ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಕರೋನಾ ವೈರಸ್ ಎರಡನೇ ಅಲೆಯ ಆರ್ಭಟ ಈಗ ದೇಶಾದ್ಯಂತ ಕಡಿಮೆಯಾಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಪೊಲೀಸರು ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಫೇಸ್ ಮಾಸ್ಕ್ ಧರಿಸದೇ ಓಡಾಡುವವರನ್ನು ತಡೆದು ಕ್ರಮ ಕೈಗೊಳ್ಳುತ್ತಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರ ಕೆಳಗೆ ಬೀಳುವಂತೆ ಮಾಡಿದ ಘಟನೆ ವರದಿಯಾಗಿದೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಈ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಮಾಸ್ಕ್ ಇಲ್ಲದೇ ಸ್ಕೂಟರಿನಲ್ಲಿ ಚಲಿಸುತ್ತಿದ್ದ ಯುವಕರನ್ನು ತಡೆಯಲು ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಆದರೆ ಪೊಲೀಸರ ಈ ಅಮಾನವೀಯ ಕೃತ್ಯದಿಂದಾಗಿ ಸ್ಕೂಟರಿನಲ್ಲಿದ್ದ ಇಬ್ಬರು ಯುವಕರು ರಸ್ತೆ ಮೇಲೆ ಬಿದ್ದಿದ್ದಾರೆ. ಇದರಿಂದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ ಅವರು ಚಲಿಸುತ್ತಿದ್ದ ಹೀರೋ ಮೆಸ್ಟ್ರೋ ಸ್ಕೂಟರಿಗೂ ಹಾನಿಯಾಗಿದೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಪೊಲೀಸರ ಈ ಕೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರು ಪೊಲೀಸರು ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸ್ಕೂಟರ್‌ನಲ್ಲಿ ಬಂದ ಯುವಕರು ಸ್ಕೂಟರ್ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಆಗ ಅವರನ್ನು ತಡೆಯುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸ್ಕೂಟರಿಗೆ ಒದ್ದಿದ್ದಾರೆ. ಯುವಕರು ಸ್ಕೂಟರ್ ನಿಲ್ಲಿಸದೇ ಇದ್ದದ್ದು ತಪ್ಪೇ ಆದರೂ ಪೊಲೀಸರ ಈ ಕೃತ್ಯವು ಸಮಂಜಸವಲ್ಲ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ವೈರಲ್ ಆಗಿರುವ ಈ ವೀಡಿಯೊ ನೋಡಿ ಜನರು ಪೊಲೀಸರ ಕೃತ್ಯವನ್ನು ಖಂಡಿಸಿದ್ದಾರೆ. ಸ್ಕೂಟರ್ ಸವಾರ ಹೆಲ್ಮೆಟ್ ಧರಿಸಿದ್ದ. ಆದರೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಕೆಳಗೆ ಬಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ಅದೃಷ್ಟವಶಾತ್ ಯಾರೂ ಅಪಾಯಕ್ಕೆ ಸಿಲುಕಿಲ್ಲ. ಅಸ್ಸಾಂನಲ್ಲಿ ಸದ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಚಲಿಸಲು ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗಿದೆ.ಸ್ಕೂಟರಿನಲ್ಲಿ ಇಬ್ಬರು ಚಲಿಸುತ್ತಿದ್ದ ಕಾರಣ ಅವರನ್ನು ತಡೆಯಲು ಪೊಲೀಸರು ಈ ರೀತಿ ಮಾಡಿರಬಹುದು ಎಂದು ಹೇಳಲಾಗಿದೆ.

ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಅಸ್ಸಾಂನಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಆದರೂ ದ್ವಿಚಕ್ರ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿ ಬೀಳುತ್ತಿದ್ದಾರೆ.

ಸ್ಕೂಟರಿಗೆ ಒದ್ದು ಸ್ಕೂಟರ್ ಸವಾರನನ್ನು ಕೆಳಗೆ ಬೀಳಿಸಿದ ಪೊಲೀಸ್ ಅಧಿಕಾರಿ

ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳುವ ದ್ವಿಚಕ್ರ ವಾಹನ ಸವಾರರಿಗೆ ಅಸ್ಸಾಂ ಪೊಲೀಸರು ಗರಿಷ್ಠ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ. ಇದರ ನಡುವೆ ಸ್ಕೂಟರಿಗೆ ಒದ್ದು ವಿವಾದಕ್ಕೆ ಸಿಲುಕಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಸ್ಕೂಟರಿಗೆ ಒದ್ದ ಅಧಿಕಾರಿಯ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Traffic police kicks scooter to stop the rider. Read in Kannada.
Story first published: Wednesday, July 14, 2021, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X