Toyota: ಟೊಯೊಟಾ ಎಂಜಿನ್ ಇದಕ್ಕೆ ಫೇಮಸ್... ಹೆದ್ದಾರಿಯಲ್ಲಿ ತನ್ನ ಗತ್ತು ತೋರಿಸಿದ ಇನ್ನೋವಾ!

ಕಾರು ಕೆಟ್ಟು ನಿಂತರೆ ರಸ್ತೆ ಬದಿ ನಿಲ್ಲಿಸಿಕೊಂಡು ಸಹಾಯಕ್ಕೆ ಯಾರನ್ನಾದರೂ ಕರೆಯುತ್ತೇವೆ. ರಸ್ತೆಬದಿಯ ಸಹಾಯವೇ ಲಭ್ಯವಿಲ್ಲದ ಸ್ಥಳದಲ್ಲಿ ನೀವು ಸಿಕ್ಕಿಬಿದ್ದರೆ, ಕಾರನ್ನು ಹತ್ತಿರದ ಗ್ಯಾರೇಜ್‌ಗೆ ಕೊಂಡೊಯ್ಯಲು ಉತ್ತಮ ಮಾರ್ಗವೆಂದರೆ ಮತ್ತೊಂದು ಕಾರಿನ ಸಹಾಯ ಪಡೆದು ಎಳೆಯುವುದಾಗಿದೆ. ಭಾರತದಲ್ಲಿ ಇಂತಹ ಹಲವು ಸನ್ನಿವೇಶಗಳನ್ನು ನಾವು ಈಗಾಗಲೇ ನೋಡಿರುತ್ತೇವೆ. ಹೆದ್ದಾರಿಗಳಲ್ಲಿ ಇಂತಹ ದೃಶ್ಯಗಳನ್ನು ಹೆಚ್ಚಾಗಿ ನೋಡುತ್ತೇವೆ. ಇತ್ತೀಚೆಗೆ ಇಂತಹದೇ ದೃಶ್ಯ ಕಂಡುಬಂದಿದ್ದು, ಟೊಯೋಟಾ ಇನ್ನೋವಾ (Toyota Innova) ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ಕಾರುಗಳನ್ನು ಎಳೆದೊಯ್ದ ದೃಶ್ಯ ಕಂಡುಬಂದಿದೆ.

ವ್ಯಕ್ತಿಯೊಬ್ಬರು ಈ ಕುರಿತ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರು ಇದೇ ಹೆದ್ದಾರಿಯ ಮೂಲಕ ಹಾದುಹೋಗುವಾಗ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಇದು ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲವಾದರೂ, ಖಂಡಿತ ದಕ್ಷಿಣ ಭಾರತದಲ್ಲಿ ನಡೆದಿದೆ. ಟೊಯೊಟಾ ಇನ್ನೋವಾ ಕಾರು ಹೆದ್ದಾರಿಯ ಎಡಭಾಗದಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

toyota-innova-towing-three-hatchbacks-in-highway-road

ಟೊಯೊಟಾ ಇನ್ನೋವಾ ನಂತರ ಕೆಟ್ಟು ನಿಂತಿದ್ದ ಹ್ಯುಂಡೈ ಐ 20 ಕಾರನ್ನು ನೋಡಬಹುದಾಗಿದ್ದು, ಐ 20 ಹಿಂದೆಯೇ ಮಾರುತಿ ವ್ಯಾಗನ್ಆರ್ ಮತ್ತು ಕೊನೆಯದಾಗಿ ಮಾರುತಿ ಸುಜುಕಿ ಜೆನ್ ಎಸ್ಟಿಲೋ ಹ್ಯಾಚ್ಬ್ಯಾಕ್ ಇತ್ತು. ಟೊಯೊಟಾ ಇನ್ನೋವಾ ಎಂಪಿವಿ ಒಂದೇ ಸಮಯದಲ್ಲಿ ಜನನಿಬಿಡ ಹೆದ್ದಾರಿಯಲ್ಲಿ ಒಂದಲ್ಲ, ಒಟ್ಟಿಗೆ ಮೂರು ಹ್ಯಾಚ್ ಬ್ಯಾಕ್‌ಗಳನ್ನು ಎಳೆದೊಯ್ಯುತ್ತಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಈ ಎಲ್ಲಾ ವಾಹನಗಳನ್ನು ಸರಪಳಿ ಬಳಸಿ ಪರಸ್ಪರ ಕಟ್ಟಲಾಗಿತ್ತು. ಈ ಕಾರುಗಳ ನಂಬರ್‌ ಪ್ಲೇಟ್‌ ಗಳನ್ನು ನೋಡಿದ್ರೆ ಆಂಧ್ರಪ್ರದೇಶದ ಕಾರುಗಳು ಎಂಬುದು ತಿಳಿದುಬಂದಿದೆ. ಈ ವಿವರಗಳನ್ನು ಪಕ್ಕಕ್ಕೆ ಇಟ್ಟರೆ ಎಲ್ಲರೂ ಇನ್ನೋವಾ ಹಾಗೂ ಅದರ ಚಾಲಕನನ್ನು ಪ್ರಶಂಸಿದ್ದಾರೆ. ಇನ್ನೋವಾ ಎಂಪಿವಿಯ ಪವರ್ ಮತ್ತು ವಿಶ್ವಾಸಾರ್ಹತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

toyota-innova-towing-three-hatchbacks-in-highway-road

ಮೂರು ಕಾರುಗಳನ್ನು ಇನ್ನೋವಾಗೆ ಕಟ್ಟಲಾಗಿದ್ದರೂ, ಟೊಯೊಟಾ ಇನ್ನೋವಾ ಸಲೀಸಾಗಿ ಎಳೆಯುತ್ತಾ ಕಾಣಿಸಿಕೊಂಡಿರುವುದು, ರಸ್ತೆಯ ಮೇಲಿನ ರೈಲಿನಂತೆ ಭಾಸವಾಗುತ್ತಿತ್ತು. ಈ ಕಾರುಗಳು ಹೆದ್ದಾರಿಯಲ್ಲಿ ಕೆಟ್ಟುಹೋಗಿವೆಯೇ ಅಥವಾ ಹತ್ತಿರದ ಗ್ಯಾರೇಜ್‌ಗೆ ಕರೆದೊಯ್ಯಲಾಗುತ್ತಿದೆಯೇ ಅಥವಾ ಮಾಲೀಕರು ಸ್ಕ್ರ್ಯಾಪ್ ಮಾಡಲು ಕೊಂಡೊಯ್ಯುತ್ತಿದ್ದರೇ ಎಂಬುದರ ಬಗ್ಗೆ ತಿಳಿದುಬಂದಿಲ್ಲ.

ಇದು ಸರಿಯಾದ ಮಾರ್ಗವಲ್ಲ: ಅನೇಕ ವಾಹನಗಳನ್ನು ಹಿಂದೆ ಕಟ್ಟಿ ವೇಗವಾಗಿ ಓಡಿಸುವುದು ಒಳ್ಳೆಯದಲ್ಲ. ಇನ್ನೋವಾ ಚಾಲಕ ಅನೇಕ ವಾಹನಗಳನ್ನು ಕಟ್ಟಿಕೊಂಡು ಎಳೆದೊಯ್ಯುವ ಮುನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಈ ಕಾರುಗಳನ್ನು ಸರಪಳಿ ಬಳಸಿ ಪರಸ್ಪರ ಕಟ್ಟಲಾಗಿರುವುದರಿಂದ, ಸರಪಳಿ ಮುರಿಯುವ ಸಾಧ್ಯತೆಗಳು ತುಂಬಾ ಹೆಚ್ಚಾಗಿರುತ್ತವೆ.

ಅಲ್ಲದೇ ಕಾರುಗಳು ತಮ್ಮ ದಾರಿಯಿಂದ ಹೊರಹೋಗುವ ಅಥವಾ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಗಳು ತುಂಬಾ ಹೆಚ್ಚು. ಇದು ಇನ್ನೋವಾ ಚಾಲಕನಿಗೆ ಮಾತ್ರವಲ್ಲದೆ ಹೆದ್ದಾರಿಯಲ್ಲಿರುವ ಇತರ ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಸೃಷ್ಟಿಸುತ್ತವೆ. ಇಂತಹ ಸಂಧರ್ಭಗಳಲ್ಲಿ ಇತರ ಬಳಕೆದಾರರಿಗೆ ತಿಳಿಸಲು ಕೆಲವು ರೀತಿಯ ಸೂಚನೆಗಳನ್ನು ಬಳಸುವುದು ಉತ್ತಮ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 27, 2025, 16:02 [IST]
English summary
Toyota innova towing three hatchbacks in highway road
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+