TVS XLಗೆ ವಿಐಪಿ ನಂಬರ್ ಪ್ಲೇಟ್‌: ಈ ಪರಿ ಬೆಲೆನಾ.. ನಿಜಕ್ಕೂ ಆಶ್ಚರ್ಯವಾಗುತ್ತೆ!

ಶ್ರೀಮಂತ ಉದ್ಯಮಿಗಳು, ಸೆಲೆಬ್ರಿಟಿಗಳು ತಮ್ಮ ವಾಹನಗಳಿಗೆ ಬೇಕಾದ ಫ್ಯಾನ್ಸಿ ನಂಬರ್ ಅನ್ನು ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಇಲಾಖೆಗಳು ನಡೆಸುವ ಹರಾಜಿನಲ್ಲಿ ಲಕ್ಷಗಟ್ಟಲೇ ಹಣ ನೀಡಿ, ಪಡೆಯುವ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಆದರೆ, ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ 'ಟಿವಿಎಸ್ ಎಕ್ಸ್ಎಲ್' ಸಂಖ್ಯೆಯನ್ನು ನೋಡಿದರೆ, ಎಂತಹವರಿಗೂ ಒಮ್ಮೆ ಆಶ್ಚರ್ಯವಾಗುತ್ತದೆ.

ಈ ಕುರಿತಂತೆ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಪೋಸ್ಟ್ ವೊಂದನ್ನು ಮಾಡಲಾಗಿದೆ. ಟ್ರಾಫಿಕ್ ಸಿಗ್ನಲ್ ಸಮೀಪ ವಿಐಪಿ ನಂಬರ್ ಪ್ಲೇಟ್ ಹೊಂದಿರುವ ಟಿವಿಎಸ್ ಎಕ್ಸ್ಎಲ್ 100 (TVS XL 100) ಮೊಪೆಡ್ ವಿಡಿಯೋ ಸೆರೆಸಿಕ್ಕಿದೆ. ನೋಂದಣಿ ಸಂಖ್ಯೆಯನ್ನು ಗಮನಿಸಿದಾಗ ಪಂಜಾಬ್ ರಾಜ್ಯಕ್ಕೆ ಈ ದ್ವಿಚಕ್ರ ವಾಹನ ಸೇರಿದೆ ಎಂದು ಹೇಳಬಹುದು. ಆದರೆ, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

TVS XLಗೆ ವಿಐಪಿ ನಂಬರ್ ಪ್ಲೇಟ್‌: ಈ ಪರಿ ಬೆಲೆನಾ.. ನಿಜಕ್ಕೂ ಆಶ್ಚರ್ಯವಾಗುತ್ತೆ!

ಸಾಮಾನ್ಯವಾಗಿ 0001 ಮತ್ತು 0010ರ ನಡುವಿನ ಸಂಖ್ಯೆಯನ್ನು ಫ್ಯಾನ್ಸಿ ನಂಬರ್ ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಶ್ರೀಮಂತರು ಎಷ್ಟೇ ಖರ್ಚಾದರೂ ಈ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ವಿಡಿಯೋದಲ್ಲಿ ಕಂಡುಬಂದಿರುವ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ 'PB07B X0009' ನೋಂದಣಿ ಸಂಖ್ಯೆಯನ್ನು ಹೊಂದಿರುವುದು ವಿಶೇಷವಾಗಿದೆ. ಅದರಲ್ಲಿಯೂ ತೀರಾ ಕಡಿಮೆ ಬೆಲೆಯ ಈ ಮೊಪೆಡ್ ಫ್ಯಾನ್ಸಿ ನಂಬರ್ ಹೊಂದಿರುವುದು ಬಹುತೇಕರನ್ನು ಚಕಿತಗೊಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿ, ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ ಬೆಲೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾನೆ. ಅಲ್ಲಿ ರೂ.53,000 ದರವನ್ನು ತೋರಿಸುತ್ತದೆ. ಆ ಬಳಿಕ ವಿಐಪಿ ನಂಬರ್ ಪ್ಲೇಟ್ '0009' ದರವನ್ನು ಹುಡುಕಿದಾಗ ಬರೋಬ್ಬರಿ ರೂ.3 ಲಕ್ಷ ಬೆಲೆ ಎಂದು ಕಂಡು ಬರುತ್ತದೆ.

ಈತನ ಲೆಕ್ಕವನ್ನು ನೋಡಿದಾಗ ಎಂತಹವರಿಗಾದರೂ ಇದು ಬೇರೆಯದ್ದೇ ರೀತಿಯಲ್ಲಿ ಕಾಣುತ್ತದೆ. ಯಾರಿಗೆ ಆಗಲಿ, ಆ ದ್ವಿಚಕ್ರ ವಾಹನದ ಬೆಲೆಗಿಂತ ಸರಿ ಸುಮಾರು ಆರು ಪಟ್ಟು ಅಧಿಕ ಹಣ ನೀಡಿ, ಫ್ಯಾನ್ಸಿ ನಂಬರ್ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಏಳುತ್ತವೆ. ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು, ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ಗೆ ಇಷ್ಟೊಂದು ಬೆಲೆ ಇರುವುದಿಲ್ಲ. ಇದು ಕಾರಿನ ಸಂಖ್ಯೆಯ ಬೆಲೆಯಾಗಿರಬೇಕು ಎಂದು ಹೇಳಿದ್ದಾರೆ.

ಅದು ಏನೇ ಆಗಿರಲಿ ಜನಮೆಚ್ಚಿನ ವಾಹನ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ ಬಗ್ಗೆ ಮಾತನಾಡುವದಾದರೆ, ಇದು, ರೂಪಾಂತರಗಳಿಗೆ ಅನುಗುಣವಾಗಿ ರೂ.46,456 ದಿಂದ ರೂ. 58,065 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಭಾರತದಲ್ಲಿ ಟಿವಿಎಸ್ ಎಕ್ಸ್ಎಲ್ ಅನ್ನು ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುವುದರಿಂದ ಕೊಂಚ ಪವರ್ ಫುಲ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಟಿವಿಎಸ್ ಎಕ್ಸ್ಎಲ್ 100 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 100 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದೆ. 6,000 rpmನಲ್ಲಿ 4.4 bhp ಗರಿಷ್ಠ ಪವರ್ ಹಾಗೂ 3,500 rpmನಲ್ಲಿ 6.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 51.5 kmpl ಮೈಲೇಜ್ ನೀಡುತ್ತದೆ.

ಟಿವಿಎಸ್ ಎಕ್ಸ್ಎಲ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆನ್ಷನ್, ರೇರ್ ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ಸ್ ಪಡೆದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ ಹಾಗೂ ರೇರ್ ಡ್ರಮ್‌ ಬ್ರೇಕ್ ಆಯ್ಕೆಯನ್ನು ಹೊಂದಿದೆ. 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಇದ್ದು, ಸೀಟ್ ಎತ್ತರ 781 ಎಂಎಂ ಇದೆ.

Article Published On: Tuesday, June 27, 2023, 17:08 [IST]
English summary
Tvs xl seen rs 3 lakh vip number plate details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+