ಟಾಟಾ ನೆಕ್ಸಾನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಸಾಮಾನ್ಯವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಹಿಡಿದು ದಂಡವನು ವಿಧಿಸಿ ಚಲನ್ ನೀಡಿರುವುದನ್ನು ನಾವು ಕಂಡಿದ್ದೇವೆ. ಅದಲ್ಲದೇ ಇ-ಚಲನ್ ಬಂದ ನಂತರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮನೆಗೆ ಚಲನ್ ಕಳುಹಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಘಟನೆ ಇವೆಲ್ಲದಕ್ಕಿಂತ ಭಿನ್ನವಾಗಿದೆ.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಕೆಲ ಬಾರಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಅಂತಾ ಸೈಕಲ್ ಸವಾರರನ್ನು ಹಿಡಿದು ದಂಡ ಹಾಕಿರುವುದರ ಬಗ್ಗೆ ಈ ಹಿಂದೆ ನಾವು ನಿಮಗೆ ಮಾಹಿತಿಯನ್ನು ನೀಡಿದ್ದೇವು. ಆದರೆ ಇಲ್ಲಿ ನಡೆದ ಘಟನೆಯೆ ಬೇರೇ, ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಹೌದು, ಕೇರಳದ ಕೊಲ್ಲಂ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಾಟಾ ನೆಕ್ಸಾನ್ ಕಾರನ್ನು ತಡೆದು ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ರೂ.100 ದಂಡವನ್ನು ನೀಡಲಾಗಿದೆ. ನಾವು ಹೇಳುತ್ತಿರುವುದು ಸುಳ್ಳೆಂದು ನೀವು ಭಾವಿಸಿದರೆ, ಇದಕ್ಕೆ ಸಾಕ್ಷಿ ಇಲ್ಲಿಯೆ ಇದೆ ನೋಡಿ. ಗೋಪ ಕುಮಾರ್ ಎಂಬುವವರು ಸ್ವತಃ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೂ, ದಿನಕ್ಕೆ ನೂರಾರು ಚಾಲಕರನ್ನು ತಡೆದು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ದಂಡ ವಿದಿಸುವ ಟ್ರಾಫಿಕ್ ಪೊಲೀಸರಿಗೆ ತಿಳಿಯದೆಯೆ ಹೀಗೆ ಮಾಡಿರಬಹುದೇನೊ.? ಇಲ್ಲಿ ಮತ್ತೊಂದು ವಿಚಾರ ಅಂದ್ರೆ ಟ್ರಾಫಿಕ್ ಪೊಲೀಸರು ತಪ್ಪಾಗಿ ಬೇರಾರಿಗೋ ನೀಡಬೇಕಾದ ರಶೀದಿಯನ್ನು ನೆಕ್ಸಾನ್ ಕಾರು ಚಾಲಕನಿಗೆ ಕೊಟ್ಟಿರಬಹುದೇನೊ ಎಂಬ ಉಹೆಗಳು ಕೂಡಾ ಕೇಳಿಬರುತ್ತಿದೆ.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಆದರೂ ಸಹ ಇಂತಹ ಘಟನೆಗಳು ಹೊಸತೇನಲ್ಲ ಬಿಡಿ. ಇದು ಗೋಪ ಕುಮಾರ್‍‍ರವರ ಕಾರ್ ಡ್ರೈವಿಂಗ್ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ಬಂದ ಇ-ಚಲನ್ ವಿಚಾರವಾದರೆ, ಮತ್ತೊಂದು ಕಡೆ ಹೆದ್ದಾರಿಯ ಮೇಲೆ ಸೈಕಲ್‍ನಲ್ಲಿ ಹೋಗುತ್ತಿದ್ದವನನ್ನು ಅಲ್ಲಿದ್ದ ಪೊಲೀಸರು ತಡೆದು ಓವರ್ ಸ್ಪೀಡಿಂಗ್ ಮತ್ತು ಹೆಲ್ಮೆಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಹೆಲ್ಮೆಟ್ ಇಲ್ಲದೆಯೆ ಸ್ಕೂಟರ್ ಅಥವಾ ಮೋಟಾರ್‍‍ಸೈಕಲ್ ಚಲಾಯಿಸುವುದು ತಪ್ಪೆಂದು ಟ್ರಾಫಿಕ್ ಪೊಲೀಸರು ಹಿಡಿದರೆ ಅದು ಒಂದು ರೀತಿಯ ನ್ಯಾಯ. ಆದ್ರೆ ಸೈಕಲ್‍‍ಗೂ ಕೂಡಾ ಹೆಲ್ಮೆಟ್ ಇಲ್ಲಾ ಅಂತ ಪೊಲೀಸರು ನಿಮ್ಮನ್ನು ಹಿಡಿದರೆ ಅಂತಾ ಪರಿಸ್ಥಿತಿಯನ್ನು ನೀವೇನು ಮಾಡುವಿರಿ.?

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ರಸ್ತೆಯಲ್ಲಿ ಸೈಕಲ್ ಚಲಾಯಿಸಲು ಇಲ್ಲಿ ಡ್ರೈವಿಂಗ್ ಲೈಸನ್ಸ್ ಇರ್ಬೇಕಂತೆ. ದೇಶದಲ್ಲಿನ ಬೇರಾವ ರಾಜ್ಯದಲ್ಲು ಈ ನಿಯಮ ಜಾರಿ ಇಲ್ಲವಾದ್ರು ಕೇರಳದಲ್ಲಿನ ಕಾಸರ್‍‍ಗೋಡ್‍ನಲ್ಲಿ ಈ ನಿಯಮವಿದೆ. ಅಷ್ಟೆ ಅಲ್ಲಾ ಸೈಕಲ್‍‍ನಲ್ಲಿ ಓವರ್‍‍ಸ್ಪೀಡಿಂಗ್ ಮಾಡಿದರೂ ಇಲ್ಲಿ ತಪ್ಪಂತೆ..

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಹೌದು, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ ಉತ್ತರ ಪ್ರದೇಶ ಮೂಲದ ಕಾಸಿಂ‍‍ರವರನ್ನು ಕಂಬಾಲದಲ್ಲಿನ ಹೆದ್ದಾರಿ ಪೊಲೀಸರು ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಹಿಡಿದು ಹೆಲ್ಮೆಟ್ ಹಾಗು ಲೈಸೆನ್ಸ್ ಇಲ್ಲದಿರುವ ಕಾರಣ ಮತ್ತು ಓವರ್ ಸ್ಪೀಡಿಂಗ್ ಮಾಡಿದ್ದಾರೆಂದು ದಂಡ ವಿಧಿಸಲಾಗಿದೆ.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಹೆದ್ದಾರಿ ರಸ್ತೆಯ ಮೇಲೆ ಸೈಕಲ್‍ನಲ್ಲಿ ಬರುತ್ತಿದ್ದ ಕಾಸಿಂರನ್ನು ಹಿಡಿದು ಓವರ್ ಸ್ಪೀಡಿಂಗ್ ಮಾಡಿರುವುದಾಗಿ ರೂ.2000 ಸಾವಿರದ ದಂಡವನ್ನು ವಿಧಿಸಿದ್ದಾರೆ. ಪಾಪ ದಿನಕ್ಕೆ ರೂ.400 ಸಂಪಾದಿಸುತ್ತಿದ್ದ ಕಾಸಿಂ ಹತ್ತಿರ ಅಷ್ಟು ದುಡ್ಡು ಹೇಗೆ ಇರುತ್ತೆ.?

ಕಾಸಿಂ ಅವರು ಕೂಲಿ ಕೆಲಸ ಮಾಡಿ ಜೀವನ ಕಳೆಯುತ್ತಿರುವ ವ್ಯಕ್ತಿಯೆಂದು ತಿಳಿದು, ಹಿಂದೆ ನೀಡಿದ ರಶೀದಿಯನ್ನು ರದ್ದುಗೊಳಿಸಿ ಸೈಕಲ್‍ನ ಚಕ್ರಗಳನ್ನು ಚಪ್ಪಟೆಯಾಗೊಳಿಸಿರುವುದಾಗಿ ಅವರಿಗೆ ರೂ.500 ದಂಡವನ್ನು ವಿಧಿಸಿ ರಸೀದಿಯನ್ನು ನೀಡಿದ್ದಾರೆ ಎನ್ನಲಾಗಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಆದರೆ ಕಾಸಿಂರಿಗೆ ನೀಡಿದ ರಸೀದಿಯಲ್ಲಿ ಸ್ಥಳಿಯ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲಾ ಸ್ವಾಮಿ ಸೈಕಲ್‍‍ಗೆ ಅದೆಂತಹ ನೋಂದಣಿ ಸಂಖ್ಯೆ.? ಇನ್ನು ಉಲ್ಲೇಖಿಸಲಾಗಿದ್ದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರೆ ಅದು ಮಹಿಳೆಯೊಬ್ಬರು ಸ್ಕೂಟರ್ ಎಂಬುದು ಪತ್ತೆಯಾಗಿತ್ತು.

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಅಕ್ಟೋಬರ್ 3,2018 ರಂದು ಈ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದ್ದು, ಕಾಸಿಂ ಅವರು ನಡೆದ ಘಟನೆಯ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಲ್ಲಿನ ಪೊಲೀಸರು ಯಾವ ರೀತಿಯಲ್ಲಿ ತಮ್ಮನ್ನು ದೋಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

MOST READ: ಐಷಾರಾಮಿ ಸೌಲತ್ತುಗಳನ್ನು ಪಡೆದುಕೊಂಡ ಟೆಂಪೋ ಟ್ರಾವೆಲರ್ ಹೇಗಿದೆ ನೀವೆ ನೋಡಿ..!

ನೆಕ್ಸಾನ್ ಕಾರು ಚಾಲಕನನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ವಿಡಿಯೋನಲ್ಲಿ ಕಾಸಿಂರವರು "ನಾನು ದಿನನಿತ್ಯ ಅದೇ ದಾರಿಯಲ್ಲಿ ನನ್ನ ಸೈಕಲ್‍ನ ಮೇಲೆ ಪ್ರಯಾಣಿಸುತ್ತೇನೆ ಅದನ್ನು ಪೊಲೀಸರು ಕೂಡಾ ನೋಡಿದ್ದಾರೆ. ಆದರೆ ಇಂದು ನನ್ನನ್ನು ತಡೆದು ಮೊದಲಿಗೆ ರೂ.2000 ದಂಡವನ್ನು ವಿಧಿಸಿ, ನನ್ನನ್ನು ಪರಿಶೀಲಿಸಿದ ನಂತರ ರೂ.2000 ರಸೀದಿಯನ್ನು ರದ್ದು ಮಾಡಿ ಕೊನೆಗೆ ರೂ.500 ದಂಡದ ರಸೀದಿಯನ್ನು ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ.

More from DriveSpark

Article Published On: Tuesday, April 30, 2019, 14:41 [IST]
English summary
Traffic Police Fined Tata Nezon Driver For Not Wearing Helmet Goes Viral In Kerala. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+