ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಕ್ರಿಸ್ ಜೆನ್ನರ್ ಅಮೆರಿಕಾದ ಜನಪ್ರಿಯ ಖಾಸಗಿ ಟಿವಿ ಶೋದ ನಿರೂಪಕಿ. ಇವರು ಇತ್ತೀಚಿಗೆ ಹೊಸ ತಲೆಮಾರಿನ ರೋಲ್ಸ್ ರಾಯ್ಸ್‌ ಘೋಸ್ಟ್ ಕಾರ್ ಅನ್ನು ಖರೀದಿಸಿದ್ದಾರೆ. ಕ್ರಿಸ್ ಜೆನ್ನರ್ ಅಮೇರಿಕಾದಲ್ಲಿ ಈ ಕಾರು ಖರೀದಿಸಿದ ಮೊದಲ ವ್ಯಕ್ತಿ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಈ ಕಾರಣಕ್ಕೆ ಬಹುತೇಕ ಎಲ್ಲಾ ಅಮೆರಿಕನ್ನರು ಇವರತ್ತ ಗಮನ ಹರಿಸಿದ್ದಾರೆ. 2021ರ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಇತ್ತೀಚೆಗೆ ಭಾರತಕ್ಕೂ ತಲುಪಿದೆ. ಕೆಲ ಭಾರತೀಯರು ಶೀಘ್ರದಲ್ಲೇ ಈ ಕಾರನ್ನು ಪಡೆಯಲಿದ್ದಾರೆ. ಈ ಸಂದರ್ಭದಲ್ಲಿಯೇ ಕ್ರಿಸ್ ಜೆನ್ನರ್ ಈ ಕಾರನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ರೋಲ್ಸ್ ರಾಯ್ಸ್ ಕಾರುಗಳು ಐಷಾರಾಮಿ ಫೀಚರ್'ಗಳನ್ನು ಇಷ್ಟಪಡುವ ಉದ್ಯಮಿಗಳ ನೆಚ್ಚಿನ ಕಾರ್ ಆಗಿದೆ. ಐಷಾರಾಮಿ ಫೀಚರ್ ಗಳನ್ನು ಹೊಂದಿರುವ ಈ ಕಾರು ಸಹಜವಾಗಿಯೇ ದುಬಾರಿ ಬೆಲೆಯನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಟಿವಿ ಶೋ ನಿರೂಪಕರೊಬ್ಬರು ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿರುವುದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಕ್ರಿಸ್ ಜೆನ್ನರ್ ಮೆಟಲ್ ಬ್ಲಾಕ್ ಬಣ್ಣದ ಕಾರನ್ನು ಖರೀದಿಸಿದ್ದಾರೆ. ಅವರು ಕಾರಿನ ಜೊತೆ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಕ್ರಿಸ್ ಜೆನ್ನರ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಅವರು 15 ಕಾರುಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ಅವರ ಬಳಿಯಿರುವ ಕಾರುಗಳೆಲ್ಲವೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಎಂಬುದು ವಿಶೇಷ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಈಗ ಹೊಸ ತಲೆಮಾರಿನ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅವರ ಗ್ಯಾರೇಜಿಗೆ ಹೊಸ ಸೇರ್ಪಡೆಯಾಗಿದೆ. ಈ ಕಾರಿನಲ್ಲಿ 6.75 ಲೀಟರಿನ ಟ್ವಿನ್ ಟ್ರೋಚಾರ್ಜ್ಡ್ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಈ ಎಂಜಿನ್ 563 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಫೋರ್ ವ್ಹೀಲ್ ಡ್ರೈವ್ ಹೊಂದಿದೆ ಎಂಬುದು ಗಮನಾರ್ಹ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಹೆಚ್ಚುವರಿ ಅನುಕೂಲಕ್ಕಾಗಿ ಈ ಕಾರಿನಲ್ಲಿ ಸ್ಯಾಟಲೈಟ್ ಟ್ರಾನ್ಸ್ ಮಿಷನ್ ಸಿಸ್ಟಂ ಅಳವಡಿಸಲಾಗಿದೆ. ಇದರಿಂದಾಗಿ ಜಿಪಿಎಸ್ ಹಾಗೂ ಚೇಂಜ್ ಗೇರ್ ಮೂಲಕ ರಸ್ತೆಯ ಸ್ಥಿತಿಯನ್ನು ಮುಂಚಿತವಾಗಿ ತಿಳಿಯಲು ಸಾಧ್ಯವಾಗಲಿದೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಈ ವಿಶಿಷ್ಟ ಫೀಚರ್ ಬೇರೆ ಯಾವುದೇ ಕಾರಿನಲ್ಲಿ ಕಂಡುಬರುವುದಿಲ್ಲ. ಇದರ ಜೊತೆಗೆ ಈ ಕಾರಿನಲ್ಲಿರುವ ಹಿಂದಿನ ವ್ಹೀಲ್'ಗೆ ಆಟೋಮ್ಯಾಟಿಕ್ ಹೈಟ್ ಅಡ್ಜಸ್ಟಬಲ್ ಮಾಡುವ ಏರ್ ಸಸ್ಪೆಂಷನ್ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಟಿವಿ ಶೋ ನಿರೂಪಕಿ

ಇದರಿಂದ ರಸ್ತೆಯಲ್ಲಿ ಪ್ರಯಾಣಿಸುವಾಗ ನೀರಿನ ಮೇಲೆ ತೇಲುವ ಅನುಭವವನ್ನು ಪಡೆದಂತಾಗುತ್ತದೆ. ಈ ಕಾರು ಹದಗೆಟ್ಟ ರಸ್ತೆಗಳಲ್ಲಿ ಚಲಿಸಿದರೂ ಕುಲುಕಿದ ಅನುಭವವಾಗುವುದಿಲ್ಲ ಎಂಬುದು ಗಮನಾರ್ಹ. 2021ರ ರೋಲ್ಸ್ ರಾಯ್ಸ್ ಘೋಸ್ಟ್‌ ಕಾರಿನ ಬೆಲೆ ಸುಮಾರು ರೂ.6.95 ಕೋಟಿಗಳಾಗಿದೆ.

Most Read Articles

Kannada
English summary
TV show anchor Kris Jenner gets delivery of new Rolls Royce Ghost. Read in Kannada.
Story first published: Monday, December 14, 2020, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X