Just In
- 4 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಒಂದು ಲೀ ಪೆಟ್ರೋಲ್ ಇದ್ದಿದ್ದರೆ ಶಿಶು ಪ್ರಾಣ ಉಳಿಯುತ್ತಿತ್ತಾ? ಲಂಕಾದಲ್ಲೊಂದು ದುರಂತ
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪ!
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ವಿವಿಧ ವರ್ಗಗಳ ವಾಹನಗಳಿಗೆ ಥರ್ಡ್ ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ (Third Party Motor Insurance) ಅನ್ನು ಹೆಚ್ಚಿಸಲು ಪ್ರಸ್ತಾಪ ಮಾಡಿದೆ. ಹೀಗಾಗಿ ಏಪ್ರಿಲ್ 1 ರಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ವಿಮಾ ವೆಚ್ಚದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಪ್ರಸ್ತಾಪಿಸಿದ ಪರಿಷ್ಕೃತ ದರದ ಪ್ರಕಾರ 1000 ಸಿಸಿ ಸಾಮರ್ಥ್ಯದ ಖಾಸಗಿ ಕಾರುಗಳಿಗೆ ರೂ. 2072 ಬದಲು ರೂ. 2,094 , 1000 ಸಿಸಿ ಯಿಂದ 1,500 ಸಿಸಿ ಖಾಸಗಿ ಕಾರುಗಳಿಗೆ ರೂ. 3,416 ಹಾಗೂ 1,500 ಸಿಸಿಗಿಂತ ಅಧಿಕ ಸಾಮರ್ಥ್ಯದ ಕಾರುಗಳಿಗೆ ರೂ. 7,897 ಪ್ರೀಮಿಯಂ ಧರವನ್ನು ನಿರ್ಧರಿಸಲಾಗಿದೆ.

ಅದೇ 150 ಸಿಸಿಯಿಂದ 350 ಸಿಸಿ ಸಾಮರ್ಥ್ಯದೊಳಗಿನ ದ್ವಿಚಕ್ರ ವಾಹನಗಳಿಗೆ ರೂ. 1,366 ಹಾಗೂ 350 ಸಿಸಿಗಿಂತ ಅಧಿಕ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ರೂ. 2,804 ಪ್ರೀಮಿಯಂ ಧರವನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ (Electric vehicles ) ಮೇಲೆ ಶೇ. 15 ರಷ್ಟು ರಿಯಾಯತಿ ನೀಡಲು ಪ್ರಸ್ತಾಪಿಸಲಾಗಿದೆ.

ಇದರಲ್ಲಿ ಸಂತಸದ ಸುದ್ದಿಯೂ ಇದೆ. ರಸ್ತೆ ಸಾರಿಗೆ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳ ಪ್ರೀಮಿಯಂ ಅನ್ನು ಶೇಕಡಾ 15 ರವರೆಗೆ ಕಡಿಮೆ ಮಾಡಲು ಪ್ರಸ್ತಾಪಿಸಿದೆ. ವೈಯಕ್ತಿಕ ಎಲೆಕ್ಟ್ರಿಕ್ ಕಾರುಗಳು, ದ್ವಿಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಪ್ರಯಾಣಿಕರ ವಾಹನಗಳಿಗೆ ಈ ಕೊಡುಗೆ ಅನ್ವಯಿಸುತ್ತದೆ.

ಇದೇ ಮೊದಲ ಬಾರಿಗೆ ರಸ್ತೆ ಸಾರಿಗೆ ಸಚಿವಾಲಯವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿದೆ (ಐಆರ್‌ಡಿಎಐ) ಸಮಾಲೋಚನೆ ನಡೆಸಿ ಥರ್ಡ್ ಪಾರ್ಟಿ ವಿಮೆ ಮೊತ್ತವನ್ನು ನಿರ್ಧರಿಸಲಿದೆ. ಸದ್ಯ, ವಿಮೆ ಕಂತು ಹೆಚ್ಚಳದ ನಿರ್ಧಾರವನ್ನು ಐಆರ್‌ಡಿಎಐ ತೆಗೆದುಕೊಳ್ಳುತ್ತಿದೆ.

ಹೈಬ್ರಿಡ್ ವಾಹನಗಳ ಥರ್ಡ್ ಪಾರ್ಟಿ ಮೋಟಾರು ವಾಹನ ಪ್ರೀಮಿಯಂ ಶುಲ್ಕವನ್ನು ಶೇಕಡಾ 7.5ರ ವರೆಗೆ ಕಡಿಮೆ ಮಾಡಲಾಗಿದೆ. 30 ಕಿಲೋ ವ್ಯಾಟ್ ಒಳಗಿನ ವಿದ್ಯುತ್ ಚಾಲಿತ ಕಾರಿನ ವಿಮಾ ಮೊತ್ತವು ರೂ. 1,780 ರಷ್ಟು ಹಾಗೂ 30 ಕಿಲೋ ವ್ಯಾಟ್‌ಗಿಂತ ಹೆಚ್ಚು ಮತ್ತು 65 ಕಿಲೋವ್ಯಾಟ್‌ಗಿಂತ ಕಡಿಮೆಯಿದ್ದರೆ ರೂ. 2,904 ನಿಗದಿಪಡಿಸಲಾಗಿದೆ.

ಸರಕುಗಳನ್ನು ನಿರ್ವಹಿಸುವ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ರೂ. 35,313 ರಿಂದ ರೂ. 44,242ರವರೆಗೆ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ನಮ್ಮ ವಾಹನಗಳಿಗೆ ಇತರರಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ಈ ವಿಮಾ ಯೋಜನೆ ಸಹಾಯ ಮಾಡುತ್ತದೆ. ಆದ್ದರಿಂದ ಎಲ್ಲಾ ವಾಹನ ಮಾಲೀಕರು ವಿಮಾ ಯೋಜನೆ ಖರೀದಿಸುವುದು ಕಡ್ಡಾಯ.

ಕೋವಿಡ್ ಸಾಂಕ್ರಾಮಿಕ ರೋಗದಿಂದ ಎರಡು ವರ್ಷಗಳ ವಿಳಂಬದ ನಂತರ, ಪರಿಷ್ಕೃತ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹಿಂದೆ, ವಿಮಾ ನಿಯಂತ್ರಕ ಐಆರ್‌ಡಿಎಐನಿಂದ ಟಿಪಿ ದರಗಳನ್ನು ಸೂಚಿಸಲಾಗುತ್ತಿತ್ತು. ರಸ್ತೆ ಸಾರಿಗೆ ಸಚಿವಾಲಯವು ವಿಮಾ ನಿಯಂತ್ರಕರೊಂದಿಗೆ ಸಮಾಲೋಚಿಸಿ ದರಗಳನ್ನು ಇದೇ ಮೊದಲ ಬಾರಿಯಾಗಿದೆ.

ಈ ಹಂತದಲ್ಲಿಯೇ ಭಾರತ ಸರ್ಕಾರವು ಥರ್ಡ್ ಪಾರ್ಟಿ ವಿಮಾ ಯೋಜನೆಯ ಶುಲ್ಕವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿದೆ. ಈ ಬಗ್ಗೆ ಸಮಾಲೋಚನೆಗೆ ಸರ್ಕಾರ ಕರೆ ನೀಡಿದೆ. ಮಾರ್ಚ್ ಅಂತ್ಯದೊಳಗೆ ಕರಡು ಅಧಿಸೂಚನೆಯ ಕುರಿತು ಸಲಹೆಗಳನ್ನು ನೀಡುವಂತೆ ಸಚಿವಾಲಯ ಆಹ್ವಾನಿಸಿದೆ.