Train Mileage: ರೈಲಿನ ಮೈಲೇಜ್ ಎಷ್ಟು ಗೊತ್ತಾ? ಕಾರಿನಲ್ಲಿ 1 ಲಕ್ಷ ಕಿ.ಮೀ ಪ್ರಯಾಣಿಸಬಹುದು!

ಪ್ರಪಂಚದ ನಾಲ್ಕನೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತೀಯ ರೈಲ್ವೇಯಿಂದ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅಸ್ತಿತ್ವದಲ್ಲಿರುವ ರೈಲುಗಳನ್ನು ಎಲೆಕ್ಟ್ರಿಕ್, ಡೀಸೆಲ್ ಮತ್ತು ಸ್ಟೀಮ್ ಇಂಜಿನ್‌ಗಳಿಂದ ನಿರ್ವಹಿಸಲಾಗುತ್ತದೆ. ಆದರೆ, ಇದೀಗ ಟ್ರೆಂಡ್ ಬದಲಾಗಿ ಅಭಿವೃದ್ಧಿಯತ್ತ ಸಾಗಲು ವಂದೇ ಭಾರತ್ ರೈಲುಗಳು ಕೂಡ ಎಂಟ್ರಿಕೊಟ್ಟಿವೆ.

ಆದ್ರೆ ಹಳೆಯ ರೈಲುಗಳಿಗೆ ತನ್ನದೇ ಆದ ಇತಿಹಾಸವಿದೆ, ಅದರ ಗತ್ತೇ ಬೆರೆ ಎಂದರೆ ಒಪ್ಪಲೇಬೇಕು. ಸದ್ಯ ಭಾರತದಲ್ಲಿ ಹೆಚ್ಚು ಡೀಸೆಲ್ ಚಾಲಿತ ರೈಲುಗಳಿವೆ. ಡೀಸೆಲ್ ಎಂಜಿನ್‌ಗಳಲ್ಲಿ ಚಲಿಸುವ ರೈಲುಗಳು ಎಷ್ಟು ಮೈಲೇಜ್ ನೀಡುತ್ತವೆ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಮೂಡಿರುತ್ತದೆ ಅಲ್ಲವೇ? ಆದರೆ ಡೀಸೆಲ್ ರೈಲು ಟ್ಯಾಂಕ್ ಎಷ್ಟು ಲೀಟರ್ ಎಂದು ಮೊದಲು ತಿಳಿದುಕೊಳ್ಳುವುದು ಮುಖ್ಯ.

train-mileage-its-full-tank-diesel-is-6-000-liters

ಮಾಧ್ಯಮ ವರದಿಗಳ ಪ್ರಕಾರ, ಡೀಸೆಲ್ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಟ್ಯಾಂಕ್ ಅನ್ನು 5,000 ಲೀಟರ್, 5,500 ಲೀಟರ್ ಮತ್ತು 6,000 ಲೀಟರ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೈಲಿನ ಹೊರೆಗೆ ಅನುಗುಣವಾಗಿ, ಪ್ರತಿ ಕಿ.ಮೀಗೆ ಸರಾಸರಿ ಡೀಸೆಲ್ ಎಂಜಿನ್‌ ಅನ್ನು ನಿರ್ಧರಿಸಲಾಗುತ್ತದೆ. ಡೀಸೆಲ್ ಎಂಜಿನ್‌ಗಳ ಮೈಲೇಜ್ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ.

ಭಾರತೀಯ ರೈಲ್ವೇಯಲ್ಲಿ ಚಲಿಸುವ ರೈಲುಗಳು WAG, WAP, WAM, WDG, WDP ಹೆಸರಿನ ಎಂಜಿನ್‌ಗಳನ್ನು ಹೊಂದಿವೆ. ಈ ಮೂಲಕ ಭಾರತೀಯ ರೈಲ್ವೇಯಲ್ಲಿ ಓಡುವ ರೈಲುಗಳಲ್ಲಿ ರೈಲು ಎಂಜಿನ್‌ನ ಶಕ್ತಿ, ತೂಕ ಮತ್ತು ಪ್ರಯಾಣದ ದೂರವನ್ನು ಅವಲಂಬಿಸಿ ಮೈಲೇಜ್ ನೀಡುತ್ತವೆ. ರೈಲ್ವೆ ಪ್ರಕಾರ ಡೀಸಲ್ ಎಂಜಿನ್ ರೈಲಿನ ಮೈಲೇಜ್ ಎಷ್ಟು ಗೊತ್ತಾ?

train-mileage-its-full-tank-diesel-is-6-000-liters

12 ಬೋಗಿಗಳ ಪ್ಯಾಸೆಂಜರ್ ರೈಲು 6 ಲೀಟರ್‌ಗೆ ಒಂದು ಕಿ.ಮೀ ಮೈಲೇಜ್ ನೀಡುತ್ತದೆ. 24 ಬೋಗಿಗಳ ಎಕ್ಸ್‌ಪ್ರೆಸ್ ರೈಲು 6 ಲೀ.ಗೆ ಒಂದು ಕಿ.ಮೀ ಮತ್ತು 12 ಬೋಗಿಗಳ ಎಕ್ಸ್‌ಪ್ರೆಸ್ ರೈಲು 4.50 ಲೀ.ಗೆ ಒಂದು ಕಿಮೀ. ಮೈಲೇಜ್ ನೀಡುತ್ತದೆ. ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಓಡುತ್ತಿರುವ ರೈಲುಗಳ ಮೈಲೇಜ್ ಒಂದೇ ಆಗಿಲ್ಲ. ವರ್ಗಗಳ ಪ್ರಕಾರ ಅವು ಮೈಲೇಜ್ ನೀಡುತ್ತವೆ.

ಮೊದಲೇ ಹೇಳಿದ ಹಾಗೆ WAG, WAP, WAM, WDG, WDP ಈ ವರ್ಗಗಳನ್ನು ಅವಲಂಬಿಸಿ ರೈಲುಗಳು ಮೈಲೇಜ್ ನೀಡುತ್ತವೆ. ಇವುಗಳನ್ನು ವಿಸ್ತರಿಸಿ ಅರ್ಥ ನೋಡುವುದಾದ್ರೆ ಇವುಗಳಲ್ಲಿನ ಮೊದಲ ಅಕ್ಷರವು ರೈಲ್ವೆ ಹಳಿಗಳ ಗೇಜ್ ಅನ್ನು ಸೂಚಿಸುತ್ತದೆ. 'ಡಬ್ಲ್ಯೂ' ಎಂದರೆ ವೈಡ್ ಗೇಜ್ (ಐದು ಅಡಿ). ಎರಡನೇ ಅಕ್ಷರಗಳು 'A' ಮತ್ತು 'D' ಎಂಜಿನ್‌ನ ಪ್ರೇರಕ ಶಕ್ತಿಯನ್ನು ಸೂಚಿಸುತ್ತದೆ.

train-mileage-its-full-tank-diesel-is-6-000-liters

'ಎ' ಎಂದರೆ ಎಂಜಿನ್ ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ ಮತ್ತು 'ಡಿ' ಎಂದರೆ ಎಂಜಿನ್ ಡೀಸೆಲ್-ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ. ಮೂರನೇ ಅಕ್ಷರಗಳಾದ 'P', 'G', 'M' ಮತ್ತು 'S' ಇಂಜಿನ್‌ಗಳ ಉದ್ದೇಶಗಳನ್ನು ಸೂಚಿಸುತ್ತದೆ. 'ಪಿ' ಎಂದರೆ ಪ್ರಯಾಣಿಕರು. 'ಜಿ' ಎಂದರೆ ಸರಕು. 'ಎಂ' ಎಂದರೆ ಮಿಶ್ರಿತ ಮತ್ತು 'ಎಸ್' ಎಂದರೆ ಶಂಟಿಂಗ್.

ಈಗ ಕೋಡ್‌ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಎಂಜಿನ್ ಮೇಲೆ 'WAP' ಎಂದು ಬರೆದಿದ್ದರೆ, ಇದರರ್ಥ ಎಂಜಿನ್ ವಿಶಾಲ-ಗೇಜ್ ಟ್ರ್ಯಾಕ್‌ಗಳಲ್ಲಿ AC ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ. ಈ ಎಂಜಿನ್ ಪ್ಯಾಸೆಂಜರ್ ರೈಲನ್ನು ಎಳೆಯುತ್ತದೆ. ಅಂತೆಯೇ, 'WAG' ಎಂದರೆ ಮೇಲೆ ತಿಳಿಸಿದ ಅದೇ ಎಂಜಿನ್ ಆದರೆ ಅದು ಗೂಡ್ಸ್ ರೈಲನ್ನು ಎಳೆಯುತ್ತದೆ.

train-mileage-its-full-tank-diesel-is-6-000-liters

ನೀವು ಎಂಜಿನ್‌ನಲ್ಲಿ 'ಡಬ್ಲ್ಯೂಡಿಎಂ' ಚಿಹ್ನೆಯನ್ನು ಕಂಡರೆ, ಅದು ಡೀಸೆಲ್ ಪ್ರೇರಕ ಶಕ್ತಿಯಿಂದ ಚಲಿಸುತ್ತದೆ. ಸರಕು ಮತ್ತು ಪ್ರಯಾಣಿಕ ರೈಲುಗಳನ್ನು ಎಳೆಯುತ್ತದೆ ಎಂದರ್ಥ. 'M', 'P' ಅಥವಾ 'G' ಬದಲಿಗೆ 'S' ಇದ್ದರೆ, ಎಂಜಿನ್ ಅನ್ನು ಶಂಟಿಂಗ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ಶಂಟಿಂಗ್ ಎಂದರೆ ನಿರ್ವಹಣೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೋಚ್‌ಗಳು ಅಥವಾ ವ್ಯಾಗನ್‌ಗಳ ಚಲನೆ, ಇದು ಜೋಡಣೆ ಅಥವಾ ಡಿಕೌಪ್ಲಿಂಗ್‌ಗಾಗಿ ಲೈನ್ ಅನ್ನು ಮುಕ್ತಗೊಳಿಸುತ್ತದೆ. ಶಂಟಿಂಗ್ ಉದ್ದೇಶಗಳಿಗಾಗಿ ಬಳಸುವ ಎಂಜಿನ್‌ಗಳು ಸಾಮಾನ್ಯವಾಗಿ ಇತರ ಎಂಜಿನ್‌ಗಳಿಗಿಂತ ಕಡಿಮೆ ಶಕ್ತಿ ಹೊಂದಿರುತ್ತವೆ. ಮೇನ್‌ಲೈನ್ ಟ್ರ್ಯಾಕ್‌ಗಳನ್ನು ಶಂಟಿಂಗ್‌ಗಾಗಿ ವಿರಳವಾಗಿ ಬಳಸಲಾಗುತ್ತದೆ.

More from DriveSpark

Article Published On: Wednesday, August 9, 2023, 15:48 [IST]
English summary
Train mileage its full tank diesel is 6 000 liters
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+