ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ದೇಶದಲ್ಲಿ ಸೆಮಿಕಂಡಕ್ಟರ್ ಹಾಗೂ ಡಿಸ್ ಪ್ಲೇ ಬೋರ್ಡ್ ಉತ್ಪಾದನೆಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮೋದನೆ ನೀಡಿದೆ. ಪಿಎಲ್ಐ ಯೋಜನೆಯಡಿಯಲ್ಲಿ ಮುಂದಿನ 5ರಿಂದ 6 ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗಾಗಿ ರೂ. 76,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಪಿಎಲ್ಐ ಯೋಜನೆಯು ದೊಡ್ಡ ಪ್ರಮಾಣದ ಆಟೋಮೊಬೈಲ್ ಉತ್ಪಾದನೆ, ಆಟೋ ಘಟಕಗಳ ತಯಾರಿಕೆ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಉಪಕರಣ ತಯಾರಕರನ್ನು ಪ್ರೋತ್ಸಾಹಿಸುತ್ತದೆ. ಈ ನಿರ್ಧಾರದ ಬಗ್ಗೆ ಮಾತನಾಡಿದ ಟೆಲಿಕಾಂ ಹಾಗೂ ಐಟಿ ಸಚಿವರಾದ ಅಶ್ವಿನಿ ವೈಷ್ಣವ್, ಮೈಕ್ರೋಚಿಪ್‌ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು, ಪ್ಯಾಕಿಂಗ್ ಮಾಡಲು ಹಾಗೂ ಪರೀಕ್ಷಿಸಲು ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ಯೋಜನೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಭಾರತದಲ್ಲಿ ಚಿಪ್ ತಯಾರಿಕೆಗಾಗಿ ಈ ಪಿಎಲ್ಐ ಯೋಜನೆಯು ದೇಶದ ಆಟೋ ವಲಯಕ್ಕೆ ಸಾಕಷ್ಟು ಸಹಾಯ ಮಾಡುವ ನಿರೀಕ್ಷೆಗಳಿವೆ. ಜಾಗತಿಕ ವಾಹನ ಉದ್ಯಮದಂತೆಯೇ ಭಾರತೀಯ ಆಟೋ ಮೊಬೈಲ್ ಉದ್ಯಮವು ಸಹ ಚಿಪ್ ಕೊರತೆಯಿಂದ ಪ್ರಮುಖ ಸಮಸ್ಯೆಗಳನ್ನು ಎದುರಿಸಿತು. ಕೋವಿಡ್ 19 ಸಾಂಕ್ರಾಮಿಕದ ನಂತರ ವಿಶ್ವದಾದ್ಯಂತ ಸೆಮಿಕಂಡಕ್ಟರ್ ಚಿಪ್ ಗಳಿಗೆ ಕೊರತೆ ಎದುರಾಗಿದೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಕಳೆದ ವರ್ಷ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಗ್ರಾಹಕ ತಂತ್ರಜ್ಞಾನ ಉತ್ಪನ್ನ ತಯಾರಕರಿಂದ ಚಿಪ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಯಿತು. ಚಿಪ್ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬೇಡಿಕೆಗೆ ತಕ್ಕಂತೆ ಬದಲಾಯಿಸಿದರು.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಆಟೋ ಉದ್ಯಮವು ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಮೈಕ್ರೋಚಿಪ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು. ಈ ಸಂದರ್ಭದಲ್ಲಿ ಚಿಪ್ ತಯಾರಕ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಚಿಪ್ ಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಸಾಕಷ್ಟು ಸಮಸ್ಯೆ ಎದುರಾಯಿತು. ಚಿಪ್ ಬಿಕ್ಕಟ್ಟು ಆರಂಭವಾದ ನಂತರ ಸ್ಥಳೀಯವಾಗಿ ಚಿಪ್ ಉತ್ಪಾದನಾ ಘಟಕಗಳನ್ನು ತೆರೆಯುವ ಬಗ್ಗೆ ಚರ್ಚೆಗಳಾದವು. ಈಗ ಹೊಸದಾಗಿ ಅನುಮೋದಿಸಲಾದ ಪಿಎಲ್ಐ ಯೋಜನೆಯಿಂದಾಗಿ ಚಿಪ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಸೆಮಿಕಂಡಕ್ಟರ್‌ಗಳೆಂದರೇನು?

ಸೆಮಿಕಂಡಕ್ಟರ್‌ಗಳು ಸಿಲಿಕಾನ್‌ನಿಂದ ಮಾಡಿದ ಎಲೆಕ್ಟ್ರಾನಿಕ್ ಚಿಪ್‌ಗಳಾಗಿವೆ. ಕಾರುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿನ ಕರೆಂಟ್ ಅನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತವೆ. ಈಗ ಸೆಮಿಕಂಡಕ್ಟರ್‌ಗಳು ಕಾರುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಕಾರುಗಳು ಸೆಮಿಕಂಡಕ್ಟರ್‌ಗಳನ್ನು ಹೊಂದಿವೆ. ಸೆಮಿಕಂಡಕ್ಟರ್‌ಗಳಿಲ್ಲದೇ ಕಾರುಗಳನ್ನು ಹೈಟೆಕ್ ಮಾಡಲು ಸಾಧ್ಯವಿಲ್ಲ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಡಿಸ್ ಪ್ಲೇ ಪ್ಯಾನೆಲ್‌, ನ್ಯಾವಿಗೇಷನ್, ಲೈಟ್‌, ಪವರ್ ಸ್ಟೀಯರಿಂಗ್ ಹಾಗೂ ಬಹುತೇಕ ಎಲ್ಲಾ ಸ್ವಯಂಚಾಲಿತ ಫೀಚರ್ ಗಳಿಗಾಗಿ ಕಾರ್‌ಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ. ಚಿಪ್ ಕೊರತೆಯಿಂದಾಗಿ ಆಟೋಮೊಬೈಲ್ ಉದ್ಯಮದಲ್ಲಿ ಸೆಮಿಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿದೆ. ಇದರಿಂದ ಕಾರುಗಳನ್ನು ನಿಗದಿತ ಸಂಖ್ಯೆಯಲ್ಲಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಸೆಮಿಕಂಡಕ್ಟರ್ ಕೊರತೆಗೆ ಕಾರಣಗಳು

ಸೆಮಿಕಂಡಕ್ಟರ್‌ಗಳನ್ನು ನೂರಾರು ವಿವಿಧ ರೀತಿಯ ಚಿಪ್‌ಗಳಿಂದ ತಯಾರಿಸಲಾಗುತ್ತದೆ. ಸದ್ಯಕ್ಕೆ ಉತ್ತಮ ಗುಣಮಟ್ಟದ ಚಿಪ್‌ಗಳನ್ನು Qualcomm Inc ಹಾಗೂ Intel Corp ನಂತಹ ಕಂಪನಿಗಳು ಪೂರೈಸುತ್ತವೆ. ಆದರೆ ಕರೋನಾ ಸಾಂಕ್ರಾಮಿಕವು ಕಂಪನಿಗಳ ಚಿಪ್‌ ಪೂರೈಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಸೆಮಿಕಂಡಕ್ಟರ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಇದಲ್ಲದೆ ಸ್ಮಾರ್ಟ್‌ಫೋನ್‌, ಟಿವಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸೆಮಿಕಂಡಕ್ಟರ್‌ಗಳ ಬಳಕೆ ಹೆಚ್ಚಾಗಿದೆ, ಇದರಿಂದ ಉತ್ಪಾದನಾ ಕಂಪನಿಗಳು ನಿರೀಕ್ಷಿತ ಪ್ರಮಾಣದಲ್ಲಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಾರುಗಳಲ್ಲಿ ಬಳಸುವ ಕೆಲವು ಸೆಮಿಕಂಡಕ್ಟರ್ ಚಿಪ್‌ಗಳ ಬೆಲೆ ಹೆಚ್ಚಾಗಿದೆ. ಕಾರುಗಳಲ್ಲಿರುವ ಡಿಸ್ ಪ್ಲೇ ಡ್ರೈವರ್ ಚಿಪ್‌ಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಇದನ್ನು ಟೆಲಿವಿಷನ್‌, ಲ್ಯಾಪ್‌ಟಾಪ್‌, ಕಾರು ಹಾಗೂ ವಿಮಾನಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಪವರ್ ಮ್ಯಾನೇಜ್‌ಮೆಂಟ್ ಚಿಪ್‌ಗಳಿಗೆ ಕೊರತೆ ಎದುರಾಗಿದೆ. ಇದರಿಂದ ಫೋರ್ಡ್ ಮೋಟಾರ್, ನಿಶಾನ್, ಫೋಕ್ಸ್‌ವ್ಯಾಗನ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಬೇಕಾಗಿದೆ. ಅಂದಾಜಿನ ಪ್ರಕಾರ, ಈ ಚಿಪ್‌ನ ಪೂರೈಕೆಯ ಕೊರತೆಯಿಂದಾಗಿ, ವಿಶ್ವದ ಕಾರು ಉದ್ಯಮವು ಈ ವರ್ಷ 60 ಶತಕೋಟಿ ಡಾಲರ್ ನಷ್ಟು ಅನುಭವಿಸಿದೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಪಿಎಲ್‌ಐ ಯೋಜನೆ ಬಗ್ಗೆ:

ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪಿಎಲ್‌ಐ ಯೋಜನೆಯನ್ನು ಆರಂಭಿಸಿದೆ. ದೇಶಿಯ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ 2020 - 21ರ ಬಜೆಟ್‌ನಲ್ಲಿ 13 ಉದ್ಯಮ ವಲಯಗಳಿಗೆ ರೂ. 1.97 ಲಕ್ಷ ಕೋಟಿಗಳ ಪಿಎಲ್‌ಐ ಯೋಜನೆಯನ್ನು ಘೋಷಿಸಿತ್ತು. ಇದರಲ್ಲಿ ಆಟೋ ಮೊಬೈಲ್ ಉದ್ಯಮಕ್ಕೆ ಸುಮಾರು ರೂ. 57 ಸಾವಿರ ಕೋಟಿ ಘೋಷಿಸಲಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government approves pli scheme for chip production details
Story first published: Wednesday, December 15, 2021, 20:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X