20 ನಿಮಿಷದ ಪ್ರಯಾಣಕ್ಕೆ ಉಬರ್ ಚಾರ್ಜ್ ಮಾಡಿದ್ದು ಬರೋಬ್ಬರಿ 9.27 ಲಕ್ಷ..!
ಪ್ರಯಾಣಿಕರಿಂದ ಪಡೆಯುವ ಮೊತ್ತಕ್ಕೆ ಸರಿಯಾದ ಸೇವೆಯನ್ನು ಒದಗಿಸುವಲ್ಲಿ ಕೆಲ ಬಾರಿ ವಿಫಲವಾಗುತ್ತಿರುವ ಕ್ಯಾಬ್ ಸೇವಾ ಸಂಸ್ಥೆಗಳು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ.
ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಆ್ಯಪ್ ಆಧರಿತ ಕ್ಯಾಬ್ ಸೇವೆಗಳ ಜನಪ್ರಿಯತೆ ಹೆಚ್ಚುತ್ತಿದೆ. ಆದ್ರೆ ಪ್ರಯಾಣಿಕರಿಂದ ಪಡೆಯುವ ಮೊತ್ತಕ್ಕೆ ಸರಿಯಾದ ಸೇವೆಯನ್ನು ಒದಗಿಸುವಲ್ಲಿ ಕೆಲ ಬಾರಿ ವಿಫಲವಾಗುತ್ತಿರುವ ಕ್ಯಾಬ್ ಸೇವಾ ಸಂಸ್ಥೆಗಳು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ.

ಹೌದು.. ತುರ್ತಾಗಿ ಒಂದು ಕಡೆಗೆ ಪ್ರಯಾಣಿಸಬೇಕಾದರೆ ನಾವು ಆನ್‌ಲೈನ್ ಆಧಾರಿತ ಕ್ಯಾಬ್‌ಗಳಲ್ಲಿ ಹೆಚ್ಚುವರಿ ಮೊತ್ತ ಇದ್ದರೂ ಆ ಬಗ್ಗೆ ಯೋಚಿಸದೇ ನಿಗದಿತ ಅವಧಿಯಲ್ಲಿ ಪ್ರಯಾಣಿಸುವ ಉದ್ದೇಶದಿಂದ ಕ್ಯಾಬ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೆವೆ. ಆದ್ರೆ ಕ್ಯಾಬ್ ಸೇವೆಗಳು ಪ್ರಯಾಣಿಕರಿಗೆ ಕೆಲ ಬಾರಿ ಆಘಾತ ಉಂಟು ಮಾಡುತ್ತವೆ.

ಇದಕ್ಕೆ ನಿದರ್ಶನವೆಂದರೆ ಕೆನಡಾದ ವ್ಯಕ್ತಿಯೊಬ್ಬ ಯಾವುದೇ ಸರ್ಜಿಂಗ್ ಮೊತ್ತ(ಹೆಚ್ಚುವರಿ ಚಾರ್ಜ್)ವಿಲ್ಲದಿದ್ದರೂ ರೂ. 9,27,300 (14,400 ಡಾಲರ್) ಬಿಲ್ ಪಡೆದಿದ್ದಾರೆ. ಅದೂ ಕೇವಲ 7.7 ಕಿ.ಮೀ ದೂರದ ಪ್ರಯಾಣಕ್ಕೆ.
Recommended Video


ಆದರೆ ನ್ಯಾಯವಾಗಿ ಉಬರ್ ಚಾರ್ಚ್ ಮಾಡಬೇಕಿದ್ದದ್ದು ರೂ. 900 ರಿಂದ ರೂ. 1,000 ವರೆಗೆ. ಹೀಗಾಗಿ ಉಬರ್ ಕ್ರಮ ಖಂಡಿಸಿ ಈ ವ್ಯಕ್ತಿಯು ಬಿಲ್‌ನ ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್, ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕನಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕೆಂದು ಉಬರ್ ಸಂಸ್ಥೆ ಮೇಲೆ ಒತ್ತಡ ತಂದಿದ್ದು, ಘಟನೆಯಿಂದ ಎಚ್ಚೆತ್ತುಕೊಂಡ ಉಬರ್ ಸಂಸ್ಥೆಯು ನಡೆದ ಘಟನೆಗೆ ಕ್ಷಮೆ ಕೇಳಿದೆ.
ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಬಳಿಕ ಗ್ರಾಹಕನಿಗೆ ಸಂಪೂರ್ಣ ಹಣವನ್ನು ಮರಳಿಸಿದ ಉಬರ್ ಸಂಸ್ಥೆಯು ಟ್ವಿಟರ್ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿದ್ದಲ್ಲದೇ ಹಣ ಮರುಕಳಿಸಿದ ಕುರಿತೂ ಮಾಹಿತಿ ನೀಡಿದೆ.

ಇನ್ನು ಕಳೆದ ಏಪ್ರಿಲ್‌ನಲ್ಲಿ ಮುಂಬೈನ ಮೂಲದ ವ್ಯಕ್ತಿಯೊಬ್ಬರಿಗೆ ಓಲಾ 300 ಮೀಟರ್ ಪ್ರಯಾಣಕ್ಕೆ 149 ಕೋಟಿ ರೂ. ದರ ವಿಧಿಸಿದ್ದನ್ನು ನೆನಪಿಸಿಕೊಳ್ಳಬಹುದು. ಆದರೂ ಇಂತಹ ಘಟನೆಗಳು ಮರುಕಳಿಸುತ್ತಿರುವ ತುಂಬಾ ಬೇಸರ ಸಂಗತಿ ಎಂದು ಹೇಳಬಹುದು.
ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!


Click it and Unblock the Notifications








