Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಸೌಲತ್ತುಗಳನ್ನು ಪಡೆದುಕೊಂಡ ಟೆಂಪೋ ಟ್ರಾವೆಲರ್ ಹೇಗಿದೆ ನೀವೆ ನೋಡಿ..!
ಫೋರ್ಸ್ ಸಂಸ್ಥೆಯ ಟೆಂಪೋ ಟ್ರಾವೆಲರ್‍ಗಳು ಟ್ಯಾಕ್ಸಿ ನಿರ್ವಾಹಕರಲ್ಲಿ ಮತ್ತು ಕುಟುಂಬದೊಂದಿಗಿನ ದೂರದ ಪ್ರಯಾಣಕ್ಕೆ ಸಂಚರಿಸಲು ಇದು ಜನಪ್ರಿಯ ಆಯ್ಕೆಯಾಗಿದೆ. ಏಕೆಂದರೆ ಇದು ವಿವಿಧ ಗಾತ್ರಗಳಲ್ಲಿ ಖರೀದಿಗೆ ಲಭ್ಯವಿದ್ದು, ಈ ಸೆಗ್ಮೆಂಟ್‍ನಲ್ಲಿನ ವಾಹನಗಳಿಗಿಂತಲೂ ಮಾರುಕಟ್ಟೆಯಲ್ಲಿ ಹೆಚ್ಚಿನದಾಗಿ ಮಾರಟವಾಗುತ್ತಿದೆ.

ಹೌದು, ಮಾರುಕಟ್ಟೆಯಲ್ಲಿ ಪರ್ಯಾಯ ಆಯ್ಕೆಗಳು ಇದ್ದರೂ ಸಹ, ಜನರು ಫೋರ್ಸ್ ಟೆಂಪೋ ಟ್ರಾವೆಲರ್ ಅನ್ನು ಖರೀದಿಸುತ್ತಿದ್ದಾರೆ ಮತ್ತು ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಫೋರ್ಸ್ ಸಂಸ್ಥೆಯು ಇದರಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಸಹ ನೀಡಿದ್ದಾರೆ. ಹೀಗಿರುವಾಗ ಒಂದು ಸಾಧಾರಣ ಫೋರ್ಸ್ ಟೆಂಪೋ ಟ್ರಾವೆಲರ್ ಒಂದು ಐಷಾರಾಮಿ ಮಿನಿ ಬಸ್‍ನಂತೆ ಹೇಗೆ ಪರಿವರ್ತನೆಯಾಗಿದೆ ಎಂದು ನೀವೇ ನೋಡಿ...

ಚಿತ್ರದಲ್ಲಿ ಕಾಣಿಸುತ್ತಿರುವ ಟೆಂಪೋ ಟ್ರಾವೆಲರ್ ಹಲವಾರು ಐಷಾರಾಮಿ ಸೌಲತ್ತುಗಳನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಟೊಯೊಟಾ ಬ್ಯಾಡ್ಜಿಂಗ್, ಲೈಸೆನ್ಸ್ ಪ್ಲೆಟ್‍ನ ಮೇಲೆಯೆ ಬೆಂಜ್-ಚಿಹ್ನೆಯನ್ನು ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ ಐಷಾರಾಮಿ ಸೌಲತ್ತುಗಳನ್ನು ಮತ್ತು ಹೊರ ಭಾಗದಲ್ಲಿ ಟೆಂಪೋ ಟ್ರಾವೆಲರ್‍ನಂತೆ ಕಾಣಲು ಹಲವಾರು ಮಾರ್ಪಾಡುಗಳನ್ನು ಮಾಡಲಾಗಿದೆ.

ಮೊದಲಿಗೆ ಇದರ ಮುಂಭಾಗದಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್‍ನಿಂದ ಪ್ರೇರಣೆಗೊಂಡ ಗ್ರಿಲ್ ಅನ್ನು ಒದಗಿಸಲಾಗಿದ್ದು, ಮಾಡಿಫೈ ಮಾಡಲಾದ ಬಂಪರ್‍ನ ಮೇಲೆಯೆ ಇಂಟಿಗ್ರೆಟೆಡ್ ಲ್ಯಾಂಪ್ಸ್ ಅನ್ನು ಒದಗಿಸಲಾಗಿದೆ. ಹಾಗೆಯೆ ಎಲ್ಇಡಿ ಆಧಾರಿತ ಹೆಡ್‍ಲ್ಯಾಂಪ್ಸ್ ಅನ್ನು ನೀಡಲಾಗಿರುವ ಕಾರಣ ಮುಂಭಾಗದಿಂದ ಟೊಯೊಟಾ ಸಂಸ್ಥೆಯವರೇ ನಿರ್ಮಾಣ ಮಾಡಿರುವ ಟೆಂಪೋ ಟ್ರಾವೆಲರ್ ಹಾಗೆ ಕಾಣಿಸುತ್ತದೆ.

ಇನ್ನು ಈ ವಾಹನದ ಬದಿಗಳಲ್ಲಿ ಕೂಡಾ ಮಾರ್ಪಾಡುಗಳನ್ನು ಮಾಡಲಾಗಿದ್ದು, ನೋಡುಗರನು ತನ್ನತ್ತ ಸೆಳೆಯುವ ಹಾಗೆ ಮತ್ತು ವಾಹನದ ಆಕಾರಕ್ಕೆ ತಕ್ಕ ಹಾಗೆ ಇದರಲ್ಲಿ ಅಲಾಯ್ ವ್ಹೀಲ್‍ಗಳನ್ನು ಒದಗಿಸಲಾಗಿದೆ. ಸುರಕ್ಷತೆಗಾಗಿ ಇದರಲ್ಲಿ ಸ್ಟೀಲ್ ಪೈಪ್‍ಗಳನ್ನು ಮತ್ತು ಪ್ರಕಾಶಿಸಲ್ಪಡುವ ವಿಂಡೋಗಳನ್ನು ಒದಗಿಸಲಾಗಿದೆ.

ಮಾಡಿಫೈಡ್ ಟೆಂಪೋ ಟ್ರಾವೆಲರ್ ಹಿಂಭಾಗದಲ್ಲಿ ಪ್ಲಾಸ್ಟಿಕ್ ಗ್ರಿಲ್ ಅನ್ನು ನೀಡಲಾಗಿದ್ದು, ಜೊತೆಗೆ ನಿಜವಾದ ಟೊಯೊಟಾ ಟಿಆರ್‍ಡಿ ಬ್ಯಾಡ್ಜಿಂಗ್ ಅನ್ನು ಒದಗಿಸಲಾಗಿದೆ. ಪ್ರೀಮಿಯಂ ಲುಕ್ ಅನ್ನು ನೀಡುವ ಹಾಗೆ ಟಿಂಟೆಡ್ ವಿಂಡೋಗಳು, ಇಂಟಿಗ್ರೇಟೆಡ್ ಎಲ್ಇಡಿ ಲ್ಯಾಂಪ್ಸ್ ಮತ್ತು ಕ್ರೋಮ್ ಅನ್ನು ನೀಡಲಾಗಿದೆ.

ಲಕ್ಷುರಿ ಇಂಟೀರಿಯರ್
ಟೆಂಪೋ ಟ್ರಾವೆಲರ್ ಹೊರಭಾಗದಂತೆಯೆ ಒಳಭಾಗವನ್ನು ಕೂಡಾ ಮಾರ್ಪಾಡುಗಳನ್ನು ಮಾಡಲಾಗಿದ್ದು, 3*2 ಸೀಟಿಂಗ್, ಸುತ್ತುವರೆಯುವ ಲೈಟಿಂಗ್, ಕಿಟಕಿ ಪರದೆಗಳು, ಎಲ್‍ಸಿಡಿ ಟಿವಿ, 4 ಸ್ಪೀಕರ್‍ಗಳನ್ನು ನೀಡಲಾಗಿದೆ. ಮತ್ತಷ್ಟು ಪ್ರೀಮಿಯಂ ಆಗಿ ಕಾಣಲು ಎಸಿ ವೆಂಟ್ಸ್ ಮತ್ತು ಕಾರಿನ ಒಳಭಾಗದಲ್ಲಿನ ಹಲವಾರು ಭಾಗಗಳಲ್ಲಿ ಪ್ಲಾಸ್ಟಿಕ್ ಟಚ್ ಅನ್ನು ನೀಡಲಾಗಿದೆ.

ಡ್ರೈವರ್ ಕ್ಯಾಬಿನ್ ಅನ್ನು ಕೂಡಾ ಅಷ್ಟೆ ಪ್ರೀಮಿಯಂ ಆಗಿ ಕಾಣಲು ಅಲ್ಲಿಯೂ ಕೂಡಾ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ. ಒಟ್ಟಾರೆಯಾಗಿ ಟೆಂಪೋ ಟ್ರಾವೆಲರ್ ಆಗಿ ಪರಿವರ್ತನೆಗೊಂಡ ಇದು ಮೂಲತಃ ಒಂದು ಸಾಧಾರಣ ಟೆಂಪೋ ಟ್ರಾವೆಲರ್ ಎದರೇ ನಂಬಲಾರದು. ಏಕೆಂದರೆ ಇದನ್ನು ಸಂಪೂರ್ಣವಾಗಿ ಐಷಾರಾಮಿ ಮಿನಿ ಬಸ್‍ನಂತೆ ಕಾಣುವ ಹಾಗೆ ಮಾರ್ಪಾಡುಗಳನ್ನು ಮಾಡಲಾಗಿದೆ.
MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...
ಅಂದ ಹಾಗೆ ಇದನ್ನು ತಯಾರು ಮಾಡಿದ ಗ್ಯಾರೇಜ್ ಕೇರಳದಲ್ಲಿದ್ದು, ಇಂತಹ ಬಹುತೇಕ ವಾಹನಗಳನ್ನು ನೀವು ಕೇರಳದಲ್ಲಿ ಕಾಣಬಹುದಾಗಿದೆ. ಆದ್ರೆ ಮೂಲತಃ ವಾಹನವನ್ನು ಖರೀದಿ ಮಾಡಿದ ನಂತರ ರಿಜಿಸ್ಟ್ರೇಷನ್ ಪೇಪರ್‍ನಲ್ಲಿ ಯಾವ ಯಾವ ಉಪಕರಣಗಳನ್ನು ಉಲ್ಲೇಖಿಸಲಾಗಿರುತ್ತದೆಯೊ ಅವುಗಳು ಮಾತ್ರ ಇರಬೇಕಾಗಿದೆ. ಇನ್ನು ಬೇರಾವ ಮಾರ್ಪಾಡುಗಳನ್ನು ಮಾಡಿಕೊಂಡರೆ ಅವರು ಭಾರೀ ಮೊತ್ತದ ದಂಡವನ್ನು ತೆರಬೇಕಾಗುತ್ತದೆ.
Source: Vijin Vinod