ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಭಾರತದ ರಸ್ತೆಗಳಲ್ಲಿ ಎಂದಿಗೂ ವಾಹನಗಳ ವೇಗವನ್ನು ಪರೀಕ್ಷಿಸಬಾರದು. ಅದರಲ್ಲೂ ಟಾಪ್ ಸ್ಪೀಡ್ ಅನ್ನು ಪರೀಕ್ಷಿಸಲು ಹೋಗಲೇ ಬಾರದು. ಈ ಹಿಂದೆ ವೇಗವಾಗಿ ವಾಹನ ಚಲಾಯಿಸಿ ಜೀವ ಕಳೆದುಕೊಂಡ ಅನೇಕ ಘಟನೆಗಳು ನಡೆದಿವೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಅದೇನೇ ಇದ್ದರೂ, ಸಾಧ್ಯವಾದಷ್ಟು ಹೆಚ್ಚಿನ ವೇಗದಲ್ಲಿ ಬೈಕುಗಳನ್ನು ಚಲಾಯಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಅನೇಕ ಜನರಿದ್ದಾರೆ. ಭಾರತದ ರಸ್ತೆಗಳಲ್ಲಿ ವೇಗವಾಗಿ ಚಲಿಸುವುದು ಏಕೆ ಅತ್ಯಂತ ಅಪಾಯಕಾರಿ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಈ ವೀಡಿಯೊವನ್ನು ಪ್ರೊ ಶಿಫ್ಟರ್ ಆಗ್ನಿಕ್ ಎಂಬುವವರು ಅಪ್‍‍ಲೋಡ್ ಮಾಡಿದ್ದಾರೆ. ಅವರು ಭಾರತದ ಹೈವೇಯೊಂದರಲ್ಲಿ ವೇಗವಾಗಿ ಬೈಕ್ ಚಲಾಯಿಸಿ ಅದರ ವೀಡಿಯೊವನ್ನು ಅಪ್‍‍ಲೋಡ್ ಮಾಡಿದ್ದಾರೆ. ಖಾಲಿಯಿರುವ ಹೈವೇನಲ್ಲಿ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ನೇಕೆಡ್ ಬೈಕಿನಲ್ಲಿ ಕುಳಿತು ಬೈಕ್ ಸವಾರನು ವೇಗವಾಗಿ ಚಲಿಸುವುದರೊಂದಿಗೆ ಈ ವೀಡಿಯೊ ಶುರುವಾಗುತ್ತದೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಈ ವೀಡಿಯೊದ ಮೊದಲ ಭಾಗವು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ವೀಡಿಯೊದ ಎರಡನೇ ಭಾಗದಲ್ಲಿ ಭಾರತದ ರಸ್ತೆಗಳಲ್ಲಿನ ಪರಿಸ್ಥಿತಿಯನ್ನು ತೋರಿಸಲಾಗಿದೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಬೈಕ್ ಸವಾರನು ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುವುದನ್ನು ಕಾಣಬಹುದು. ಸ್ಪೀಡೊಮೀಟರ್‍‍ನಲ್ಲಿನ ರೀಡಿಂಗ್ 215 ಕಿ.ಮೀ ವೇಗವನ್ನು ತೋರಿಸುತ್ತಿದ್ದಂತೆಯೇ ಸಡನ್ನಾಗಿ ಸೈಕಲ್ ಸವಾರನೊಬ್ಬ ಸ್ಟ್ರೀಟ್ ಟ್ರಿಪಲ್ ಬೈಕಿಗೆ ಎದುರಾಗುತ್ತಾನೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಈ ಸೈಕಲ್ ಸವಾರನು ಸೈಕಲ್ ಅನ್ನು ತಳ್ಳುತ್ತಾ ರಸ್ತೆಯನ್ನು ದಾಟುತ್ತಿರುತ್ತಾನೆ. ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಸವಾರರಾದ ಅಗ್ನಿಕ್ ಸೈಕಲ್ ಅನ್ನು ನೋಡಿದ ತಕ್ಷಣವೇ ಬ್ರೇಕ್ ಹಾಕಿದ್ದಾರೆ. ಅಂತಹ ತುರ್ತು ಬ್ರೇಕಿಂಗ್ ಸಂದರ್ಭಗಳಲ್ಲಿ, ಎಬಿಎಸ್ ಹೊಂದಿಲ್ಲದ ಹೆಚ್ಚಿನ ಬೈಕುಗಳು ಲಾಕ್ ಆಗಿ ಬೈಕ್ ಸವಾರನನ್ನು ದೂರ ಎಸೆಯುತ್ತವೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಆದರೆ, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕಿನಲ್ಲಿ ಸ್ಟ್ಯಾಂಡರ್ಡ್ ಆಗಿ ಎಬಿಎಸ್ ಅನ್ನು ನೀಡುವುದರಿಂದ, ತಕ್ಷಣವೇ ಬ್ರೇಕ್ ಹಾಕಬಹುದು. ವೇಗದಲ್ಲಿದ್ದ ಬೈಕ್ ನಿಧಾನವಾಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. 215 ಕಿ.ಮೀ ವೇಗದಲ್ಲಿದ್ದ ಬೈಕಿನ ವೇಗವು ನಿಧಾನವಾಗುವುದನ್ನು ಕಾಣಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಎಬಿಎಸ್ ಹೊಂದಿಲ್ಲದ ಬೈಕುಗಳಲ್ಲಿ ಸಡನ್ನಾಗಿ ಬ್ರೇಕ್ ಹಾಕುವುದರಿಂದ ಬೈಕಿನ ವ್ಹೀಲ್‍‍ಗಳು ಸುಲಭವಾಗಿ ಲಾಕ್ ಆಗುತ್ತವೆ. 125 ಸಿಸಿಗಿಂತ ಹೆಚ್ಚಿನ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಯಾವುದೇ ದ್ವಿಚಕ್ರ ವಾಹನಗಳಿಗೆ ಭಾರತೀಯ ಮೋಟಾರು ವಾಹನ ಕಾಯ್ದೆಯನ್ವಯ ಎಬಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂಬುದನ್ನು ಗಮನಿಸಬೇಕು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಎ‍‍ಬಿ‍ಎಸ್ ದ್ವಿಚಕ್ರ ವಾಹನಗಳಲ್ಲಿ ಜೀವ ರಕ್ಷಕವಾಗಿ ಕೆಲಸ ಮಾಡುತ್ತದೆ. ಜೊತೆಗೆ ಕಡಿಮೆ ವೇಗದಲ್ಲಿಯೂ ಜೀವ ಉಳಿಸುತ್ತದೆ. ಭಾರತದ ರಸ್ತೆಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಹೆದ್ದಾರಿಗಳಲ್ಲಿ ಜನರು ಯಾವ ಕಡೆಯಿಂದ ಬಂದು ಯಾವ ಕಡೆಯಿಂದ ಹೋಗುತ್ತಾರೆ ಎಂಬುದೇ ತಿಳಿಯುವುದಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಭಾರತದಲ್ಲಿರುವ ಬಹುತೇಕ ಹೆದ್ದಾರಿಗಳು ಹೆಚ್ಚು ಜನರಿರುವ ಪಟ್ಟಣಗಳು ಹಾಗೂ ನಗರಗಳ ಮೂಲಕ ಹಾದು ಹೋಗುತ್ತವೆ. ಇವು ವೇಗವಾಗಿ ಚಲಿಸುವ ವಾಹನಗಳಿಗೆ ಅಪಾಯಕಾರಿಯಾಗಿವೆ. ಈ ಪ್ರದೇಶಗಳಲ್ಲಿ ವಾಸಿಸುವವರು ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಹೇಗೆಂದರೆ ಹಾಗೆ ರಸ್ತೆ ದಾಟುತ್ತಾರೆ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಇದರಿಂದ ವೇಗವಾಗಿ ಚಲಿಸುವ ವಾಹನಗಳಿಂದ ಅಪಾಯವಾಗುವುದು ಖಚಿತ. ಹೆಚ್ಚಿನ ವೇಗದಲ್ಲಿರುವ ವಾಹನಗಳು ಬ್ರೇಕ್‌ಗಳನ್ನು ಹಾಕಿದಾಗ ತಕ್ಷಣಕ್ಕೆ ನಿಲ್ಲುವುದಿಲ್ಲ. ಇದು ಅಪಘಾತಗಳಿಗೆ ಕಾರಣವಾಗಬಹುದು. ಪ್ರಾಣ ಹೋಗಲೂ ಬಹುದು.

ಹೆದ್ದಾರಿಗೆ ನುಗ್ಗಿ ಬರುವ ದನಕರುಗಳು ಹಾಗೂ ರಸ್ತೆಯಲ್ಲಿ ಚಲಿಸುವವರು ಸಹ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ಕಾರಣಕ್ಕಾಗಿ ಹೆದ್ದಾರಿಗಳಲ್ಲಿ ಸಾಗುವಾಗ ಕ್ರಾಸ್‌ರೋಡ್‌ಗಳಲ್ಲಿ ನಿಧಾನವಾಗಿ ಚಲಿಸುವುದು ಮುಖ್ಯ.

ಜಸ್ಟ್ ಮಿಸ್ ಆದ 215 ಕಿ.ಮೀ ವೇಗದಲ್ಲಿದ್ದ ಟ್ರಯಂಫ್ ಬೈಕ್ ಅಪಘಾತ..!

ಹೆದ್ದಾರಿಗಳಲ್ಲಿ ಹಾಗೂ ನಗರಗಳಲ್ಲಿ ವೇಗದ ಮಿತಿಯಲ್ಲಿ ಚಲಿಸುವುದರಿಂದ ವಾಹನವನ್ನು ನಿಯಂತ್ರಿಸಬಹುದಾಗಿದೆ. ಭಾರತದ ರಸ್ತೆಗಳಲ್ಲಿ ಮಿತಿಯಾದ ವೇಗದಲ್ಲಿ ಸವಾರಿ ಮಾಡುವುದು ಬಹಳ ಮುಖ್ಯ. ಭಾರತದಲ್ಲಿ ವೇಗವು ಏಕೆ ಅಪಾಯಕಾರಿ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

Source: ProShifter Agnik/YouTube

Most Read Articles

Kannada
English summary
Triumph street triple high speed crash near miss at 215 kmph - Read in Kannada
Story first published: Monday, November 25, 2019, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X