ಬಹುನಿರೀಕ್ಷಿತ ಮಾರುತಿ ಇನ್ವಿಕ್ಟೋ ಸೇರಿ ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಕಾರುಗಳಿವು: ನಿಮ್ಮ ಫೇವರಿಟ್‌ ಯಾವುದು

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯು ಜುಲೈ ೨೦೨೩ ರಲ್ಲಿ ಹೊಸ ಕಾರುಗಳನ್ನು ಸ್ವಾಗತಿಸಲು ಸಿದ್ದವಾಗಿದೆ. ಈಗಾಗಲೇ ಕಾರು ಪ್ರೇಮಿಗಳು ಇದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಬಿಡುಗಡೆಯಾಗುವ ಕಾರುಗಳು ಹೇಗೆ ಜನರ ಮನಸ್ಸನ್ನು ಗೆಲ್ಲುತ್ತದೆ, ಮಾರುಕಟ್ಟೆಯಲ್ಲಿ ಯಾವರೀತಿ ತನ್ನ ಛಾಪನ್ನು ಮೂಡಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಕಾರುಗಳಲ್ಲಿ ಮಾರುತಿ ಸುಜುಕಿ, ಕಿಯಾ ಮತ್ತು ಹ್ಯುಂಡೈ ಕಂಪನಿಗಳು ಸೇರಿವೆ. ಮಾರುತಿ ಸುಜುಕಿಯ ಬುಹುನಿರೀಕ್ಷಿತ ಪ್ರೀಮಿಯಂ ಎಸ್‌ಯುವಿ ಇನ್‌ವಿಕ್ಟೋ (Maruti Suzuki Invicto), ಹ್ಯುಂಡೈ ಎಕ್ಸ್ಟೆರ್‌, ಮತ್ತು ಕಿಯಾ ಕಂಪನಿಯ ಸೆಲ್ಟಸ್‌ ಫೇಸ್‌ ಲಿಫ್ಟ್‌ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬುದು ಗಮನಾರ್ಹ.

Upcoming Cars In July 2023

ಮಾರುತಿ ಸುಜುಕಿ ಇನ್ವಿಕ್ಟೋ: ಮಾರುತಿ ಸುಜುಕಿಯು ತನ್ನ ಪ್ರೀಇಯಂ ಎಸ್‌ಯುವಿ ಯಾದ ಇನ್ವಿಕ್ಟೋ ವನ್ನು ಮಾರುಕಟ್ಟೆಗೆ ತರಲಿದೆ. ಇದು ಮಾರುತಿ ಸುಜುಕಿ-ಟೋಯೋಟಾ ಜಾಗತಿಕ ಪಾರ್ಟ್ನರ್‌ಶಿಪ್‌ನಲ್ಲಿ ಬರುತ್ತಿದೆ. ಜುಲೈ ಐದರಂದು ಇನ್ವಿಕ್ಟೋ ಬಿಡುಗಡೆಯಾಗುತ್ತಿದ್ದು ಹಲವು ವೇರಿಯೆಂಟ್‌ನಲ್ಲಿ ಸಿಗಲಿದೆ. ಇದು ಎರಡು ಲೀಟರ್‌ ಪೆಟ್ರೋಲ್‌ ಮತ್ತು ಎರಡು ಲೀಟರ್‌ ಹೈಬ್ರಿಡ್‌ ಇಂಜಿನ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಹ್ಯುಂಡೈ ಎಕ್ಸ್ಟೆರ್‌: ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಗೆ ಹ್ಯುಂಡೈ ತನ್ನ ಹೊಸ ಎಸ್‌ಯುವಿ ಯಾದ ಎಕ್ಸ್ಟೆರ್‌ ಅನ್ನು ಜುಲೈ ಹತ್ತರಂದು ಲಾಂಚ್‌ ಮಾಡಲಿದೆ. ಇದು ಟಾಟಾ ಪಂಚ್, ಮಾರುತಿ ಇಗ್ನಿಸ್, ಮಾರುತಿ ಸುಜುಕಿ ಫ್ರಾಂಕ್ಸ್‌, ರೆನಾಲ್ಟ್‌ ಕೈಗರ್‌, ಸಿಟ್ರನ್‌ ಸಿ೩ ಮುಂತಾದ ಕಾರುಗಳಿಗೆ ಪ್ರತಿಸ್ಫರ್ಧಿಯಾಗಲಿದೆ. ಹಲವಾರು ಫೀಚರ್‌ಗಳೊಂದಿಗೆ ದಾಪುಗಾಲಿಡಲಿರುವ ಈ ಹ್ಯುಂಡೈ ಎಕ್ಸ್ಟೆರ್‌ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ.

Upcoming Cars In July 2023

ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್‌: ಜಾಗತಿಕ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್‌ ಜಾಗತಿಕ ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, ಭಾರತಕ್ಕೆ ಜುಲೈ ತಿಂಗಳ ನಾಲ್ಕನೇ ತಾರೀಖಿಗೆ ಕಾಲಿಡಲಿದೆ. ಈಗಾಗಲೇ ಕಳೆದ ತಲೆಮಾರಿನ ಕಿಯಾ ಸೆಲ್ಟಸ್‌ ಭಾರತೀಯರ ಮನಸ್ಸಿನಲ್ಲಿ ಜಾಗ ಗಳಿಸಿದ್ದು, ಫೇಸ್‌ಲಿಫ್ಟ್‌ ಸಹ ಅದನ್ನೇ ನಿರೀಕ್ಷಿಸುತ್ತಿದೆ.

ಕೊಂಚ ಬದಲಾದ ಮುಂಭಾಗದ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿರುವ ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್ ಹತ್ತು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ. ಅಪ್‌ಡೇಟ್‌ ಆದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಹೊಸ ವಿನ್ಯಾಸದ ಎಲ್‌ಇಡಿ ಟೇಲ್‌ ಲೈಟ್‌ಗಳನ್ನು ಹೊಂದಲಿದೆ. ಜೊತೆಗೆ ಒಳಭಾಗದಲ್ಲೂ ಹಲವಾರು ಬದಲಾವಣೆಗಳು ಕಾಣಲಿದೆ ಎಂಬುದು ಪರಿಣಿತರ ಅಭಿಪ್ರಾಯ.

ಈ ಮೂರು ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಸ್ಥಾನವನ್ನು ಗಟ್ಟಿಗೊಳಿಸಲಿದೆ ಎಂಬುದು ಹಲವರ ಅಭಿಪ್ರಾಯ. ಅದರಲ್ಲೂ ಮಾರುತಿ ಸುಜುಕಿಯ ಇನ್ವಿಕ್ಟೋ ಭಾರೀ ಸದ್ದು ಮಾಡುತ್ತಿದ್ದು, ವಾಹನ ಪ್ರೇಮಿಗಳು ಈಗಾಗಲೇ ಇದರ ಫಸ್ಟ್‌ ಲುಕ್‌ಗೆ ಫಿಧಾ ಆಗಿದ್ದಾರೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ

Article Published On: Tuesday, June 20, 2023, 16:53 [IST]
English summary
Upcoming cars in july 2023 maruti suzuki invicto kia seltos and hyundai exter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+