯೊದಲ್ಲಿ ಇನೋವಾ ಕಾರನ್ನು ಸಲೀಸಾಗಿ ಪಾರ್ಕ್ ಮಾಡಲಾಗುತ್ತದೆ. ಈ ವೀಡಿಯೊಗಳನ್ನು ನೋಡುವ ಜನರು ಆಶ್ಚರ್ಯಚಕಿತರಾಗುವುದು ಸುಳ್ಳಲ್ಲ.

ಈ ವೀಡಿಯೊಗಳು ಕೇರಳದಿಂದ ಹೊರ ಬಂದಿವೆ. ಇನೋವಾ ಕಾರನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ಪಾರ್ಕ್ ಮಾಡಿರುವುದನ್ನು ಕಾಣಬಹುದು. ಇನೋವಾದ ವ್ಹೀಲ್‌ಬೇಸ್‌ಗಿಂತ ಸ್ವಲ್ಪ ದೊಡ್ಡದಾದ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿದೆ. ಈ ಕಾರಿನ ಚಾಲಕ ಸುಲಭವಾಗಿ ಕಾರಿನೊಳಕ್ಕೆ ಪ್ರವೇಶಿಸಿ ಕಾರನ್ನು ಪಾರ್ಕಿಂಗ್ ಪ್ರದೇಶದಿಂದ ಹೊರತೆಗೆಯಲು ಪ್ರಯತ್ನಿಸುತ್ತಾನೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪಾರ್ಕಿಂಗ್ ಸ್ಥಳವು ಚಿಕ್ಕದಾಗಿರುವುದರ ಜೊತೆಗೆ ಎರಡೂ ಕಡೆ ದೊಡ್ಡ ಗ್ರಿಲ್ ಗಳಿವೆ. ಈ ಗ್ರಿಲ್ ಗಳು ಪಾರ್ಕಿಂಗ್ ಮಾಡುವುದನ್ನು ಹಾಗೂ ಪಾರ್ಕಿಂಗ್ ಮಾಡಿರುವ ಕಾರುಗಳನ್ನು ಹೊರತೆಗೆಯುವುದನ್ನು ಕಷ್ಟಕರವಾಗಿಸುತ್ತವೆ. ಈ ವೇಳೆ ಚಾಲಕನು ಮಾಡುವ ಸಣ್ಣ ತಪ್ಪು ಸಹ ದೊಡ್ಡ ಅನಾಹುತಕ್ಕೆ ಕಾರಣವಾಗಿ ಕಾರು ಕೆಳಗೆ ಬೀಳುವ ಸಾಧ್ಯತೆಗಳಿದ್ದವು.

ಈ ಕಾರಿನ ಚಾಲಕನ ಯಾವುದೇ ರೀತಿಯ ಟೆಂಷನ್ ಗೆ ಒಳಗಾಗದೇ ಕೂಲ್ ಆಗಿಯೇ ಇರುತ್ತಾನೆ. ಮೊಬೈಲ್ ನಲ್ಲಿ ಮಾತನಾಡುತ್ತಲೇ ಕಾರನ್ನು ಪಾರ್ಕಿಂಗ್ ಸ್ಥಳದಿಂದ ಹೊರ ತೆಗೆಯಲು ಮುಂದಾಗುತ್ತಾನೆ. ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಂಡು, ನಂತರ ಮುಂದೆ ಬಂದು ಕಾರನ್ನು ಹೊರ ತರುತ್ತಾನೆ. ಮತ್ತೊಂದು ವೀಡಿಯೊದಲ್ಲಿ ಟೊಯೊಟಾ ಇನೋವಾ ಕಾರನ್ನು ಈ ಅಪಾಯಕಾರಿ ಸ್ಥಳದಲ್ಲಿಯೇ ಪಾರ್ಕ್ ಮಾಡಲಾಗುತ್ತದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್
ಆ ಚಾಲಕನು ಕಾರನ್ನು ರಿವರ್ಸ್ ತೆಗೆದು ಈ ಇಕ್ಕಟ್ಟಾದ ಸ್ಥಳದಲ್ಲಿ ನಿಲ್ಲಿಸುತ್ತಾನೆ. ಈ ಚಾಲಕರು ಕಾರನ್ನು ಪಾರ್ಕ್ ಮಾಡುವಾಗ ಹಾಗೂ ಹೊರ ತೆಗೆಯುವಾಗ ಅದನ್ನು ಕೂಲ್ ಆಗಿಯೇ ಇರುತ್ತಾರೆ. ಬಹುಶಃ ಇಬ್ಬರೂ ಚಾಲಕರು ಹಲವು ಬಾರಿ ಈ ರೀತಿಯಾಗಿ ಪಾರ್ಕ್ ಮಾಡಿರಬಹುದು. ಈ ಕಾರಣಕ್ಕೆ ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕ್ ಮಾಡುವಾಗಲೂ ಆತ್ಮವಿಶ್ವಾಸದಿಂದಲೇ ಇರುತ್ತಾರೆ.
ಕೆಲವು ದಿನಗಳ ಹಿಂದೆ ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸಿಸಿಟಿವಿ ಈಡಿಯಟ್ ಪೋಸ್ಟ್ ಮಾಡಿದ್ದ ವೀಡಿಯೊವೊಂದನ್ನು ಶೇರ್ ಮಾಡಿದ್ದರು. ಆ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಹೊಸ ತಂತ್ರಜ್ಞಾನದ ನೆರವಿನಿಂದ ಸಣ್ಣ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದ. ಆನಂದ್ ಮಹೀಂದ್ರಾ ಈ ಕಾರ್ಯವನ್ನು ಶ್ಲಾಘಿಸಿದ್ದರು.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ನಮ್ಮ ದೇಶದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಜಾಗ ಹುಡುಕುವುದೇ ದೊಡ್ಡ ತಲೆ ನೋವು. ಜನರು ಚಿಕ್ಕ ಜಾಗದಲ್ಲಿಯೂ ವಾಹನ ನಿಲುಗಡೆ ಮಾಡಲು ಒಂದಕ್ಕಿಂತ ಹೆಚ್ಚು ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಊಹಿಸಲಾಸಾಧ್ಯವಾದ ಸ್ಥಳದಲ್ಲಿ ಪಾರ್ಕ್ ಆಗಿ ಹೊರ ಬಂದ ಇನೋವಾ ಕಾರಿನ ಈ ವೀಡಿಯೊಗಳು ಜನರ ಗಮನವನ್ನು ಸೆಳೆಯುತ್ತಿವೆ.


Click it and Unblock the Notifications