Vande Bharat Sleeper: ವಂದೇ ಭಾರತ್ ಸ್ಲೀಪರ್ ಶೀಘ್ರ ಹಳಿಗೆ.. ಟಾಪ್ ಹೈಲೈಟ್ಸ್, ಬೇಗ ನಿಮ್ಮೂರಿಗೆ ಹೋಗಬಹುದು!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ಮಧ್ಯೆ ಈ ರೈಲಿನ ಮೊದಲ ಸಂಚಾರ ಶುರುವಾಗಿತ್ತು. ಆ ಬಳಿಕ ವಿವಿಧ ರಾಜ್ಯಗಳಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಕಾರ್ಯಾಚರಣೆಯನ್ನು ಶುರು ಮಾಡಿದ್ದವು. ಆದಾಗ್ಯೂ ಈ ರೈಲುಗಳಲ್ಲಿ ಕುಳಿತುಕೊಂಡು ಮಾತ್ರ ಪ್ರಯಾಣಿಸಬಹುದಾಗಿದ್ದು, ರಾತ್ರಿ ಪ್ರಯಾಣ ಅಸಾಧ್ಯವಾಗಿದೆ. ಇದರಿಂದ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 3.0 ಸರ್ಕಾರವು ಅಸ್ತಿತ್ವಕ್ಕೆ ಬಂದಿದ್ದು, ನೂತನ 'ವಂದೇ ಭಾರತ್ ಸ್ಲೀಪರ್' ಮುಂಬರುವ ಕೆಲವೇ ದಿನಗಳಲ್ಲಿ ಹಳಿಗೆ ಬರುವ ನಿರೀಕ್ಷೆಯಿದೆ. ಈ ರೈಲು ವಿಮಾನವನ್ನು ಮೀರಿಸುವಂತಹ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರಲಿದ್ದು, ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಇಲ್ಲಿ ಹೊಸ ವಂದೇ ಭಾರತ್ ಸ್ಲೀಪರ್ ಹೇಗಿರಲಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

Upcoming Vande Bharat Sleeper Top Highlights Details

ಎಲ್ಲಿ ತಯಾರಿಕೆ: ಭವಿಷ್ಯದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ (Rajdhani Express)ಗಳಿಗೆ ಪರ್ಯಾಯವಾಗಲಿರುವ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಉತ್ಪಾದನಾ ಘಟಕದಲ್ಲಿ ತಯಾರಿಕೆ ಮಾಡಲಾಗುತ್ತಿದೆ.

ವೇಗ ಮತ್ತು ವಿನ್ಯಾಸ: ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲಿಯೇ ಹೊಸ ವಂದೇ ಭಾರತ್ ಸ್ಲೀಪರ್ ಕೂಡ ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಹೆಚ್ಚಿನ ವೇಗದಲ್ಲಿ ಹೋಗುವುದರಿಂದ ಪ್ರಯಾಣಿಕರು ಆದಷ್ಟು ಬೇಗನೆ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪುವುದಕ್ಕೆ ನೆರವಾಗಲಿದ್ದು, ಸಮಯಾವಕಾಶವು ಉಳಿತಾಯವಾಗುತ್ತದೆ. ವಿನ್ಯಾಸ (ಡಿಸೈನ್)ದ ವಿಚಾರಕ್ಕೆ ಬರುವುದಾದರೆ, ಹೊರಭಾಗವು ಹೆಚ್ಚುಕಮ್ಮಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೀತಿಯಲ್ಲಿ ಇರಲಿದೆ ಎನ್ನಲಾಗಿದೆ.

Upcoming Vande Bharat Sleeper Top Highlights Details

ಕೋಚ್‌ಗಳು ಹಾಗೂ ಬರ್ತ್‌ಗಳು: ನೂತನ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು ಮತ್ತು 1 ಎಸಿ ಮೊದಲ ದರ್ಜೆಯ ಕೋಚ್ ಇರಲಿದೆ. ಎಲ್ಲವು ಸೇರಿ, 823 ಬರ್ತ್‌ಗಳನ್ನು ಪಡೆದಿರುವ ನಿರೀಕ್ಷೆಯೂ ಇದ್ದು, ರೈಲು ಸಿಬ್ಬಂದಿಗೂ ಮೀಸಲಾದ ವಿಶೇಷ ಬರ್ತ್‌ಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಪ್ರಯಾಣಿಕರಿಗೆ ಸಿಗುವ ಸೌಕರ್ಯಗಳೇನು: ಈ ರೈಲಿನಲ್ಲಿ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಪ್ಯಾಂಟ್ರಿ ವ್ಯವಸ್ಥೆ ಇರಲಿದ್ದು, ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು, ವಾಸನೆ ಮುಕ್ತ ಶೌಚಾಲಯವನ್ನು ಹೊಂದಿರಲಿದೆ. ಜೊತೆಗೆ ಜನಸಾಮಾನ್ಯರು ನಿದ್ರಿಸುತ್ತಾ ದೂರದ ಊರುಗಳಿಗೆ ಹೋಗಲು ಆರಾಮದಾಯಕ ಆಸನ, ಶಬ್ದ ನಿರೋಧಕ ವ್ಯವಸ್ಥೆಯನ್ನು ಹೊಂದಿರುವ ಸಾಧ್ಯತೆಯಿದೆ.

Upcoming Vande Bharat Sleeper Top Highlights Details

ವಂದೇ ಮೆಟ್ರೋ ಬರಲಿದೆ: ಕೆಲವೇ ದಿನಗಳಲ್ಲಿ ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ ಸಹ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಪಂಜಾಬ್ ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲನ್ನು ತಯಾರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. 16 ಕೋಚ್‌ಗಳನ್ನು ಪಡೆದಿರಲಿದ್ದು, 4,364 ಜನರು ಏಕಕಾಲದಲ್ಲಿ ಓಡಾಟವನ್ನು ನಡೆಸಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 10, 2024, 19:09 [IST]
English summary
Upcoming vande bharat sleeper top highlights details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+